ಭಾರತೀಯರ ಮನಗೆದ್ದ ಹೋಂಡಾ ಆಕ್ಟಿವಾ- ಮಾರಾಟದಲ್ಲಿ ಹೊಸ ದಾಖಲೆ

2001ರಲ್ಲಿ ಮೊದಲ ಬಾರಿಗೆ ವಿನೂತನ ಸ್ಕೂಟರ್ ಬಿಡುಗಡೆ ಮಾಡಿದ್ದ ಹೋಂಡಾ ಸಂಸ್ಥೆಯು, ಆಕ್ಟಿವಾ ಸ್ಕೂಟರ್ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದೆ.

Written By:

ಸುಮಾರು 16 ವರ್ಷಗಳ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದ ಹೋಂಡಾ ಸಂಸ್ಥೆಯ ಆಕ್ಟಿವಾ ಸ್ಕೂಟರ್ ಮಾದರಿಯೂ ಇದುವರೆಗೆ 15 ಮಿಲಿಯನ್(150 ಲಕ್ಷ) ಯೂನಿಟ್‌ಗಳು ಮಾರಾಟಗೊಂಡಿವೆ.

ಜಪಾನ್ ಮೂಲದ ಪ್ರಮುಖ ಬೈಕ್ ಉತ್ಪಾದನಾ ಸಂಸ್ಥೆ ಹೋಂಡಾ, ತನ್ನ ಜನಪ್ರಿಯ ಆಕ್ಟಿವಾ ಸ್ಕೂಟರ್ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಇದುವರೆಗೆ 15 ಮಿಲಿಯನ್ ಸ್ಕೂಟರ್ ಮಾರಾಟ ಮಾಡಿ ದೇಶದ ನಂ.1 ದ್ವಿಚಕ್ರ ವಾಹನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

2016-17ರ ಪ್ರಸಕ್ತ ಆರ್ಥಿಕ ವರ್ಷದಲ್ಲಿ 27.59 ಲಕ್ಷ ಆಕ್ಟಿವಾ ಸ್ಕೂಟರ್‌ಗಳು ಮಾರಾಟವಾಗಿದ್ದು, ಸದ್ಯ ದ್ವಿಚಕ್ರ ವಾಹನಗಳ ಮಾರಾಟ ವಿಭಾಗದಲ್ಲಿ ಮುಂಚೂಣಿಯಲ್ಲಿದೆ.

15 ಮಿಲಿಯನ್ ಸ್ಕೂಟರ್ ಉತ್ಪಾದನೆ ಕುರಿತಂತೆ ಗುಜರಾತ್ ವಿತಾಲ್ಪುರ್ ಪ್ಲ್ಯಾಂಟ್‌ನಲ್ಲಿ ವಿಶೇಷ ಸಂಭ್ರಮಾಚರಣೆ ಆಚರಿಸಿದ ಹೋಂಡಾ ಸಂಸ್ಥೆಯು, ವಾರ್ಷಿಕವಾಗಿ 1.2 ಮಿಲಿಯನ್ ಸ್ಕೂಟರ್ ಉತ್ಪಾದನೆ ಗುರಿ ತಲುಪಿದೆ.

ಕಳೆದ 7 ವರ್ಷಗಳ ಅವಧಿಯಲ್ಲಿ ಹೋಂಡಾ ಆಕ್ಟಿವಾ ಮಾರಾಟ ಪ್ರಮಾಣ ದ್ಪಿಗುಣಗೊಂಡಿದ್ದು, 2009-10 ಆರ್ಥಿಕ ವರ್ಷದಲ್ಲಿ ಶೇ.32ರಷ್ಟು ಹಾಗೂ 2016-17ರ ಆರ್ಥಿಕ ವರ್ಷದಲ್ಲಿ ಶೇ.32ರಷ್ಟು ಹೆಚ್ಚಳ ಕಂಡಿದೆ.

2001ರಲ್ಲಿ ಪ್ರಥಮ ಬಾರಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ಸಂದರ್ಭದಲ್ಲಿ ವಾರ್ಷಿಕವಾಗಿ ಕೇವಲ 55 ಸಾವಿರ ಸ್ಕೂಟರ್ ಮಾರಾಟ ಮಾಡಿತ್ತು.

ಆದ್ರೆ ಇದೀಗ ಹೋಂಡಾ ಸಂಸ್ಥೆಯು, ಇಂದು ವಾರ್ಷಿಕವಾಗಿ 2.2 ಮಿಲಿಯನ್ ಸ್ಕೂಟರ್ ಮಾರಾಟ ಮಾಡುವ ಸಾಮರ್ಥ್ಯ ಹೊಂದಿದೆ.

ಸದ್ಯ ಭಾರತೀಯರ ನೆಚ್ಚಿನ ಸ್ಕೂಟರ್ ಎಂದೇ ಬಿಂಬಿತವಾಗಿರುವ ಹೋಂಡಾ ಸ್ಕೂಟರ್, ಮುಂಬರುವ ದಿನಗಳಲ್ಲಿ ಮತ್ತಷ್ಟು ಜನಪ್ರಿಯತೆ ಪಡೆಯುವ ತವಕದಲ್ಲಿದೆ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ

Click to compare, buy, and renew Car Insurance online

Buy InsuranceBuy Now

Read more on ಹೋಂಡಾ honda
English summary
Honda has sold over 15 million Activa's since its launch in 2001.
Please Wait while comments are loading...

Latest Photos