ಬಜಾಜ್ 400 ಸಿಸಿ ಬೈಕ್ ಗೆ ಹೊಸ ನಾಮಕರಣ; ಏನದು ಗೊತ್ತೇ?

By Nagaraja

2016 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳುವ ವೇಳೆಗೆ ಸಿಎಸ್ 400 (ಕ್ರೂಸರ್ ಸ್ಪೋರ್ಟ್) ಎಂದೆನಿಸಿಕೊಂಡಿರುವ ಬಜಾಜ್ ನ ಅತಿ ನೂತನ 400 ಸಿಸಿ ಬೈಕ್ ಬಳಿಕ ವಿಎಸ್ 400 (ವ್ಯಾಂಟೇಜ್ ಸ್ಪೋರ್ಟ್) ಎಂದು ಗುರುತಿಸಿಕೊಂಡಿತ್ತು. ಆದರೆ ಇವೆಲ್ಲ ಊಹಾಪೋಹಾಗಳಿಗೆ ವಿರಾಮ ಹಾಡಿರುವ ಸಂಸ್ಥೆಯೀಗ ತನ್ನ ಬಹುನಿರೀಕ್ಷಿತ ಬೈಕ್ ಗೆ ಹೊಸ ನಾಮಕರಣವನ್ನು ಮಾಡಿಕೊಂಡಿದೆ.

ಹೌದು, ಅತಿ ನೂತನ ಬಜಾಜ್ 400 ಸಿಸಿ ಬೈಕ್ ಕ್ರೆಟೊಸ್ ವಿಎಸ್ 400 ಎಂದೆನಿಸಿಕೊಳ್ಳಲಿದೆ. ಪ್ರಸ್ತುತ ಬೈಕ್ ಅತಿ ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸುತ್ತಿರುವುದು ಮಗದೊಂದು ವಿಶೇಷ.

ಬಜಾಜ್ 400 ಸಿಸಿ ಬೈಕ್ ಗೆ ಹೊಸ ನಾಮಕರಣ; ಏನದು ಗೊತ್ತೇ?

ನೂತನ ಬಜಾಜ್ 400 ಸಿಸಿ ಬೈಕ್ ಗೆ ಪಲ್ಸರ್ ಶ್ರೇಣಿಯ ಹೆಸರನ್ನಿಟ್ಟುಕೊಳ್ಳಲಾಗುವುದಿಲ್ಲ. ತನ್ಮೂಲಕ ತನ್ನದೇ ಆದ ಸ್ಥಾನದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಳ್ಳಲಿದೆ.

ಬಜಾಜ್ 400 ಸಿಸಿ ಬೈಕ್ ಗೆ ಹೊಸ ನಾಮಕರಣ; ಏನದು ಗೊತ್ತೇ?

ಬಜಾಜ್ ಕ್ರೆಟೊಸ್ ವಿಎಸ್ 400 ಬೈಕ್ ಮುಂಬರುವ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ತನ್ಮೂಲಕ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರಗನ್ನು ತುಂಬಲಿದೆ.

ಬಜಾಜ್ 400 ಸಿಸಿ ಬೈಕ್ ಗೆ ಹೊಸ ನಾಮಕರಣ; ಏನದು ಗೊತ್ತೇ?

ಕ್ರೆಟೊಸ್ ಗ್ರೀಕ್ ಯುದ್ಧ ದೇವತೆಯ ಸೂಚಕವಾಗಿದ್ದು, ಶಕ್ತಿ, ಸಾರ್ವಭೌಮ, ಅಧಿಕಾರದ ವ್ಯಕ್ತೀಕರಣದ ಸಂಕೇತವಾಗಿದೆ. ದೇಶದಲ್ಲಿ ನಿರ್ವಹಣಾ ಬೈಕ್ ಗಳನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಕ್ರೆಟೊಸ್ ನೆರವಾಗಲಿದೆ.

ಬಜಾಜ್ 400 ಸಿಸಿ ಬೈಕ್ ಗೆ ಹೊಸ ನಾಮಕರಣ; ಏನದು ಗೊತ್ತೇ?

ಕಳೆದೊಂದು ದಶಕದಿಂದ ಪಲ್ಸರ್ ಶ್ರೇಣಿಯ ಬೈಕ್ ಗಳು ದೇಶದಲ್ಲಿ ರಾರಾಜಿಸುತ್ತಿದ್ದು, ಈಗ ಗರಿಷ್ಠ ಸಿಸಿ ಪ್ರೀಮಿಯಂ ಬೈಕ್ ಗಳನ್ನು ಬಿಡುಗಡೆ ಮಾಡುವುದರಲ್ಲಿ ಬಜಾಜ್ ತಲ್ಲೀನವಾಗಿದೆ. ಇದು ರಾಯಲ್ ಎನ್ ಫೀಲ್ಡ್ ಬೈಕ್ ಗಳಿಗೆ ಪ್ರತಿಸ್ಪರ್ಧೆಯೊಡ್ಡಲಿದೆ.

ಬಜಾಜ್ 400 ಸಿಸಿ ಬೈಕ್ ಗೆ ಹೊಸ ನಾಮಕರಣ; ಏನದು ಗೊತ್ತೇ?

ಡುಕಾಟಿ ಡೇವಿಯಲ್ ನಿಂದ ಸ್ಪೂರ್ತಿ ಪಡೆದ ಶೈಲಿ, ಕೆಟಿಎಂ ಡ್ಯೂಕ್ 390 ಆವೃತ್ತಿಯಲ್ಲಿರುವುದಕ್ಕೆ ಸಮಾನವಾದ 373 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅದ್ಭುತ ಚಾಲನಾ ಅನುಭವವನ್ನು ಖಾತ್ರಿಪಡಿಸಲಿದೆ. ಇದು ಆರು ಸ್ಪೀಡ್ ಗೇರ್ ಬಾಕ್ಸ್ ಪಡೆದುಕೊಂಡಿದ್ದು, 34.5 ಅಶ್ವಶಕ್ತಿಯನ್ನು ನೀಡಲಿದೆ.

ಬಜಾಜ್ 400 ಸಿಸಿ ಬೈಕ್ ಗೆ ಹೊಸ ನಾಮಕರಣ; ಏನದು ಗೊತ್ತೇ?

1.6 ಲಕ್ಷ ರು.ಗಳಿಂದ 1.7 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿರುವ ಬಜಾಜ್ ಕ್ರೆಟೊಸ್, ಐಚ್ಛಿಕ ಎಬಿಎಸ್ ವ್ಯವಸ್ಥೆಯನ್ನು ಪಡೆಯಲಿದೆ.


Most Read Articles

Kannada
English summary
Bajaj Gets A New Brand — Kratos VS400 To Be Launched Soon
Story first published: Wednesday, September 28, 2016, 10:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X