ಬಜಾಜ್ ಡೋಮಿನಾರ್ 400 ಬೈಕ್ ಭರ್ಜರಿ ಸೇಲ್

2016ರ ಡಿಸೆಂಬರ್‌ನಲ್ಲಿ ಭಾರೀ ನೀರಿಕ್ಷೆಯೊಂದಿಗೆ ಬಿಡುಗಡೆಗೊಂಡಿದ್ದ ಬಜಾಜ್ ಡೋಮಿನಾರ್ 400, ಸಖತ್ ಹವಾ ಸೃಷ್ಠಿಮಾಡುತ್ತಿದೆ. ಇದುವರೆಗೆ 3 ಸಾವಿರ ಬೈಕ್‌ಗಳು ಮಾರಾಟಗೊಂಡಿದ್ದು, ಗ್ರಾಹಕರ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

Written By:

ಭಾರತದ ಪ್ರಮುಖ ಬೈಕ್ ತಯಾರಕ ಕಂಪನಿ ಬಜಾಜ್ ಆಟೋ ತನ್ನ ಡೋಮಿನಾರ್ 400 ಮಾರಾಟ ತಂತ್ರಗಾರಿಕೆಯಲ್ಲಿ ಯಶಸ್ವಿಯಾಗಿದೆ. ಸ್ಪರ್ಧಾತ್ಮಕ ಬೆಲೆ ನಿಗದಿಯಲ್ಲಿ ತೋರಿದ ಜಾಣ್ಮೆಯ ನಡೆ ಡೋಮಿನಾರ್ 400 ಮಾರಾಟವನ್ನು ನೀರಿಕ್ಷೆಗೂ ಮೀರಿ ಹೆಚ್ಚಿಸಿದೆ. ಈ ಮೂಲಕ ದೇಶಿಯ ಮಾರುಕಟ್ಟೆಯಲ್ಲದೇ ವಿದೇಶಕ್ಕೂ ರಫ್ತಾಗಲು ಸಜ್ಜುಗೊಂಡಿದೆ.

ಬಜಾಜ್ ಆಟೋ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಹೇಳಿಕೆ ಪ್ರಕಾರ, ವಿನೂತ ಮಾದರಿಯ ಡೋಮಿನಾರ್ 400 ಜನವರಿಯಲ್ಲಿ 3 ಸಾವಿರಕ್ಕೂ ಹೆಚ್ಚು ಬೈಕ್‌ಗಳು ಬಿಕರಿಯಾಗಿವೆಯಂತೆ. ಜೊತೆಗೆ ವಿನೂತನ ಸ್ಪೋರ್ಟ್ಸ್ ಆವೃತ್ತಿಯ ಬೈಕ್‌ನ್ನು ಜನವರಿಯಿಂದಲೇ ಮಾರುಕಟ್ಟೆಗೆ ಪರಿಚಯಿಸಲಾಗಿದೆ ಎಂದಿದ್ದಾರೆ.

ಪ್ರಮುಖವಾಗಿ ರಾಜೀವ್ ಬಜಾಜ್ ಪ್ರಕಾರ, " ನಾನು ಹೇಳುವುದೆನೆಂದರೆ ಜನವರಿಯಲ್ಲಿ ಉತ್ಪಾದನೆಯಾಗಿದ್ದ ಎಲ್ಲ 3 ಸಾವಿರ ಬೈಕ್‌ಗಳು ಸಂಪೂರ್ಣ ಮಾರಾಟಗೊಂಡಿದ್ದು, ಈ ಹಂತದಲ್ಲಿ ಸಹಜವಾಗಿ ನಾವು ಕಾಯುವ ತಂತ್ರ ಅನುಸರಿಸಿದ್ದು ಪ್ರತಿಫಲಿಸಿದೆ" ಎಂದಿದ್ದಾರೆ.

ನೂತನ ವೈಶಿಷ್ಟ್ಯತೆಗಳಿಂದಾಗಿ ಭರ್ಜರಿ ಮಾರಾಟಗೊಳ್ಳುತ್ತಿರುವ ಡೋಮಿನಾರ್ 400, ಹಿಂದಿನ ತಿಂಗಳಿನ ಮಾರಾಟ ದಾಖಲೆಯನ್ನು ಅಳಸಿಹಾಕುವ ನೀರಿಕ್ಷೆಯಲ್ಲಿದೆ. 4 ಸಾವಿರ ಬೈಕ್‌ಗಳ ಮಾರಾಟ ಗುರಿ ಹೊಂದಿರುವ ಬಜಾಜ್ ಆಟೋ, ಬೈಕ್ ಉತ್ಪಾದನೆಯನ್ನು ಚುರುಕುಗೊಳಿಸಿದೆ. ಅಲ್ಲದೇ ಒಂದು ತಿಂಗಳ ಅವಧಿಯಲ್ಲಿ 6 ಸಾವಿರ ಬೈಕ್ ಮಾಡಿ ದಾಖಲೆ ನಿರ್ಮಿಸಿದ್ದ ರಾಯಲ್ ಎನ್‌ಫೀಲ್ಡ್ ಹಿಂದಿಕ್ಕುವ ಯೋಜನೆ ಹೊಂದಿದೆ. 

ಭಾರತದಲ್ಲಿ ಯಶಸ್ಪಿಯಾಗಿ ಮಾರಾಟಗೊಳ್ಳುತ್ತಿರುವ ಡೋಮಿನಾರ್ 400, ಇದೀಗ ವಿದೇಶಿ ಮಾರುಕಟ್ಟೆಯತ್ತ ಗಮನಹರಿಸುತ್ತಿದೆ. ಹೀಗಾಗಿ ರಷ್ಯಾ, ಟರ್ಕಿ, ಸೌತ್ ಆಫ್ರಿಕಾ ಮತ್ತು ಪೆರು ದೇಶಗಳಲ್ಲೂ ಡೋಮಿನಾರ್ 400 ಘರ್ಜನೆ ಮಾಡಲಿದೆ.

ಬೈಕ್ ಮಾರಾಟ ತಂತ್ರದಲ್ಲಿ ಹೊಸ ದಾಖಲೆ ಸೃಷ್ಠಿಸಲು ಯೋಜಿಸಿರುವ ಬಜಾಜ್ ಆಟೋ, 2017 ಸಪ್ಟಬಂರ್ ಹೊತ್ತಿಗೆ ಪ್ರತಿ ತಿಂಗಳು 10 ಸಾವಿರ ಬೈಕ್‌ಗಳ ಮಾರಾಟ ಗುರಿ ಹೊಂದಿದೆ. ಇದಕ್ಕಾಗಿ ವಿದೇಶಿ ಮಾರುಕಟ್ಟೆ ಅವಲಂಭಿಸಿರುವ ಬಜಾಜ್ ಬೃಹತ್ ಯೋಜನೆ ರೂಪಿಸಿದೆ.

ವಿನೂತನ ತಂತ್ರಜ್ಞಾನ ಹೊಂದಿರುವ ಬಜಾಜ್ ಡೋಮಿನಾರ್ 400, 373.3ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಟ್ರಿಪಲ್ ಸ್ಪಾರ್ಕ್ ಹಾಗೂ ದ್ರವದಿಂದ ತಂಪಾಗುವ ಎಂಜಿನ್ ಇದ್ದು, 35ಬಿಎಚ್‌ಪಿ ಮತ್ತು 35ಎನ್ಎಂ ಗರಿಷ್ಠ ಟಾರ್ಕ್ ಉತ್ವಾದಿಸುತ್ತದೆ. ಅಲ್ಲದೇ ಡೋಮಿನಾರ್‌ 400 ನಲ್ಲಿ ಸ್ಪಿಪ್ಪರ್ ಕ್ಲಚ್ ಮತ್ತು ಡ್ಯುಯಲ್ ಚಾನಲ್ ಎಬಿಎಸ್ ಅಳವಡಿಸಲಾಗಿದೆ.

ಎಬಿಎಸ್ ವ್ಯವಸ್ಥೆ ಹೊಂದಿರದ ಬಜಾಜ್ ಡೋಮಿನಾರ್ 400 ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 1.36 ಲಕ್ಷಕ್ಕೆ ಲಭ್ಯವಿದ್ದು, ಎಬಿಎಸ್ ಹೊಂದಿರುವ ಬೈಕ್ ಬೆಲೆ ರೂ. 1.50ಲಕ್ಷಕ್ಕೆ ಲಭ್ಯಲಿದೆ. ಸ್ಪೋರ್ಟ್ಸ್ ಆವೃತ್ತಿ
ಹೊಂದಿರುವ ಡೋಮಿನಾರ್ 400 ರಾಯಲ್ ಎನ್‌ಫೀಲ್ಡ್ ವಿರುದ್ಧ ಪ್ರಬಲ ಪ್ರತಿಸ್ವರ್ಧಿಯಾಗಲಿದೆ.

ಬಜಾಜ್ ಡೋಮಿನಾರ್ 400 ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Click to compare, buy, and renew Car Insurance online

Buy InsuranceBuy Now

Read more on ಬಜಾಜ್ bajaj
Story first published: Wednesday, February 15, 2017, 14:52 [IST]
English summary
Bajaj Auto has revealed that the company has sold 3,000 units of its recently launched Dominar 400. The motorcycle will be also exported to the overseas markets starting from this month.
Please Wait while comments are loading...

Latest Photos