ಒಂದೇ ತಿಂಗಳಲ್ಲಿ 1 ಲಕ್ಷ ಸಿಬಿ ಶೈನ್ ಬೈಕುಗಳ ಮಾರಾಟ : ಹೊಸ ದಾಖಲೆ ಸೃಷ್ಟಿಸಿದ ಹೋಂಡಾ

Written By:

ಸ್ವಯಂಚಾಲಿತ ಸ್ಕೂಟರ್ ವಿಭಾಗದಲ್ಲಿ ಪ್ರಾಭಲ್ಯ ಸಾಧಿಸಿದ ನಂತರ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಸಂಸ್ಥೆಯು 125ಸಿಸಿ ವಿಭಾಗದಲ್ಲಿ ನಾಯಕನಾಗಲು ಹೊರಟಿದೆ.

125 ಸಿಸಿ ಮೋಟಾರ್ ಸೈಕಲ್ ಮಾರಾಟ ವಿಭಾಗದಲ್ಲಿ ಈಗಾಗಲೇ ಭಾರತ ಪ್ರಪಂಚದ ಎರಡನೇ ಅತಿ ದೊಡ್ಡ ರಸ್ತವಾಗಿ ಹೊರಹೊಮ್ಮಿದ್ದು, ಇದರ ಶ್ರೇಯಸ್ಸು ಅತಿ ಹೆಚ್ಚು ಮಾರಾಟಗೊಂಡ ಹೋಂಡಾ ಕಂಪನಿಯ ವಾಹನಗಳಿಗೆ ಸಲ್ಲಬೇಕು.

ಹೌದು, ದೇಶದ 125ಸಿಸಿ ಬೈಕುಗಳ ವಿಭಾಗದಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿರುವ ಸಿಬಿ ಶೈನ್ ಬೈಕ್ ಈಗ ಮತ್ತೊಂದು ಮೈಲಿಗಲ್ಲನ್ನು ಮುಟ್ಟುವ ಮೂಲಕ ತನ್ನ 125ಸಿಸಿ ವಿಭಾಗದಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.

ಒಂದೇ ತಿಂಗಳಲ್ಲಿ 1 ಲಕ್ಷ ಬೈಕುಗಳು ಮಾರಾಟವಾಗುವ ಮೂಲಕ ಹೊಸ ಮೈಲಿಗಲ್ಲನ್ನು ಹೋಂಡಾ ಸಿಬಿ ಶೈನ್ 125 ಸಿಸಿ ಮೋಟಾರ್ ಸೈಕಲ್ ತಲುಪಿದೆ.

ಸಿಬಿ ಶೈನ್ ಬೈಕಿನ ಮಾರಾಟ ಶೇಕಡಾ 51ರಷ್ಟು ಏರಿಕೆ ಕಂಡಿದ್ದು, ಕಳೆದ 2017ರ ಏಪ್ರಿಲ್ ತಿಂಗಳೊಂದರಲ್ಲೇ 1,00,824 ದ್ವಿಚಕ್ರ ವಾಹನಗಳು ಮಾರಾಟವಾಗಿ ಧಾಖಲೆ ನಿರ್ಮಿಸಿದೆ.

ಹೊಸ ಎಓಎಚ್ ಉನ್ನತೀಕರಣ ಮತ್ತು ಲೊ ರೋಲಿಂಗ್ ರೆಸಿಸ್ಟೆನ್ಸ್ ಟೈಯರ್ ಅಂಶಗಳು ಬಿಎಸ್-IV ಸಿಬಿ ಶೈನ್ ಬೈಕಿನ ಬೇಡಿಕೆಯನ್ನು ಹೆಚ್ಚಿಗೆ ಮಾಡಿರುವುದಂತೂ ಸತ್ಯ.

ಸಿಬಿ ಶೈನ್ ಬೈಕಿನ ಮಾರಾಟವು 125ಸಿಸಿ ಮೋಟಾರ್ ಸೈಕಲ್ ವಿಭಾಗದ ಮಾರಾಟಕ್ಕಿಂತ ಐದು ಪಟ್ಟು ವೇಗವಾಗಿ ಬೆಳವಣಿಗೆಯಾಗಿದ್ದು, ಈ ವಿಚಾರ ಕಂಪನಿಗೆ ಹೆಚ್ಚು ಹೆಸರು ತಂದುಕೊಟ್ಟಿದೆ.

125ಸಿಸಿ ಮೋಟಾರ್ ಸೈಕಲ್ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸುವುದರೊಂದಿಗೆ ಹೋಂಡಾ ತನ್ನ ವಿಭಾಗದ ನಾಯಕತ್ವವನ್ನು ವಿಸ್ತರಿಸಿದ್ದು, ಸದ್ಯ ಸಿಬಿ ಶೈನ್ ವರ್ಷಕ್ಕೆ 15 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಳ್ಳುತ್ತಿದೆ.

2006ರಲ್ಲಿ ಬಿಡುಗಡೆಗೊಂಡ ಸಿಬಿ ಶೈನ್ ಮೋಟಾರ್ ಸೈಕಲ್ ಹೋಂಡಾ ದ್ವಿಚಕ್ರ ಸರಣಿಯಲ್ಲಿಯೇ ಅತಿ ದೊಡ್ಡ ಬ್ರಾಂಡ್ ಆಗಿದ್ದು, ಇಲ್ಲಿಯವರೆಗೂ ಸರಿ ಸುಮಾರು 55 ಲಕ್ಷ ಗ್ರಾಹಕರ ಮೊದಲ ಆಯ್ಕೆಯಾಗಿದೆ.

"ಒಂದು ದಶಕಕ್ಕೂ ಹೆಚ್ಚಿನ ಅವಧಿಯ ಪರಂಪರೆಯನ್ನು ಹೊಂದಿರುವ ಸಿಬಿ ಶೈನ್ ಬೈಕ್, ನಮ್ಮ ಮೈತ್ರಿಕೂಟದ ಪ್ರಮುಖ ಮೋಟಾರು ಸೈಕಲ್ ಬ್ರಾಂಡ್ ಆಗಿದೆ" ಎಂದು ಮಾರಾಟ ಮತ್ತು ಮಾರ್ಕೆಟಿಂಗ್, ಹಿರಿಯ ಉಪಾಧ್ಯಕ್ಷ, ಯಾದ್ವಿಂದರ್ ಸಿಂಗ್ ಗುಲೆರಿಯಾ ತಿಳಿಸಿದರು.

ಹೋಂಡಾ ಮೋಟಾರ್ ಸೈಕಲ್ ವಿಭಾಗದ ಮಾರಾಟಕ್ಕೆ ಶೇಕಡಾ 55%ರಷ್ಟು ಕೊಡುಗೆ ನೀಡಿದ್ದು, ಕಂಪನಿಯ ಯಶಸ್ವಿ ಬೈಕುಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

Read more on ಹೋಂಡಾ honda
Story first published: Thursday, May 25, 2017, 12:53 [IST]
English summary
Read in Kannada about Honda CB Shine reach the milestone of 1 lakh unit sales in a single month in 125cc segment...
Please Wait while comments are loading...

Latest Photos