ಚಾಲಕನೊಂದಿಗೆ ಕಿತ್ತಾಡಿಕೊಂಡ ಉಬರ್ ಕಂಪನಿಯ ಸಿಇಒ: ವಿಡಿಯೋ ವೈರಲ್

Written By:

ವಿಶ್ವಾದ್ಯಂತ ಉಬರ್ ಕಂಪನಿಯ ವಿರುದ್ಧ ಕಾರು ಚಾಲಕರು ತಿರುಗಿಬಿದ್ದಿದ್ದಾರೆ. ಕಾರು ಚಾಲಕರ ಲಾಭಕ್ಕೆ ಕತ್ತರಿ ಹಾಕುತ್ತಿರುವುದರ ವಿರುದ್ಧ ಸಿಡಿದೆದ್ದಿರುವ ಉಬರ್ ಚಾಲಕನೊಬ್ಬ ತನ್ನ ಒಡೆಯನಿಗೆ ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾನೆ.

ಬಹುದಿನಗಳಿಂದ ಉಬರ್ ಕಂಪನಿಯಲ್ಲೇ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ಫಾವ್ಜಿ ಕೆಮೆಲ್, ಟ್ರಾವಿಸ್ ಕಲಾನಿಕ್ ಜೊತೆ ಪ್ರಯಾಣದ ಸಂದರ್ಭದಲ್ಲಿ ಜಗಳವಾಡಿಕೊಂಡಿದ್ದಾನೆ. ಇದಕ್ಕೆ ಪ್ರಮುಖ ಕಾರಣ
ಉಬರ್ ಚಾಲಕರ ಲಾಭಕ್ಕೆ ಕತ್ತರಿ ಹಾಕಲಾಗಿದ್ದು, ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ನಿಮ್ಮಿಂದಲೇ ನಾವಿಂದು ಬೀದಿಗೆ ಬೀಳುವ ಪರಿಸ್ಥಿತಿಗೆ ಬಂದಿದ್ದೇವೆ. ನಮ್ಮ ಆರ್ಥಿಕ ದಿವಾಳಿಗೆ ನೀವೇ ಕಾರಣ ಎಂದಿರುವ ಫಾವ್ಜಿ ಕೆಮೆಲ್, ಟ್ರಾವಿಸ್ ಕಲಾನಿಕ್ ನಡೆಗೆ ಸಿಡಿಮಿಡಿಗೊಂಡಿದ್ದಾನೆ. ಆದ್ರೆ ಚಾಲಕನನ್ನು ಸಮಾಧಾನಪಡಿಸಲು ಸಾಧ್ಯವಾಗದೇ ಕಲಾನಿಕ್ ಸುಸ್ತಾಗಿ ಹೋಗಿದ್ದಾನೆ.

ಪ್ರಯಾಣದ ಉದ್ದಕ್ಕೂ ಕಾರು ಚಾಲಕ ಮತ್ತು ಕಲಾನಿಕ್ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಆಟೋ ಸೇವೆಗಳ ದರ ಏರಿಳಿತಗಳ ಬಗ್ಗೆ ವಾದ-ವಿವಾದ ನಡೆಯುತ್ತಲೇ ಬಂದಿದೆ. ಕೊನೆಗೂ ಚಾಲಕನ ವಾದಕ್ಕೆ ಮಣಿದ ಕಲಾನಿಕ್ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

ಆದ್ರೆ ಮಾತಿನ ಚಕಮಕಿ ಕುರಿತಾದ ಸಿಕ್ರೆಟ್ ವಿಡಿಯೋ ಬಹಿರಂಗದ ಹಿಂದೆ ಹತ್ತಾರು ಅನುಮಾನಗಳು ಕಾಡತೊಡಗಿವೆ. ವಿಡಿಯೋ ಹಿಂದೆ ಇದೇ ಕಂಪನಿಯ ಹಳೆಯ ಉದ್ಯೋಗಿಯೊಬ್ಬರ ಕೈವಾಡ ಶಂಕಿಸಲಾಗಿದ್ದು, ಉಬರ್ ಹೆಸರಿಗೆ ಮಸಿ ಬಳಿಯುವ ಹುನ್ನಾರ ನಡೆಯುತ್ತಿದೆ ಎನ್ನಲಾಗಿದೆ.

ಆದ್ರೆ ಅದೇನೇ ಇರಲಿ ಸದ್ಯ ಕಾರು ಚಾಲಕರ ಲಾಭಕ್ಕೆ ಕತ್ತರಿ ಹಾಕಿರೋ ಕಲಾನಿಕ್‌ಗೆ ಕಾರು ಚಾಲಕ ಮಾತ್ರ ಸರಿಯಾಗಿಯೇ ಜನ್ಮಜಾಲಾಡಿಸಿದ್ದಾನೆ.

ಈ ಸನ್ನಿವೇಶದಲ್ಲಿ ನೀವು ಕಾರು ಖರೀದಿಯ ಯೋಚನೆಯಲ್ಲಿದ್ದರೆ ಮುಂಬರುವ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಕಾರಿನ ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ. 

Click to compare, buy, and renew Car Insurance online

Buy InsuranceBuy Now

Read more on ಉಬರ್ uber
Story first published: Wednesday, March 1, 2017, 19:40 [IST]
English summary
Uber CEO Travis Kalanick tells a driver to take responsibility for his problems and boasts about a tough culture.
Please Wait while comments are loading...

Latest Photos