ಸಿಟಿ ರೈಡಿಂಗ್ ಗೆ ಸೂಕ್ತವಾದಿತೇ ಐಟ್ಯಾಂಕ್ ತ್ರಿಚಕ್ರ ಸ್ಕೂಟರ್?
ಬೈಕ್ ಗಳನ್ನು ಹೋಲಿಸಿದಾಗ ಸುಲಭ ಚಾಲನೆ ಎನಿಸಿಕೊಂಡಿರುವ ಸ್ಕೂಟರ್ ಗಳಿಗೆ ನಗರ ಪ್ರದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಇದನ್ನೇ ಮನಗಂಡಿರುವ ದೂಹನ್ ಅತಿ ನೂತನ ಐಟ್ಯಾಂಕ್ ತ್ರಿಚಕ್ರ ಸ್ಕೂಟರನ್ನು ಪರಿಚಯಿಸುತ್ತಿದೆ.
ಝೆಟ್ ಜೆಸ್ಟ್ ಎಲೆಕ್ಟ್ರಿಕ್ ಬೈಸಿಕಲ್ಸ್ ಬೆನ್ನಲ್ಲೇ ಐಟ್ಯಾಂಕ್ ಪ್ರವೇಶವಾಗುತ್ತಿದೆ. ಪರಿಸರ ಸ್ನೇಹಿ ಎನಿಸಿಕೊಂಡಿರುವ ಸಣ್ಣ ಸ್ಕೂಟರ್ ಗಳ ಆಯ್ಕೆಯು ಹಣಕಾಸು ದೃಷ್ಟಿಕೋನದಲ್ಲು ಹೆಚ್ಚು ಸೂಕ್ತವೆನಿಸುತ್ತದೆ. ಈ ನಿಟ್ಟಿನಲ್ಲಿ ಐಟ್ಯಾಂಕ್ ಅರ್ಬನ್ ಕ್ರಾಸೋವರ್ ಸ್ಕೂಟರ್ ವಿನೂತನ ಪ್ರಯೋಗವಾಗಲಿದೆ.

ದೂಹನ್ ಸಿಇಒ ಕಾರ್ತಿಕ್ ರಾಮ್ ಹೇಳುವಂತೆಯೇ, ಇದು ಸ್ಕೂಟರ್ ಅಥವಾ ಬೈಕ್ ಅಲ್ಲ. ತ್ರಿಚಕ್ರ ವಾಹನವಾಗಿರುವ ಐಟ್ಯಾಂಕ್ ವಿಶಿಷ್ಟವಾಗಿ ಗುರುತಿಸಲಿದ್ದು, ಭವಿಷ್ಯದ ಸಂಚಾರ ವಾಹಕವಾಗಿರಲಿದೆ ಎಂದಿದ್ದಾರೆ.

ಐಟ್ಯಾಂಕ್ ಸ್ಕೂಟರ್ ಆಫ್ ರೋಡ್ ಗಾಗಲಿ ಅಥವಾ ಪರ್ವತಗಳನ್ನು ಏರಲು ಸೂಕ್ತವಲ್ಲ. ಇದರ ಬದಲಾಗಿ ನೈಜ ನಗರ ಪ್ರದೇಶದ ವಾಹನವಾಗಿ ಗುರುತಿಸಲಿದೆ.

ತೆಗೆಯಬಹುದಾದ ಲಿಥಿಯಂ ಇಯಾನ್ ಬ್ಯಾಟರಿಯಿಂದ ನಿಯಂತ್ರಿತ ಐಟ್ಯಾಂಕ್, 97 ಕೀ.ಮೀ. ವ್ಯಾಪ್ತಿಯ ವರೆಗೆ ಚಲಿಸಲಿದೆ. ಹಾಗೆಯೇ ಕೇವಲ ಐದು ಸೆಕೆಂಡುಗಳಲ್ಲೇ ಗಂಟೆಗೆ 0-30 ಕೀ.ಮೀ. ವೇಗವರ್ಧಿಸಲಿದೆ.

ಜಾಗತಿಕ ಮಟ್ಟವನ್ನು ಪರಿಶೀಲಿಸಿದಾಗ ತ್ರಿಚಕ್ರಗಳ ಯಶಸ್ಸು ಸೀಮಿತ ಮಾತ್ರವಾಗಿದೆ. ಆದರೆ ನೂತನ ಐಟ್ಯಾಂಕ್ ಅತ್ಯಂತ ಅಗ್ಗದ ಬೆಲೆಗಳಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ ಎಂದು ರಾಮ್ ತಿಳಿಸುತ್ತಾರೆ.

ವಯಸ್ಸಾದವರಿಗೂ ಕಡಿಮೆ ಭಾರದ, ನಿಖರ ವಿನ್ಯಾಸಿತ ಐಟ್ಯಾಂಕ್ ತ್ರಿಚಕ್ರ ಸ್ಕೂಟರ್ ಹೆಚ್ಚು ಸೂಕ್ತವೆನಿಸಲಿದೆ ಎಂದು ರಾಮ್ ವಿವರಿಸುತ್ತಾರೆ.


Click it and Unblock the Notifications