ಬಜಾಜ್ ಪಲ್ಸರ್ ಎಎಸ್200 ಸಂಪೂರ್ಣ ಸ್ಥಗಿತ — ಕಾರಣ ತಿಳಿದುಕೊಳ್ಳಿ

Written By:

ಭಾರತದ ಪ್ರಮುಖ ಬೈಕ್ ಉತ್ಪಾದನಾ ಸಂಸ್ಥೆ ಬಜಾಜ್ ಪಲ್ಸರ್, ತನ್ನ ಬಹುನೀರಿಕ್ಷಿತ ಬೈಕ್ 200ಎನ್ಎಸ್ ಬಿಡುಗಡೆಗೊಳಿಸಿದ ಕಾರಣ ಈ ಹಿಂದಿನ ಆವೃತ್ತಿ ಎಎಸ್ 200 ಅನ್ನು ಸ್ಥಗಿತಗೊಳಿಸಿದೆ. ಹೀಗಾಗಿ ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ 200ಎನ್ಎಸ್ ಬಿಡುಗಡೆಗೊಳಿಸಿದೆ.

ಇನ್ನೂ ಬಜಾಜ್ ಪಲ್ಸರ್ 200ಎನ್ಎಸ್ ಬಿಡುಗಡೆಗೂ ಮುನ್ನ ಎಎಸ್ 200 ಮಾದರಿಯಲ್ಲಿ ಬಿಡುಗಡೆಗೊಂಡಿತ್ತು. ಕೆಲ ತಾಂತ್ರಿಕ ಕಾರಣಗಳಿಂದ ಮಾರಾಟ ಸ್ಥಗಿತ ಗೊಳಿಸಿದ್ದ ಬಜಾಜ್ ಕಂಪನಿ, ಎಎನ್ 200 ವಾಪಸ್ ಪಡೆಯುವ ಮೂಲಕ ಎನ್ಎಸ್ 200 ಮಾರುಕಟ್ಟೆಗೆ ಪರಿಚಯಿಸಿದೆ.

ಸದ್ಯ ಬಿಡುಗಡೆಗೊಂಡಿರುವ ಬಜಾಜ್ ಪಲ್ಸರ್ 200ಎನ್ಎಸ್ ಆವೃತ್ತಿ, ಈ ಹಿಂದೆ ಬಿಡುಗಡೆಯಾಗಿ ಸ್ಥಗಿತಗೊಂಡಿದ್ದ ಎಎಸ್200 ಆವೃತ್ತಿಗಿಂತಲೂ ಭಿನ್ನವಾಗಿದೆ. ಈ ಮೊದಲಿನ ಸ್ಪೋರ್ಟ್ಸ್ ಟ್ಯಾಗ್ ತೆಗೆದು ಹಾಕಿರುವ ಬಜಾಜ್ ಕಂಪನಿ, ಮಾಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿಸಿ ಬೈಕ್ ವಿನ್ಯಾಸಗೊಳಿಸಿದೆ.

ಹೊಸ ಆವೃತ್ತಿ 200 ಎನ್ಎಸ್ ಹಾಗೂ ಹಳೆಯ ಎನ್ಎಸ್ 200 ನಡುವಿನ ವಿನ್ಯಾಸದಲ್ಲಿ ಅಷ್ಟೇನು ಭಾರೀ ಬದಲಾವಣೆ ತರಲಾಗಿಲ್ಲ. ಆದ್ರೆ ಈ ಹಿಂದೆ ಇದ್ದ ಸ್ಟೋರ್ಟ್ಸ್ ಲುಕ್‌ನಲ್ಲಿ ಬದಲಾವಣೆಗೊಳಿಸಿದ್ದು, ಗ್ರಾಫೈಟ್ ಬ್ಲ್ಯಾಕ್, ಮಿರಾಜ್ ವೈಟ್ ಮತ್ತು ವೈಲ್ಡ್ ರೆಡ್ ಬಣ್ಣಗಳಲ್ಲಿ ಲಭ್ಯವಿದೆ.

ಹೊಸ ಲುಕ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಬಜಾಜ್ ಪಲ್ಸರ್ 200ಎನ್ಎಸ್ , ಬಿಎಸ್-IV ಎಂಜಿನ್ ಹೊಂದಿದೆ. ಜೊತೆಗೆ ಡ್ಯುಯಲ್ ಟೋನ್ ಪೇಂಟ್ ಸ್ಕಿಮ್ ಪಡೆದುಕೊಂಡಿದ್ದು, ಟ್ಯಾಂಕ್ ಕೆಳಭಾಗದ ವಿನ್ಯಾಸ ಎನ್ಎನ್200 ಆವೃತ್ತಿಯನ್ನ ಜನಪ್ರಿಯವಾಗಿರುವ ಸಾಧ್ಯತೆಗಳಿವೆ.

ಮೊನ್ನೆಯಷ್ಟೇ ಮಾರುಕಟ್ಟೆಗೆ ಪ್ರವೇಶ ಪಡೆದಿರುವ ಬಜಾಜ್ ಪಲ್ಸರ್ 200 ಎನ್ಎಸ್ ಈಗಾಗಲೇ ಭರ್ಜರಿ ಮಾರಾಟಗೊಳ್ಳುತ್ತಿದೆ. ದೆಹಲಿ ಎಕ್ಸ್‌ಶೋರಂ ಪ್ರಕಾರ ನೂತನ ಬೈಕ್ ಬೆಲೆ ರೂ.96,453 ಗಳಿದ್ದು, ಆದರೆ ಫ್ಯೂಲ್ ಇಂಜೆಕ್ಷನ್ ಮತ್ತು ಎಬಿಎಸ್ ಸೌಲಭ್ಯಗಳನ್ನು ಕೈಬಿಡಲಾಗಿದೆ.

250 ಸಿಸಿ ಬೈಕ್ ಕೊಳ್ಳುವ ನಿರೀಕ್ಷೆಯಲ್ಲಿದ್ದಿರಾ ಹಾಗದ್ರೆ ಬಿಡುಗಡೆಗೊಳ್ಳಲಿರುವ ಯಮಹಾ FZ25 ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
Bajaj Auto has confirmed that it has discontinued the Pulsar Adventure Sport 200 to make way for the newly launched 2017 Pulsar 200NS.
Please Wait while comments are loading...

Latest Photos