ಟಿವಿಎಸ್ ಜೆಸ್ಟ್ 110 ಸಿಸಿ ಬಿಎಸ್-IV ಸ್ಕೂಟರ್ ಭಾರತದಲ್ಲಿ ಬಿಡುಗಡೆ

Written By:

ಭಾರತದ ವಿಶ್ವಸಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿ ಟಿವಿಎಸ್ ಬಿಎಸ್-IV ಎಂಜಿನ್ ಹೊಂದಿರುವ ಸ್ಕೂಟಿ ಜೆಸ್ಟ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ ಮಾಡಿದೆ.

ಬಿಎಸ್-IV ಎಂಜಿನ್ ಹೊರತುಪಡಿಸಿದರೆ ಉಳಿದದ್ದೆಲ್ಲವೂ ಈ ಹಿಂದಿನ ಮಾದರಿಯಂತೆಯೇ ಇರಲಿದ್ದು, ಸಿ.ವಿ.ಟಿ ಸ್ವಯಂಚಾಲಿತ ಗೇರ್ ಬಾಕ್ಸ್ ಜೋಡಿಸಲಾಗಿದೆ.

ಈ ಹೊಚ್ಚ ಹೊಸ ಸ್ಕೂಟರ್ 110 ಸಿಸಿ ಎಂಜಿನ್ ಹೊಂದಿದ್ದು, 8.7 ತಿರುಗುಬಲದಲ್ಲಿ ಸರಿ ಸುಮಾರು 7.9 ಅಶ್ವಶಕ್ತಿ ಉತ್ಪಾದಿಸುವಷ್ಟು ಸಾಮರ್ಥ್ಯ ಪಡೆದುಕೊಂಡಿದೆ.

ಬಿಎಸ್-IV ಎಂಜಿನ್ ಹೊರತುಪಡಿಸಿದರೆ ಉಳಿದದ್ದೆಲ್ಲವೂ ಈ ಹಿಂದಿನ ಮಾದರಿಯಂತೆಯೇ ಇರಲಿದ್ದು, ಸಿ.ವಿ.ಟಿ ಸ್ವಯಂಚಾಲಿತ ಗೇರ್ ಬಾಕ್ಸ್ ಜೋಡಿಸಲಾಗಿದೆ.

ಹೊಸ ಬಿಎಸ್-IV ಎಂಜಿನ್ ಹೊಂದಿರುವ ಟಿವಿಎಸ್ ಸ್ಕೂಟಿ ಜೆಸ್ಟ್ ಸ್ಕೂಟರ್ ಲೀಟರಿಗೆ ಅತ್ಯುತ್ತಮ 62 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ಟಿವಿಎಸ್ ಸ್ಕೂಟಿ ಜೆಸ್ಟ್ 110ಸಿಸಿ ಸ್ಕೂಟರ್ ಮಟ್ಟೆ ಬ್ಲೂ, ಮಟ್ಟೆ ರೆಡ್, ಮಟ್ಟೆ ಹಳದಿ ಮತ್ತು ಮಟ್ಟೆ ಬ್ಲಾಕ್ ಎಂಬ ನಾಲ್ಕು ಹೊಸ ಮಟ್ಟೆ ಬಣ್ಣಗಳಲ್ಲಿ ಬಿಡುಗಡೆಗೊಂಡಿದೆ.

ಹೊಸ ಟಿವಿಎಸ್ ಸ್ಕೂಟಿ ದೇಶದಲ್ಲಿರುವ ಎಲ್ಲಾ ಟಿವಿಎಸ್ ಮೋಟಾರು ಕಂಪೆನಿ ವಿತರಕರಲ್ಲಿ ಲಭ್ಯವಿದ್ದು, ಗ್ರಾಹಕರು ತಮಗಿಷ್ಟವಾದ ಬಣ್ಣದ ಸ್ಕೂಟರ್ ಆರಿಸಬಹುದಾಗಿದೆ.

ಬಿಡುಗಡೆಗೊಂಡಿರುವ ಟಿವಿಎಸ್ ಸ್ಕೂಟಿ ಜೆಸ್ಟ್ 110 ಸಿಸಿ ಹೊಸ 3ಡಿ ಲೊಗೊ ಪಡೆದುಕೊಂಡಿದ್ದು, ಸೀಟ್ ಕೇಳಬದಿಯ ಸ್ಟೋರೇಜ್ ಸ್ಥಳದಲ್ಲಿ ಲೈಟ್ ಅಳವಡಿಕೆ ಮಾಡಲಾಗಿದೆ.

ಈ ಹೊಸ ಸ್ಕೂಟರ್ ಬೆಳ್ಳಿ ಬಣ್ಣದ ಓಕ್ ಆಂತರಿಕ ಪ್ಯಾನಲ್‌ಗಳನ್ನು ಪಡೆದುಕೊಂಡಿದೆ ಮತ್ತು ಡ್ಯುಯಲ್ ಟೋನ್ ಸೀಟ್ ಬಣ್ಣಗಳಂತಹ ನೂತನ ವೈಶಿಷ್ಟ್ಯಗಳನ್ನು ಹೊಂದಿದೆ.

ಬಿಎಸ್-IV ನಿಯಮಾವಳಿಗಳಿಗೆ ಅನುಸಾರವಾಗಿ, ಹೊಸ ಟಿವಿಎಸ್ ಸ್ಕೂಟಿ ಜೆಸ್ಟ್ ಹಗಲಿನ ಬೆಳಗುವ ದೀಪವನ್ನು (ಡಿಆರ್‌ಎಲ್) ಹೊಂದಿದೆ.

ಹೊಸ ಮ್ಯಾಟ್ಟೆ ಬಣ್ಣಗಳ ಜೊತೆಯಲ್ಲಿ ಟಿವಿಎಸ್ ಸ್ಕೂಟಿ ಜೆಸ್ಟ್, ಟರ್ಕೊಯಿಸ್ ಬ್ಲೂ, ಪರ್ಲ್ ಪೀಚ್, ಪವರ್‌ಫುಲ್ ಪಿಂಕ್ ಮತ್ತು ಸಿಟ್ರಸ್ ಕಿತ್ತಳೆ ಬಣ್ಣಗಳಲ್ಲಿ ಲಭ್ಯವಿದೆ.

Read more on ಟಿವಿಎಸ್ tvs
English summary
Read in Kannada about TVS Scooty Zest 110 CC BS-IV engine scooter launched in India. Know more about this vehicle's specifications, fetures and more
Please Wait while comments are loading...

Latest Photos