ಸುಜುಕಿಯಿಂದ ಮಗದೊಂದು ಕ್ರೀಡಾ ಬೈಕ್; ಭಾರತಕ್ಕೆ ಯಾವಾಗ?

By Nagaraja

ಜಿಕ್ಸರ್ ಯಶಸ್ಸಿನಿಂದ ಸ್ಪೂರ್ತಿ ಪಡೆದಿರುವ ಜಪಾನ್ ಮೂಲದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಸುಜುಕಿ, ಮಗದೊಂದು ಆಕರ್ಷಕ ಕ್ರೀಡಾ ಬೈಕ್ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಈ ಸಂಬಂಧ ಇಂಡೋನೇಷ್ಯಾದಲ್ಲಿ ಟೆಸ್ಟಿಂಗ್ ಪ್ರಕ್ರಿಯೆ ಭರದಿಂದ ಸಾಗುತ್ತಿದೆ.

ಸುಜುಕಿಯ ಜನಪ್ರಿಯ ಜಿಕ್ಸರ್ ಎಸ್ ಎಫ್ ಮಾದರಿಯಿಂದ ಪ್ರೇರಣೆ ಪಡೆದುಕೊಂಡು ಅತಿ ನೂತನ ಜಿಎಸ್ ಎಕ್ಸ್150ಆರ್ ಬೈಕನ್ನು ನಿರ್ಮಿಸಲಾಗುತ್ತಿದೆ. ಇದು ಪ್ರಸಕ್ತ ಸಾಲಿನಲ್ಲೇ ಬಿಡುಗಡೆಯಾಗಲಿದ್ದು, ಭಾರತಕ್ಕೆ ಯಾವಾಗ ಪ್ರವೇಶಿಸಲಿದೆ ಎಂಬುದು ಕುತೂಹಲವೆನಿಸಿದೆ.

ಸುಜುಕಿ ಬೈಕ್

ನಿಮ್ಮ ಮಾಹಿತಿಗಾಗಿ ಸುಜುಕಿ ಜಿಕ್ಸರ್ ಎಸ್ ಎಫ್ ಮಾದರಿಯು 2015 ಎಪ್ರಿಲ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಗೊಂಡಿತ್ತು. ನೂತನ 2-17 ಜಿಎಸ್ ಎಕ್ಸ್150ಆರ್ ತನ್ನ ಹಿರಿಯ ಸೋದರನಿಗಿಂತಲೂ ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಫೇರಿಂಗ್ ವಿನ್ಯಾಸ, ರಿಯರ್ ಸ್ವಿಂಗ್ ಆರ್ಮ್, ಅಲಾಯ್ ಚಕ್ರಗಳು, ಡ್ಯುಯಲ್ ಎಕ್ಸಾಸ್ಟ್ ಟಿಪ್, ಎಲ್ ಇಡಿ ಹೆಡ್ ಲೈಟ್, ಲೈಲ್ ಲೈಟ್, ಡಿಸ್ಕ್ ಬ್ರೇಕ್ ಹಾಗೂ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇದರಲ್ಲಿರಲಿದೆ.

ಸುಜುಕಿ ಬೈಕ್

ಹಾಗಿದ್ದರೂ ಎಂಜಿನ್ ಮಾನದಂಡಗಳ ಬಗ್ಗೆ ಯಾವುದೇ ಮಾಹಿತಿಗಳು ಹೊರಬಂದಿಲ್ಲ. ಇದು ಜಿಕ್ಸರ್ ಗೆ ಸಮಾನವಾದ ಎಂಜಿನ್ ತಾಂತ್ರಿಕತೆಗಳನ್ನು ಪಡೆಯುವ ಸಾಧ್ಯತೆಯಿದೆ. ಇದರ 155 ಸಿಸಿ ಎಂಜಿನ್ 14 ಎನ್ ಎಂ ತಿರುಗುಬಲದಲ್ಲಿ 14.6 ಅಶ್ವಶಕ್ತಿ ಉತ್ಪಾದಿಸಲಿದೆ.
ಸುಜುಕಿ ಬೈಕ್

ನೂತನ ಜಿಎಸ್ ಎಕ್ಸ್-150ಆರ್ ಮೊದಲು ಇಂಡೋನೇಷ್ಯಾವನ್ನು ತಲುಪಲಿದೆ. ಇನ್ನೊಂದೆಡೆ ಭಾರತದಲ್ಲಿ ಜಿಕ್ಸರ್ ಶಕ್ತಿಶಾಲಿ 250 ಆವೃತ್ತಿಯು ಬಿಡುಗಡೆಯಾಗಲಿದೆ. ಹಾಗಾಗಿ ಜಿಎಸ್ ಎಕ್ಸ್-150ಆರ್ ಬಿಡುಗಡೆ ಕೊಂಚ ವಿಳಂಬವಾಗುವ ಸಾಧ್ಯತೆಯಿದೆ.
Most Read Articles

Kannada
Read more on ಸುಜುಕಿ suzuki
English summary
Suzuki GSX-150R — Suzuki’s 150CC Performance Motorcycle In The Making
Story first published: Thursday, September 22, 2016, 12:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X