88 ಕಿ.ಮಿ ಮೈಲೇಜ್ ನೀಡಬಲ್ಲ ಹೀರೊ ವಿನೂತನ ಹೆಚ್ಎಫ್ ಡಿಲಕ್ಸ್ ಐ3ಎಸ್..!!

Written By:

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಈಗಾಗಲೇ ಹೊಸ ದಾಖಲೆ ನಿರ್ಮಿಸಿರುವ ಹಿರೋ ಮೊಟೊಕಾರ್ಪ್ ಸಂಸ್ಥೆಯು, ತನ್ನ ಹಳೆಯ ಆವೃತ್ತಿ ಹೆಚ್‌ಎಫ್ ಡಿಲಕ್ಸ್ ಮಾದರಿಯನ್ನು ಐ3ಎಸ್ ತಂತ್ರಜ್ಞಾನದೊಂದಿಗೆ ಮರುಬಿಡುಗಡೆ ಮಾಡಿದೆ.

ಬೆಲೆ

ರೂ.46,630 (ದೆಹಲಿ ಎಕ್ಸ್‌ಶೋರಂ ಪ್ರಕಾರ)

ಎಂಜಿನ್ ಸಾಮರ್ಥ್ಯ

97.2 ಸಿಸಿ ಸಾಮರ್ಥ್ಯ ಹೊಂದಿರುವ ಹೆಚ್‌ಎಫ್ ಡಿಲಕ್ಸ್ ಐ3ಎಸ್ ಬೈಕ್ ಆವೃತ್ತಿಯು, 8.24ಬಿಎಚ್‌ಪಿ ಹಾಗೂ 8.05ಎನ್ಎಂ ಉತ್ಪಾದಿಸುವ ಶಕ್ತಿ ಹೊಂದಿದೆ.

ಇನ್ನು ಸೆಲ್ಫ್ ಸ್ಟಾರ್ಟ್ ಅಥವಾ ಕಿಕ್ ಸ್ಟಾರ್ಟ್ ಮಾದರಿಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಸ್ಪೋಕ್ ವೀಲ್ಹ್ ವ್ಯವಸ್ಥೆ ಪಡೆದುಕೊಂಡಿದೆ.

ಮೈಲೇಜ್

88.5ಕಿ.ಮಿ (ಪ್ರತಿ ಲೀಟರ್‌ಗೆ)

ಸುಧಾರಿತ ಐ3ಎಸ್ ತಂತ್ರಜ್ಞಾನ ಅಳವಡಿಕೆ ಹಿನ್ನಲೆ ಮೈಲೇಜ್ ಅಧಿಕಗೊಳ್ಳಲಿದ್ದು, ಈ ಹಿಂದಿನ ಮಾದರಿಗಳಿಂತ ಈ ಮಾದರಿಯೂ ಹೆಚ್ಚು ಬಲಿಷ್ಠವಾಗಿದೆ.

ಏನಿದು ಐ3ಎಸ್ ತಂತ್ರಜ್ಞಾನ?

ಟ್ರಾಫಿಕ್ ಸಂದರ್ಭಗಳಲ್ಲಿ ಇಂಧನ ಉಳಿತಾಯ ಮಾಡಬಲ್ಲ ತಂತ್ರವಾಗಿದ್ದು, ಗೇರ್ ನ್ಯೂಟ್ರಲ್ ಬದಲಾಯಿಸಿದಾಗ ಆಗುವ ಇಂಧನ ನಷ್ಟ ಸಂಪೂರ್ಣ ತಗ್ಗಲಿದೆ.

ಬ್ರೇಕ್

ಮುಂಭಾಗ- 130 ಎಂಎಂ
ಹಿಂಭಾಗ-110 ಎಂಎಂ

ಇನ್ನು ಗ್ರಾಫಿಕ್ ಡಿಸೈನ್‌ನಲ್ಲೂ ಹೆಚ್ಚುವರಿ ಬದಲಾವಣೆ ತರಾಗಿದ್ದು, ಪ್ರಮುಖ 2 ಬಣ್ಣಗಳಲ್ಲಿ ಹೆಚ್ಎಫ್ ಡಿಲಕ್ಸ್ ಐ3ಎಸ್ ಬೈಕ್ ಖರೀದಿ ಮಾಡಬಹುದಾಗಿದೆ.

ಈ ಹಿಂದಿನ ಮಾದರಿಯಲ್ಲಿನ ಕೆಲವು ವಿನ್ಯಾಸಗಳನ್ನು ಹೊಸ ಮಾದರಿಯಲ್ಲೂ ಮುಂದುವರಿಸಲಾಗಿದ್ದು, 4-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆ ಪಡೆದುಕೊಂಡಿದೆ.

ಇಂಧನ ಟ್ಯಾಂಕ್ ಸಾಮರ್ಥ್ಯ
9.5 ಲೀಟರ್

ಭಾರ
110 ಕೆಜಿ

ಇದರ ಜೊತೆ ಇತ್ತೀಚೆಗೆ ಜಾರಿಗೆ ಬಂದಿರುವ ಹೊಸ ಕಾಯ್ದೆ ಪ್ರಕಾರ ಬಿಎಸ್-4 ಎಂಜಿನ್ ಹೊಂದಿರುವ ಹೆಚ್‌ಎಫ್ ಡಿಲಕ್ಸ್ ಐ3ಎಸ್ ಬೈಕ್, ಎಹೆಚ್ಓ(ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ ಆನ್) ಸೌಲಭ್ಯವಿದೆ.

ಸದ್ಯ ಮೈಲೇಜ್ ವಿಚಾರಕ್ಕೆ ಹೆಚ್ಚು ಸುದ್ಧಿಯಾಗುತ್ತಿರುವ ಹೆಚ್ಎಫ್ ಡಿಲಕ್ಸ್ ಬೈಕ್, ಈಗಾಗಲೇ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ.

ಹೀಗಾಗಿ ಹೊಸ ತಂತ್ರಜ್ಞಾನ ಹೊತ್ತು ಬಂದಿರುವ ಹೆಚ್ಎಫ್ ಡಿಲಕ್ಸ್ ಬೈಕ್, ಮತ್ತೊಮ್ಮೆ ದ್ವಿಚಕ್ರ ವಾಹನ ಮಾರಾಟ ವಿಭಾಗದಲ್ಲಿ ದಾಖಲೆ ನಿರ್ಮಿಸುವ ತವಕದಲ್ಲಿದೆ.

English summary
Hero HF Deluxe i3S Launched In India. The motorcycle is powered by a 97.2cc engine producing 8.24bhp and a maximum torque of 8.05 Nm.
Please Wait while comments are loading...

Latest Photos