ಕಾದಿರಿ, ಮುಂದಿನ ವರ್ಷ ಹೊಸ ಕೆಟಿಎಂ ಡ್ಯೂಕ್ 200 ಬಿಡುಗಡೆ

2017ನೇ ಸಾಲಿನ ಮಧ್ಯಂತರ ಅವಧಿಯಲ್ಲಿ ನೂತನ ಕೆಟಿಎಂ ಡ್ಯೂಕ್ 200 ಬಿಡುಗಡೆಯಾಗಲಿದೆ.

By Nagaraja

ನೀವು ಕೆಟಿಎಂ ಬೈಕ್ ಪ್ರೇಮಿಯೇ? ಹೊಸತಾದ ಕೆಟಿಎಂ ಡ್ಯೂಕ್ 200 ಖರೀದಿಸುವ ಯೋಚನೆಯಲ್ಲಿದ್ದೀರಾ? ಹಾಗಿದ್ದರೆ ಈ ಸುದ್ದಿಯತ್ತ ಸ್ವಲ್ಪ ಗಮನ ವಹಿಸಿರಿ. ಯಾಕೆಂದರೆ ವಾಹನ ಪ್ರೇಮಿಗಳಲ್ಲಿ ಶುಭ ಸಮಾಚಾರ ಹರಡಿರುವ ನೂತನ 2017 ಕೆಟಿಎಂ ಡ್ಯೂಕ್ 200 ಬೈಕ್ ಮುಂದಿನ ಸಾಲಿನ ಮಧ್ಯಂತರ ಅವಧಿಯಲ್ಲಿ ಬಿಡುಗಡೆಯಾಗಲಿದೆ.

ಕಾದಿರಿ, ಮುಂದಿನ ವರ್ಷ ಹೊಸ ಕೆಟಿಎಂ ಡ್ಯೂಕ್ 200 ಬಿಡುಗಡೆ

ಆಸ್ಟ್ರೇಲಿಯಾ ಮೂಲದ ಪ್ರಖ್ಯಾತ ದ್ವಿಚಕ್ರ ವಾಹನ ಸಂಸ್ಥೆ ಕೆಟಿಎಂ ಭಾರತದಲ್ಲಿ ಬಜಾಜ್ ಆಟೋ ಸಹಯೋಗದಲ್ಲಿ ಕೆಟಿಎಂ ಡ್ಯೂಕ್ 300 ಬೈಕ್ ಗಳನ್ನು ಮಾರಾಟ ಮಾಡುತ್ತಿದೆ.

ಕಾದಿರಿ, ಮುಂದಿನ ವರ್ಷ ಹೊಸ ಕೆಟಿಎಂ ಡ್ಯೂಕ್ 200 ಬಿಡುಗಡೆ

ಕೆಟಿಎಂ ಡ್ಯೂಕ್ 200 ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಸಾಧಿಸಿದ್ದು, ಹಾಗಿರಬೇಕೆಂದರೆ ನೂತನ 2017 ಕೆಟಿಎಂ ಡ್ಯೂಕ್ 200 ಆವೃತ್ತಿಯು ಬಿಡುಗಡೆಗೆ ಸಜ್ಜಾಗುತ್ತಿದೆ.

ಕಾದಿರಿ, ಮುಂದಿನ ವರ್ಷ ಹೊಸ ಕೆಟಿಎಂ ಡ್ಯೂಕ್ 200 ಬಿಡುಗಡೆ

ನೂತನ ಕೆಟಿಎಂ ಡ್ಯೂಕ್ 200, ತನ್ನ ಹಿರಿಯ ಸೋದರ ಕೆಟಿಎಂ ಡ್ಯೂಕ್ 390 ಬಿಡುಗಡೆ ಬಳಿಕಷ್ಟೇ ಮಾರುಕಟ್ಟೆ ತಲುಪಲಿದೆ. ನವೀಕೃತ ಕೆಟಿಎಂ ಡ್ಯೂಕ್ 390 ಬೈಕ್ 2017 ವರ್ಷಾರಂಭದಲ್ಲಿ ಬಿಡುಗಡೆಯಾಗಲಿದೆ.

ಕಾದಿರಿ, ಮುಂದಿನ ವರ್ಷ ಹೊಸ ಕೆಟಿಎಂ ಡ್ಯೂಕ್ 200 ಬಿಡುಗಡೆ

ಇಲ್ಲಿ ಕಂಡುಬಂದಿರುವ ಗಮನಾರ್ಹ ಬದಲಾವಣೆಯೆಂದರೆ ನೂತನ ಕೆಟಿಎಂ ಡ್ಯೂಕ್ 200, ವಿಭಜಿತ ಹೆಡ್ ಲೈಟ್ ಗಳ ಬದಲು ಸಿಂಗಲ್ ಹೆಡ್ ಲೈಟ್ ಸೇವೆಯನ್ನು ಪಡೆಯಲಿದೆ. ಇದು ವಾಹನ ಪ್ರೇಮಿಗಳಲ್ಲಿ ನಿರಾಸೆಯನ್ನುಂಟು ಮಾಡಿದೆ.

ಕಾದಿರಿ, ಮುಂದಿನ ವರ್ಷ ಹೊಸ ಕೆಟಿಎಂ ಡ್ಯೂಕ್ 200 ಬಿಡುಗಡೆ

ಪರಿಷ್ಕೃತ ಹೆಡ್ ಲೈಟ್ ವಿನ್ಯಾಸದೊಂದಿಗೆ ಎಲ್ ಇಡಿ ಸೌಲಭ್ಯವನ್ನು ನೂತನ ಕೆಟಿಎಂ ಡ್ಯೂಕ್ 200 ಪಡೆಯಲಿದೆ. ಇನ್ನು ಸಮಕಾಲೀನ ವಿನ್ಯಾಸದತ್ತ ಹೆಚ್ಚಿನ ಗಮನ ಹರಿಸಲಾಗಿದೆ.

ಕಾದಿರಿ, ಮುಂದಿನ ವರ್ಷ ಹೊಸ ಕೆಟಿಎಂ ಡ್ಯೂಕ್ 200 ಬಿಡುಗಡೆ

ಇಂಧನ ಟ್ಯಾಂಕ್ ಸಹ ಮಾರ್ಪಾಡುಗೊಳಿಸಲಾಗಿದ್ದು, ಹಿಂದಿಗಿಂತಲೂ ಹೆಚ್ಚು ಉದ್ದವನ್ನು ಕಾಪಾಡಿಕೊಂಡಿದೆ. ಇದರ ಮುಂದುಗಡೆಯಾಗಿ ಕೀ ಸ್ಥಾನವನ್ನು ನೀಡಲಾಗಿದೆ.

ಕಾದಿರಿ, ಮುಂದಿನ ವರ್ಷ ಹೊಸ ಕೆಟಿಎಂ ಡ್ಯೂಕ್ 200 ಬಿಡುಗಡೆ

ಅತ್ತ ಹಿಂದುಗಡೆ ಸಹ ಪ್ರಯಾಣಿಕನ ಗ್ರಾಬ್ ರೈಲ್ ಇನ್ನು ಸ್ವಲ್ಪ ಮುಂದಕ್ಕೆ ತಳ್ಳಲ್ಪಟ್ಟಿದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಂತೆಯೇ ದೊಡ್ಡದಾದ ಎಕ್ಸಾಸ್ಟ್ ಕೊಳವೆಗಳು ಇರಲಿದೆ.

ಕಾದಿರಿ, ಮುಂದಿನ ವರ್ಷ ಹೊಸ ಕೆಟಿಎಂ ಡ್ಯೂಕ್ 200 ಬಿಡುಗಡೆ

ನೂತನ ಕೆಟಿಎಂ ಡ್ಯೂಕ್ 200 ಮಾದರಿಯು 199.5 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಡಿಒಎಚ್ ಸಿ ಎಂಜಿನ್ ನಿಂದ ನಿಯಂತ್ರಿಸ್ಪಡಲಿದ್ದು, 26 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಈ ಮೂಲಕ ಹಿಂದಿನ ಆವೃತ್ತಿಗಿಂತಲೂ ಸುಧಾರಣೆ ಕಂಡುಬಂದಿದ್ದು ಹೆಚ್ಚು ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಕಾದಿರಿ, ಮುಂದಿನ ವರ್ಷ ಹೊಸ ಕೆಟಿಎಂ ಡ್ಯೂಕ್ 200 ಬಿಡುಗಡೆ

ಸಸ್ಪೆನ್ಷನ್ ಜವಾಬ್ದಾರಿಯನ್ನು ಮುಂಭಾಗದಲ್ಲಿ 43 ಎಂಎಂ ಟೆಲಿಸ್ಕಾಪಿಕ್ ಫಾರ್ಕ್ ಮತ್ತು ಹಿಂಭಾಗದಲ್ಲಿ ಸ್ವಿಂಗ್ ಆರ್ಮ್ ನೋಡಿಕೊಳ್ಳಲಿದೆ. ಹಾಗೆಯೇ ಹಗುರ ಭಾರದ ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಜೋಡಿಸಲಾಗಿದೆ.

ಕಾದಿರಿ, ಮುಂದಿನ ವರ್ಷ ಹೊಸ ಕೆಟಿಎಂ ಡ್ಯೂಕ್ 200 ಬಿಡುಗಡೆ

ಸದ್ಯ ಮಾರಾಟದಲ್ಲಿರುವ ಕೆಟಿಎಂ 200 ಡ್ಯೂಕ್ ಆವೃತ್ತಿಯು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 1.43 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ. ಅಂದರೆ ನೂತನ ಮಾದರಿಯು ಇದಕ್ಕಿಂತಲೂ ಕೊಂಚ ದುಬಾರಿಯೆನಿಸಲಿದೆ.

Most Read Articles

Kannada
Read more on ಕೆಟಿಎಂ ktm
English summary
New KTM Duke 200 To Be Launched In India In Mid-2017
Story first published: Friday, November 18, 2016, 15:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X