ಕಪ್ಪು ಸುಂದರಿಯ ಕ್ರೇಝ್ ನಿಮಗಿದೆಯಾ?

ಫ್ರೆಂಚ್ ಕಾರು ತಯಾರಕರಾದ ಪಿಯೋಜೊ ತನ್ನ 200ನೇ ವಾರ್ಷಿಕೋತ್ಸವ ಆಚರಿಸಲು ಪಿಯೊಜೊ EX1 ಎಂಬ ಸ್ಪೆಷಲ್ ಕಾರೊಂದನ್ನು ಸಿದ್ಧಪಡಿಸಿದ್ದು, ಈ ಕಾರು ಇಡೀ ವಿಶ್ವದ ಗಮನವನ್ನು ಸೆಳೆಯುತ್ತಿದೆ.
ಈ ಪಿಯೊಜೊ EX1 ಕಾರು ಪೂರ್ಣ ಎಲೆಕ್ಟ್ರಿಕ್ ಕಾರಾಗಿದ್ದು, ವಿಂಟೇಜ್ ರೇಸ್ ಕಾರ್ ನಂತೆ ಅತ್ಯುನ್ನತ ವಿನ್ಯಾಸವನ್ನು ಕಾರಿಗೆ ನೀಡಲಾಗಿದೆ. ಕಾರು ತಯಾರಿಕೆಯ ಇತಿಹಾಸದ ಮೈಲುಗಲ್ಲನ್ನು ಬಿಡಿಸಿಡುವಂತಿದೆ ಈ ಕಾರಿನ ಆಕರ್ಷಣೆ.
ವಾಹನ ಪ್ರಪಂಚ ಎಲ್ಲಿಂದೆಲ್ಲಿಗೆ ಅಭಿವೃದ್ಧಿ ಹೊಂದಿದೆ ಎಂಬುದನ್ನು ತಿಳಿಸುವ ಉದ್ದೇಶದಿಂದ ಈ ಕಾರು ತಯಾರುಗೊಂಡಿದೆ. ಇದ್ದಿಲಿನ ಬೆಂಬಲಿತವಾಗಿದ್ದ ಕಾರು ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕಾರಾಗಿರುವ ಬೆಳವಣಿಗೆ ಹಂತವನ್ನು ಇದು ನಿರೂಪಿಸುತ್ತದೆ.
ಪಿಯೊಜೊ EX1 ಕಾರನ್ನು ಹಗುರವಾಗಿ ತಯಾರಿಸಲಾಗಿದೆ. ಅತ್ಯುತ್ತಮ ಕಾರ್ಯ ಕ್ಷಮತೆ ಹೊಂದಿರುವ ಈ ಕಾರು ಗಂಟೆಗೆ 161 ಮೈಲಿನ ಗರಿಷ್ಠ ವೇಗ ಹೊಂದಿದ್ದು, 2.24 ಸೆಕೆಂಡ್ ಗೆ 100ಕಿ.ಮೀ ವೇಗಕ್ಕೆ ಏರುವ ಸಾಮರ್ಥ್ಯ ಪಡೆದುಕೊಂಡಿದೆ.
ಅಷ್ಟೇ ಅಲ್ಲ, ಮುಂದೆ ನಡೆಯಲಿರುವ ದೆಹಲಿ ವಾಹನ ಪ್ರದರ್ಶನದಲ್ಲಿ ಪಿಯೊಜೊ ತನ್ನ ಕಾರುಗಳನ್ನು ಪ್ರದರ್ಶನಗೊಳಿಸಲಿದೆ. ಆದರೆ ಪಿಯೊಜೊದ ಯಾವ ಕಾರುಗಳು ಭಾರತಕ್ಕೆ ಕಾಲಿಡಲಿವೆ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಈ ಪಿಯೊಜೊ EX1 ಕಾರು ಭಾರತಕ್ಕೆ ಯಾವಾಗ ದರ್ಶನ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.


Click it and Unblock the Notifications








