ಸ್ಟಾರ್ಟ್-ಸ್ಟಾಪ್ ತಂತ್ರಜ್ಞಾನದೊಂದಿಗೆ ಹೀರೊ ಪ್ಯಾಶನ್ ಪ್ರೊ ಬಿಡುಗಡೆ

By Nagaraja

ಜನಪ್ರಿಯ ಸ್ಪ್ಲೆಂಡರ್ ಐ3ಎಸ್ ಅವತರಣಿಯ ಬಳಿಕವೀಗ ಇದೇ ಸ್ಟಾಟ್-ಸ್ಟಾಪ್ ತಂತ್ರಜ್ಞಾನವನ್ನು ಒಳಗೊಂಡಿರುವ ಹೀರೊ ಪ್ಯಾಶನ್ ಪ್ರೊ ಐ3ಎಸ್ ಬೈಕ್ ಸದ್ದಿಲ್ಲದೆ ಬಿಡುಗಡೆಯಾಗಿದೆ.

ನೂತನ ಹೀರೊ ಪ್ಯಾಶನ್ ಪ್ರೊ ಐ3ಎಸ್ ಬೈಕ್ ಸ್ಟ್ಯಾಂಡರ್ಡ್ ಪ್ಯಾಶನ್ ಪ್ರೊಗಿಂತಲೂ ಸ್ವಲ್ಪ ದುಬಾರಿಯೆನಿಸಲಿದೆ. ಇದರ ಥಾಣೆ ಎಕ್ಸ್ ಶೋ ರೂಂ ಬೆಲೆ 51,653 ರು.ಗಳಾಗಿದ್ದು, ಆನ್ ರೋಡ್ ಬೆಲೆ 60,000 ರು.ಗಳಷ್ಟು ದುಬಾರಿಯೆನಿಸಲಿದೆ.

ಸ್ಟಾರ್ಟ್-ಸ್ಟಾಪ್ ತಂತ್ರಜ್ಞಾನದೊಂದಿಗೆ ಹೀರೊ ಪ್ಯಾಶನ್ ಪ್ರೊ ಬಿಡುಗಡೆ

2014ರಲ್ಲಿ ಐ3ಎಸ್ ತಂತ್ರಜ್ಞಾನದಿಂದ ಕೂಡಿದ ಸ್ಪ್ಲೆಂಡರ್ ಬೈಕನ್ನು ಹೀರೊ ಮೊದಲ ಬಾರಿಗೆ ಪರಿಚಯಿಸಿತ್ತು. ಈಗ ಸ್ಪ್ಲೆಂಡರ್ ಆವೃತ್ತಿಯಿಂದ ದೊರಕಿರುವ ಯಶಸ್ಸಿನಿಂದ ಸ್ಪೂರ್ತಿಗೊಂಡಿರುವ ಹೀರೊ ಸಂಸ್ಥೆಯೀಗ ಪ್ಯಾಶನ್ ಪ್ರೊದಲ್ಲೂ ಇದಕ್ಕೆ ಸಮಾನವಾದ ತಂತ್ರಜ್ಞಾನವನ್ನು ಆಳವಡಿಸಿದೆ.

ಸ್ಟಾರ್ಟ್-ಸ್ಟಾಪ್ ತಂತ್ರಜ್ಞಾನದೊಂದಿಗೆ ಹೀರೊ ಪ್ಯಾಶನ್ ಪ್ರೊ ಬಿಡುಗಡೆ

100 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಹೀರೊ ಪ್ಯಾಶನ್ ಪ್ರೊ ಐ3ಎಸ್, 8.05 ಎನ್ ಎಂ ತಿರುಗುಬಲದಲ್ಲಿ 8.36 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ನಾಲ್ಕು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಸ್ಟಾರ್ಟ್-ಸ್ಟಾಪ್ ತಂತ್ರಜ್ಞಾನದೊಂದಿಗೆ ಹೀರೊ ಪ್ಯಾಶನ್ ಪ್ರೊ ಬಿಡುಗಡೆ

ನೂತನ ಪ್ಯಾಶನ್ ಪ್ರೊ ಐ3ಎಸ್ ಕಿಕ್ ಹಾಗೂ ಎಲೆಕ್ಟ್ರಿಕ್ ಸ್ಟ್ಯಾರ್ಟ್ ಗಳಲ್ಲಿ ಲಭ್ಯವಾಗಲಿದೆ. ಅಂತೆಯೇ ಮುಂದಿನ ದಿನಗಳಲ್ಲಿ ಡಿಸ್ಕ್ ಬ್ರೇಕ್ ಆವೃತ್ತಿಯು ಮಾರುಕಟ್ಟೆಗೆ ಅಪ್ಪಳಿಸಲಿದೆ.

ಸ್ಟಾರ್ಟ್-ಸ್ಟಾಪ್ ತಂತ್ರಜ್ಞಾನದೊಂದಿಗೆ ಹೀರೊ ಪ್ಯಾಶನ್ ಪ್ರೊ ಬಿಡುಗಡೆ

ನೂತನ ತಂತ್ರಜ್ಞಾನಕ್ಕೆ ಅನುಗುಣವಾಗಿ ಬದಿಯಲ್ಲಿ ಐ3ಎಸ್ ಲಾಂಛನ ಕಂಡುಬರಲಿದೆ. ಇನ್ನುಳಿದಂತೆ ಸ್ಟ್ಯಾಂಡರ್ಡ್ ಆವೃತ್ತಿಯಲ್ಲಿರುವುದಕ್ಕೆ ಸಮಾನವಾದ ವಿನ್ಯಾಸವನ್ನು ಕಾಪಾಡಿಕೊಳ್ಳಲಾಗಿದೆ.

ಏನಿದು ಐ3ಎಸ್ ಸ್ಟಾರ್ಟ್-ಸ್ಟಾಪ್ ತಂತ್ರಜ್ಞಾನ?

ಏನಿದು ಐ3ಎಸ್ ಸ್ಟಾರ್ಟ್-ಸ್ಟಾಪ್ ತಂತ್ರಜ್ಞಾನ?

ಟ್ರಾಫಿಕ್ ಗಳಲ್ಲಿ ಕೆಂಪು ದೀಪ ಉರಿದ ಸಂದರ್ಭದಲ್ಲಿ ಸವಾರ ನ್ಯೂಟ್ರಲ್ ಗೆ ಬದಲಾಯಿಸಿದಾಗ ಐದು ಸೆಕೆಂಡುಗಳ ಬಳಿಕ ಎಂಜಿನ್ ಸ್ವಯಂಚಾಲಿತವಾಗಿ ಆಫ್ ಆಗಲಿದೆ. ಬಳಿಕ ಗ್ರೀನ್ ಸಿಗ್ನಲ್ ಬಂದಾಗ ವಾಹನ ಸ್ಟಾರ್ಟ್ ಆಗಲು ಕ್ಲಚ್ ಅದುಮಿದರೆ ಸಾಕು. ವಾಹನದ ಎಂಜಿನ್ ನಿಧಾನವಾಗಿ ಚಲಿಸಲು ಬಿಡಲಿದೆ. ಇದರಿಂದ ಇಂಧನ ಉಳಿತಾಯವಾಗಲಿದ್ದು, ಹೆಚ್ಚಿನ ಇಂಧನ ಕ್ಷಮತೆ ಕಾಪಾಡಿಕೊಳ್ಳಲು ನೆರವಾಗಲಿದೆ. ಬಲಬದಿಯ ಹ್ಯಾಂಡಲ್ ಬಾರ್ ನಲ್ಲಿ ಕೊಟ್ಟಿರುವ ಸ್ವಿಚ್ ಗೇರ್ ಮುಖಾಂತರ ಇದನ್ನು ನಿಯಂತ್ರಿಸಬಹುದಾಗಿದೆ.

Most Read Articles

Kannada
English summary
Hero Passion Pro i3S Launches At Rs. 51,653 In India
Story first published: Saturday, September 24, 2016, 14:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X