ಭಾರತದಲ್ಲಿ ಬಿ.ಎಸ್ IV ಕಂಪ್ಲೈಂಟ್ ಎಂಜಿನ್ ಕಡ್ಡಾಯಗೊಳಿಸಿದ ಹೋಂಡಾ ಕಂಪನಿ

Written By:

ದ್ವಿಚಕ್ರ ವಾಹನ ವಿಭಾಗದಲ್ಲಿ ಅತಿ ಹೆಚ್ಚು ವಿಶ್ವಾಸ ಹೊಂದಿರುವ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ತಯಾರಕ ಕಂಪನಿ ಹೋಂಡಾ ಮುಂಬರುವ ದಿನಗಳಲ್ಲಿ ಬಿ.ಎಸ್ IV ಕಂಪ್ಲೈಂಟ್ ಎಂಜಿನ್ ಹೊಂದಿರುವ ದ್ವಿಚಕ್ರ ವಾಹನ ಉತ್ಪಾದಿಸಲಿದೆ.

ಇತ್ತೀಚಿಗಷ್ಟೇ ಬಿಎಸ್ IV ಕಂಪ್ಲೈಂಟ್ ಎಂಜಿನ್ ಹೊಂದಿರುವ ತನ್ನ ಹೊಚ್ಚ ಹೊಸ ಆಕ್ಟಿವಾ 4ಜಿ ಸ್ಕೂಟರ್ ಬಿಡುಗಡೆಗೊಳಿಸಿರುವ ಹೋಂಡಾ, ಈ ನಿರ್ದಾರಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಕವಾಗಿರುವ ವಾಹನ ತಯಾರಕ ಸಂಸ್ಥೆ ಮಾರ್ಚ್ ನಿಂದ ಎಲ್ಲಾ ಬೈಕ್ ಅಥವಾ ಸ್ಕೂಟರ್ಗಳಲ್ಲಿ ಬಿಎಸ್ IV ಕಂಪ್ಲೈಂಟ್ ಎಂಜಿನ್ ಅಳವಡಿಸಲಿದೆ.

ಈ ರೀತಿಯ ಬಿಎಸ್ IV ಕಂಪ್ಲೈಂಟ್ ಎಂಜಿನ್ ಉತ್ಪಾದಿಸುವ ನಿರ್ದಾರ ತೆಗೆದುಕೊಂಡ ದೇಶದ ಎರಡನೇ ವಾಹನ ತಯಾರಕ ಕಂಪನಿ ಎಂಬ ಹೆಗ್ಗಳಿಕೆಗೆ ಹೋಂಡಾ ಪಾತ್ರವಾಗಿದೆ.

ಬಜಾಜ್ ಆಟೋ ಬಿಎಸ್ IV ಕಂಪ್ಲೈಂಟ್ ಎಂಜಿನ್ ಅಳವಡಿಸುವ ನಿರ್ಧಾರವನ್ನು ಈ ಮೊದಲೇ ತಿಳಿಸಿತ್ತು ಮತ್ತು ಬಿಡುಗಡೆಗೊಳಿಸಿರುವ ಎಲ್ಲಾ ಬೈಕುಗಳಲಿ ಈ ವಿಶೇಷ ಎಂಜಿನ್ ಅಳವಡಿಸಿದೆ.

ಹೀರೋ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಕಂಪನಿಯ ಮಾರ್ಕೆಟಿಂಗ್ ಮತ್ತು ಮಾರಾಟ ವಿಭಾಗದ ಉಪ ಮುಖ್ಯಸ್ಥರಾದ ಯಧುವೀರ್ ಸಿಂಗ್ ಈ ವಿಚಾರವನ್ನು ತಿಳಿಸಿದ್ದಾರೆ.

ಬಿಎಸ್ IV ಎಂಜಿನ್ ಅಳವಡಿಸಲು ನೀಡಿದ್ದ ಗಡುವಿಗೂ ಒಂದು ತಿಂಗಳ ಮುಂಚಿತವಾಗಿಯೇ ಹೋಂಡಾ ಕಂಪನಿ ಈ ಮಹತ್ತರ ನಿರ್ಣಯ ಕೈಗೊಂಡಿದ್ದು, ಸದ್ಯ ಹೋಂಡಾ ಕಂಪನಿ ದೇಶದಾದ್ಯಂತ ಸರಿ ಸುಮಾರು 4 ಉತ್ಪಾದನಾ ಕೇಂದ್ರಗಳಲ್ಲಿ 5.8 ಮಿಲಿಯನ್ ಘಟಕಗಳನ್ನು ಹೊಂದಿದೆ.

ಹೋಂಡಾ ಕಂಪನಿ ಮನೇಸರ್, ಹರಿಯಾಣ, ತಂಪುಕಾರ, ರಾಜಸ್ತಾನ್, ಕೋಲಾರ್ ಮತ್ತು ಗುಜರಾತ್ ನಲ್ಲಿ ತನ್ನ ಉತ್ಪಾನದ ಕೇಂದ್ರಗಳನ್ನು ಹೊಂದಿದೆ.

ಕಳೆದ ತಿಂಗಳಿನಿಂದಲೇ ಬಜಾಜ್ ಆಟೋ ಬಿಎಸ್ IV ಕಂಪ್ಲೈಂಟ್ ಎಂಜಿನ್ ಅಳವಡಿಸಿರುವ ಬೈಕುಗಳನ್ನು ಉತ್ಪಾದಸಲು ಶುರು ಮಾಡಿದೆ, ಇದೇ ಹಾದಿಯಲ್ಲಿ ಈಗ ಹೋಂಡಾ ಕಂಪನಿ ಸಾಗುತ್ತಿದ್ದು, ಮತ್ತು ಹಲವು ಕಂಪನಿಗಳು ಈ ನಿಟ್ಟಿನಲ್ಲಿ ನಿರ್ಧಾರ ಇನ್ನೊಂದು ತಿಂಗಳಿನಲ್ಲಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದೆ.

ಬಿ.ಎಸ್ IV ಕಂಪ್ಲೈಂಟ್ ಎಂಜಿನ್ ಬಗ್ಗೆ ತಿಳಿದುಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ ಬಿಎಸ್ IV

Click to compare, buy, and renew Car Insurance online

Buy InsuranceBuy Now

Read more on ಹೋಂಡಾ honda
English summary
Honda Motorcycle & Scooter India (HMSI) will only manufacture BS-IV compliant two-wheelers in India from March 1, 2017.
Please Wait while comments are loading...

Latest Photos