₹1.50 ಲಕ್ಷಕ್ಕೆ ಲಭ್ಯ ಬಿಎಸ್‌3 ಎಂಜಿನ್ ಹೊಂದಿರುವ ಕೆಟಿಎಂ 390 ಡ್ಯೂಕ್..!!

Written By:

ಬಿಎಸ್3 ಎಂಜಿನ್‌ ವಾಹನಗಳು ನಿಷೇಧಗೊಂಡ ಹಿನ್ನೆಲೆ ಬಿಎಸ್4 ವಾಹನಗಳಿಗೆ ಮಾತ್ರ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶವಿದೆ. ಆದ್ರೆ ಕೆಲವು ಕೆಟಿಎಂ ಡಿಲರ್ಸ್‌ಗಳು ಹಳೇ ಮಾದರಿಗಳ ಮೇಲೆ ಭಾರೀ ಆಫರ್ ನೀಡುತ್ತಿದ್ದಾರೆ.

390 ಡ್ಯೂಕ್ ಖರೀದಿ ಮೇಲೆ ಬಂಪರ್ ಆಫರ್

ಈ ಹಿಂದೆ ಬಿಎಸ್3 ವಾಹನಗಳು ಬ್ಯಾನ್ ಆಗುವುದಕ್ಕೂ ಮೊದಲೇ ಭಾರೀ ಪ್ರಮಾಣದ ಸ್ಟಾಕ್ ಇಟ್ಟುಕೊಂಡಿರುವ ಕೆಲವು ಡಿಲರ್ಸ್‌ಗಳು ಇದೀಗ ಅವುಗಳನ್ನು ಆಫರ್‌ಗಳ ಮೇಲೆ ಮಾರಾಟ ಮಾಡುತ್ತಿದ್ದಾರೆ.

ಪ್ರಸ್ತುತ ಬೆಲೆಗಳ ಪ್ರಕಾರ 390 ಡ್ಯೂಕ್ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 2.26ಲಕ್ಷಕ್ಕೆ ಲಭ್ಯವಿದೆ. ಆದ್ರೆ ಬಿಎಸ್3 ಹೊಂದಿರುವ ಡ್ಯೂಕ್ 390 ಡಿಲರ್ಸ್‌ಗಳ ಬಳಿ ಕೇವಲ ರೂ. 1.50ಲಕ್ಷಕ್ಕೆ ಸಿಗುತ್ತಿದೆ.

ದುಬಾರಿ ಬೆಲೆಯ 390 ಡ್ಯೂಕ್ ಬೈಕ್ ಮಾದರಿಯನ್ನು ಕೇವಲ 1.50ಲಕ್ಷಕ್ಕೆ ಮಾರಾಟ ಮಾಡುತ್ತಿರುವ ಹಿಂದೆ ಬಲವಾದ ಕಾರಣ ಕೂಡಾ ಇದೆ.

ಏಪ್ರಿಲ್ 1ರ ಮೊದಲು ಬಿಎಸ್‌3 ಡ್ಯೂಕ್ 390 ಬೈಕ್‌ ಮಾದರಿಗಳನ್ನು ಸಾಧ್ಯವಾದಷ್ಟು ಮಾರಾಟ ಮಾಡಿದ್ದ ಡಿಲರ್ಸ್‌ಗಳು, ಮಾರ್ಚ್ 31ರ ನಂತರ ಉಳಿದ ಬೈಕ್‌ಗಳನ್ನು ತಮ್ಮ ಹೆಸರಿಗೆ ನೋಂದಾವಣೆ ಮಾಡಿಕೊಂಡಿದ್ದರು.

ಹೀಗಾಗಿ ಖರೀದಿ ಲಭ್ಯವಿರುವ ಬಿಎಸ್3 ಎಂಜಿನ್ ಹೊಂದಿರುವ 390 ಡ್ಯೂಕ್ ಹೊಸ ಬೈಕ್‌ಗಳು ಈಗಾಗಲೇ ಆರ್‌ಟಿಓ ಕಚೇರಿಯಲ್ಲಿ ನೋಂದಾವಣೆಗೊಂಡಿವೆ.

ಇದೀಗ ಆಫರ್‌ಗಳ ಮೇಲೆ ಬೈಕ್ ಮಾರಾಟ ಮಾಡಲಾಗುತ್ತಿದ್ದು, ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಪ್ರಕ್ರಿಯೆ ಆಧಾರದ ಮೇಲೆ ನೀವು ಅವುಗಳನ್ನು ಖರೀದಿ ಮಾಡಬೇಕಾಗುತ್ತದೆ.

ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆ ಬಿಎಸ್3 ಎಂಜಿನ್ ವಾಹನಗಳ ಉತ್ಪಾದನೆ ಮತ್ತು ಮಾರಾಟ ಸಂಪೂರ್ಣ ಸ್ಥಗಿತಗೊಂಡಿದ್ದು, ನೀವು ಯಾವುದೇ ಕಾರಣಕ್ಕೂ ಅಂತಹ ವಾಹನಗಳನ್ನು ಖರೀದಿಸಿ ತೊಂದರೆಗೆ ಸಿಲುಕಬೇಡಿ.

ಒಂದು ವೇಳೆ ನೀವು ಆಫರ್‌ಗಳಿಗೆ ಮೋಸ ಹೋಗಿ ಬೈಕ್ ಖರೀದಿ ಮಾಡಿದರು, ಅಂತಹ ವಾಹನಗಳು ಆರ್‌ಟಿಓ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳುವುದಿಲ್ಲಾ.

ಸದ್ಯ ಆಫರ್ ಮೇಲೆ ಮಾರಾಟ ಮಾಡುತ್ತಿರುವ ಡ್ಯೂಕ್ 390 ಬೈಕ್ ಮಾದರಿಯೂ 373ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ.

ಎಬಿಎಸ್ ತಂತ್ರಜ್ಞಾನ ಕೂಡಾ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆ ಇದೆ.

ಬಿಎಸ್3 ಎಂಜಿನ್ ಹೊಂದಿರುವ ಕೆಟಿಎಂ 390 ಡ್ಯೂಕ್ ಖರೀದಿ ಮಾಡುವ ಗ್ರಾಹಕರಿಗೆ ಮತ್ತೊಂದು ಆಫರ್ ನೀಡಿರುವ ಡಿಲರ್ಸ್‌ಗಳು ಒಂದು ವರ್ಷದ ವಿಮಾ ಸೌಲಭ್ಯವನ್ನು ಉಚಿತವಾಗಿ ನೀಡುತ್ತಿದ್ದಾರೆ.

Click to compare, buy, and renew Car Insurance online

Buy InsuranceBuy Now

Read more on ಕೆಟಿಎಂ ktm
English summary
BS3 KTM Duke 390 is being sold for Rs 1.5 lakh on-road by KTM Boisar. Here’s more details on how this is possible.
Please Wait while comments are loading...

Latest Photos