ಕೆಟಿಎಂ 250 ಡ್ಯೂಕ್ ಭಾರತಕ್ಕೆ ಬರುತ್ತಾ ?

ಅತಿ ನೂತನ ಕೆಟಿಎಂ 250 ಡ್ಯೂಕ್ ಬೈಕ್ ಅನಾವರಣಗೊಂಡಿದೆ. ಇದು ಆಕ್ರಮಣಕಾರಿ ವಿನ್ಯಾಸವನ್ನು ಮೈಗೂಡಿಸಿಕೊಂಡು ಬಂದಿದೆ.

By Nagaraja

ಭಾರತದಲ್ಲಿ ಕೆಟಿಎಂ ಡ್ಯೂಕ್ 200 ಹಾಗೂ ಡ್ಯೂಕ್ 390 ಮಾದರಿಗಳು ಅಭೂತಪೂರ್ವ ಯಶಸ್ಸನ್ನು ಸಾಧಿಸಿರುವುದು ನಿಮಗೆಲ್ಲರಿಗೂ ತಿಳಿದ ವಿಚಾರ. ಈ ನಡುವೆ ಅತಿ ನೂತನ ಕೆಟಿಎಂ 250 ಡ್ಯೂಕ್ ಅನಾವರಣಗೊಳಿಸಲಾಗಿದೆ. ಇದು ಭಾರತಕ್ಕೆ ಬರುತ್ತಾ ಎಂಬುದು ಬಹಳ ಕುತೂಹಲ ಮೂಡಿಸಿದೆ.

ಕೆಟಿಎಂ 250 ಡ್ಯೂಕ್ ಭಾರತಕ್ಕೆ ಬರುತ್ತಾ ?

ಆಸ್ಟ್ರೀಯಾ ಮೂಲದ ಕೆಟಿಎಂ ಸಂಸ್ಥೆಯ ನೆಕ್ಡ್ ಸ್ಟ್ರೀಟ್ ಫೈಟರ್ ಬೈಕಾಗಿರುವ 250 ಡ್ಯೂಕ್ ನಲ್ಲಿ ಆಧುನಿಕತೆಗೆ ತಕ್ಕಂತೆ ಪ್ರಭಾವಶಾಲಿ ವಿನ್ಯಾಸ ಮೈಗೂಡಿಸಿಕೊಳ್ಳಲಾಗಿದೆ.

ಕೆಟಿಎಂ 250 ಡ್ಯೂಕ್ ಭಾರತಕ್ಕೆ ಬರುತ್ತಾ ?

ಇದರಲ್ಲಿರುವ 248.8 ಸಿಸಿ ವಾಟರ್ ಕೂಲ್ಡ್ ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ ಎಂಜಿನ್ 24 ಎನ್ ಎಂ ತಿರುಗುಬಲದಲ್ಲಿ 31 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಕೆಟಿಎಂ 250 ಡ್ಯೂಕ್ ಭಾರತಕ್ಕೆ ಬರುತ್ತಾ ?

ಹಗುರ ಟ್ಯೂಬುಲರ್ ಟ್ರೆಲ್ಲಿಸ್ ಫ್ರೇಮ್ ಹೊಂದಿರುವ ಈ ಹಗುರ ಭಾರದ ಬೈಕ್ ಆರು ಸ್ಪೀಡ್ ಗೇರ್ ಬಾಕ್ಸ್ ಸಹ ಪಡೆದಿದೆ.

ಕೆಟಿಎಂ 250 ಡ್ಯೂಕ್ ಭಾರತಕ್ಕೆ ಬರುತ್ತಾ ?

ಮುಂದುಗಡೆ ಡಬ್ಲ್ಯುಪಿ ಸಸ್ಪೆನ್ಷನ್, ಹೊಸತಾದ ಸ್ವಿಂಗಾರ್ಮ್ ವಿನ್ಯಾಸ ಮತ್ತು ಸಂಪೂರ್ಣವಾಗಿ ಹೊಸತಾದ ಎಕ್ಸಾಸ್ಟ್ ಕೊಳವೆಗಳನ್ನು ಪಡೆಯಲಿದೆ.

ಕೆಟಿಎಂ 250 ಡ್ಯೂಕ್ ಭಾರತಕ್ಕೆ ಬರುತ್ತಾ ?

ಸುರಕ್ಷತೆಯಲ್ಲೂ ಮೇಲುಗೈ ಸಾಧಿಸಲಿರುವ 250 ಡ್ಯೂಕ್ ನಲ್ಲಿ ಡ್ಯುಯಲ್ ಚಾನೆಲ್ ಬಾಷ್ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಮತ್ತು 17 ಇಂಚುಗಳ ಚಕ್ರಗಳನ್ನು ಜೋಡಿಸಲಾಗಿದೆ.

ಕೆಟಿಎಂ 250 ಡ್ಯೂಕ್ ಭಾರತಕ್ಕೆ ಬರುತ್ತಾ ?

ಹಾಗಿದ್ದರೂ ನೂತನ 250 ಡ್ಯೂಕ್ ಬೈಕ್ ಗೆ ರೈಡ್-ಬೈ-ವೈರ್ ತಂತ್ರಜ್ಞಾನದ ಕೊರತೆಯು ಕಾಡಲಿದೆ. ಇನ್ನೊಂದೆಡೆ 2017 ಕೆಟಿಎಂ 390 ಡ್ಯೂಕ್ ನಲ್ಲಿ ಇದು ಪ್ರಮುಖ ವೈಶಿಷ್ಟ್ಯವಾಗಿರಲಿದೆ.

ಕೆಟಿಎಂ 250 ಡ್ಯೂಕ್ ಭಾರತಕ್ಕೆ ಬರುತ್ತಾ ?

ವಿನ್ಯಾಸದ ವಿಚಾರದಲ್ಲಿ ತನ್ನ ಹಿರಿಯ ಸೋದರನನ್ನು ಹಿಂಬಾಲಿಸಿರುವ ಕೆಟಿಎಂ ಡ್ಯೂಕ್ 250, ಅಗಲವಾದ ಟ್ಯಾಂಕ್, ಆಕ್ರಮಣಕಾರಿ ಹೆಡ್ ಲ್ಯಾಂಪ್ ಹೌಸಿಂಗ್ ಹಾಗೂ ಹೊಸ ಸೀಟುಗಳ ರಚನೆಯನ್ನು ಪಡೆದಿದೆ.

ಕೆಟಿಎಂ 250 ಡ್ಯೂಕ್ ಭಾರತಕ್ಕೆ ಬರುತ್ತಾ ?

ಅತ್ತ ಹೊಸ 250 ಡ್ಯೂಕ್ ನಲ್ಲಿ ಎಲ್ ಇಡಿ ಹೆಡ್ ಲ್ಯಾಂಪ್ ವ್ಯವಸ್ಥೆಯ ಕೊರತೆಯು ಕಾಡಲಿದೆ. ಇದರ ಬದಲಾಗಿ ಹ್ಯಾಲಗನ್ ಹೆಡ್ ಲ್ಯಾಂಪ್ ಜೊತೆ ಡೇ ಟೈಮ್ ರನ್ನಿಂಗ್ಸ್ ಲೈಟ್ಸ್ ಸಿಗಲಿದೆ.

ಕೆಟಿಎಂ 250 ಡ್ಯೂಕ್ ಭಾರತಕ್ಕೆ ಬರುತ್ತಾ ?

ಟಿಎಫ್ ಟಿ ಇನ್ಸ್ಟ್ರುಮೆಂಟ್ ಅಭಾವವು ಕಂಡುಬರಲಿದೆ. ಇದರ ಬದಲಾಗಿ ಎಲ್ ಸಿಡಿ ಕ್ಲಸ್ಟರ್ ನಲ್ಲೇ ಗೇರ್, ಫ್ಯೂಯಲ್ ಗೇಜ್ ಮತ್ತು ಸರ್ವಿಸ್ ರಿಮೈಂಡರ್ ಮಾಹಿತಿಗಳನ್ನು ತೋರಿಸಲಾಗುವುದು.

ಕೆಟಿಎಂ 250 ಡ್ಯೂಕ್ ಭಾರತಕ್ಕೆ ಬರುತ್ತಾ ?

ಅಷ್ಟಕ್ಕೂ ಕೆಟಿಎಂ 250 ಡ್ಯೂಕ್ ಭಾರತಕ್ಕೆ ಆಗಮನವಾಗಲಿದೆಯೇ ಎಂಬುದರ ಬಗ್ಗೆ ಸಂಸ್ಥೆಯಿಂದ ಯಾವುದೇ ಮಾಹಿತಿಗಳಿಲ್ಲ. ಸದ್ಯ ದಕ್ಷಿಣ ಪೂರ್ವ ಏಷ್ಯಾ ಮಾರುಕಟ್ಟೆಯನ್ನು ತಲುಪಲಿದ್ದು, ಭವಿಷ್ಯದಲ್ಲೇ ಭಾರತಕ್ಕೆ ಎಂಟ್ರಿ ಕೊಟ್ಟಲ್ಲಿ ಅಚ್ಚರಿಪಡಬೇಕಿಲ್ಲ.

Most Read Articles

Kannada
Read more on ಕೆಟಿಎಂ ktm
English summary
2017 KTM 250 Duke Revealed; Misses Out On Several Features
Story first published: Monday, November 21, 2016, 17:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X