ಬಿಎಸ್-3 ಎಂಜಿನ್ ವಾಹನ ಖರೀದಿ ಮಾಡಿ ತೊಂದರೆಯಲ್ಲಿದ್ದೀರಾ? ಹಾಗಿದ್ರೆ ಡೋಂಟ್‌ವರಿ..!!

Written By:

ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಬಿಎಸ್-3 ಎಂಜಿನ್ ಮಾದರಿಗಳನ್ನು ನಿಷೇಧ ಮಾಡಿದ್ದ ಸುಪ್ರೀಂಕೋರ್ಟ್, ಬಿಎಸ್-4 ಎಂಜಿನ್ ಆಧರಿತ ವಾಹನಗಳನ್ನು ಮಾತ್ರ ಉತ್ಪಾದನೆ ಮತ್ತು ಮಾರಾಟ ಮಾಡುವಂತೆ ಆದೇಶ ನೀಡಿತ್ತು.

ಆದ್ರೆ ಸುಪ್ರೀಕೋರ್ಟ್ ಆದೇಶದಂತೆ ಬಿಎಸ್-3 ಎಂಜಿನ್ ವಾಹನಗಳು ಏಪ್ರಿಲ್ 1 ರಿಂದ ಮಾರಾಟ ಸಂಪೂರ್ಣವಾಗಿ ಬಂದ್ ಆಗಿತ್ತು.

ಕೆಲವರು ಮಾರ್ಚ್ 31ರ ಮೊದಲು ಆಫರ್‌ಗಳಿಗೆ ಮುಗಿಬಿದ್ದು, ಬಿಎಸ್-3 ಎಂಜಿನ್ ಹೊಂದಿರುವ ವಾಹನಗಳನ್ನು ಖರೀದಿ ಮಾಡಿ ತೊಂದರೆ ಸಿಲುಕಿದ್ದರು.

ವಾಹನಗಳ ನೋಂದಣಿಗೆ ತೊಡಕು

ಮಾರ್ಚ್ 31ರ ಮೊದಲು ಖರೀದಿಸಿದ ಬೈಕ್ ಮತ್ತು ಕಾರುಗಳು ಆರ್‌ಟಿಓಗಳಲ್ಲಿ ನೋಂದಣಿಯಾಗದ ಹಿನ್ನೆಲೆ ಖರೀದಿದಾರರು ಪರದಾಡುವಂತಾಗಿತ್ತು.

ಆರ್‌ಟಿಓ ಅಧಿಕಾರಿಗಳ ಪ್ರಕಾರ ಮಾರ್ಚ್ 15ರ ನಂತರ ಖರೀದಿ ಮಾಡಿರುವ ಬಿಎಸ್-3 ವಾಹನಗಳು ನೋಂದಣಿಗೆ ಅರ್ಹವಲ್ಲ ಎಂಬ ಕಾರಣಕ್ಕೆ ಬ್ರೇಕ್ ಹಾಕಿದ್ದರು.

ಆರ್‌ಟಿಓ ಅಧಿಕಾರಿಗಳ ಕ್ರಮದಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ಬಿಎಸ್-3 ಹೊಸ ವಾಹನಗಳು ನೋಂದಣಿಯಾಗದ ಹಿನ್ನೆಲೆ ಮಾಲೀಕರು ಸಂಕಷ್ಟ ಸಿಲುಕುವಂತಾಗಿತ್ತು.

ಇದೀಗ ಸುಪ್ರೀಂಕೋರ್ಟ್ ಆದೇಶ ಕುರಿತಂತೆ ಕೆಲವು ಬೈಕ್ ಉತ್ಪಾದನಾ ಸಂಸ್ಥೆಗಳು ಅಪೆಕ್ಸ್ ಕೋರ್ಟ್ ಮೋರೆ ಹೋಗುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಂಡಿವೆ.

ಅಪೆಕ್ಸ್ ಕೋರ್ಟ್ ಆದೇಶದ ಪ್ರಕಾರ ಮಾರ್ಚ್ 31ರ ಮಧ್ಯರಾತ್ರಿವರೆಗೆ ಖರೀದಿ ಮಾಡಲಾಗಿರುವ ಎಲ್ಲಾ ವಾಹಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ಆದೇಶ ನೀಡಿದೆ.

ಹೀಗಾಗಿ ನೋಂದಣಿಗಾಗಿ ಕಾಯುತ್ತಿದ್ದ ಸಾವಿರಾರು ಹೊಸ ವಾಹನಗಳ ನೋಂದಣಿ ಕಾರ್ಯ ಸದ್ಯದಲ್ಲೇ ಪೂರ್ಣಗೊಳ್ಳಲಿದ್ದು, ವಾಹನ ಸವಾರರ ಸಂಕಷ್ಟಕ್ಕೆ ಅಪೆಕ್ಸ್ ಕೋರ್ಟ್ ಸೂಕ್ತ ಪರಿಹಾರ ಸೂಚಿಸಿದೆ.

ಇನ್ನೊಂದು ಮುಖ್ಯ ವಿಚಾರವೆಂದ್ರೆ ಮಾರ್ಚ್ 31ರ ನಂತರ ಖರೀದಿ ಮಾಡಿರುವ ಬಿಸ್-3 ಎಂಜಿನ್ ಮಾದರಿಯ ವಾಹನಗಳನ್ನು ಯಾವುದೇ ಕಾರಣಕ್ಕೂ ನೋಂದಣಿ ಮಾಡಿಕೊಳ್ಳಲಾಗುವುದಿಲ್ಲ.

ಸದ್ಯ ಹೊಸ ಆದೇಶ ಹಿನ್ನೆಲೆ ಬಿಎಸ್-3 ವಾಹನಗಳ ನೋಂದಣಿ ಕಾರ್ಯಕ್ಕೆ ದೆಹಲಿ ಸರ್ಕಾರ ಆರ್‌ಟಿಓ ಮಹತ್ವದ ಸೂಚನೆ ನೀಡಿದ್ದು, ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.

ಬಿಎಸ್-3 ಎಂಜಿನ್ ನಿಷೇಧಕ್ಕೆ ಕಾರಣ ಏನು?

ಪರಿಸರಕ್ಕೆ ಧಕ್ಕೆ ಉಂಟು ಮಾಡುವ ಬಿಎಸ್-3 ಎಂಜಿನ್‌ ಸಾಮರ್ಥ್ಯದ ವಾಹನಗಳನ್ನು ಬಂದ್ ಮಾಡುವಂತೆ ಖಡಕ್ ಆದೇಶ ನೀಡಿರುವ ಸುಪ್ರೀಂ, ಈಗಾಗಲೇ ಹೊಸ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ. 

 

ಹೀಗಾಗಿ ಸದ್ಯ ಚಾಲ್ತಿಯಲ್ಲಿರುವ ಬಿಎಸ್-3 ಎಂಜಿನ್ ವಾಹನಗಳನ್ನು ಹೊರತುಪಡಿಸಿ ಹೊಸ ವಾಹನಗಳ ಉತ್ಪಾದನೆ ಮತ್ತು ಮಾರಾಟ ಸಂಪೂರ್ಣ ಬಂದ್ ಆಗಿದೆ.

ಈಗಾಗಲೇ ಕೆಲವು ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳು ಹೊಸ ರೂಲ್ಸ್ ಅಳವಡಿಸಿಕೊಳ್ಳುವ ಮೂಲಕ ಬಿಎಸ್-IV ಎಂಜಿನ್ ಸಾಮರ್ಥ್ಯದ ವಾಹನಗಳನ್ನು ಮಾತ್ರ ಉತ್ಪಾದನೆ ಮಾಡುತ್ತಿವೆ.

ಸುಪ್ರೀಂಕೋರ್ಟ್‌ನ ಹೊಸ ಕಾಯ್ದೆಯಿಂದಾಗಿ ಸುಮಾರು 20 ಸಾವಿರ ಹೊಸ ಕಾರುಗಳು, 7.50 ಲಕ್ಷ ಬೈಕ್‌ಗಳು ಮತ್ತು 47 ಸಾವಿರ ಮೂರು ಚಕ್ರದ ವಾಹನಗಳು ಮೂಲೆಗುಂಪಾಗಿವೆ.

ಕೇವಲ ಬಿಎಸ್-IV ಎಂಜಿನ್ ಕಡ್ಡಾಯ ಮಾತ್ರವಲ್ಲದೇ AHO(ಅಟೋಮೆಟಿಕ್ ಹೆಡ್‌ಲೈಟ್ ಆನ್) ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಿರಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಸುಪ್ರೀಂಕೋರ್ಟ್ ಆದೇಶದಂತೆ ಇನ್ಮುಂದೆ ಬಿಎಸ್-IV ಎಂಜಿನ್ ಮತ್ತು AHO(ಆಟೋಮೆಟಿಕ್ ಹೆಡ್‌ಲ್ಯಾಂಪ್ ಆನ್) ವ್ಯವಸ್ಥೆ ಇಲ್ಲದ ಯಾವುದೇ ವಾಹನಗಳು ಮಾರಾಟ ಮತ್ತು ಉತ್ಪಾದನೆ ಎಲ್ಲವೂ ಬಂದ್ ಆಗಲಿದೆ.

ಒಂದು ವೇಳೆ ನೀವು ಈ ಮೇಲಿನ ಎರಡು ವ್ಯವಸ್ಥೆಗಳು ಇಲ್ಲದ ವಾಹನಗಳನ್ನು ಖರೀದಿ ಮಾಡಿದರೂ ಆರ್‌ಟಿಓಗಳಲ್ಲಿ ಇವುಗಳನ್ನು ನೋಂದಣಿ ಮಾಡಿಕೊಳ್ಳಲಾಗುವುದಿಲ್ಲ. ಅಲ್ಲದೇ ಅವುಗಳಿಗೆ ಮಾನ್ಯತೆ ಕೂಡಾ ಇರುವುದಿಲ್ಲ.

ಹೀಗಾಗಿ ಖದೀರಿಗೂ ಮುನ್ನ ಈ ವಿಚಾರಗಳನ್ನು ತಿಳಿದುಕೊಂಡೇ ವಾಹನಗಳನ್ನು ಆಯ್ಕೆ ಮಾಡುವುದು ಉತ್ತಮ.

ಈಗಾಗಲೇ ವಿವಿಧ ದೇಶಗಳಲ್ಲಿ ಈ ಕಾಯ್ದೆ ಜಾರಿಯಲ್ಲಿದ್ದು, ಹಗಲು ವೇಳೆಯೂ ಬೈಕ್ ಚಾಲನೆ ವೇಳೆ ಆಟೋಮೆಟಿಕ್ ಹೆಡ್‌ಲ್ಯಾಂಪ್ ಆನ್ ಮಾಡಿಕೊಂಡೇ ಇರಬೇಕಿರುವುದು ಕಡ್ಡಾಯವಾಗಿದೆ. ಜೊತೆಗೆ ಬಿಎಸ್-IV ಎಂಜಿನ್ ಹೊಂದಿರುವುದನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲಾಗಿದೆ.

ವಾಯು ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಸುಪ್ರೀಂಕೋರ್ಟ್ ಈ ಹೊಸ ರೂಲ್ಸ್ ಜಾರಿಗೆ ತಂದಿದ್ದು, ಅದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೋ ಗೊತ್ತಿಲ್ಲ.

ಆದ್ರೆ ಹೊಸ ಕಾಯ್ದೆಯಿಂದ ಈಗಾಗಲೇ ಉತ್ಪಾದನೆಗೊಂಡಿದ್ದ ಲಕ್ಷಾಂತರ ಬಿಎಸ್-3 ಎಂಜಿನ್‌ ವಾಹನಗಳು ಮೂಲೆಗುಂಪಾಗುವುದು ಮಾತ್ರ ಗ್ಯಾರೆಂಟಿ.

Story first published: Saturday, May 13, 2017, 13:33 [IST]
English summary
The Government of Delhi has directed the Transport department to register BS-III two-wheelers which were sold on or before March 31, 2017.
Please Wait while comments are loading...

Latest Photos