ದೆಹಲಿ ಆಟೋ ಎಕ್ಸ್ ಪೋ - ಒಂದು ಪಕ್ಷಿನೋಟ

Written By:

ಜಗತ್ತಿನ ಅತಿದೊಡ್ಡ ವಾಹನ ಕೈಗಾರಿಕಾ ದೇಶಗಳಲ್ಲಿ ಒಂದಾಗಿರುವ ಭಾರತದಲ್ಲಿ ವಾಹನ ಉದ್ದಿಮೆಗೆ ಅತ್ಯಂತ ಹೆಚ್ಚು ಪ್ರಾಮುಖ್ಯತೆಯಿದೆ. ವಿಶ್ವದಲ್ಲಿ ಅತಿ ವೇಗದಲ್ಲಿ ಬೆಳೆಯುತ್ತಿರುವ ವಾಹನೋದ್ಯಮಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಭಾರತ ಕೂಡಾ ಜಾಗತಿಕ ಮಟ್ಟದಲ್ಲಿ ಗಮನ ಕೇಂದ್ರಿತವಾಗಿದೆ. ನಿಮ್ಮ ಮಾಹಿತಿಗಾಗಿ, ದೇಶದ ಪ್ರಯಾಣಿಕ ಹಾಗೂ ವಾಣಿಜ್ಯ ವಿಭಾಗದ ವಾಹನ ನಿರ್ಮಾಣ ಉದ್ಯಮವು ಜಗತ್ತಿನಲ್ಲೇ ಆರನೇ ಸ್ಥಾನದಲ್ಲಿದೆ. ಇಲ್ಲಿ ವರ್ಷಂಪ್ರತಿ 3.9 ಮಿಲಿಯನ್‌ಗಿಂತಲೂ ಹೆಚ್ಚು ವಾಹನಗಳು ತಯಾರಿಯಾಗುತ್ತಿದೆ.

ದಿಲ್ಲಿಯಲ್ಲಿ ಕಾರುಗಳ ಹಬ್ಬ; ನಿಮ್ಮ ನಿರೀಕ್ಷೆ ಏನು?

ಇಂತಹ ಆಗಾಧ ವಾಹನ ಮಾರುಕಟ್ಟೆ ಹೊಂದಿರುವ ದೇಶದಲ್ಲಿ ಎರಡು ವರ್ಷಕ್ಕೊಮ್ಮೆ ವಾಹನ ಮೇಳ (ಆಟೋ ಶೋ) ಹಮ್ಮಿಕೊಳ್ಳಲಾಗುತ್ತದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವುದರಿಂದ 'ದೆಹಲಿ ಆಟೋ ಎಕ್ಸ್ ಪೋ' ಎಂದೇ ಪ್ರಖ್ಯಾತಿ ಪಡೆದಿರುವ 'ಇಂಡಿಯಾ ಆಟೋ ಎಕ್ಸ್ ಪೋ' ಪ್ರಸ್ತುತ ಏಷ್ಯಾದ ಅತಿದೊಡ್ಡ ಹಾಗೂ ವಿಶ್ವದ ಎರಡನೇ ಅತಿದೊಡ್ಡ ಮೋಟಾರು ಶೋವೆಂಬ ಖ್ಯಾತಿಯನ್ನು ಪಡೆದಿದೆ. ಸಾಮಾನ್ಯವಾಗಿ ಪ್ರಗತಿ ಮೈದಾನದಲ್ಲಿ ನಡೆಯಲಿರುವ ಈ ವಾಹನ ಮೇಳವನ್ನು ಆಟೋಮೋಟಿವ್ ಕಾಂಪೊನೆಂಟ್ ಮ್ಯಾನುಫಾಕ್ಚರ್ಸ್ ಆಸೋಸಿಯೇಷನ್ (ಎಸಿಎಂಎ), ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಮತ್ತು ಸೊಸೈಟಿ ಆಫ್ ಆಟೋಮೊಬೈಲ್ ಮ್ಯಾನುಫಾಕ್ಚರ್ಸ್ (ಸಿಯಾಮ್) ಜಂಟಿಯಾಗಿ ಆಯೋಜಿಸುತ್ತಿದೆ. ದೆಹಲಿ ಆಟೋ ಎಕ್ಸ್ ಪೋ ಇತಿಹಾಸದತ್ತ ಮೆಲುಕು ನೋಟ..ಮುಂದೆ ಓದಿರಿ...

ಉದಯ
  

ಉದಯ

1985ನೇ ಇಸವಿಯಲ್ಲೇ ಗರ್ಭಧರಿಸಿದ ಇಂಡಿಯಾ ಎಕ್ಸ್ ಪೋದ ಮೊದಲ ಅವತರಣಿಕೆಯು 1986ನೇ ಇಸವಿಯಲ್ಲಿ ನಡೆದಿತ್ತು. ಇದು ಪ್ರಮುಖವಾಗಿಯೂ ಭಾರತೀಯ ವಾಹನ ಉದ್ಯಮ ಹೊಸ ತಂತ್ರಜ್ಞಾನಗಳನ್ನು ಹೇಗೆ ಹೀರಿಕೊಳ್ಳುತ್ತದೆ ಹಾಗೂ ದೇಶ ಅಧ್ಯಯನ ಹಾಗೂ ಅಭಿವೃದ್ಧಿಯನ್ನು ಹೇಗೆ ಪ್ರೋತ್ಸಾಹಿಸುತ್ತದೆ ಮತ್ತು ಭಾರತೀಯ ಪರಿಸ್ಥಿತಿಯಲ್ಲಿ ತಂತ್ರಜ್ಞಾನಗಳನ್ನು ಹೇಗೆ ಗ್ರಹಿಸಿಕೊಳ್ಳುತ್ತದೆ ಎಂಬುದರ ಕುರಿತಾಗಿತ್ತು. ದೇಶದ ಚೊಚ್ಚಲ ಆಟೋ ಶೋದಲ್ಲಿ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಪ್ರಮುಖ ಆಕರ್ಷಣೆಯಾಗಿದ್ದರು.

2000ನೇ ಇಸವಿಯಲ್ಲಿ 5ನೇ ಆಟೋ ಶೋ
  

2000ನೇ ಇಸವಿಯಲ್ಲಿ 5ನೇ ಆಟೋ ಶೋ

2000ನೇ ಇಸವಿಯಲ್ಲಿ ನಡೆದ ಐದನೇ ಆಟೋ ಶೋದಲ್ಲಿ ಒಟ್ಟು 25 ಹೊಸ ಮಾದರಿಗಳು ಲಾಂಚ್ ಆಗಿದ್ದವು. ಅಲ್ಲದೆ ಜಗತ್ತಿನ 20 ದೇಶಗಳು ಭಾಗವಹಿಸಿರುವುದು ಪ್ರಮುಖವಾಗಿತ್ತು.

 ನ್ಯಾನೋಗೆ ದಾರಿ ತೋರಿಸಿಕೊಟ್ಟ 9ನೇ ಆಟೋ ಎಕ್ಸ್ ಪೋ
  

ನ್ಯಾನೋಗೆ ದಾರಿ ತೋರಿಸಿಕೊಟ್ಟ 9ನೇ ಆಟೋ ಎಕ್ಸ್ ಪೋ

2008ನೇ ಇಸವಿಯಲ್ಲಿ ನಡೆದ 9ನೇ ಆಟೋ ಎಕ್ಸ್ ಪೋದಲ್ಲಿ ಬಹುನಿರೀಕ್ಷಿತ ವಿಶ್ವದ ಅಗ್ಗದ ಕಾರು ಟಾಟಾ ನ್ಯಾನೋ ಲಾಂಚ್ ಆಗಿತ್ತು. 1.8 ದಶಲಕ್ಷ ಮಂದಿ ಸಾಕ್ಷಿಯಾದ ಈ ಮೇಳದಲ್ಲಿ 65 ತಯಾರಕ ಹಾಗೂ 1900ರಷ್ಟು ಬಿಡಿಭಾಗ ತಯಾರಕ ಸಂಸ್ಥೆಗಳು ಭಾಗವಹಿಸಿದ್ದವು.

2010ರಲ್ಲಿ ರಜತ ಸಂಭ್ರಮ
  

2010ರಲ್ಲಿ ರಜತ ಸಂಭ್ರಮ

ಇಂಡಿಯಾ ಆಟೋ ಎಕ್ಸ್ ಪೋದ ರಜತ ಮಹೋತ್ಸವವು 2010ರಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ 72 ನೂತನ ಉತ್ಪನ್ನಗಳು ಲಾಂಚ್ ಆಗಿದ್ದವು. ಈ ಪೈಕಿ 10 ಮಾದರಿಗಳು ಜಾಗತಿಕ ಲಾಂಚ್ ಕಂಡಿದ್ದವು. ಅಲ್ಲದೆ ಅನೇಕ ನೂತನ ದ್ವಿಚಕ್ರ ವಾಹನಗಳು ಎಂಟ್ರಿ ಕೊಟ್ಟಿರುವುದು ವಿಶೇಷವೆನಿಸಿತ್ತು.

2012ರಲ್ಲಿ 11ನೇ ಆಟೋ ಎಕ್ಸ್ ಪೋ
  

2012ರಲ್ಲಿ 11ನೇ ಆಟೋ ಎಕ್ಸ್ ಪೋ

ಕೊನೆಯ ಬಾರಿ ನಡೆದ 11ನೇ ಆಟೋ ಎಕ್ಸ್ ಪೋದ ಮೊದಲರೆರಡು ದಿನಗಳು ಮಾಧ್ಯಮ ಮಿತ್ರರು ಹಾಗೂ ವಿಶೇಷ ಆತಿಥಿಗಳಿಗೆ ಮಾತ್ರ ಮೀಸಲಾಗಿತ್ತು. ದೇಶದ ಅತಿದೊಡ್ಡ ವಾಹನ ಮೇಳದಲ್ಲಿ 23 ದೇಶಗಳ 1500ರಷ್ಟು ಸ್ಪರ್ಧಾಳುಗಳು ಭಾಗವಹಿಸಿದ್ದವು. ಅಷ್ಟೇ ಅಲ್ಲದೆ ಇದೇ ಮೊದಲ ಬಾರಿಗೆ ಫೆರಾರಿ ಹಾಗೂ ಪಿಯಾಜಿಯೊಗಳಂತ ದೈತ್ಯ ಸಂಸ್ಥೆಗಳು ಇದೇ ಮೊದಲ ಬಾರಿಗೆ ಭಾರತಕ್ಕಾಗಿನ ತನ್ನ ಉತ್ಪನ್ನಗಳನ್ನು ಪ್ರದರ್ಶಿಸಿದ್ದವು. 11ನೇ ಆಟೋ ಎಕ್ಸ್‌ ಪೋದಲ್ಲಿ 10 ಜಾಗತಿಕ ಲಾಂಚ್, 20 ಟು ವೀಲರ್ ಲಾಂಚ್ ಮತ್ತು 50ರಷ್ಟು ಹೊಸ ಕಾರು ಲಾಂಚ್ ಆಗಿದ್ದವು.

12ನೇ ಆಟೋ ಎಕ್ಸ್ ಪೋ
  

12ನೇ ಆಟೋ ಎಕ್ಸ್ ಪೋ

ಈ ಬಾರಿಯ ಆಟೋ ಎಕ್ಸ್‌ಪೋವನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಅಂದರೆ ಕಾಂಪೊನೆಟ್ ಎಕ್ಸ್ ಪೋ ಪ್ರಗತಿ ಮೈದಾನದಲ್ಲಿ ಫೆಬ್ರವರಿ 6ರಿಂದ 9ರ ವರೆಗೆ ನಡೆಯಲಿದೆ. ಬಳಿಕ ಗ್ರೇಟರ್ ನೋಯ್ಡಾ, ಇಂಡಿಯಾ ಎಕ್ಸ್ ಪೋ ಮಾರ್ಟ್ ಮತ್ತು ದೆಹಲಿ ಎನ್‌ಸಿಆರ್‌ನಲ್ಲಿ ಮೋಟಾರು ಶೋ ಫೆಬ್ರವರಿ 7ರಿಂದ 11ರ ವರೆಗೆ ನಡೆಯಲಿದೆ. ಬರ ಬರುತ್ತಾ ಸೆಲೆಬ್ರಿಟಿಗಳು ಹಾಗೂ ಉದ್ಯಮ ಪ್ರಮುಖರು ದೆಹಲಿ ಆಟೋ ಎಕ್ಸ್ ಪೋದ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಜನಪ್ರಿಯ ಸಂಸ್ಥೆಗಳು
  

ಜನಪ್ರಿಯ ಸಂಸ್ಥೆಗಳು

ಇಲ್ಲಿ ಅಶೋಕ್ ಲೇಲ್ಯಾಂಡ್ , ಆಡಿ, ಬಜಾಜ್, ಬಿಎಂಡಬ್ಲ್ಯು, ಷೆವರ್ಲೆ, ದಟ್ಸನ್, ಡಿಎಸ್‌ಕೆ ಹ್ಯೊಸಂಗ್, ಐಚರ್, ಫಿಯೆಟ್, ಫೋರ್ಡ್, ಹರ್ಲಿ ಡೇವಿಡ್ಸನ್, ಹೀರೊ ಮೊಟೊಕಾರ್ಪ್, ಹೋಂಡಾ, ಹ್ಯುಂಡೈ, ಇಸುಝು, ಜಾಗ್ವಾರ್ ಲ್ಯಾಂಡ್ ರೋವರ್, ಜೀಪ್, ಲೊಹಿಯಾ, ಮಹೀಂದ್ರ, ಮಾರುತಿ ಸುಜುಕಿ, ಮರ್ಸಿಡಿಸ್ ಬೆಂಝ್, ಮಿನಿ, ನಿಸ್ಸಾನ್, ಪಿಯಾಜಿಯೊ, ರೆನೊ, ಸ್ಕಾನಿಯಾ, ಸ್ಕೋಡಾ, ಸುಜುಕಿ, ಟಾಟಾ ಮೋಟಾರ್ಸ್, ಟೊಯೊಟಾ, ಟ್ರಯಂಪ್, ಟಿವಿಎಸ್, ಫೋಕ್ಸ್‌ವ್ಯಾಗನ್, ಯಮಹಾ ಸೇರಿದಂತೆ ಜಗತ್ತಿನ ಪ್ರಖ್ಯಾತ ಸಂಸ್ಥೆಗಳು ತನ್ನ ನೂತನ ನಿರ್ಮಾಣ ಸಿದ್ಧ, ಕಾನ್ಸೆಪ್ಟ್ ಮತ್ತು ತಂತ್ರಜ್ಞಾನಗಳೊಂದಿಗೆ ಮುಂದೆ ಬರಲಿದೆ.

 ಸಾಗರೋತ್ತರ ರಾಷ್ಟ್ರಗಳ ಭಾಗವಹಿಸುವಿಕೆ
  

ಸಾಗರೋತ್ತರ ರಾಷ್ಟ್ರಗಳ ಭಾಗವಹಿಸುವಿಕೆ

ವರ್ಷ - ರಾಷ್ಟ್ರಗಳ ಸಂಖ್ಯೆ

  • 1986- ದೇಶಿಯ ಶೋ
  • 1993 - 7
  • 1996 - 15
  • 1998 - 11
  • 2000 - 19
  • 2002 - 19
  • 2004 - 24
  • 2006 - 26
  • 2008 - 29
  • 2010 - 30

ಹೆಚ್ಚಿನ ಮಾಹಿತಿಗಳಿಗಾಗಿ ಭೇಟಿ ಕೊಡಿ ಆಟೋ ಎಕ್ಸ್ ಪೋ ಅಧಿಕೃತ ವೆಬ್ ಸೈಟ್ http://www.autoexpo.in/

 

Please Wait while comments are loading...

Latest Photos