2017 ಕೆಟಿಎಂ ಡ್ಯೂಕ್ 390 ಟೆಸ್ಟಿಂಗ್ ವೇಳೆ ರಹಸ್ಯ ಚಿತ್ರಗಳು ಲೀಕ್!

By Nagaraja

ಆಸ್ಟ್ರೀಯಾ ಮೂಲದ ಕೆಟಿಎಂ ಬೈಕ್ ಗಳು ಭಾರತಕ್ಕೆ ಎಂಟ್ರಿ ಕೊಟ್ಟಿರುವ ಕಿರು ಅವಧಿಯಲ್ಲೇ ಬಹಳಷ್ಟು ಪ್ರಚಾರ ಹಾಗೂ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದೆ. ಕೆಟಿಎಂ ಬೈಕ್ ಗಳನ್ನು ಭಾರತಕ್ಕೆ ತರುವಲ್ಲಿ ಬಜಾಜ್ ಆಟೋ ನಿರ್ಣಾಯಕ ಪಾತ್ರ ವಹಿಸಿತ್ತು.

ಯುವ ಮನಸ್ಕರ ಮೆಚ್ಚುಗೆಗೆ ಪಾತ್ರವಾಗಿರುವ ಕೆಟಿಎಂ ಡ್ಯೂಕ್ 390 ಈಗ ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಇದರ ಮೊದಲ ಹಂತವಾಗಿ ಪರೀಕ್ಷಾರ್ಥ ಚಾಲನಾ ಪರೀಕ್ಷೆಯು ಬಹಳ ಜೋರಾಗಿ ನಡೆಯುತ್ತಿದೆ. 2017 ಕೆಟಿಎಂ ಡ್ಯೂಕ್ 390 ಭಾರತಕ್ಕೆ ಯಾವಾಗ ಕಾಲಿಡಲಿದೆ ಎಂಬುದು ಕುತೂಹಲ ಮೂಡಿಸಿದೆ.

2017 ಕೆಟಿಎಂ ಡ್ಯೂಕ್ 390 ಟೆಸ್ಟಿಂಗ್ ವೇಳೆ ರಹಸ್ಯ ಚಿತ್ರಗಳು ಲೀಕ್!

ಎರಡನೇ ತಲೆಮಾರಿನ ಕೆಟಿಎಂ ಡ್ಯೂಕ್ 390 ಗಮನಾರ್ಹ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಪ್ರಸಕ್ತ ಸಾಲಿನಲ್ಲೇ ಜಾಗತಿಕ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

2017 ಕೆಟಿಎಂ ಡ್ಯೂಕ್ 390 ಟೆಸ್ಟಿಂಗ್ ವೇಳೆ ರಹಸ್ಯ ಚಿತ್ರಗಳು ಲೀಕ್!

ನೂತನ ಕೆಟಿಎಂ ಬೈಕ್ ನಲ್ಲಿ ಕಂಡುಬಂದಿರುವ ಪ್ರಮುಖ ಬದಲಾವಣೆಯೆಂದರೆ ಹೊಸತಾದ ಟ್ವಿನ್ ಹೆಡ್ ಲ್ಯಾಂಪ್, ಪರಿಷ್ಕೃತ ಮತ್ತು ವರ್ಧಿತ ಇಂಧನ ಟ್ಯಾಂಕ್, ಪರಿಷ್ಕೃತ ಫ್ರೇಮ್ ಮತ್ತು ಹೊಸ ಸ್ವಿಚ್ ಗೇರ್ ಗಳಾಗಿವೆ.

2017 ಕೆಟಿಎಂ ಡ್ಯೂಕ್ 390 ಟೆಸ್ಟಿಂಗ್ ವೇಳೆ ರಹಸ್ಯ ಚಿತ್ರಗಳು ಲೀಕ್!

ಎಂಜಿನ್ ತಾಂತ್ರಿಕತೆಯಲ್ಲೂ ಟ್ಯೂನ್ ಮಾಡುವ ಸಾಧ್ಯತೆಯಿದ್ದು, ನೂತನ ಮಾದರಿಯು 373.27 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಯಂತ್ರಿಸಲ್ಪಡಲಿದೆ. ಇದು 35 ಎನ್ ಎಂ ತಿರುಗುಬಲದಲ್ಲಿ 44 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

2017 ಕೆಟಿಎಂ ಡ್ಯೂಕ್ 390 ಟೆಸ್ಟಿಂಗ್ ವೇಳೆ ರಹಸ್ಯ ಚಿತ್ರಗಳು ಲೀಕ್!

ತನ್ಮೂಲಕ ಹಿಂದಿನ ಮಾದರಿಗಿಂತಲೂ ಹೆಚ್ಚು ಶಕ್ತಿಶಾಲಿ ಎನಿಸಿಕೊಳ್ಳಲಿದೆ. ಅಲ್ಲದೆ ರೈಡ್-ಬೈ-ವೈರ್ ತಂತ್ರಜ್ಞಾನದೊಂದಿಗೂ ಕೂಡಿರಲಿದೆ.

2017 ಕೆಟಿಎಂ ಡ್ಯೂಕ್ 390 ಟೆಸ್ಟಿಂಗ್ ವೇಳೆ ರಹಸ್ಯ ಚಿತ್ರಗಳು ಲೀಕ್!

ಇನ್ನುಳಿದಂತೆ ಎಂಜಿನ್ ಸೆಕೆಂಡರ್ ಕೌಂಟರ್-ಬಾಲನ್ಸರ್ ಶಾಫ್ಟ್, ಇಸಿಯು ಹಾಗೂ ಕೂಲಿಂಗ್ ಸಿಸ್ಟಂಗಳಲ್ಲೂ ಸುಧಾರಣೆ ಕಂಡುಬರುವ ಸಾಧ್ಯತೆಯಿದೆ.

2017 ಕೆಟಿಎಂ ಡ್ಯೂಕ್ 390 ಟೆಸ್ಟಿಂಗ್ ವೇಳೆ ರಹಸ್ಯ ಚಿತ್ರಗಳು ಲೀಕ್!

ನವೆಂಬರ್ ತಿಂಗಳಲ್ಲಿ ನಡೆಯಲಿರುವ 2016 ಮಿಲಾನ್ ಮೋಟಾರು ಶೋದಲ್ಲಿ ಪಾದಾರ್ಪಣೆಗೈಯಲಿರುವ 2017 ಕೆಟಿಎಂ ಡ್ಯೂಕ್ 390, ಭಾರತಕ್ಕೆ 2017ನೇ ಸಾಲಿನ ದ್ವಿತಿಯಾರ್ಧದಲ್ಲಷ್ಟೇ ಆಗಮಿಸುವ ಸಾಧ್ಯತೆಯಿದೆ.

Most Read Articles

Kannada
Read more on ಕೆಟಿಎಂ ktm
English summary
Spied: KTM Duke 390 Spotted Testing In India
Story first published: Saturday, September 10, 2016, 10:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X