ಸತತ 6ನೇ ಬಾರಿಗೆ ಹಾರ್ಲೆ ಡೇವಿಡ್ಸನ್ ದೇಶದ ನೆಚ್ಚಿನ ಪ್ರೀಮಿಯಂ ಬ್ರಾಂಡ್

Written By:

ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿರುವ ವರ್ಷದಿಂದ ಹಿಡಿದು ಸತತವಾಗಿ ಆರನೇ ಬಾರಿಗೂ ದೇಶದ ನಂ.1 ಪ್ರೀಮಿಯಂ ಮೋಟಾರ್ ಸೈಕಲ್ ಬ್ರಾಂಡ್ ಆಗಿ ಅಮೆರಿಕದ ಜನಪ್ರಿಯ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಹೊರಬಂದಿದೆ.

ಭಾರತದಲ್ಲಿ 601 ಸಿಸಿ ಹಾಗೂ ಅದಕ್ಕಿಂತಲೂ ಮೇಲ್ಪಟ್ಟ ವಿಭಾಗದಲ್ಲಿ ಹಾರ್ಲೆ ಡೇವಿಡ್ಸನ್ ಶೇಕಡಾ 60ರಷ್ಟು ಮಾರುಕಟ್ಟೆ ಶೇರನ್ನು ಹೊಂದಿದೆ.

2010ನೇ ಇಸವಿಯಲ್ಲಿ ಭಾರತಕ್ಕೆ ಕಾಲಿಟ್ಟಿರುವ ಹಾರ್ಲೆ, 2017ನೇ ಸಾಲಿನ ತನ್ನೆಲ್ಲ ಶ್ರೇಣಿಗಳಿಗೆ ಎಬಿಎಸ್ ಸ್ಟ್ಯಾಂಡರ್ಡ್ ಆಗಿ ಜೋಡಿಸಿದ್ದವು.

ಇವೆಲ್ಲದಕ್ಕೂ ಹಾರ್ಲೆ ಸ್ಟ್ರೀಟ್ 750 ಯಶಸ್ಸಿಗೆ ಧನ್ಯವಾದವನ್ನು ಹೇಳಲೇಬೇಕು. ಇದು ದೇಶದಲ್ಲಿ ಲಭ್ಯವಿರುವ ಅಗ್ಗದ ಹಾರ್ಲೆ ಬೈಕಾಗಿದ್ದು, ಸ್ಥಳೀಯವಾಗಿ ನಿರ್ಮಿಸಲಾಗುತ್ತಿದೆ.

ದೇಶದ 21 ನಗರಗಳಲ್ಲಾಗಿ 24ರಷ್ಟು ಔಟ್ಲೆಟ್ ಗಳನ್ನು ಹೊಂದಿರುವ ಹಾರ್ಲೆ ಶೇಕಡಾ 60ರಷ್ಟು ಮಾರುಕಟ್ಟೆ ಶೇರನ್ನು ಹೊಂದಿದ್ದು, ಮುಂದಿನ ವರ್ಷಗಳಲ್ಲಿ ಮತ್ತಷ್ಟು ಜನಪ್ರಿಯತೆ ಸಾಧಿಸುವ ಇರಾದೆಯಲ್ಲಿದೆ.

ಹಾರ್ಲೆ ಡೇವಿಡ್ಸನ್ ಇತ್ತೀಚೆಗಷ್ಟೇ ರೋಡ್ ಸ್ಟರ್ ಮತ್ತು ರೋಡ್ ಗ್ಲೈಡ್ ಸ್ಪೆಷನ್ ಮಾದರಿಗಳನ್ನು ಬಿಡುಗಡೆಗೊಳಿಸಿತ್ತು.

ಅಂತೆಯೇ ಲೆಜೆಂಡ್ ಆಫ್ ಟೂರ್, ಪಾಸ್ ಪೋರ್ಟ್ ಟು ಫ್ರೀಡಂ, ಹಾರ್ಲೆ ರಾಕ್ ರೈಡರ್ ಮತ್ತು ಡಿಸ್ಕವರ್ ಮೋರ್ ಕ್ಯಾಂಪೈನ್ ಇತ್ಯಾದಿ ಅಭಿಯಾನಗಳನ್ನು ಕೈಗೊಂಡಿದೆ.

ಭಾರತದಲ್ಲಿರುವ ಹಾರ್ಲೆ ಬೈಕ್ ಗಳು

ಸ್ಟ್ರೀಟ್ 750,
ಐಯಾನ್ 883,
1200 ಕಸ್ಟಮ್,
ಫೋರ್ಟಿ ಎಯಿಟ್,
ರೋಡ್ ಸ್ಟರ್,
ಸ್ಟ್ರೀಟ್ ಬಾಬ್,
ಫಾಟ್ ಬಾಬ್,

ಭಾರತದಲ್ಲಿರುವ ಹಾರ್ಲೆ ಬೈಕ್ ಗಳು

ಫಾಟ್ ಬಾಯ್,
ಹೆರಿಟೇಡ್ ಸಾಫ್ಟೈಲ್ ಕ್ಲಾಸಿಕ್,
ರೋಡ್ ಕಿಂಗ್,
ಸ್ಟ್ರೀಟ್ ಗ್ಲೈಡ್ ಸ್ಪೆಷಲ್,
ರೋಡ್ ಗ್ಲೈಡ್ ಸ್ಪೆಷಲ್,
ಸಿವಿಒ ಲಿಮಿಟೆಡ್.

English summary
Harley-Davidson Completes Six Successful Years In India
Please Wait while comments are loading...

Latest Photos