ವಿಶ್ವದ ಅತಿ ದೊಡ್ಡ ವಿಮಾನ 'ಏರ್ ಲ್ಯಾಂಡರ್' ಪತನ

By Nagaraja

ವಿಶ್ವದ ಅತಿ ದೊಡ್ಡ ವಿಮಾನವೆಂಬ ಖ್ಯಾತಿಗೆ ಪಾತ್ರವಾಗಿರುವ ಏರ್ ಲ್ಯಾಂಡರ್ ತನ್ನ ಎರಡನೇ ಪ್ರಯತ್ನದಲ್ಲೇ ಮುಗ್ಗರಿಸಿದೆ. 'ಫ್ಲೈಯಿಂಗ್ ಬಮ್' ಎಂಬುದಾಗಿಯೂ ಅರಿಯಲ್ಪಡುವ ಏರ್ ಲ್ಯಾಂಡರ್ 10 ವಿಮಾನ, ಎರಡನೇ ಪ್ರಯೋಗಾರ್ಥ ಸಂಚಾರ ಪರೀಕ್ಷೆಯಲ್ಲಿ ಪತನಗೊಳ್ಳುವ ಮೂಲಕ ವೈಫಲ್ಯವನ್ನು ಕಂಡಿದೆ.

ಕೆಲವು ದಿನಗಳ ಹಿಂದೆಯಷ್ಟೇ ತನ್ನ ಚೊಚ್ಚಲ ಹಾರಾಟವನ್ನು ಯಶಸ್ವಿಯಾಗಿ ನಡೆಸಿದ್ದ ಏರ್ ಲ್ಯಾಂಡರ್ 10, ಬಗ್ಗೆ ಅತಿ ಹೆಚ್ಚು ನಿರೀಕ್ಷೆಯನ್ನಿಡಲಾಗಿತ್ತು. ಈಗ ವೈಫಲ್ಯ ಅನುಭವಿಸಿರುವುದು ವಿಮಾನದ ದಕ್ಷತೆಯ ಬಗ್ಗೆ ಪ್ರಶ್ನೆಗಳು ಮೂಡುವಂತಾಗಿದೆ.

ವಿಶ್ವದ ಅತಿ ದೊಡ್ಡ ವಿಮಾನ 'ಏರ್ ಲ್ಯಾಂಡರ್' ಪತನ

ಬಲೂನ್ ಮಾದರಿಯ ಏರ್ ಲ್ಯಾಂಡರ್ ಹೈಬ್ರಿಡ್ ವಿಮಾನವು, ಹೀಲಿಯಂ ಬಳಕೆಯಿಂದ ಮೂರು ದಿನಗಳಷ್ಟು ಕಾಲ ಆಕಾಶದಲ್ಲೇ ಹಾರಾಡುವಷ್ಟು ಸಾಮರ್ಥ್ಯವನ್ನು ಹೊಂದಿದೆ.

ವಿಶ್ವದ ಅತಿ ದೊಡ್ಡ ವಿಮಾನ 'ಏರ್ ಲ್ಯಾಂಡರ್' ಪತನ

ಇಂಗ್ಲೆಂಡ್ ನಲ್ಲಿ ಏರ್ ಲ್ಯಾಂಡರ್ ವಿಮಾನದ ಟೆಸ್ಟಿಂಗ್ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿತ್ತು. ಬಳಿಕ ಲ್ಯಾಂಡಿಂಗ್ ಮಾಡುವಾಗ ಎಡವಟ್ಟು ಸಂಭವಿಸಿತ್ತು ಎಂಬುದನ್ನು ಅಧಿಕೃತರು ಬಹಿರಂಗಪಡಿಸುತ್ತಾರೆ.

ವಿಶ್ವದ ಅತಿ ದೊಡ್ಡ ವಿಮಾನ 'ಏರ್ ಲ್ಯಾಂಡರ್' ಪತನ

ವಿಮಾನದ ಮುಂಭಾಗಕ್ಕೆ ಸಣ್ಣ ಪುಟ್ಟ ಹಾನಿಯನ್ನು ಬಿಟ್ಟರೆ ಇತರೆ ಯಾವುದೇ ತೊಂದರೆಯಾಗಿಲ್ಲ. ಅಲ್ಲದೆ ಘಟನೆಯಲ್ಲಿ ಯಾರಿಗೂ ಗಾಯಗಳು ಸಂಭವಿಸಿಲ್ಲ ಎಂಬುದನ್ನು ಏರ್ ವೆಹಿಕಲ್ಸ್ ಸ್ಪಷ್ಟಪಡಿಸಿದೆ.

ವಿಶ್ವದ ಅತಿ ದೊಡ್ಡ ವಿಮಾನ 'ಏರ್ ಲ್ಯಾಂಡರ್' ಪತನ

ಏರ್ ಲ್ಯಾಂಡರ್ ವಿಮಾನ ಟೆಲಿಗ್ರಾಫಿಕ್ ಕಂಬಕ್ಕೆ ಢಿಕ್ಕಿಯಾಗಿರುವುದ್ದರಿಂದ ಪತನಗೊಂಡಿತ್ತೆಂಬ ಶಂಕೆ ಮೂಡಿತ್ತು. ಆದರೆ ಈ ವದಂತಿಗಳನ್ನು ಹೈಬ್ರಿಡ್ ಏರ್ ವೆಹಿಕಲ್ಸ್ ನಿರಾಕರಿಸಿದೆ.

ವಿಶ್ವದ ಅತಿ ದೊಡ್ಡ ವಿಮಾನ 'ಏರ್ ಲ್ಯಾಂಡರ್' ಪತನ

ಅಂದ ಹಾಗೆ ಏರ್ ಲ್ಯಾಂಡರ್ 10, ಅತ್ಯಂತ ಶಕ್ತಿಶಾಲಿ 4.0 ಲೀಟರ್ ಸೂಪರ್ ಚಾರ್ಜ್ಡ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 1380 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ವಿಶ್ವದ ಅತಿ ದೊಡ್ಡ ವಿಮಾನ 'ಏರ್ ಲ್ಯಾಂಡರ್' ಪತನ

ಏರ್ ಲ್ಯಾಂಡರ್ ಪ್ರಾಯೋಗಿಕ ಸಂಚಾರ ಪರೀಕ್ಷೆಗೆ ಯುರೋಪಿಯನ್ ಎವಿಯೇಷನ್ ಸೇಫ್ಟಿ ಏಜೆನ್ಸಿ ಹಾಗೂ ಬ್ರಿಟನ್ ಸಿವಿಲಿ ಎವಿವೇಷನ್ ಅಥಾರಟಿ ಗ್ರೀನ್ ಸಿಗ್ನಲನ್ನು ನೀಡಿತ್ತು. ಇದರ ನಿರ್ಮಾಣ ಹಾಗೂ ಅಭಿವೃದ್ಧಿಗಾಗಿ 200ಗಿಂತಲೂ ಹೆಚ್ಚು ಕೋಟಿ ರುಪಾಯಿಗಳನ್ನು ಖರ್ಚು ಮಾಡಲಾಗಿದೆ.

ವಿಶ್ವದ ಅತಿ ದೊಡ್ಡ ವಿಮಾನ 'ಏರ್ ಲ್ಯಾಂಡರ್' ಪತನ

ಅರ್ಧದಷ್ಟು ವಿಮಾನ, ಅರ್ಧದಷ್ಟು ವಾಯು ನೌಕೆಯಂತಿರುವ ಏರ್ ಲ್ಯಾಂಡರ್ ಗೆ ಹೀಲಿಯಂ ಪಂಪ್ ಮಾಡಲಾಗುವುದು. ಅಲ್ಲದೆ ನೀರಿನ ಮೇಲೂ ಲ್ಯಾಂಡ್ ಮಾಡುವ ಸಾಮರ್ಥ್ಯ ಹೊಂದಿರುತ್ತದೆ.

ವಿಶ್ವದ ಅತಿ ದೊಡ್ಡ ವಿಮಾನ 'ಏರ್ ಲ್ಯಾಂಡರ್' ಪತನ

302 ಅಡಿ ಉದ್ದದ ಏರ್ ಲ್ಯಾಂಡರ್ ವಿಮಾನವನ್ನು ಮೂಲತ: ಅಮೆರಿಕ ಸೈನಿಕರ ಯೋಜನೆಗಳಿಗಾಗಿ ಅಭಿವೃದ್ಧಿಗೊಳಿಸಲಾಗಿತ್ತು. ಆದರೆ ಕಾರಣಾಂತರಗಳಿಂದಾಗಿ 2012ರಲ್ಲಿ ಯೋಜನೆಯನ್ನು ಕೈಬಿಡಲಾಗಿತ್ತು.


Most Read Articles

Kannada
Read more on ವಿಮಾನ plane
English summary
Now That's A Bummer - World's Largest Aircraft Crashes
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X