ವಿರಾಟ್ ಕೊಹ್ಲಿ ಕಾರ್ ಕಲೆಕ್ಷನ್‌ಗೆ ಇದೀಗ ಮತ್ತೊಂದು ದುಬಾರಿ ಕಾರು ಸೇರ್ಪಡೆ..!!

Written By:

ಲಗ್ಷುರಿ ಸ್ಪೋರ್ಟ್ಸ್ ಕಾರುಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ, ತಮ್ಮ ನೆಚ್ಚಿನ ಆಡಿ ಕ್ಯೂ7 ಮಾದರಿಯನ್ನು ಖರೀದಿ ಮಾಡಿದ್ದಾರೆ.

ಕೊಹ್ಲಿ ಬಳಿ ಈಗಾಗಲೇ ಆಡಿ ಸಂಸ್ಥೆಯ ಆರ್8, ಆರ್8 ಎಲ್ಎಂಎಕ್ಸ್, ಎ8ಎಲ್ ಸೆಡಾನ್ ಮಾದರಿ ಕಾರುಗಳಿದ್ದು, ಇದೀಗ ಹೊಸ ಮಾದರಿಯ ಕ್ಯೂ7 ಖರೀದಿ ಮಾಡಿದ್ದಾರೆ.

ಹೊಸ ತಲೆಮಾರಿನ ವಿಶೇಷ ವೈಶಿಷ್ಟ್ಯತೆಗಳನ್ನು ಹೊಂದಿರುವ ಆಡಿ ಕ್ಯೂ7 ಲಗ್ಷುರಿ ಕಾರು, ಯುವ ಸಮುದಾಯಕ್ಕಾಗಿಯೇ ಸಿದ್ಧಗೊಂಡ ಮಾದರಿಯಾಗಿದೆ.

ಋತುಮಾನಗಳಿಗೆ ಅನುಗುಣವಾಗಿ ವಿವಿಧ ಕಾರು ಮಾದರಿಗಳನ್ನು ಖರೀದಿ ಮಾಡುವ ಕೊಹ್ಲಿ, ಸ್ಪೋರ್ಟ್ಸ್ ಕಾರು ಮತ್ತು ಐಷಾರಾಮಿ ಸೆಡಾನ್ ಕಾರುಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ಕಳೆದ 2 ದಿನಗಳ ಹಿಂದಷ್ಟೇ ಮುಂಬೈ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಆಡಿ ಕ್ಯೂ7 ಮಾದರಿಯ ಮೊದಲನೇ ಕಾರು ಖರೀದಿ ಮಾಡಿರುವ ಕೊಹ್ಲಿ, ತಮ್ಮ ನೆಚ್ಚಿನ ಬಿಳಿ ಬಣ್ಣದ ಕಾರು ಆಯ್ಕೆ ಮಾಡಿದ್ದಾರೆ.

ಕ್ಯೂ7 ಮೊದಲನೇ ಕಾರಿನ ಕೀಯನ್ನು ಕೊಹ್ಲಿಗೆ ಹಸ್ತಾಂತರ ಮಾಡಿರುವ ಆಡಿ ಇಂಡಿಯಾ ಅಧಿಕಾರಿಗಳು, ಕ್ಯೂ7 ಮಾದರಿ ಬಗ್ಗೆ ಹೊಸ ನೀರಿಕ್ಷೆ ಇಟ್ಟುಕೊಂಡಿದ್ದಾರೆ.

ಕ್ಯೂ7 ವಿಶೇಷತೆ ಏನು?

3.0-ಟಿಡಿಐ ಡೀಸೆಲ್ ಎಂಜಿನ್ ಹೊಂದಿರುವ ಕ್ಯೂ7 ಕಾರು, 2967 ಸಿಸಿ ಎಂಜಿನ್ ಸಾಮರ್ಥ್ಯ ಪಡೆದುಕೊಂಡಿದೆ.

ಕ್ಯೂ7 ಬೆಲೆ

ವಿಶೇಷ ಮಾದರಿಯ ಕ್ಯೂ7 ಬೆಲೆ ಮುಂಬೈ ಎಕ್ಸ್‌ಶೋರಂ ಪ್ರಕಾರ 90 ಲಕ್ಷಕ್ಕೂ ಅಧಿಕವಾಗಿದ್ದು, ಕ್ವಾಟ್ರೋ ತಂತ್ರಜ್ಞಾನ ಹೊಂದಿದೆ.

ಮೈಲೇಜ್

ಸ್ಪೊರ್ಟ್ಸ್ ಮಾದರಿಯ ಕ್ಯೂ7 ಎಸ್‌ಯುವಿ ಮಾದರಿಯೂ ಪ್ರತಿಲೀಟರ್‌ಗೆ 14.7 ಕಿಲೋ ಮೈಲೇಜ್ ನೀಡುತ್ತದೆ.

ಆಡಿ ಜೊತೆ ಕೊಹ್ಲಿ ನಂಟು

ಹೌದು.. ಆಡಿ ಸಂಸ್ಥೆಯು ಬಿಡುಗಡೆ ಮಾಡಿರುವ ಬಹುತೇಕ ಕಾರು ಮಾದರಿಗಳು ಕೊಹ್ಲಿ ಬಳಿಯಿವೆ.

ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿಗೆ ಸೂಪರ್ ಕಾರುಗಳ ಬಗ್ಗೆ ಎಲ್ಲಿಲ್ಲದ ವ್ಯಾಮೋಹ ಎಂದ್ರೆ ತಪ್ಪಾಗಲಾರದು.

ಕಳೆದ ತಿಂಗಳವಷ್ಟೇ 2.47 ಕೋಟಿ ಮೌಲ್ಯದ ಆಡಿ ಆರ್8 ವಿ10 ಪ್ಲಸ್ ಖರೀದಿ ಮಾಡಿ ಭಾರೀ ಸುದ್ಧಿಯಾಗಿದ್ದರು.

ಆಪ್ ರೋಡಿಂಗ್ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ವಿರಾಟ್ ಕೊಹ್ಲಿ, ದುಬಾರಿ ಬೆಲೆಯ ಆಡಿ ಆರ್8 ವಿ10 ಪ್ಲಸ್ ಕಾರು ಖರೀದಿ ಹಿಂದೆ ಹತ್ತಾರು ಕಾರಣಗಳಿವೆ.

ಆಡಿ ಆರ್8 ವಿ10 ಪ್ಲಸ್ ವಿಶೇಷ

5204 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿರುವ ಆಡಿ ಆರ್8 ವಿ10 ಪ್ಲಸ್ ಬೆಲೆಯೂ 2.6 ಕೋಟಿಗೂ ಅಧಿಕ. ಜೊತೆಗೆ ಭಾರತದ ಕೆಲವೇ ಶ್ರೀಮಂತರ ಬಳಿ ಈ ಕಾರು ಮಾದರಿ ಇದ್ದು, ಇದೀಗ ಕೊಹ್ಲಿ ಕಾರ್ ಕಲೆಕ್ಷನ್‌ನಲ್ಲೂ ಸ್ಥಾನ ಪಡೆದಿದೆ.

ಆಡಿ ಆಎಸ್ ಅವಾಂತ್

ಕೊಹ್ಲಿ ದುಬಾರಿ ಕಾರುಗಳಲ್ಲಿ ಇದು ಕೂಡಾ ಒಂದು. 1.37 ಕೋಟಿ ಮೌಲ್ಯದ ಈ ಕಾರು ಸೂಪರ್ ಕಾರುಗಳ ವಿಭಾಗದಲ್ಲಿ ಭಾರೀ ಬೇಡಿಕೆ ಹೊಂದಿರುವ ಮಾದರಿಯಾಗಿದೆ.

ಆಡಿ ಆ8 ಎಲ್ಎಂಎಕ್ಸ್

2016ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡಿದ್ದ ಆ8 ಎಲ್ಎಂಎಕ್ಸ್ ಮಾದರಿ ಕೂಡಾ ಕೊಹ್ಲಿ ಬಳಿಯಿದೆ.

ಆ8 ಎಲ್ಎಂಎಕ್ಸ್ ವಿಶೇಷತೆ

5204 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿರುವ ಆ8 ಎಲ್ಎಂಎಕ್ಸ್ ಕಾರು, ದೆಹಲಿ ಎಕ್ಸ್‌ಶೋರಂ ಪ್ರಕಾರ 2.61 ಕೋಟಿ ಬೆಲೆ ಹೊಂದಿದೆ.

ಆರ್8 ಡಬ್ಲ್ಯು ಕ್ವಾಟ್ರೊ

2967 ಸಿಸಿ ಸಾಮರ್ಥ್ಯ ಎಂಜಿನ್ ಹೊಂದಿರುವ ಆರ್‌ಡಬ್ಲ್ಯು ಕ್ವಾಟ್ರೊ ಕಾರು ಐಷಾರಾಮಿ ಸೆಡಾನ್ ಮಾದರಿಗಳಲ್ಲಿ ಮುಂಚೂಣಿಯಲ್ಲಿದೆ.

ಆರ್ ಡಬ್ಲ್ಯು ಕ್ವಾಟ್ರೊ ಬೆಲೆ ಮುಂಬೈ ಎಕ್ಸ್‌ಶೋರಂ ಪ್ರಕಾರ 1.18 ಕೋಟಿ ಬೆಲೆ ಹೊಂದಿದ್ದು, ಆಪ್‌ ರೋಡಿಂಗ್‌ನಲ್ಲೂ ಸಾಕಷ್ಟು ಖ್ಯಾತಿ ಪಡೆದಿದೆ.

ವಿಐಆರ್8

ಆಡಿ ಸಂಸ್ಥೆಯ ಟ್ರ್ಯಾಕ್ ಚಾಂಪಿಯನ್ ಖ್ಯಾತಿಯ ವಿಐಆರ್8 ಮಾದರಿಯನ್ನು ಪಡೆದಿರುವ ಕೊಹ್ಲಿ, ಆಡಿ ಅಧಿಕೃತ ಬ್ರಾಂಡ್ ಅಂಬಾಸಿಡರ್ ಕೂಡಾ ಹೌದು.

ಒಟ್ಟಿನಲ್ಲಿ ಹತ್ತಾರು ದುಬಾರಿ ಕಾರುಗಳ ಸಂಗ್ರಹ ಹೊಂದಿರುವ ಕೊಹ್ಲಿ, ಇವುಗಳ ನಿಯಂತ್ರಣಕ್ಕಾಗಿಯೇ ಪ್ರತ್ಯೇಕವಾಗಿ ಒಂದು ಗ್ಯಾರೇಜ್ ಕೂಡಾ ಹೊಂದಿದ್ದಾರೆ.

Click to compare, buy, and renew Car Insurance online

Buy InsuranceBuy Now

Read more on ಆಡಿ audi
English summary
Virat Kohli Gets The New Audi Q7 For His Car Collection.
Please Wait while comments are loading...

Latest Photos