ತುಮಕೂರು ಹುಡುಗನ ಗ್ರಾಫಿಕ್ಸ್ ಮೋಡಿಗೆ ವೆಸ್ಪಾ ಕ್ಲೀನ್ ಬೌಲ್ಡ್!
ವಾಹನ ತಯಾರಕ ಸಂಸ್ಥೆಗಳು ವಿಶೇಷ ವಿನ್ಯಾಸಿತ ಸೀಮಿತ ಆವೃತ್ತಿಗಳನ್ನು ಮಾರುಕಟ್ಟೆಗೆ ಪರಿಚಯಿಸುವುದು ಸಾಮಾನ್ಯ ವಿಚಾರ. ಆದರೆ ವಾಹನ ಪ್ರೇಮಿಯೊಬ್ಬಾತನೇ ಇಂತಹದೊಂದು ಕೆಲಸಕ್ಕೆ ಮುಂದಾದರೆ ಹೇಗಿರಬಹುದು?
ನಿಮಗೆಲ್ಲರಿಗೂ ತಿಳಿದಿರುವ ಹಾಗೆಯೇ ವೆಸ್ಪಾ ದೇಶದ ಅತ್ಯಂತ ಜನಪ್ರಿಯ ಸ್ಕೂಟರ್ ಬ್ರಾಂಡ್. ಇಟಲಿ ಮೂಲದ ಪಿಯಾಜಿಯೊ ಒಡೆತನದಲ್ಲಿರುವ ವೆಸ್ಪಾ ಪ್ರೀಮಿಯಂ ಸ್ಕೂಟರುಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ. ಆದರೆ ತುಮಕೂರಿನ ಹುಡುಗ, ತನ್ನ ಪ್ರೀತಿಯ ವೆಸ್ಪಾ ಸುಂದರಿಗೆ ಇನ್ನಷ್ಟು ಅಂದತೆ ಕರುಣಿಸಿದ್ದಾನೆ. ಅದು ಹೇಗೆ ಅಂತೀರಾ? ಸಂಪೂರ್ಣ ಮಾಹಿತಿಗಳಿಗಾಗಿ ಫೋಟೊ ಸ್ಲೈಡರ್‌ನತ್ತ ಮುಂದುವರಿಯಿರಿ..

ಈ ಯುವ ಉತ್ಸಾಹಿ ವಾಹನ ಪ್ರೇಮಿಯ ಹೆಸರು ಪ್ರತೀಕ್ ಜೈನ್. ವಯಸ್ಸು 22ರ ಹರೆಯ. ಮೂಲತ: ತುಮಕೂರು ನಿವಾಸಿಯಾಗಿರುವ ಪ್ರತೀಕ್ ತಮ್ಮ ಅಭಿಲಾಷೆಯಂತೆ ವೆಸ್ಪಾಗೆ ನೂತನ ಲುಕ್ ಕಲ್ಪಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ದೇಶದಲ್ಲಿ ಲಭ್ಯವಿರುವ ವೆಸ್ಪಾದ ಜನಪ್ರಿಯ ಸ್ಕೂಟರ್‌ಗಳಲ್ಲಿ ಎಲ್‌ಎಕ್ಸ್ 125 ಸಿಸಿ ಒಂದಾಗಿದೆ. ಇದನ್ನು ಒಂದು ವರ್ಷದ ಹಿಂದೆ ಖರೀದಿಸಿದ್ದ ಪ್ರತೀಕ್, ಇದೀಗ ಸಂಪೂರ್ಣ ಹೊರ ನೋಟವನ್ನು ಬದಲಾಯಿಸಿಕೊಂಡಿದ್ದಾರೆ.

ಪ್ರತೀಕ್ ತಮ್ಮ ಮಾತುಗಳಲ್ಲೇ ವಿವರಿಸುವಂತೆಯೇ, ಇವೆಲ್ಲ ತಮ್ಮ ನೆಚ್ಚಿನ ಸ್ಕೂಟರ್ ಮೇಲಿನ ಪ್ರೀತಿಯಿಂದಾಗಿ ಇತರರಿಗಿಂತ ಇನ್ನಷ್ಟು ವಿಶಿಷ್ಟತೆ ಕಾಪಾಡುವ ನಿಟ್ಟಿನಲ್ಲಿ ಇಂತಹದೊಂದು ಕೆಲಸಕ್ಕೆ ಮುಂದಾಗಿದ್ದಾರೆ ಎಂದಿದ್ದಾರೆ.

ಇದಕ್ಕಾಗಿ ತುಮಕೂರಿನಿಂದ ನೇರವಾಗಿ ಬೆಂಗಳೂರು ಬಂದಿರುವ ಪ್ರತೀಕ್, ತಮ್ಮ ಗಾಡಿಗೆ ರಾರಾಜಿನಗರದಲ್ಲಿ ಸಂಪೂರ್ಣ ಗ್ರಾಫಿಕಲ್ ರೆಡಿಮೇಡ್ ಸ್ಟಿಕ್ಕರ್ ಲಗತ್ತಿಸಿಕೊಂಡಿದ್ದಾರೆ. ಇದು ವಿಶೇಷ ರೀತಿಯ ಗ್ರಾಫಿಕ್ಸ್ ಲೊಗೊ ಆಗಿದ್ದು ಹೈಟೆಕ್ ಮೊನೆಸ್ಟರ್ ಮುಂತಾದ ಸ್ಟಿಕ್ಕರುಗಳನ್ನು ಒಳಗೊಂಡಿದೆ.

ಕೇವಲ ಎರಡರಿಂದ ಮೂರು ತಾಸಿನೊಳಗೆ ಗ್ರಾಫಿಕ್ಸ್ ಸ್ಟಿಕ್ಕರ್ ಮೋಡಿಫಿಕೇಷನ್ ಕೆಲಸ ಪೂರ್ಣಗೊಂಡಿತ್ತು ಅನ್ನುತ್ತಿದ್ದಾರೆ ಪ್ರತೀಕ್. ಅಲ್ಲದೆ ಪ್ರತೀಕ್ ಅಂದಾಜು ಮಾಡಿರುವ ಬಜೆಟ್‌ನೊಳಗೆಯೇ ಸ್ಕೂಟರ್ ಸಿದ್ಧಗೊಂಡಿದೆ.

ಇಲ್ಲೊಂದು ವಿಶೇಷ ಸಂಗತಿ ಏನೆಂದರೆ ಪ್ರತೀಕ್ ಅವರ ವೆಸ್ಪಾ ಸ್ಕೂಟರ್ '786' ಎಂಬ ಫ್ಯಾನ್ಸಿ ನಂಬರನ್ನು ತನ್ನದಾಗಿಸಿಕೊಂಡಿದೆ. ಇದು ವೆಸ್ಪಾವನ್ನು ಇನ್ನಷ್ಟು ಅಂದವಾಗಿಸಿದೆ.

786 ಮುಸ್ಲಿಂ ಧರ್ಮದವರ ಪವಿತ್ರ ಸಂಖ್ಯೆ. ಅಲ್ಲದೆ ಜೈನ್ ಆಗಿದ್ದರೂ ಈ ಅದೃಷ್ಟ ಸಂಖ್ಯೆಯನ್ನು ಮನಸಾರೆ ಸ್ವೀಕರಿಸಿಕೊಂಡಿದ್ದಾರೆ. ಇದನ್ನು ಪಡೆಯುವುದಕ್ಕಾಗಿ ಹೆಚ್ಚುವರಿ ದುಡ್ಡೇನು ಕಟ್ಟಿಲ್ಲ ಎಂಬುದು ವಿಶೇಷ.

ಒಟ್ಟಿನಲ್ಲಿ ಪ್ರತೀಕ್ ಜೈನ್ ಅವರ ವೆಸ್ಪಾ ಸ್ಕೂಟರಿನ ವಿಶೇಷ ಗ್ರಾಫಿಕ್ಸ್ ಡಿಸೈನ್ ನಿಮಗೆ ಇಷ್ಟವಾಯಿತೇ? ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.


Click it and Unblock the Notifications