ಎಲ್ಲಾ ಕಾರುಗಳ ಇಂಧನದ ಟ್ಯಾಂಕ್ ಮುಚ್ಚಳ ಒಂದೇ ಬದಿ ಇರೋದಿಲ್ಲ !! ಯಾಕೆ ಗೊತ್ತಾ..?

Written By:

ಸಾಮಾನ್ಯವಾಗಿ ಇಂಧನ ತುಂಬಿಸುವ ಟ್ಯಾಂಕ್ ಒಂದೊಂದು ಕಾರಿನಲ್ಲಿ ಒಂದೊಂದು ರೀತಿಯಲ್ಲಿ ಇರುವುದನ್ನು ನಾವೆಲ್ಲರೂ ಗಮನಿಸುತ್ತಿರುತ್ತೇವೆ. ಕೆಲವೊಂದು ಬಾರಿ ನಾವು ಅದರ ಬಗ್ಗೆ ಅರಿವೇ ಇಲ್ಲದಂತೆ ಮುನ್ನೆಡೆಯುತ್ತಿರುತ್ತೇವೆ.

ನೀವೇನಾದರೂ ನಿಮ್ಮ ಸ್ನೇಹಿತನ ಕಾರನ್ನು ಇಂಧನ ತುಂಬಿಸಲು ಕೊಂಡೈದಿದ್ದರೆ ಈ ವಿಚಾರ ನಿಮ್ಮ ಅರಿವಿಗೆ ಕಂಡಿತಾ ಬಂದಿರುತ್ತದೆ. ಹೌದು, ನಿಮಗೆ ಕಂಡಿತಾ ಈ ವಿಚಾರ ಗೊಂದಲಕ್ಕೀಡು ಮಾಡುವುದರಲ್ಲಿ ಸಂದೇಹವಿಲ್ಲ. ಏಕೆ ಎಲ್ಲಾ ಕಾರುಗಳ ಇಂಧನ ತುಂಬಿಸುವ ಮುಚ್ಚಳ ಒಂದೇ ಕಡೆ ಇರುವುದಿಲ್ಲ ಎಂದು ಕೆಲವೊಮ್ಮೆ ನೀವು ಯೋಚಿಸಿರುತ್ತೀರಿ ಕೂಡ.

ಏಕೆ ಎಲ್ಲಾ ದೇಶದ ಕಾರು ಉತ್ಪಾದಕ ಕಂಪನಿಗಳು ಒಂದೇ ಕಡೆ ಇಂಧನದ ಮುಚ್ಚಳ ಕೊಡುವುದಿಲ್ಲ ಎಂಬುದರ ಬಗ್ಗೆ ಚರ್ಚಿಸೋಣ.ಒಂದು ದೇಶದ ಕಾರುಗಳಿಗೂ ಮತ್ತೊಂದು ದೇಶದ ಕಾರುಗಳಿಗೂ ಸಹ ಇಂಧನ ಟ್ಯಾಂಕ್ ಮುಚ್ಚಳ ಬದಲಾವಣೆಗೊಳ್ಳುತ್ತದೆ ಎಂದರೆ ನೀವು ನಂಬಲೇ ಬೇಕು.

ಸಾಮಾನ್ಯವಾಗಿ ಜಪಾನ್ ದೇಶದ ಕಾರುಗಳ ಇಂಧನ ಮುಚ್ಚಳ ಎಡಭಾಗದಲ್ಲಿರುತ್ತದೆ. ಇನ್ನು ಜರ್ಮನ್ ಕಾರುಗಳ ವಿಚಾರಕ್ಕೆ ಬರುವುದಾದರೆ, ಎಲ್ಲಾ ಜರ್ಮನ್ ಕಾರುಗಳ ಇಂಧನದ ಮುಚ್ಚಳ ಬಲಭಾಗಕ್ಕಿರುತ್ತದೆ.

ಹೋಗೆ ಉಗುಳುವ ಕೊಳವೆಯಿಂದ ಬರುವಂತಹ ಶಾಖದಿಂದ ಯಾವುದೇ ರೀತಿಯ ಬೆಂಕಿಯ ಅವಘಡಗಳು ಸಂಭವಿಸದೇ ಇರಲಿ ಎನ್ನುವ ಕಾರಣಕ್ಕೆ ಹೋಗೆ ಉಗುಳುವ ಕೊಳವೆಯ ಮತ್ತೊಂದು ಬದಿಯಲ್ಲಿ ಈ ಇಂಧನದ ಮುಚ್ಚಳ ಇರಿಸಿರುತ್ತಾರೆ.

ಸಾಮಾನ್ಯವಾಗಿ ಹೊರದೇಶಗಳಲ್ಲಿನ ಹೆದ್ದಾರಿಗಳಲ್ಲಿ ಇಂದನವನ್ನು ಸತಃ ತಾವೇ ಕಾರುಗಳಿಗೆ ತುಂಬಿಸಿಕೊಳ್ಳುವ ಪರಿಪಾಠ ನೆಡೆದುಕೊಂಡು ಬಂದಿದೆ, ಆದ ಕಾರಣ ಚಾಲಕನಿಗೆ ಹೆಚ್ಚು ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ಕಾರಿನ ಚಾಲಕನ ಕಡೆ ಇಂಧನದ ಟ್ಯಾಂಕ್ ಮುಚ್ಚಳ ನೀಡುವುದುಂಟು.

ಒಂದೇ ಕಡೆ ಇಂಧನ ತುಂಬಿಸುವ ಟ್ಯಾಂಕ್ ಮುಚ್ಚಳ ನೀಡಿದರೆ ಇಂಧನ ತುಂಬಿಸುವ ಬಂಕುಗಳಲ್ಲಿ ಜನಗಳ ಸಮಯ ವ್ಯರ್ಥವಾಗಬಹುದು ಮತ್ತು ಇನ್ನು ಒಮ್ಮೊಮ್ಮೆ ಸಂಘರ್ಷಕ್ಕೆ ಕಾರಣವಾಗಬಹುದು ಎಂಬ ನಿಟ್ಟಿನಲ್ಲಿ ಒಂದೇ ಕಡೆ ಮುಚ್ಚಳವನ್ನು ನೀಡುವುದಿಲ್ಲ.

ಇತ್ತೀಚಿಗೆ ಗ್ಯಾಸೋಲಿನ್ ಇಂಧನದ ಕಾರುಗಳು ಪ್ರತ್ಯೇಕ ಬಂಕುಗಳಿಗೆ ಹೋಗಿ ಇಂಧನ ತುಂಬಿಸಬೇಕಾಗಿದ್ದು, ಈ ರೀತಿಯ ವಾಹನಗಳಿಗೆ ಕಾರಿನ ನಂಬರ್ ಪ್ಲೇಟ್ ಕೆಳಗಡೆ ವಿಶೇಷ ರೀತಿಯ ಲೈಟರ್ ನೀಡಲಾಗುತ್ತದೆ.

ಮಾತು ಹಲವು ಕಾರುಗಳು ವಿಶೇಷ ರೀತಿಯಲ್ಲಿ ವಿನ್ಯಾಸ ಹೊಂದಿದ್ದು, ಕಾರಿನ ಹಿಂಬದಿಯಲ್ಲಿರುವ ಟೈಲೈಟ್ ದೀಪದ ಒಳಗೆ ಇಂಧನದ ಮುಚ್ಚಳ ಇರಿಸಲಾಗಿರುತ್ತದೆ, ಇದಕ್ಕೆ ಕಾರಣ ಕೇವಲ ವಿನ್ಯಾಸವಷ್ಟೇ ಆಗಿದ್ದು ಮತ್ತಿನೇನು ಅಲ್ಲವೇ ಅಲ್ಲ.

ಕೆಲವೊಂದು ಬಾರಿ ಅಪಘಾತ ಸಂಭವಿಸಿದ ಕೂಡಲೇ ಇಂಧನ ಟ್ಯಾಂಕಿಗೆ ಹೆಚ್ಚು ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಹೆಚ್ಚು ಬಾರಿ ಹಿಂದಿನ ಬಲ ಅಥವಾ ಎಡ ಬದಿಯಲ್ಲಿ ನೀಡಲಾಗುತ್ತದೆ.

ಹಲವು ಬಾರಿ ಕಾರಿನ ಎಲೆಕ್ಟ್ರಿಕ್ ಸರ್ಕ್ಯೂಟ್ ಕೂಡ ಇಂಧನದ ಮುಚ್ಚಳ ಯಾವ ಕಡೆ ಇರಿಸಬೇಕು ಎಂಬುದನ್ನು ನಿರ್ಧರಿಸುತ್ತದೆ. ಎಲೆಕ್ಟ್ರಿಕ್ ವೈರುಗಳು ಇರುವ ಕಡೆ ಇಂಧನದ ಮುಚ್ಚಳ ಇರಿಸಿದ್ದಲ್ಲಿ ಕೆಲವೊಮ್ಮೆ ಅವಘಡಗಳು ತೀವ್ರತೆ ಹೆಚ್ಚಾಗುವ ಸಂಭವವಿರುತ್ತದೆ.

ಹೊಸ ಬಿಎಂಡಬ್ಲ್ಯೂ ಜಿ 310 ಆರ್ ಬೈಕಿನ ಹೆಚ್ಚಿನ ಗುಣಮಟ್ಟದ ಚಿತ್ರಗಳನ್ನು ಈ ಕೆಳಗಿನ ಗ್ಯಾಲರಿಯಲ್ಲಿ ವೀಕ್ಷಿಸಿ.

Read more on ಇಂಧನ fuel
Story first published: Wednesday, March 1, 2017, 15:53 [IST]
English summary
Have you wondered why the filler cap opening is placed on the opposite side of the driver?
Please Wait while comments are loading...

Latest Photos