ವಿಶಿಷ್ಟತೆ ಕಾಪಾಡಿಕೊಂಡ ಹೋಂಡಾ 750 ಸಿಸಿ ಸಾಹಸಿ ಸ್ಕೂಟರ್

By Nagaraja

ಜಗತ್ತಿನ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಹೋಂಡಾ, ಬಲಿಷ್ಠ 750 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಸಾಹಸಿ ಸ್ಕೂಟರನ್ನು ಬಿಡುಗಡೆಗೊಳಿಸಿದೆ. ಕಳೆದ ವರ್ಷ ಮಿಲಾನ್ ನಲ್ಲಿ ನಡೆದ ಇಐಸಿಎಂಎ ಮೋಟಾರು ಶೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿದ್ದ ಹೋಂಡಾ ಕಾನ್ಸೆಪ್ಟ್ ಸ್ಕೂಟರ್ 'ಸಿಟಿ ಅಡ್ವೆಂಚರ್' ಎಂಬುದಾಗಿ ಗುರುತಿಸ್ಪಟ್ಟಿತ್ತು.

ಹೆಸರಲ್ಲೇ ಸೂಚಿಸಿದ್ದಂತೆ ಹೋಂಡಾ ನೂತನ ಸ್ಕೂಟರ್, ದೊಡ್ಡದಾದ ಸ್ಕೂಟರ್ ಹಾಗೂ ಅಡ್ವೆಂಜರ್ ಮೋಟಾರ್ ಸೈಕಲ್ ಗಳ ಸಂಯೋಜನೆಯಾಗಿದೆ. ಇದರಲ್ಲಿ ಎನ್ ಸಿ750 ಶ್ರೇಣಿಯ 745 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ಹಾಗೂ ಟ್ಯೂಬುಲರ್ ಸ್ಟೀಲ್ ಫ್ರೇಮ್ ಲಗತ್ತಿಸಲಾಗಿದೆ.

ವಿಶಿಷ್ಟತೆ ಕಾಪಾಡಿಕೊಂಡ ಹೋಂಡಾ 750 ಸಿಸಿ ಸಾಹಸಿ ಸ್ಕೂಟರ್

ಪ್ರಸಕ್ತ ಸಾಲಿನ ಫೆಬ್ರವರಿ ತಿಂಗಳಿನಲ್ಲಷ್ಟೇ 'ಎಕ್ಸ್-ಎಡಿವಿ' ಮತ್ತು 'ಹೋಂಡಾ ಎಕ್ಸ್-ಎಡಿವಿ' ಟ್ರೇಕ್ ಮಾರ್ಕ್ ಗಾಗಿ ಹೋಂಡಾ ಅರ್ಜಿ ಸಲ್ಲಿಸಿತ್ತು. ಇವೆರಡಕ್ಕೂ ಜೂನ್ ತಿಂಗಳಲ್ಲಿ ಅನುಮೋದನೆ ದೊರಕಿದೆ.

ವಿಶಿಷ್ಟತೆ ಕಾಪಾಡಿಕೊಂಡ ಹೋಂಡಾ 750 ಸಿಸಿ ಸಾಹಸಿ ಸ್ಕೂಟರ್

ಎನ್ ಸಿ750ಎಕ್ಸ್ ಮಾದರಿಗೆ ಸಮಾನವಾದ ರೀತಿಯಲ್ಲಿ ನಿರ್ವಹಣೆ ನೀಡಲಿದ್ದು, 220 ಕೆ.ಜಿ ತೂಕದ ಈ ಬೈಕ್ 54 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ವಿಶಿಷ್ಟತೆ ಕಾಪಾಡಿಕೊಂಡ ಹೋಂಡಾ 750 ಸಿಸಿ ಸಾಹಸಿ ಸ್ಕೂಟರ್

ಹೋಂಡಾ ಹೊಸ ದ್ವಿಚಕ್ರ ವಾಹನದ ಎಕ್ಸ್ ಕ್ಲೂಸಿವ್ ಮಾಹಿತಿಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಇದು ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.

ವಿಶಿಷ್ಟತೆ ಕಾಪಾಡಿಕೊಂಡ ಹೋಂಡಾ 750 ಸಿಸಿ ಸಾಹಸಿ ಸ್ಕೂಟರ್

ಈ ನಡುವೆ ನಿರ್ಮಾಣ ಸಿದ್ಧ ಆವೃತ್ತಿಯ ರೇಖಾಚಿತ್ರಗಳು ಅಂತರ್ಜಾಲದಲ್ಲಿ ಲೀಕ್ ಆಗಿವೆ. ನಿರ್ಮಾಣ ಸಿದ್ಧ ಆವೃತ್ತಿಯು ಕಾನ್ಸೆಪ್ಟ್ ಬಹುತೇಕ ಸಾಮತ್ಯೆಯನ್ನು ಪಡೆಯಲಿದೆ.

ವಿಶಿಷ್ಟತೆ ಕಾಪಾಡಿಕೊಂಡ ಹೋಂಡಾ 750 ಸಿಸಿ ಸಾಹಸಿ ಸ್ಕೂಟರ್

ಅಂತೆಯೇ ಪರಿಷ್ಕೃತ ಮಫ್ಲರ್, ಮುಂಭಾಗದಲ್ಲಿ ವಿಂಡ್ ಸ್ಕ್ರೀನ್, ಹ್ಯಾಂಡ್ ಗಾರ್ಡ್ ಗಳು ಕಂಡು ಬರಲಿದೆ. ಇನ್ನು ಆಫ್ ರೋಡ್ ಆನ್ ರೋಡ್ ಗೂ ಸೂಕ್ತವಾಗುವ ರೀತಿಯ ಚಕ್ರಗಳು ಜೋಡಣೆಯಾಗಲಿದೆ.

Most Read Articles

Kannada
Read more on ಹೋಂಡಾ honda
English summary
For All Those Adventure Junkies — Honda Launches Adventure Scooter
Story first published: Monday, August 29, 2016, 17:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X