15 ಲಕ್ಷ ರೂಪಾಯಿ ಬೆಲೆ ಬಾಳುವ ಈ ಬೈಕಿನಲ್ಲಿ ಏನಿರ್ಬಹುದು?

Written By:

ಜಪಾನ್ ಮೂಲದ ಪ್ರತಿಷ್ಠಿತ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಕವಾಸಕಿ ತನ್ನ ಹೊಸ ಆವೃತ್ತಿ ಝಡ್1000 ಹಾಗೂ ಝಡ್1000ಆರ್ ಬೈಕ್ ಬಿಡುಗಡೆಗೊಳಿಸಿದ್ದು, ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಮಿಂಚುತ್ತಿವೆ.

ಹೊಸ ಬೈಕ್‌ಗಳ ಬೆಲೆ
ದೆಹಲಿ ಎಕ್ಸ್‌ಶೋರಂ ಪ್ರಕಾರ ಝಡ್1000 ಬೆಲೆ ರೂ.14.49ಲಕ್ಷ ಹಾಗೂ ಝಡ್1000ಆರ್ ಬೆಲೆ ರೂ.15.49ಲಕ್ಷಕ್ಕೆ ಲಭ್ಯವಿವೆ.

ಎಂಜಿನ್ ಸಾಮರ್ಥ್ಯ
1,043 ಸಿಸಿ ಸಾಮರ್ಥ್ಯ ಎಂಜಿನ್ ಹೊಂದಿರುವ ಕವಾಸಕಿ ಝಡ್1000 ಆವೃತ್ತಿ ಬೈಕ್‌ಗಳು, 140ಬಿಎಚ್‌ಪಿ, 1000ಆರ್‌ಪಿಎಂ ಮತ್ತು 111ಎಂಎನ್ ಟಾರ್ಕ್ ಉತ್ಪಾದಿಸುತ್ತವೆ.

ECU ಸೌಲಭ್ಯ
ದುಬಾರಿ ಬೆಲೆಯ ಕವಾಸಕಿ ಝಡ್1000 ಮತ್ತು ಝಡ್1000ಆರ್ ಬೈಕಿನಲ್ಲಿ ಎಂಜಿನ್ ಕಂಟ್ರೋಲ್ ಯುನಿಟ್ ಸೌಲಭ್ಯ ಹೊಂದಿದ್ದು, ಇದು ಬೈಕಿನ ಮೇಲೆ ನಿಯಂತ್ರಣ ಸಾಧಿಸುವ ಒಂದು ಉಪಕರಣವಾಗಿದೆ.

ಗೇರ್‌ಬಾಕ್ಸ್ ವ್ಯವಸ್ಥೆ
ಝಡ್1000 ಮತ್ತು ಝಡ್1000ಆರ್ ಎರಡು ಮಾದರಿಗಳು 6-ಗೇರ್‌ಬಾಕ್ಸ್ ವ್ಯವಸ್ಥೆ ಹೊಂದಿದ್ದು, ಹಿಂಬದಿಯ ಚಕ್ರಕ್ಕೆ ಎಂಜಿನ್ ಸಾಮರ್ಥ್ಯ ಸಾಗಿಸುವ ಅದ್ಭುತ ರಹದಾರಿ ಹೊಂದಿದೆ.

ಬಿಎಸ್-4 ಮತ್ತು ಯುರೋ 4
ಹೌದು.. ಹೊಸ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಹೊಂದಿರುವ ಕವಾಸಕಿ ಝಡ್1000 ಹಾಗೂ ಝಡ್ 1000ಆರ್ ಬೈಕ್‌ಗಳು ಬಿಎಸ್-4 ಎಂಜಿನ್ ಅಲ್ಲದೇ ಯುರೋ-4 ಎಂಜಿನ್ ವ್ಯವಸ್ಥೆ ಕೂಡಾ ಅಳವಡಿಕೆ ಇದೆ.

ವಿಶೇಷ ಹೊರ ವಿನ್ಯಾಸ
ದೂರದ ಪ್ರಯಾಣಕ್ಕೆ ಅನುಗುಣವಾಗಿ ಸೀಟ್‌ಗಳ ವಿನ್ಯಾಸವನ್ನು ಅಂತರ್‌ರಾಷ್ಟ್ರೀಯ ದರ್ಜೆಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ.

ಸುಧಾರಿತ ಬ್ರೇಕ್ ವ್ಯವಸ್ಥೆ
ಸೂಪರ್ ಬೈಕ್‌ಗಳಲ್ಲಿ ಒಂದಾಗಿರುವ ಕವಾಸಕಿಯ ಝಡ್ ಮಾದರಿಗಳಲ್ಲಿ ಸುಧಾರಿತ ಬ್ರೇಕ್ ವ್ಯವಸ್ಥೆಗಳಿದ್ದು, ಅತಿವೇಗದ ಬೈಕ್ ಪ್ರಯಾಣದಲ್ಲೂ ನಿಮಗೆ ಬೇಕೆಂದ ರೀತಿ ಹಿಡಿತ ಸಾಧಿಸಬಹುದಾಗಿದೆ.

ಇಂಡಿಕೇಟರ್ ವಿನ್ಯಾಸ
ಝಡ್ ಬೈಕ್ ಆವೃತ್ತಿಗಳಲ್ಲಿ ವಿನೂತನ ರೀತಿಯ ಹಿಂಬದಿ ಇಂಡಿಕೇಟರ್‌ಗಳನ್ನು ವಿಶೇಷವಾಗಿ ಅಭಿವೃದ್ಧಿಗೊಳಿಸಲಾಗಿದ್ದು, 5-ವೇ ಹೊಂದಾಣಿಕೆ ಕ್ಲಚ್ ಲಿವರ್ ಇದೆ. ಈ ತಂತ್ರಜ್ಞಾನವು ಸವಾರರಿಗೆ ಗೇರ್ ಬದಲಿಸುವ ಸಲಹೆ ನೀಡುತ್ತದೆ.

ಗಮನಸೆಳೆಯುವ ಗ್ರಾಫಿಕ್ಸ್ ವಿನ್ಯಾಸ
ಬೆಲೆಗೆ ತಕ್ಕಂತೆ ಹೊಸ ಬೈಕ್ ಮಾದರಿಗಳಲ್ಲಿ ಗ್ರಾಫಿಕ್ಸ್ ವಿನ್ಯಾಸವು ಅದ್ಭುತವಾಗಿದೆ. ಕವಾಸಕಿ ಝಡ್ ಮಾದರಿಗಳ ಗ್ರಾಫಿಕ್ಸ್ ವಿನ್ಯಾಸದ ಹಿಂದೆ ಅಂತರ್‌ರಾಷ್ಟ್ರೀಯ ತಜ್ಞರ ಕೈಚಳಕವಿದೆ.

ಯಾವ ಯಾವ ಬಣ್ಣದಲ್ಲಿ ಲಭ್ಯವಿದೆ?
ಪ್ರಮುಖ 2 ಬಣ್ಣಗಳಲ್ಲಿ ಲಭ್ಯವಿರುವ ಝಡ್1000 ಮಾದರಿಗಳು ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಹಾಗೂ ಗೊಲ್ಡ್‌ನ್ ಬ್ಲೇಜ್ಡ್ ಗ್ರೀನ್ ಬಣ್ಣಗಳು ಖರೀದಿಗೆ ಲಭ್ಯವಿವೆ.

ಒಟ್ಟಿನಲ್ಲಿ ದುಬಾರಿ ಬೈಕ್ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡಲು ಮುಂದಾಗಿರುವ ಕವಾಸಕಿಯು, ಕಡಿಮೆ ಬೆಲೆಗಳಲ್ಲಿ ಭಾರತೀಯ ಮಾರುಕಟ್ಟೆಗೆ ಝಡ್1000 ಮತ್ತು ಝಡ್1000ಆರ್ ಮಾದರಿಗಳನ್ನು ಪರಿಚಯಿಸಿದೆ.

Story first published: Wednesday, April 26, 2017, 14:35 [IST]
English summary
2017 Kawasaki Z1000 And Z1000 R Edition launched in India.
Please Wait while comments are loading...

Latest Photos