ರಾಶಿ ಫೀಚರ್ಸ್, 6 ಏರ್‌ಬ್ಯಾಗ್‌ಗಳ ಮೂಲಕ ಹಿಂದೆಗಿಂತಲೂ ಬಲಿಷ್ಠವಾದ ಹೊಸ ಮಾರುತಿ ಸ್ವಿಫ್ಟ್ ರಿವ್ಯೂ

ಮಾರುತಿ ಸುಜುಕಿ ಸ್ವಿಫ್ಟ್ ದೀರ್ಘಕಾಲದಿಂದಲೇ ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಇದು ಕೂಡ ಒಂದಾಗಿದೆ. ಭಾರತದಲ್ಲಿ ಎಷ್ಟೇ ಅತ್ಯಾಧುನಿಕ ಕಾರುಗಳು ಮಾರುಕಟ್ಟೆಗೆ ಬಂದರೂ ಈ ಮಾರುತಿ ಸ್ವಿಫ್ಟ್ ಕಾರಿಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಈ ಬಹುಜನಪ್ರಿಯ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift ) ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ 2005ರಲ್ಲಿ ಬಿಡುಗಡೆಯಾಗಿತ್ತು.

ಮಾರುತಿ ಸುಜುಕಿ ಇತ್ತೀಚೆಗೆ ಹೊಸ ತಲೆಮಾರಿನ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ಬಿಡುಗಡೆಗೊಳಿಸಿತು. ಈ ಹೊಸ ಸ್ವಿಫ್ಟ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.6.49 ಲಕ್ಷದಿಂದ ರೂ.9.64 ಲಕ್ಷವಾಗಿದೆ. ಈ ಹೊಸ ಸ್ವಿಫ್ಟ್ ಕಾರಿನ ವಿನ್ಯಾಸ, ಒಳಭಾಗ ಮತ್ತು ತಾಂತ್ರಿಕ ವಿಷಯದಲ್ಲಿ ಗಮನಾರ್ಹ ಬದಲಾವಣೆಗಳೊಂದಿಗೆ ಬಂದಿದೆ. ಈ ಸ್ವಿಫ್ ಕಾರನ್ನು ಇತ್ತೀಚೆಗೆ ಡ್ರೈವ್ ಮಾಡಿದ್ದೇವೆ. ಈ ಕಾರಿನ ಡ್ರೈವಿಂಗ್ ಅನುಭವ, ಹೊಸ ಬದಲಾವಣೆಗಳು ಮತ್ತು ಹೆಚ್ಚಿನ ಮಾಹಿತಿ ಇಲ್ಲಿದೆ.

2024 Maruti Suzuki Swift Review

ವಿನ್ಯಾಸ: ನ್ಯೂ ಜನರೇಷನ್ ಮಾರುತಿ ಸುಜುಕಿ ಸ್ವಿಫ್ (Maruti Suzuki Swift) ಮಾದರಿ ಹೊಸ ಮುಂಭಾಗದ ಬಂಪರ್ ಅನ್ನು ಹೊಂದಿದ್ದು, ಇದು ಸ್ವಲ್ಪಮಟ್ಟಿಗೆ ಟ್ವೀಕ್ ಮಾಡಲಾದ ಹೆಡ್ ಲೈಟ್ ಗಳು ಮತ್ತು ಬ್ಲ್ಯಾಕ್ ಬಣ್ಣದ ಮರುವಿನ್ಯಾಸಗೊಳಿಸಲಾದ ಗ್ರಿಲ್ ಅನ್ನು ನೀಡಿದೆ. ಸುಜುಕಿ ಬ್ಯಾಡ್ಜ್ ಗ್ರಿಲ್‌ನ ಮೇಲೆ ಕೂರುತ್ತದೆ ಮತ್ತು ಕರ್ವೇಸಿಯಸ್ ಬಾನೆಟ್ ಹೊಂದಿದೆ. ಈ ಕಾರಿನಲ್ಲಿ 15-ಇಂಚಿನ ಎಲಾಯ್ ವ್ಹೀಲ್ ಗಳಿಗೆ ಹೊಸ ವಿನ್ಯಾಸದ ಆಯ್ಕೆಗಳಿವೆ

ಇನ್ನು ಹಿಂದಿನ ಡೋರುಗಳಿಗೆ ಡೋರ್ ಹ್ಯಾಂಡಲ್‌ಗಳು ತಮ್ಮ ಸಾಂಪ್ರದಾಯಿಕ ಸ್ಥಾನಗಳಿಗೆ ಮರಳಿವೆ. ಹೊಸ ಸ್ವಿಫ್ಟ್‌ನ ಹಿಂಭಾಗವು ಎಂದಿನಂತೆ ಕರ್ವಿಯಾಗಿದೆ ಮತ್ತು ಅವುಗಳ ಸಿ-ಆಕಾರದ ಎಲ್‌ಇಡಿ ಮಾದರಿಯ ಸಿಗ್ನೇಚರ್ ಹೊಂದಿರುವ ಟೈಲ್‌ಲೈಟ್‌ಗಳು ಆಕರ್ಷಕವಾಗಿದೆ. ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಸ್ಪೋರ್ಟಿ' ರೇಸಿಂಗ್ ರೋಡ್‌ಸ್ಟರ್ ಮತ್ತು 'ಎನರ್ಜೆಟಿಕ್' ಥ್ರಿಲ್ ಚೇಸರ್ ಎಂಬ ಆಕ್ಸೆಸರಿ ಪ್ಯಾಕೇಜುಗಳಿವೆ. ಈ ಕಾರು ಮೂರು ಡ್ಯುಯಲ್-ಟೋನ್ ಕೊಡುಗೆಗಳನ್ನು ಒಳಗೊಂಡಂತೆ ಒಂಬತ್ತು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

2024 Maruti Suzuki Swift Review

ಬಣ್ಣಗಳ ಆಯ್ಕೆ: ಹೊಸ ಸ್ವಿಫ್ಟ್ ಅನ್ನು ಸಿಜ್ಲಿಂಗ್ ರೆಡ್, ಲುಸ್ಟರ್ ಬ್ಲೂ, ನಾವೆಲ್ ಆರೆಂಜ್, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್ ಮತ್ತು ಪರ್ಲ್ ಆರ್ಕ್ಟಿಕ್ ವೈಟ್ ಎಂಬ ಆರು ಮೊನೊಟೋನ್ ಪೇಂಟ್ ಸ್ಕೀಮ್‌ಗಳಲ್ಲಿ ಲಬ್ಯವಿದೆ. ಇನ್ನು ಮಿಡ್ನೈಟ್ ಬ್ಲ್ಯಾಕ್ ರೂಫ್ನೊಂದಿಗೆ ಸಿಜ್ಲಿಂಗ್ ರೆಡ್, ಮಿಡ್ನೈಟ್ ಬ್ಲ್ಯಾಕ್ ರೂಫ್ನೊಂದಿಗೆ ಲುಸ್ಟರ್ ಬ್ಲೂ ಮತ್ತು ಮಿಡ್ನೈಟ್ ಬ್ಲ್ಯಾಕ್ ರೂಫ್ನೊಂದಿಗೆ ಪರ್ಲ್ ಆರ್ಕ್ಟಿಕ್ ವೈಟ್ ಎಂಬ ಮೂರು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳನ್ನು ಹೊಂದಿವೆ.

ಇಂಟಿರಿಯರ್ ಮತ್ತು ಫೀಚರ್ಸ್: ಹೊಸ ಸ್ವಿಫ್ಟ್ ತನ್ನ ಕ್ಯಾಬಿನ್ ವಿನ್ಯಾಸವನ್ನು ಮಾರುತಿಯ ಹೆಚ್ಚು ದುಬಾರಿ ಕೊಡುಗೆಯಾದ ಬಲೆನೊದಿಂದ ಎರವಲು ಪಡೆದುಕೊಂಡಿದೆ. ಮಲ್ಟಿ-ಲೇಯರ್ಡ್ ಡ್ಯಾಶ್ ಮಧ್ಯದಲ್ಲಿ ಹೊಸ 9-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಯನ್ನು ನೀಡಿದೆ. ಇದು ಯೂನಿಟ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ನ್ಯಾವಿಗೇಶನ್ ಮತ್ತು OTA ನವೀಕರಣಗಳನ್ನು ಸಂಪೂರ್ಟ್ ಮಾಡುತ್ತದೆ ಮತ್ತು ರಿವರ್ಸಿಂಗ್ ಕ್ಯಾಮೆರಾವನ್ನು ಪ್ರದರ್ಶಿಸುತ್ತದೆ.

2024 Maruti Suzuki Swift Review

ಇನ್ನು ಇನ್ಸ್ ಟ್ರೂಮೆಂಟ್ ಬೈನಾಕಲ್ ಈಗ 4.2-ಇಂಚಿನ ಡಿಜಿಟಲ್ MID ಆಗಿದೆ. ಇನ್ನು ಹಿಂಭಾಗದ ಎಸಿ ವೆಂಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್, ಪವರ್ ಅಡ್ಜಸ್ಟಬಲ್ ORVM ಗಳು, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಇನ್ಫೋಟೈನ್‌ಮೆಂಟ್ ಯುನಿಟ್‌ಗಾಗಿ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ಕ್ರೂಸ್ ಕಂಟ್ರೋಲ್ ಮತ್ತು ಎಲ್‌ಇಡಿ ಫಾಗ್ ಲ್ಯಾಂಪ್‌ಗಳನ್ನು ಹೊಂದಿವೆ.

2024 Maruti Suzuki Swift Review

ಸುರಕ್ಷತಾ ಫೀಚರ್ಸ್: ನ್ಯೂ ಜನರೇಷನ್ ಮಾರುತಿ ಸುಜುಕಿ ಸ್ವಿಫ್ ಕಾರಿನಲ್ಲಿ ಹೊಸದಾಗಿ ಕೆಲವು ಸುರಕ್ಷತಾ ಫೀಚರ್ಸ್ ಗಳನ್ನು ಸೇರಿಸಿದೆ. ಈ ಹೊಸ ಕಾರಿನಲ್ಲಿ ಆರು ಏರ್‌ಬ್ಯಾಗ್‌ಗಳು, ISOFIX ಆಂಕರ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಗಳು, EBD ಜೊತೆಗೆ ABS, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ESC ಅನ್ನು ಒಳಗೊಂಡಿದೆ.

ಎಂಜಿನ್: 2024ರ ಮಾರುತಿ ಸುಜುಕಿ ಸ್ವಿಫ್ಟ್‌ಗೆ ದೊಡ್ಡ ಬದಲಾವಣೆಯನ್ನು ಬಾನೆಟ್ ಅಡಿಯಲ್ಲಿ ಮಾಡಲಾಗಿದೆ. ಸ್ವಿಫ್ಟ್ ಸುಜುಕಿಯ K-ಸರಣಿ ಎಂಜಿನ್‌ಗಳನ್ನು ಕೈಬಿಟ್ಟು Z ಸೀರಿಸ್ ಎಂಜಿನ್ ನೀಡಲಾಗಿದೆ. ಈ 2024ರ ಸ್ವಿಫ್ಟ್ ಕಾರಿನಲ್ಲಿ ಹೊಸ Z-ಸೀರಿಸ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ನೀಡಿದೆ. ಈ ಎಂಜಿನ್ 5,700rpm ನಲ್ಲಿ 80.46bhp ಮತ್ತು 4,300rpm ನಲ್ಲಿ 111.7Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

2024 Maruti Suzuki Swift Review

ಹೊಸ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಸ್ವಿಫ್ಟ್ ಮ್ಯಾನುವಲ್ 24.8 km ಮೈಲೇಜ್ ನೀಡುತ್ತದೆ ಆದರೆ AMT ರೂಪಾಂತರವು 25.75 km ಮೈಲೇಜ್ ಅನ್ನು ನೀಡುತ್ತದೆ. ಇನ್ನು ಹೊಸ ಸ್ವಿಫ್ಟ್ ಅದರ ಹಿಂದಿನ ಮಾದರಿಗಿಂತ ಸ್ವಲ್ಪ ದೊಡ್ಡದಾಗಿದೆ.

ಆಯಾಮಗಳು: 2024ರ ಮಾರುತಿ ಸುಜುಕಿ ಸ್ವಿಫ್ಟ್ 3,860mm ಉದ್ದ, 1,735mm ಅಗಲ ಮತ್ತು 1,520mm ಎತ್ತರ ಮತ್ತು 920kg (AMT ರೂಪಾಂತರ 925kg) ತೂಕವನ್ನು ಹೊಂದಿದ್ದು, 163mm ಗ್ರೌಂಡ್ ಕ್ಲಿಯರೆನ್ಸ್ ಅನ್ನು ನೀಡುತ್ತದೆ. ಇನ್ನು ಈ ಹೊಸ ಕಾರು 265 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ. 37 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಅನ್ನು ಹೊಂದಿದೆ.

2024 Maruti Suzuki Swift Review

ಡ್ರೈವಿಂಗ್ ಅನುಭವ: 2024ರ ಸ್ವಿಫ್ಟ್‌ನ ಹೊಸ ಎಂಜಿನ್ ಸಿಲಿಂಡರ್ ಮತ್ತು ಸ್ವಲ್ಪ ಶಕ್ತಿಯನ್ನು ಕಳೆದುಕೊಂಡಿರಬಹುದು ಆದರೆ ಇದು ಡ್ರೈವಿಂವ್ ನಲ್ಲಿ ಹೆಚ್ಚು ಅನುಭವವಾಗುವುದಿಲ್ಲ. ಈ ಹೊಸ ಕಾರಿನ ಥ್ರೊಟಲ್ ರೆಸ್ಪಾನ್ಸ್ ಉತ್ತಮವಾಗಿದೆ. ಈ ಕಾರಿ ಲೈಟ್ ಕರ್ಬ್ ತೂಕದೊಂದಿಗೆ ಸಂಯೋಜಿಸಿದಾಗ ಹೆಚ್ಚಿನ ಚಾಲನಾ ಅನುಭವಗಳನ್ನು ನಿರ್ವಹಿಸಲು ಸುಲಭವಾಗುತ್ತದೆ.

ಹೊಸ ಸ್ವಿಫ್ಟ್ ಅದರ ಹಿಂದಿನದಕ್ಕಿಂತ 0 ದಿಂದ 100km ವೇಗವನ್ನು ಪಡೆದುಕೊಳ್ಳುತ್ತದೆ. ಈ ಹೊಸ ಮಾದರಿಯು 12.5 ಸೆಕೆಂಡ್ ಗಳಲ್ಲಿ 0 ದಿಂದ 100km ವೇಗವನ್ನು ಪಡೆದುಕೊಳ್ಳುತ್ತದೆ. 5-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಯಾವುದೇ ಅಡೆತಡೆಗಳಿಲ್ಲದೆ ಸುಲಭವಾಗಿ ಬದಲಾಯಿಸಬಹುದು. 2024ರ ಸ್ವಿಫ್ಟ್ ಹೊಸ ಸಸ್ಪೆಕ್ಷನ್ ಸೆಟಪ್ ಅನ್ನು ಒಳಗೊಂಡಿದೆ, ಅದು ಸಂಪೂರ್ಣ ಸುಲಭವಾಗಿ ಉಬ್ಬುಗಳಲ್ಲಿ ಚಲಿಸುತ್ತದೆ. ಹಿಂದೆ ಕುಳಿತುಕೊಳ್ಳುವವರಿಗೆ ಅವರು ಬಯಸುವುದಕ್ಕಿಂತ ಸ್ವಲ್ಪ ಕಡಿಮೆ ಲೆಗ್ ಸ್ಪೇಸ್ ಅನ್ನು ನೀಡಿದೆ.

2024 Maruti Suzuki Swift Review

ಡ್ರೈವ್ ಸ್ಪಾರ್ಕ್ ಅಭಿಪ್ರಾಯ: ನ್ಯೂ ಜನರೇಷನ್ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಎಲ್ಲಾ ರೂಪಾಂತರಗಳಲ್ಲಿ ನವೀಕರಿಸಿದ ವಿನ್ಯಾಸ ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬಂದಿದೆ. 2024ರ ಮಾರುತಿ ಸುಜುಕಿ ಸ್ವಿಫ್ಟ್ ತನ್ನ ಮೈಲೇಜ್ ಹೆಚ್ಚಿಸಲು ಸಿಲಿಂಡರ್ ಅನ್ನು ಕಳೆದುಕೊಂಡಿರಬಹುದು, ಕಡಿಮೆ ಕರ್ಬ್ ತೂಕ ಮತ್ತು ಹೊಸ ಸಸ್ಪೆನ್ಶನ್ ಸೆಟಪ್ ನಿಂದಾಗಿ ಅತ್ಯುತ್ತಮ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾಗಿದೆ.

More from DriveSpark

Article Published On: Thursday, May 16, 2024, 11:00 [IST]
English summary
2024 maruti suzuki swift review driving impression engine performance details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+