ಸ್ಯಾಂಟ್ರೊ ಕಾರು ಗುಜರಾತ್ ಕಳ್ಳರಿಗೆ ಅಚ್ಚು ಮೆಚ್ಚು !! ಯಾಕೆ ಗೊತ್ತಾ...?

Written By:

ದಿನ ಬೆಳಗ್ಗೆದ್ದರೆ ವಾಹನ ಕಳ್ಳತನ ವರದಿಗಳನ್ನು ಕೇಳುತ್ತಿರುತ್ತೇವೆ, ಓದುತ್ತಿರುತ್ತೇವೆ. ಸಾಮಾನ್ಯವಾಗಿ ಕಳ್ಳತನ ಮಾಡುವವರು ಕಳ್ಳತನ ಮಾಡುವಾಗ ಸಂಭವಿಸುವ ಅನುಕೂಲ ಅನಾನುಕೂಲ ನೋಡಿಕೊಂಡು ಕಳ್ಳತನಕ್ಕೆ ಕೈ ಹಾಕುತ್ತಾರೆ.

ಈ ವಿಚಾರ ಕೇಳಿ ನಿಮಗೆಲ್ಲರಿಗೂ ಆಶ್ಚರ್ಯವಾಗಿರಲೇ ಬೇಕು ಅಲ್ಲವೇ ? ಹೌದು, ನೀವು ಈ ವಿಚಾರ ನಂಬಲೇ ಬೇಕು. ಹ್ಯುಂಡೈ ಕಂಪನಿಯು ಈಗಾಗಲೇ ತನ್ನ ಸ್ಯಾಂಟ್ರೊ ವಾಹನದ ಉತ್ಪಾದನೆ ನಿಲ್ಲಿಸಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ.

ಸ್ಯಾಂಟ್ರೊ ವಾಹನ ಕಳ್ಳತನವಾಗುತ್ತಿರುವುದರ ನಿಜ ಸಂಗತಿ ಏನು ಗೊತ್ತಾ ? ಈ ವಾಹನವನ್ನು ಸುಲಭವಾಗಿ ಮಾರ್ಪಾಡಿಸಬಹುದಾಗಿದ್ದು, ರಾಜ್ಯದ ಟ್ಯಾಕ್ಸಿ ವಿಭಾಗಕ್ಕೆ ಸೇರಿಸಬಹುದಾಗಿದೆ.

ಗುಜರಾತ್ ನ ಅಹಮದಾಬಾದ್ ಜಿಲ್ಲೆಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 12 ಕಾರುಗಳು ಕಳುವಾಗಿರುವ ವರದಿ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಈಗಾಗಲೇ ಈ ಕಾರಿನ ಉತ್ಪಾದನೆ ನಿಲ್ಲಿಸಿರುವುದರಿಂದ ಕಾರುಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದೆ ಇರುವುದೇ ಮುಖ್ಯ ಕಾರಣವಾಗಿದೆ ಎಂದು ಪೊಲೀಸ್ ಇಲಾಖೆ ಹೇಳಿದೆ. ಇಷ್ಟೆಲ್ಲಾ ಅನುಕೂಲವಿರುವಾಗ ಕಳ್ಳರು ತಮ್ಮ ಕೈ ಚಳಕತೋರಿಸದೆ ಇರುತ್ತಾರೆಯೇ? ನೀವೇ ಹೇಳಿ.

ಕದ್ದ ಕಾರುಗಳಿಗೆ ಟ್ಯಾಕ್ಸಿ ಬಣ್ಣ ಬಳಿದು ವಾಹನದ ನಂಬರ್ ಪ್ಲೇಟ್ ಬದಲಾವಣೆ ಮಾಡಿದರೆ ಕೆಲಸ ಮುಗಿದಂತೆಯೇ ಸರಿ.

ಕೆಲವೊಮ್ಮೆ ಕಳ್ಳರು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಚಾಸ್ಸಿಸ್ ಸಂಖ್ಯೆಯನ್ನೇ ಬದಲಾವಣೆ ಮಾಡಿ ಬಂದಷ್ಟು ದುಡ್ಡಿಗೆ ಮಾರಿಬಿಡುತ್ತಾರೆ.

ಸಾಮಾನ್ಯವಾಗಿ ಪೊಲೀಸರು ಚೆಕಿಂಗ್ ನೆಡೆಸುವ ಸ್ಥಳಗಳಲ್ಲಿ ಟ್ಯಾಕ್ಸಿಗಳನ್ನು ತಪಾಸಣೆಗೊಳಪಡಿಸದೆ ಇರುವುದು ಕೂಡ ಒಂದು ರೀತಿಯಲ್ಲಿ ಕಳ್ಳರಿಗೆ "ಲಡ್ಡು ಬಂದು ಬಾಯಿಗೆ ಬಿತ್ತು" ಮಾದರಿಯಲ್ಲಿ ಆಗಿಬಿಟ್ಟಿದೆ.

ಇನ್ನು ಕಳ್ಳರು ಮಾರುವ ಸಮಯದಲ್ಲಿ, ಮಾರಲು ಬೇಕಾದ ಎಲ್ಲಾ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಕೊಡುವ ಜಾಲ ಒಂದು ಹುಟ್ಟಿಕೊಂಡಿದೆ. ನಕಲಿ ದಾಖಲೆ ತೋರಿಸಿ ಯಾವುದಾದರೂ ಬಡಪಾಯಿ ಪ್ರಾಣಿಗೆ ತಗಲಾಕಿಬಿಟ್ಟರೆ ಮುಗಿಯಿತು, ಕೆಲಸ ಮುಗಿದಂತೆ.

ಕಳೆದ 3 ವರ್ಷಗಳ ಹಿಂದೆ ಗುಜರಾತ್, ರಾಜಸ್ಥಾನ್, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದ ಸ್ಥಳಗಳಿಂದ ಕದ್ದ ಕಾರುಗಳನ್ನು ಮುಂಬೈನಲ್ಲಿ ಮಾರಾಟ ಮಾಡುತಿದ್ದ ಕಳ್ಳರ ಜಾಲವನ್ನು ಹಿಡಿದಿದ್ದ ಶ್ರೇಯಸ್ಸು ಮುಂಬೈ ಪೊಲೀಸರಿಗೆ ಸಲ್ಲುತ್ತದೆ.

ಸ್ಯಾಂಟ್ರೋ ಕಾರಿನಂತೆಯೇ ಸಣ್ಣ ಕಾರಾದ ರೆನಾಲ್ಟ್ ಕ್ವಿಡ್ ಕಾರಿನ ಫೋಟೋಗಳನ್ನು ವೀಕ್ಷಿಸಿ.

Story first published: Saturday, February 11, 2017, 11:42 [IST]
English summary
Thieves prefer stealing small cars, and especially the Hyundai Santro, since the car is out of production.
Please Wait while comments are loading...

Latest Photos