ಭಾರತದಲ್ಲಿ 4 ಬೈಕ್ ಗಳನ್ನು ಬಿಡುಗಡೆ ಮಾಡಲಿರುವ ಕವಾಸಕಿ

ಮುಂದಿನ ವರ್ಷದಲ್ಲಿ ನಾಲ್ಕು ಅತ್ಯಾಕರ್ಷಕ ಬೈಕ್ ಗಳನ್ನು ಕವಾಸಕಿ ಬಿಡುಗಡೆ ಮಾಡಲಿದೆ.

By Nagaraja

ಮುಂದಿನ ವರ್ಷದಲ್ಲಿ ನಾಲ್ಕು ಅತ್ಯಾಕರ್ಷಕ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಕವಾಸಕಿ ಹೊಂದಿದೆ. ತನ್ಮೂಲಕ ಜಪಾನ್ ಮೂಲದ ಬೈಕ್ ತಂತ್ರಜ್ಞಾನವೂ ಭಾರತದಲ್ಲಿ ಮತ್ತಷ್ಟು ಪ್ರಸಿದ್ಧಿಯನ್ನು ಪಡೆಯಲಿದೆ.

ಭಾರತದಲ್ಲಿ ಕವಾಸಕಿ ಬಿಡುಗಡೆ ಮಾಡಲಿರುವ 4 ಮಾದರಿಗಳು

ಭಾರತದಲ್ಲಿ ಕವಾಸಕಿ ಬಿಡುಗಡೆ ಮಾಡಲಿರುವ 4 ಮಾದರಿಗಳು

ನಿಂಜಾ 650,

ಝಡ್ 650,

ಝಡ್ 900,

ಡಬ್ಲ್ಯು 800

ಭಾರತದಲ್ಲಿ 4 ಬೈಕ್ ಗಳನ್ನು ಬಿಡುಗಡೆ ಮಾಡಲಿರುವ ಕವಾಸಕಿ

ಈ ಪೈಕಿ ಭಾರತದಲ್ಲಿ ಈಗಾಗಲೇ ಮಾರಾಟದಲ್ಲಿರುವ ನಿಂಜಾ 650, ಇಆರ್-6ಎನ್ ಮತ್ತು ಝಡ್800 ಬೈಕ್ ಗಳನ್ನು ನೂತನ ಮಾದರಿಗಳು ತುಂಬಲಿದೆ.

ಭಾರತದಲ್ಲಿ 4 ಬೈಕ್ ಗಳನ್ನು ಬಿಡುಗಡೆ ಮಾಡಲಿರುವ ಕವಾಸಕಿ

ಈಗಾಗಲೇ ವರದಿ ಮಾಡಿರುವಂತೆಯೇ ಕವಾಸಕಿ ತನ್ನ ಕ್ಲಾಸಿಕ್ ಡಬ್ಲ್ಯು800 ಮಾದರಿಯನ್ನು ದೇಶದಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ಭಾರತದಲ್ಲಿ 4 ಬೈಕ್ ಗಳನ್ನು ಬಿಡುಗಡೆ ಮಾಡಲಿರುವ ಕವಾಸಕಿ

ಭಾರತೀಯ ಮಾರುಕಟ್ಟೆಗೆ ಪಾಲಿಗೆ ಡಬ್ಲ್ಯು800 ಒಂದು ವಿನೂತನ ಮಾದರಿಯಾಗಲಿದ್ದು, ಈಗಾಗಲೇ ಡೀಲರ್ ಬಳಿ ಪ್ರತ್ಯಕ್ಷಗೊಂಡಿದೆ.

ಭಾರತದಲ್ಲಿ 4 ಬೈಕ್ ಗಳನ್ನು ಬಿಡುಗಡೆ ಮಾಡಲಿರುವ ಕವಾಸಕಿ

ಕವಾಸಕಿ ನಿಂಜಾ 650, ಝಡ್650 ಮತ್ತು ಝಡ್900 ಮಾದರಿಗಳು ಸ್ವಲ್ಪ ದುಬಾರಿಯೆನಿಸಲಿದೆ. ಅತ್ತ ಡಬ್ಲ್ಯು800 ಮಾದರಿಯು ಟ್ರಯಂಪ್ ಸ್ಟ್ರೀಟ್ ಟ್ವಿನ್ ಮತ್ತು ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

ಭಾರತದಲ್ಲಿ 4 ಬೈಕ್ ಗಳನ್ನು ಬಿಡುಗಡೆ ಮಾಡಲಿರುವ ಕವಾಸಕಿ

ಇಂಟರ್ ಮೊಟ್ ನಲ್ಲಿ ಪ್ರದರ್ಶನ ಕಂಡಿರುವ ನಿಂಜಾ 650, ಹೊಸತಾದ ಸ್ಟೀಲ್-ಟ್ರೆಲ್ಲಿಸ್ ಫ್ರೇಮ್, ಫಾರ್ಕ್, ಸ್ವಿಂಗರ್ಮ್ ಹಾಗೂ 649 ಪ್ಯಾರಲಲ್ ಟ್ವಿನ್ ಎಂಜಿನ್ ಗಿಟ್ಟಿಸಿಕೊಳ್ಳಲಿದೆ.

ಭಾರತದಲ್ಲಿ 4 ಬೈಕ್ ಗಳನ್ನು ಬಿಡುಗಡೆ ಮಾಡಲಿರುವ ಕವಾಸಕಿ

ಮಿಲಾನ್ ಮೋಟಾರ್ ಶೋದಲ್ಲಿ ಅನಾವರಣಗೊಂಡಿರುವ ಝಡ್650 ಪ್ರಮುಖವಾಗಿಯೂ ಇಆರ್-6ಎನ್ ಸ್ಥಾನವನ್ನು ತುಂಬಲಿದೆ. ಇದು ಸ್ಲಿಪರ್ ಕ್ಲಚ್ ಜೊತೆಗೆ ಎಬಿಎಸ್ ಸುರಕ್ಷಾ ವೈಶಿಷ್ಟ್ಯವನ್ನು ಗಿಟ್ಟಿಸಿಕೊಳ್ಳಲಿದೆ.

ಭಾರತದಲ್ಲಿ 4 ಬೈಕ್ ಗಳನ್ನು ಬಿಡುಗಡೆ ಮಾಡಲಿರುವ ಕವಾಸಕಿ

ಇನ್ನು ಹೆಚ್ಚು ಶಕ್ತಿಶಾಲಿ 948 ಸಿಸಿ ಎಂಜಿನನ್ನು ಕವಾಸಕಿ ಝಡ್900 ಪಡೆಯಲಿದೆ. ಇದು ಹಿಂದಿನ ಮಾದರಿಗಿಂತಲೂ 20 ಕೆ.ಜಿ ಕಡಿಮೆ ಭಾರದೊಂದಿಗೆ ಒಟ್ಟು ತೂಕ 210 ಕೆ.ಜಿ. ಗೆ ಇಳಿಕೆಯಾಗಿದೆ.

Most Read Articles

Kannada
English summary
Kawasaki Likely To Launch 4 New Models In India During 2017
Story first published: Thursday, December 8, 2016, 15:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X