ರಾಜನಂತೆ ಎಂಟ್ರಿ ಕೊಟ್ಟ ಶಕ್ತಿಶಾಲಿ ಕವಾಸಕಿ ನಿಂಜಾ 650 ಬೈಕ್

By Nagaraja

ಜರ್ಮನಿಯ ಕೊಲೊಗ್ನೆಯಲ್ಲಿ ಸಾಗುತ್ತಿರುವ 2016 ಇಂಟರ್ ಮೊಟ್ ಮೋಟಾರ್ ಸೈಕಲ್ ಶೋದಲ್ಲಿ ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ಕವಾಸಕಿ ಅತಿ ನೂತನ ನಿಂಜಾ 650 ಆವೃತ್ತಿಯನ್ನು ಅನಾವರಣಗೊಳಿಸಿದೆ. ನೂತನ ಕವಾಸಕಿ ನಿಂಜಾ 650 ಕಾಸ್ಮೆಟಿಕ್ ಜೊತೆಗೆ ಎಂಜಿನ್ ಪರಿಷ್ಕರಣೆಯನ್ನು ಪಡೆದಿದೆ. ಅಲ್ಲದೆ ಹಿಂದಿನ ಮಾದರಿಗಿಂತಲೂ 19 ಕೆ.ಜಿಗಳಷ್ಟು ಕಡಿಮೆ ತೂಕವೆನಿಸಿದೆ.

ರಾಜನಂತೆ ಎಂಟ್ರಿ ಕೊಟ್ಟ ಶಕ್ತಿಶಾಲಿ ಕವಾಸಕಿ ನಿಂಜಾ 650 ಬೈಕ್

ಹೆಚ್ಚು ಚೂಪಾದ ವಿನ್ಯಾಸವನ್ನು ನಿಂಜಾ 650 ಬೈಕ್ ನಲ್ಲಿ ಕಾಪಾಡಿಕೊಳ್ಳಲಾಗಿದೆ. ಇದು ಮುಂಭಾಗದಲ್ಲಿ ಟ್ವಿನ್ ವಿಭಜಿತ ಹೆಡ್ ಲ್ಯಾಂಪ್ ಗಿಟ್ಟಿಸಿಕೊಂಡಿದೆ. ಇದು ನಿಂಜಾ ಝಡ್ ಎಕ್ಸ್-10ಆರ್ ಮಾದರಿಗೆ ಸಮಾನವಾಗಿದೆ.

ರಾಜನಂತೆ ಎಂಟ್ರಿ ಕೊಟ್ಟ ಶಕ್ತಿಶಾಲಿ ಕವಾಸಕಿ ನಿಂಜಾ 650 ಬೈಕ್

ಹಿಂದುಗಡೆಯು ವಿನ್ಯಾಸವನ್ನು ಪರಿಷ್ಕೃತಗೊಳಿಸಲಾಗಿದೆ. ಇನ್ನು ವಿಭಜಿತ ಸೀಟುಗಳನ್ನು ಜೋಡಣೆ ಮಾಡಲಾಗಿದೆ.

ರಾಜನಂತೆ ಎಂಟ್ರಿ ಕೊಟ್ಟ ಶಕ್ತಿಶಾಲಿ ಕವಾಸಕಿ ನಿಂಜಾ 650 ಬೈಕ್

2017 ಕವಾಸಕಿ ನಿಂಜಾ 650 ಬೈಕ್ ನಲ್ಲಿ ಕಂಡುಬಂದಿರುವ ಪ್ರಮುಖ ಬದಲಾವಣೆ ಏನೆಂದರೆ ಹೊಸತಾದ ಮಲ್ಟಿ ಟ್ಯೂಬುಲರ್ ಅಲ್ಯೂಮಿನಿಯಂ ಚಾಸೀ ಮತ್ತು ಸ್ವಿಂಗ್ ಆರ್ಮ್ ಜೋಡಣೆ ಮಾಡಲಾಗಿದೆ.

ರಾಜನಂತೆ ಎಂಟ್ರಿ ಕೊಟ್ಟ ಶಕ್ತಿಶಾಲಿ ಕವಾಸಕಿ ನಿಂಜಾ 650 ಬೈಕ್

15 ಕೆ.ಜಿ ತೂಕದ ಹೊಸತಾದ ಟ್ರೆಲ್ಲಿಸ್ ಫ್ರೇಮ್ ನಿಂದಾಗಿ ಈ ಸ್ಪೋರ್ಟ್ಸ್ ಟೂರರ್ ಬೈಕ್ ಗೆ ಹೆಚ್ಚು ಪರಿಣಾಮಕಾರಿ ಹ್ಯಾಂಡ್ಲಿಂಗ್ ಕಾಪಾಡಿಕೊಳ್ಳಲು ನೆರವಾಗಿದೆ.

ರಾಜನಂತೆ ಎಂಟ್ರಿ ಕೊಟ್ಟ ಶಕ್ತಿಶಾಲಿ ಕವಾಸಕಿ ನಿಂಜಾ 650 ಬೈಕ್

ಯುರೋ 4 ಮಟ್ಟದ ಪ್ಯಾರಲಲ್ ಟ್ವಿನ್ ಎಂಜಿನ್ ಮಧ್ಯಮ ಶ್ರೇಣಿಯ ಎಂಜಿನ್ ಆಳವಡಿಸಲಾಗಿದೆ. ಇದರ ಯುಆರ್6 ಎಂಜಿನ್ 75 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ರಾಜನಂತೆ ಎಂಟ್ರಿ ಕೊಟ್ಟ ಶಕ್ತಿಶಾಲಿ ಕವಾಸಕಿ ನಿಂಜಾ 650 ಬೈಕ್

ಮೂರು ಆಕರ್ಷಕ ಬಣ್ಣಗಳು: ಮೆಟ್ಯಾಲಿಕ್ ಸ್ಪಾರ್ಕ್ ಬ್ಲ್ಯಾಕ್, ಬ್ಲಿಜಾರ್ಡ್ ಪಿಯರ್ಲ್ ವೈಟ್, ಕ್ಯಾಂಡಿ ಬಂರ್ಟ್ ಆರೆಂಜ್.

ರಾಜನಂತೆ ಎಂಟ್ರಿ ಕೊಟ್ಟ ಶಕ್ತಿಶಾಲಿ ಕವಾಸಕಿ ನಿಂಜಾ 650 ಬೈಕ್

ಅಂದ ಹಾಗೆ ನೂತನ ಕವಾಸಕಿ ನಿಂಜಾ 650, ಮುಂದಿನ ವರ್ಷ ಮಧ್ಯಂತರ ಅವಧಿಯ ವೇಳೆಯಲ್ಲಷ್ಟೇ ಭಾರತ ಮಾರುಕಟ್ಟೆಗೆ ಪ್ರವೇಶಿಸಲಿದೆ.

Most Read Articles

Kannada
English summary
2016 Intermot Motorcycle Show: Kawasaki Unveils Ninja 650
Story first published: Wednesday, October 5, 2016, 17:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X