ಐ3ಎಸ್ ತಂತ್ರಗಾರಿಕೆಯೊಂದಿಗೆ 2016 ಹೀರೊ ಅಚೀವರ್ 150 ಸಿಸಿ ಬೈಕ್ ಎಂಟ್ರಿ

By Nagaraja

ಭಾರತದ ಅತಿ ದೊಡ್ಡ ದ್ವಿಚಕ್ರ ಪ್ರಯಾಣಿಕ ಸಂಸ್ಥೆ ಹೀರೊ ಮೊಟೊಕಾರ್ಪ್, 2016 ಹೀರೊ ಅಚೀವರ್ 150 ಸಿಸಿ ಬೈಕನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ. ಇದು ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ ಬಿಡುಗಡೆ ಮಾಡಲಿರುವ 15 ಹೊಸ ಹಾಗೂ ಪರಿಷ್ಕೃತ ದ್ವಿಚಕ್ರ ವಾಹನಗಳ ಭಾಗವಾಗಿರಲಿದೆ.

ಆರಂಭಿಕ ಬೆಲೆ ಮಾಹಿತಿ: 61,800 ರು. (ಎಕ್ಸ್ ಶೋ ರೂಂ ದೆಹಲಿ)

ಇದು ಮ್ಯಾಸ್ಟ್ರೊ ಎಡ್ಜ್, ಡ್ಯುಯೆಟ್ ಮತ್ತು ಸ್ಪ್ಲೆಂಡರ್ ಐಸ್ಮಾರ್ಟ್ 110 ಸಿಸಿ ಬೈಕ್ ಬಳಿಕ ಹೀರೊ ಬಿಡುಗಡೆ ಮಾಡುತ್ತಿರುವ ನಾಲ್ಕನೇ ಹೊಚ್ಚ ಹೊಸ ಉತ್ಪನ್ನವಾಗಿದೆ.

ಐ3ಎಸ್ ತಂತ್ರಗಾರಿಕೆಯೊಂದಿಗೆ 2016 ಹೀರೊ ಅಚೀವರ್ 150 ಸಿಸಿ ಬೈಕ್ ಎಂಟ್ರಿ

ನೂತನ ಹೀರೊ ಅಚೀವರ್ 150 ಸಿಸಿ ಬೈಕ್ ಐಚ್ಛಿಕ ಬ್ರೇಕ್ ನೊಂದಿಗೂ ಲಭ್ಯವಾಗಲಿದ್ದು, 1000 ರುಪಾಯಿಗಳಷ್ಟು ದುಬಾರಿಯೆನಿಸಲಿದೆ. ಅಂದರೆ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 62,800 ರು.ಗಳಾಗಿರಲಿದೆ.

ಐ3ಎಸ್ ತಂತ್ರಗಾರಿಕೆಯೊಂದಿಗೆ 2016 ಹೀರೊ ಅಚೀವರ್ 150 ಸಿಸಿ ಬೈಕ್ ಎಂಟ್ರಿ

ನೂತನ ಅಚೀವರ್ 150, ಹೊಸ ಹೆಡ್ ಲೈಟ್, ಟೈಲ್ ಲೈಟ್, ಟರ್ನ್ ಇಂಡಿಕೇಟರ್, ದೊಡ್ಡದಾದ ವೈಸರ್, ತಾಜಾ ಫೆಂಡರ್ ಮತ್ತು ಆಕರ್ಷಕ ಬಾಡಿ ಗ್ರಾಫಿಕ್ಸ್ ಗಳನ್ನು ಪಡೆಯಲಿದೆ.

ಐ3ಎಸ್ ತಂತ್ರಗಾರಿಕೆಯೊಂದಿಗೆ 2016 ಹೀರೊ ಅಚೀವರ್ 150 ಸಿಸಿ ಬೈಕ್ ಎಂಟ್ರಿ

ಹಿಂದಿನ ಆವೃತ್ತಿಗಿಂತಲೂ ದೊಡ್ಡಾದಾದ ಇಂಧನ ಟ್ಯಾಂಕ್ ಸಹ ಪಡೆದಿದೆ. ಇನ್ನು ಪರಿಷ್ಕೃತ ಸೀಟುಗಳು ಹೆಚ್ಚು ಆರಾಮದಾಯಕವೆನಿಸಲಿದೆ.

ಐ3ಎಸ್ ತಂತ್ರಗಾರಿಕೆಯೊಂದಿಗೆ 2016 ಹೀರೊ ಅಚೀವರ್ 150 ಸಿಸಿ ಬೈಕ್ ಎಂಟ್ರಿ

ಬಣ್ಣಗಳು: ಪ್ಯಾಂಥರ್ ಬ್ಲ್ಯಾಕ್ ಮೆಟ್ಯಾಲಿಕ್, ಕ್ಯಾಂಡಿ ಬ್ಲೇಜಿಂಗ್ ರೆಡ್ ಮತ್ತು ಎಬೋನಿ ಗ್ರೇ ಮೆಟ್ಯಾಲಿಕ್.

ಐ3ಎಸ್ ತಂತ್ರಗಾರಿಕೆಯೊಂದಿಗೆ 2016 ಹೀರೊ ಅಚೀವರ್ 150 ಸಿಸಿ ಬೈಕ್ ಎಂಟ್ರಿ

ಇವೆಲ್ಲದಕ್ಕೂ ಮಿಗಿಲಾಗಿ ಭಾರತ್ ಸ್ಟೇಜ್ 4 150 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ನೂತನ ಅಚೀವರ್, ಸ್ಪ್ಲೆಂಡರ್ ನಲ್ಲಿರುವುದಕ್ಕೆ ಸಮಾನವಾದ ಐ3ಎಸ್ (ಐಡಲ್ ಸ್ಟ್ಯಾರ್ಟ್ ಸ್ಟಾಪ್ ಸಿಸ್ಟಂ) ಎಂಜಿನ್ ಪಡೆಯಲಿದೆ. ಇದು ಹೆಚ್ಚಿನ ಇಂಧನ ಕ್ಷಮತೆ ಕಾಪಾಡಿಕೊಳ್ಳಲು ನೆರವಾಗಲಿದೆ.

ಐ3ಎಸ್ ತಂತ್ರಗಾರಿಕೆಯೊಂದಿಗೆ 2016 ಹೀರೊ ಅಚೀವರ್ 150 ಸಿಸಿ ಬೈಕ್ ಎಂಟ್ರಿ

ಇದಲ್ಲದೆ ಅತಿ ನೂತನ ಆಟೋಮ್ಯಾಟಿಕ್ ಹೆಡ್ ಲೈಟ್ ಆನ್ (ಎಎಚ್ ಒ) ವ್ಯವಸ್ಥೆಯು ಇದರಲ್ಲಿರುತ್ತದೆ. ಇದರ 149.2 ಸಿಸಿ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ 12.80 ಎನ್ ಎಂ ತಿರುಗುಬಲದಲ್ಲಿ 13.6 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಐ3ಎಸ್ ತಂತ್ರಗಾರಿಕೆಯೊಂದಿಗೆ 2016 ಹೀರೊ ಅಚೀವರ್ 150 ಸಿಸಿ ಬೈಕ್ ಎಂಟ್ರಿ

ಕೇವಲ ಐದು ಸೆಕೆಂಡುಗಳಲ್ಲೇ ಹೀರೊ ಅಚೀವರ್ ಗಂಟೆಗೆ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಐ3ಎಸ್ ತಂತ್ರಗಾರಿಕೆಯೊಂದಿಗೆ 2016 ಹೀರೊ ಅಚೀವರ್ 150 ಸಿಸಿ ಬೈಕ್ ಎಂಟ್ರಿ

ಅದೇ ಹೊತ್ತಿಗೆ ದೇಶದ 70ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಸಂಭ್ರಮ ಹಾಗೂ ಸಂಸ್ಥೆಯ 70 ದಶಲಕ್ಷ ಯುನಿಟ್ ಗಳ ನಿರ್ಮಾಣದ ಮೈಲುಗಲ್ಲನ್ನು ವಿಶೇಷವಾಗಿ ಆಚರಿಸಿಕೊಳ್ಳಲು ನಿರ್ಧರಿಸಿರುವ ಹೀರೊ ಅತಿ ವಿಶಿಷ್ಟ ತ್ರಿವರ್ಣ ಬಣ್ಣದ ಅಚೀವರ್ 150 ಆವೃತ್ತಿ ಬಿಡುಗಡೆಗೊಳಿಸಿದೆ. ಇದು ಸೀಮಿತ 70 ಯುನಿಟ್ ಗಳನ್ನು ಮಾತ್ರ ಮಾರಾಟವಾಗಲಿದೆ.

Most Read Articles

Kannada
English summary
Hero Achiever 150 Launched In India; Prices Start At Rs. 61,800
Story first published: Monday, September 26, 2016, 13:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X