ಇವರು ಮೊಜೊ ಬೈಕಿನಲ್ಲಿ ಭಾರತದ ಪೂರ್ವ ದಿಕ್ಕಿನಿಂದ ಪಶ್ಚಿಮ ದಿಕ್ಕಿಗೆ ತಲುಪಿದ ಸಮಯ ಕೇಳಿದರೆ ಅಚ್ಚರಿ ಪಡ್ತೀರಾ !!

Written By:

ಮೊಜೊ ಬೈಕ್ ನ ಒಡೆಯರಾದ ಇಬ್ಬರು ಯುವಕರು ಈ ಪ್ರಯಾಣವನ್ನು ಅತಿ ವೇಗದಲ್ಲಿ ಮಾಡಿ ಮುಗಿಸಿದ್ದಾರೆ. ಸುದೀಪ್ ಏನ್ ಎಸ್ ಮತ್ತು ಯೋಗೇಶ್ ಚವಾಣ್ ಇಬ್ಬರು ಸಹ ಬೈಕ್ ಓಡಿಸುವ ಹವ್ಯಾಸ ಹೊಂದಿದವರಾಗಿದ್ದಾರೆ.

ಕೆಲವು ವರ್ಷಗಳ ಹಿಂದೆಯಷ್ಟೇ ಮೊಜೊ ಕ್ರೀಡಾ ಬೈಕನ್ನು ಬಿಡುಗಡೆಗೊಳಿಸಿದ್ದ ದೇಶದ ಮುಂಚೂಣಿಯ ಮಹೀಂದ್ರ ದ್ವಿಚಕ್ರ ಸಂಸ್ಥೆಯೀಗ, ಪೂರ್ವದಿಂದ ಪಶ್ಚಿಮದ ಕಡೆ ಅತಿ ವೇಗವಾಗಿ ತಲುಪಿದ ಮೊದಲ ಬೈಕ್ ಎನ್ನುವ ದಾಖಲೆಯನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಬರೆದುಕೊಂಡಿದೆ.

ಮೊಜೊ ಬೈಕ್ ನ ಒಡೆಯರಾದ ಇಬ್ಬರು ಯುವಕರು ಈ ಪ್ರಯಾಣವನ್ನು ಅತಿ ವೇಗದಲ್ಲಿ ಮಾಡಿ ಮುಗಿಸಿದ್ದಾರೆ. ಸುದೀಪ್ ಏನ್ ಎಸ್ ಮತ್ತು ಯೋಗೇಶ್ ಚವಾಣ್ ಇಬ್ಬರು ಸಹ ಬೈಕ್ ಓಡಿಸುವ ಹವ್ಯಾಸ ಹೊಂದಿದವರಾಗಿದ್ದಾರೆ.

ಅರುಣಾಚಲ ಪ್ರದೇಶದ 'ಟೆಝು' ಇಂದ ತಮ್ಮ ಪ್ರಯಾಣವನ್ನು ಆರಂಭಿಸಿದ ಇವರು ಗುಜರಾತ್ ನ ಕೋಟೇಶ್ವರ್ ನಲ್ಲಿ ಕೊನೆಗೊಳಿಸಿದ್ದಾರೆ.

ಸುದೀಪ್ ಏನ್.ಎಸ್ ಮತ್ತು ಯೋಗೇಶ್ ಚವಾಣ್ ಇಬ್ಬರು ಸೇರಿ 85 ಗಂಟೆಗಳಲ್ಲಿ ಸರಿ ಸುಮಾರು 3706 ಕಿಲೋಮೀಟರು ನಷ್ಟು ಕ್ರಮಿಸಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಅಷ್ಟೇ ಅಂತರವನ್ನು ಕ್ರಮಿಸಲು ಈ ಮೊದಲು 107 ಗಂಟೆಗಳನ್ನು ತೆಗೆದುಕೊಳ್ಳಲಾಗಿದ್ದು ಈಗ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಅಂದರೆ 85 ಗಂಟೆಗಳಲ್ಲಿ ಕ್ರಮಿಸಿ ಹಳೆಯ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಮೊಜೊ ಮಾಲಿಕರಿಗಾಗಿ 'ಮೊಜೊ ಟ್ರೈಬ್' ಎಂಬ ರೈಡಿಂಗ್ ಕ್ಲಬ್ ರಚಿಸಲಾಗಿದೆ. ಇವೆಲ್ಲವೂ ಈ ಟೂರರ್ ಬೈಕ್ ಸವಾರಿಯನ್ನು ಮತ್ತಷ್ಟು ಆನಂದಿಸಲು ನೆರವಾಗುತ್ತದೆ.

4-ಸ್ಟ್ರೋಕ್ ಸಿಂಗಲ್-ಸಿಲಿಂಡರ್ ಇರುವ ಅತ್ಯುತ್ತಮವಾದ 295 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಮಹೀಂದ್ರ ಮೊಜೊ 30 ಎನ್ ಎಂ ತಿರುಗುಬಲದಲ್ಲಿ 27 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

"ಮೊಜೊ ಮತ್ತೊಮ್ಮೆ ಅದರ ಯೋಗ್ಯತೆ ಸಾಬೀತಾಪಡಿಸಿದೆ. ಸುದೀಪ್ ಹಾಗೂ ಯೋಗೇಶ್ ಅವರ ದಾಖಲೆಯು ಅಭೂತಪೂರ್ವ ಸಾಧನೆಯಾಗಿದೆ. ಮೊಜೊ ಜನರ ಪ್ರವಾಸದ ಒಲವನ್ನು ಹೆಚ್ಚಿಸುವಂತ ಬೈಕ್ ಆಗಿದ್ದು, ಸುಸಜ್ಜಿತ ಎಂಜಿನ್ ವ್ಯವಸ್ಥೆ ದೂರ ಕ್ರಮಿಸಲು ಹೇಳಿ ಮಾಡಿಸಿದ ಬೈಕು " ಎಂದು ಮಹೀಂದ್ರಾ ಟೂ ವೀಲರ್ಸ್ ಲಿ. ನ ಸೇಲ್ಸ್, ಮಾರ್ಕೆಟಿಂಗ್ ಮತ್ತು ಪ್ರಾಡಕ್ಟ್ ಪ್ಲಾನಿಂಗ್ ವಿಭಾಗದ ಸೀನಿಯರ್ ಜನರಲ್ ಮ್ಯಾನೇಜರ್ ನವೀನ ಮಲ್ಹೋತ್ರ ಹೇಳಿದ್ದಾರೆ.

ಇದೆಲ್ಲದರ ಹೊರತಾಗಿ ಸವಾರ ಪ್ರಿಯರಿಗಾಗಿ ಅತ್ಯಂತ ಅವಶ್ಯಕತೆಯಾಗಿರುವ ಆರು ಆಕ್ಸೆಸರಿಗಳನ್ನು ಮಹೀಂದ್ರ ಮೊಜೊ ಬೈಕಿನಲ್ಲಿ ಇರಿಸಲಾಗಿದೆ.


ಮೊಜೊ ಬೈಕಿನಲ್ಲಿ ಇರಿಸಲಾದ ಆಕ್ಸಸರೀಸ್ ಇಂತಿವೆ :

ಮ್ಯಾಗ್ನೆಟಿಕ್ ಟ್ಯಾಂಕ್ ಬ್ಯಾಗ್,
(13 ಲೀಟರ್) ಸ್ಯಾಡಲ್ ಬ್ಯಾಗ್ ಹಾಗೂ ಕ್ಯಾರಿಯರ್,
(38 ಲೀಟರ್) ಮೊಬೈಲ್ ಹೋಲ್ಡರ್

 

ಮೊಜೊ ಬೈಕಿನಲ್ಲಿ ಇರಿಸಲಾದ ಆಕ್ಸಸರೀಸ್ ಇಂತಿವೆ :

ಫ್ರಂಟ್ ಗಾರ್ಡ್,
ಪ್ಯಾನಿಯರ್ ಮೌಂಟ್,
ಫಾಗ್ ಲ್ಯಾಂಪ್

ಮೊಜೊ ಬೈಕಿನ ಇಂಜಿನ್ ಆಕ್ಸಸರೀಸ್ ಇಂತಿವೆ :

ಇಲೆಕ್ಟ್ರಾನಿಕ್ ಫ್ಯುಯೆಲ್ ಇಗ್ನಿಷನ್ (ಇ ಎಫ್ ಐ)
ಡಬಲ್ ಓವರ್ ಹೆಡ್ ಕ್ಯಾಮ್ ಶಾಫ್ಟ್ (ಡಿ.ಓ.ಎಚ್.ಸಿ)
ಕಡಿಮೆ ಫ್ರಿಕ್ಷನ್ ಹೊಂದಿರುವ ಪಿಸ್ಟನ್ ಮತ್ತು ರಿಂಗ್ಸ್

ಮೊಜೊ ಬೈಕಿನ ಇಂಜಿನ್ ಆಕ್ಸಸರೀಸ್ ಇಂತಿವೆ :

ಇರಿಡಿಯಮ್ ಸ್ಪಾರ್ಕ್ ಪ್ಲಗ್
ರೆಸೊನಾಟಾರ್ ಹೊಂದಿರುವ ಇನ್ ಟೇಕ್ ವ್ಯವಸ್ಥೆ.
ಡ್ಯುಯಲ್ ಎಕ್ಸಾಸ್ಟ್

ಮೊಜೊ ಬೈಕಿನ ಪ್ರತಿಸ್ಪರ್ಧಿಯಾದ ಬಜಾಜ್ ಡೊಮಿನರ್ ಬೈಕಿನ ಚಿತ್ರಗಳನ್ನು ವೀಕ್ಷಿಸಿ :

Click to compare, buy, and renew Car Insurance online

Buy InsuranceBuy Now

English summary
Two riders set a record from east to west India on the Mahindra Mojo in just 85 hours.
Please Wait while comments are loading...

Latest Photos