ನೂತನ ಹೋಂಡಾ ಸಿಟಿ ದೇಶದ ರಸ್ತೆಗೆ, ದರ ಕಡಿಮೆ!!

ಬಹುನಿರೀಕ್ಷಿತ ನೂತನ ಹೋಂಡಾ ಸಿಟಿ ಆವೃತ್ತಿಯನ್ನು ಹೋಂಡಾ ಸಿಯೆಲ್ ಕಾರ್ಸ್ ಇಂಡಿಯಾ ಇಂದು ಅನಾವರಣ ಮಾಡಿದೆ. ಹಳೆಯ ಇ, ಎಸ್ ಮತ್ತು ವಿ ಆವೃತ್ತಿ ಮಾತ್ರವಲ್ಲದೇ ಹೆಚ್ಚುವರಿಯಾಗಿ ಸಿಟಿ "ಕಾರ್ಪೊರೆಟ್" ಆವೃತ್ತಿಯನ್ನೂ ಕಂಪನಿ ಪರಿಚಯಿಸಿದೆ.

ನೂತನ ಕಾರಿನ ದರ: ನೂತನ ಹೋಂಡಾ ಸಿಟಿ ಕಾರ್ಪೊರೆಟ್ ದರ ಸುಮಾರು 6.99 ಲಕ್ಷ ರು. ಹೋಂಡಾ ಸಿಟಿ ಇ ಆವೃತ್ತಿ ದರ 7.70 ಲಕ್ಷ ರು, ಎಸ್ ಆವೃತ್ತಿಗೆ 8.20 ಲಕ್ಷ ರು, ವಿ-ಮ್ಯಾನುಯಲ್ ಟ್ರಾನ್ಷ್ ಮಿಷನ್ ಆವೃತ್ತಿಗೆ 8.70 ಲಕ್ಷ ರು. ಮತ್ತು ವಿ ಆಟೋಮ್ಯಾಟಿಕ್ ಆವೃತ್ತಿಗೆ 9.42 ಲಕ್ಷ ರು.

ಇದರೊಂದಿಗೆ ಕಂಪನಿಯು ಎಲೆಕ್ಟ್ರಿಕ್ ಸನ್ ರೂಫ್ ಅಳವಡಿಸಿರುವ ಸಿಟಿ ವಿ ಆವೃತ್ತಿಯನ್ನು ಪರಿಚಯಿಸಿದೆ. ಇದರಲ್ಲಿ ವಿ ಮ್ಯಾನುಯಲ್ ಗೇರ್ ಕಾರಿಗೆ 9.50 ಲಕ್ಷ ರು ಮತ್ತು ವಿ ಆಟೋಮ್ಯಾಟಿಕ್ ಆವೃತ್ತಿಗೆ 10.22 ಲಕ್ಷ ರುಪಾಯಿ ಆಗಿದೆ. ಇವೆಲ್ಲ ದೆಹಲಿ ಎಕ್ಸ್ ಶೋರೂಂ ದರ.

ಹೊಸತು ಏನಿದೆ?: ಮುಂಭಾಗದ ಗ್ರಿಲ್, ಬಂಪರ್, ಹಿಂಭಾಗದ ಮಿಣುಕು ದೀಪ ಅಥವಾ ಟೇಲ್ ಲ್ಯಾಂಪ್ ಮತ್ತು ಹಿಂಭಾಗದ ಬಂಪರ್ ಮರುವಿನ್ಯಾಸ ಮಾಡಲಾಗಿದೆ. ಹೊಸದಾಗಿ ವಿನ್ಯಾಸ ಮಾಡಿರುವ 10 ಸ್ಪೋಕ್ ಅಲಾಯ್ ವೀಲ್ಹ್ ಕೂಡ ಇಷ್ಟವಾಗುತ್ತದೆ. ಇದು ಹೋಂಡಾ ಅಕಾರ್ಡ್ ಕಾರಿನ ವೀಲ್ಹ್ ನಂತೆ ಇದೆ.

ಟರ್ನ್ ಇಂಡಿಕೇಟರ್ ಮತ್ತು ಹೊರಭಾಗದ ಮಿರರ್ ಆಕರ್ಷಕವಾಗಿದೆ. ಇಂಟಿರಿಯರ್ ಕೂಡ ಹೊಸ ವಿನ್ಯಾಸದಿಂದ ಇಷ್ಟವಾಗುವಂತ್ತಿದೆ. ಫ್ಯಾಬ್ರಿಕ್ ಸೀಟು ಮತ್ತು ಬ್ಲೂ ಮೀಟರ್ ಗ್ರಾಫಿಕ್ಸ್ ಕಾರಿನ ಅಂದವನ್ನು ಹೆಚ್ಚಿಸಿದೆ. ಡ್ಯಾಷ್ ಬೋರ್ಡ್ ವಿನ್ಯಾಸ ಕೊಂಚ ಬದಲಾಗಿದೆ. ಕ್ರೂಷ್ ಕಂಟ್ರೋಲ್ ಫೀಚರು ಅಳವಡಿಸಲಾಗಿದೆ.

ನೂತನ ಆರನೇ ತಲೆಮಾರಿನ ಸಿಟಿ 1.5 ಲೀಟರು, 4 ಸಿಲಿಂಡರಿನ ವಿಟೆಕ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 118.4 ಪಿಎಸ್ ಮತ್ತು 145 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಈ ಕಾರನ್ನು ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.

ಈ ಕಾರಿನ ಸರಾಸರಿ ಇಂಧನ ದಕ್ಷತೆ ಸುಮಾರು 16.8 ಕಿ.ಮೀ. ಇದು ಎಲೆಕ್ಟ್ರಿಕ್ ಪವರ್ ಸ್ಟೀಯರಿಂಗ್, ಮುಂಭಾಗದಲ್ಲಿ ವೆಂಟಿಲೈಝರ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಹೊಂದಿದೆ. ನೂತನ ಹೋಂಡಾ ಸಿಟಿ ಎರಡು ಬಣ್ಣಗಳಲ್ಲಿ ದೊರಕುತ್ತದೆ.

More from DriveSpark

Article Published On: Wednesday, December 14, 2011, 16:51 [IST]
English summary
Honda has launched the new 2012 City sedan at a starting price of Rs.7.99 lakhs. The new City looks slightly different than the current model and has the same technical specifications. The New city is available in seven variants all powered by a petrolengine.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+