ಹುಡುಗಿಯರ ಮೆಚ್ಚಿನ ಟಿವಿಎಸ್ ಸ್ಟ್ರೀಕ್ ಶೀಘ್ರದಲ್ಲಿ

ಬುಧವಾರ, ಮಾರ್ಚ್ 11, 2009, 13:05 [IST]
Streak, unisex scooter by TVS
ಬರುವ ಹಣಕಾಸು ವರ್ಷದಲ್ಲಿ ಟಿವಿಎಸ್ ಹೊಚ್ಚಹೊಸ ಯುನಿಸೆಕ್ಸ್ ಸ್ಕೂಟರ್ ಟಿವಿಎಸ್ ಸ್ಟ್ರೀಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದಕ್ಕೆ ನೂತನ ಲೈಟೆಕ್ ಇಂಜಿನನ್ನು ಅಳವಡಿಸಿರುವುದರಿಂದ 90ಸಿಸಿ ವಾಹನ ಮೊದಲಿಗಿಂತಲೂ ಹಗುರವಾಗಿರಲಿದೆ. ರಸ್ತೆಯಲ್ಲಿ ಜಾರುವುದನ್ನು ತಪ್ಪಿಸಲು ಅಗಲವಾದ ಟೈರ್‌ಗಳು ಇದ್ದು, ಡಿಸೈನ್ ಕೂಡ ಅದ್ಭುತವಾಗಿದೆ.
  Read:  In English 
ಪೆಪ್+ ಸ್ಕೂಟರಿಗೆ ಹೋಲಿಸಿ ನೋಡಿದರೆ ಸ್ಟ್ರೀಕ್ ಎಲ್ಲ ರೀತಿಯಲ್ಲಿಯೂ ಉತ್ತಮ ರೂಪ ಪಡೆದಿದೆ. ಇದರ ಹೊಟ್ಟೆಗೆ 14 ಲೀಟರ್ ಪೆಟ್ರೋಲನ್ನು ಭರ್ತಿಮಾಡಬಹುದು. ಜನರನ್ನು ಓಲೈಸಲು ಟಿವಿಎಸ್ ನಾನಾ ಕಸರತ್ತುಗಳನ್ನು ಕೂಡ ನಡೆಸಿದೆ. ಹೊಸ ಯುನಿಸೆಕ್ಸ್ ಸ್ಪೋರ್ಟಿ ಸ್ಟ್ರೀಕ್ ವಾಹನಕ್ಕೆ ಟೆನಿಸ್ ತಾರೆ ನತ್ತು ಸುಂದರಿ ಸಾನಿಯಾ ಮಿರ್ಜಾ ಅವರನ್ನು ರಾಜಭಾರಿಯನ್ನಾಗಿ ನೇಮಿಸಿದೆ.

ಇಷ್ಟು ದಿನ ಟಿವಿಎಸ್ ವಾಹನಗಳನ್ನು ನಗರದ ರಸ್ತೆಗಳಲ್ಲಿ ಮಾತ್ರ ಸಂಚರಿಸಲು ಲಾಯಕ್ಕೆಂದು ಪರಿಗಣಿಸಲಾಗಿತ್ತು. ಆದರೆ ಈ ಯುನಿಸೆಕ್ಸ್ ಸ್ಕೂಟರ್ ಸಾಕಷ್ಟು ಬದಲಾವಣೆಗಳನ್ನು ಪಡೆದಿದ್ದು, ಹೆದ್ದಾರಿಯಲ್ಲಿಯೂ ತೆಗೆದುಕೊಂಡು ಹೋಗಬಹುದು ಎಂದು ಟಿವಿಎಸ್ ತಿಳಿಸಿದೆ.

ಇದರ ಬಿಡುಗಡೆಗಾಗಿ ಟಿವಿಎಸ್ ಮುಂದಿನ ಹಣಕಾಸು ವರ್ಷ ಬರುವುದಕ್ಕಾಗಿ ಎದಿರು ನೋಡುತ್ತಿದೆ. ಕಳೆದ ವರ್ಷ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾದ ನಂತರ ರಸ್ತೆಗೆ ಬರುತ್ತಿರುವ ನಾಲ್ಕನೇ ನೂತನ ದ್ವಿಚಕ್ರ ವಾಹನ ಸ್ಟ್ರೀಕ್. ಮಾರಾಟದಲ್ಲಿಯೂ ಕಳೆದ ಸೆಪ್ಟೆಂಬರ್‌ನಿಂದ ಸ್ಕೂಟರ್ ವಿಭಾಗದಲ್ಲಿ ಟಿವಿಎಸ್ ಉತ್ತಮ ಪ್ರಗತಿಯನ್ನು ಸಾಧಿಸಿದೆ. ಒಂದು ಲಕ್ಷದಲ್ಲಿ ಶೇ.25ರಷ್ಟು ಮಾರಾಟವಾದ ವಾಹನಗಳು ಸ್ಕೂಟರುಗಳು.
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.