125 ಸಿಸಿ ಸ್ಕೂಟರ್ ಬಿಡುಗಡೆ ಮಾಡಲಿರುವ ಟಿವಿಎಸ್

ಟಿವಿಎಸ್ 125 ಸಿಸಿ ಶ್ರೇಣಿಯ ಸ್ಕೂಟರ್ ಗಳಿಗೂ ಜನಪ್ರಿಯ 'ಜೂಪಿಟರ್' ನಾಮಕರಣ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಟಿವಿಎಸ್ ಮೋಟಾರು ಕಂಪನಿ ದೇಶದಲ್ಲಿರುವ ತನ್ನ ಶ್ರೇಣಿಯ ಸ್ಕೂಟರ್ ಗಳ ಸಂಖ್ಯೆಗಳನ್ನು ವೃದ್ಧಿಸಿಕೊಳ್ಳಲಿದ್ದು, ನಿಕಟ ಭವಿಷ್ಯದಲ್ಲೇ 125 ಸಿಸಿ ವಿಭಾಗಕ್ಕೂ ಕಾಲಿಡಲಿದೆ.

125 ಸಿಸಿ ಸ್ಕೂಟರ್ ಬಿಡುಗಡೆ ಮಾಡಲಿರುವ ಟಿವಿಎಸ್

ನಿಮ್ಮ ಮಾಹಿತಿಗಾಗಿ, ಟಿವಿಎಸ್ 110 ಸಿಸಿಗೂ ಹೆಚ್ಚು ಎಂಜಿನ್ ಸಾಮರ್ಥ್ಯದ ಸ್ಕೂಟರ್ ಗಳನ್ನು ದೇಶದಲ್ಲಿ ಮಾರಾಟ ಮಾಡುತ್ತಿಲ್ಲ. ಹಾಗಾಗಿ 125 ಸಿಸಿ ಸ್ಕೂಟರ್ ಟಿವಿಎಸ್ ಪಾಲಿಗೆ ಹೊಸ ಅನುಭವವಾಗಲಿದೆ.

125 ಸಿಸಿ ಸ್ಕೂಟರ್ ಬಿಡುಗಡೆ ಮಾಡಲಿರುವ ಟಿವಿಎಸ್

ಬಲ್ಲ ಮೂಲಗಳ ಪ್ರಕಾರ ಟಿವಿಎಸ್ 125 ಸಿಸಿ ಸ್ಕೂಟರ್ 2017 ವರ್ಷಾರಂಭದಲ್ಲೇ ಬಿಡುಗಡೆಯಾಗಲಿದೆ. ತನ್ಮೂಲಕ ಹೊಸ ಬ್ರಾಂಡ್ ರೂಪಿಸಿಕೊಳ್ಳುವುದು ಸಂಸ್ಥೆಯ ಇರಾದೆಯಾಗಿದೆ.

125 ಸಿಸಿ ಸ್ಕೂಟರ್ ಬಿಡುಗಡೆ ಮಾಡಲಿರುವ ಟಿವಿಎಸ್

ಜೂಪಿಟರ್ ತರಹನೇ 125 ಸಿಸಿ ವಿಭಾಗದಲ್ಲೂ ಹೊಸ ಬ್ರಾಂಡ್ ಸ್ಥಾಪಿಸುವುದು ಟಿವಿಎಸ್ ಇರಾದೆಯಾಗಿದೆ. ಸದ್ಯಕ್ಕೆ ಜೂಪಿಟರ್ ಟಿವಿಎಸ್ ಪಾಲಿಗೆ ವರದಾನವಾಗಿದೆ.

125 ಸಿಸಿ ಸ್ಕೂಟರ್ ಬಿಡುಗಡೆ ಮಾಡಲಿರುವ ಟಿವಿಎಸ್

ಪ್ರಮುಖವಾಗಿಯೂ ಹೋಂಡಾ ಆಕ್ಟಿವಾ 125, ಸುಜುಕಿ ಆಕ್ಸೆಸ್ 125 ಹಾಗೂ ಮಹೀಂದ್ರ ಗಸ್ಟೊ 125 ಮಾದರಿಗಳಿಗೆ ಟಿವಿಎಸ್ ನೂತನ ಸ್ಕೂಟರ್ ಪ್ರತಿಸ್ಪರ್ಧಿಯಾಗಲಿದೆ.

125 ಸಿಸಿ ಸ್ಕೂಟರ್ ಬಿಡುಗಡೆ ಮಾಡಲಿರುವ ಟಿವಿಎಸ್

ಹೊಸೂರು ತಳಹದಿಯ ದೇಶದ ಮೂರನೇ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಟಿವಿಎಸ್, ಆಗಲೇ 125 ಸಿಸಿ ಸ್ಕೂಟರ್ ಅಭಿವೃದ್ಧಿ ಹಾಗೂ ವಿನ್ಯಾಸದಲ್ಲಿ ತೊಡಗಿಸಿಕೊಂಡಿದೆ.

125 ಸಿಸಿ ಸ್ಕೂಟರ್ ಬಿಡುಗಡೆ ಮಾಡಲಿರುವ ಟಿವಿಎಸ್

ದೇಶದಲ್ಲಿ ಹೆಚ್ಚಿನ ಇಂಧನ ಸಾಮರ್ಥ್ಯದ ಸ್ಕೂಟರ್ ಗಳಿಗೆ ಬೇಡಿಕೆ ನಿಧಾನವಾಗಿ ವರ್ಧಿಸುತ್ತಿದೆ. ಇದರಂತೆ ಭದ್ರ ಅಡಿಪಾಯ ಹಾಕಿಕೊಳ್ಳುವುದು ಟಿವಿಎಸ್ ಗುರಿಯಾಗಿರಲಿದೆ.

125 ಸಿಸಿ ಸ್ಕೂಟರ್ ಬಿಡುಗಡೆ ಮಾಡಲಿರುವ ಟಿವಿಎಸ್

125 ಸಿಸಿ ವಿಭಾಗದಲ್ಲಿ ಸುಜುಕಿ ಆಕ್ಸೆಸ್ ಹೆಚ್ಚಿನ ಜನಪ್ರಿಯತೆ ಕಾಪಾಡಿಕೊಂಡಿದೆ. ಇದಕ್ಕೆ ಪ್ರತಿಸ್ಪರ್ಧಿಯಾಗಿ ಹೋಂಡಾ ಆಕ್ಟಿವಾ ಕಣಕ್ಕಿಳಿದಿತ್ತು.

125 ಸಿಸಿ ಸ್ಕೂಟರ್ ಬಿಡುಗಡೆ ಮಾಡಲಿರುವ ಟಿವಿಎಸ್

ಏತನ್ಮಧ್ಯೆ ದೇಶದ ಅತಿ ದೊಡ್ಡ ಹೀರೊ ಮೊಟೊಕಾರ್ಪ್ ಮತ್ತು ಜಪಾನ್ ಮೂಲದ ಯಮಹಾ ಮೋಟಾರು ಸಂಸ್ಥೆಯು ಇನ್ನಷ್ಟೇ 125 ಸಿಸಿ ಸ್ಕೂಟರ್ ವಿಭಾಗಕ್ಕೆ ಕಾಲಿಡಬೇಕಿದೆ.

Article Published On: Saturday, November 12, 2016, 17:01 [IST]
English summary
TVS Working On A New 125CC Scooter — To Launch New Scooter Brand
Read more on ಟಿವಿಎಸ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+