Tata Altroz Facelift Review: ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ ರಿವ್ಯೂ.. ಲಕ್ಸುರಿ ಫೀಚರ್ಸ್, ಹೇಗಿದೆ ಗೊತ್ತಾ?
2019ರ ಸಾಮಾನ್ಯ ವರ್ಷವಾಗಿತ್ತು. ಆಗ ಕೊರೋನಾದ ಒಳ ಸುಳಿಯಲ್ಲಿ ಜಗತ್ತು ಸಿಲುಕಿಕೊಂಡಿರಲಿಲ್ಲ. ಯುರೋಪ್‌ನಲ್ಲಿ ಬೃಹತ್ ಕಾರು ಪ್ರದರ್ಶನಗಳನ್ನು ಅದ್ದೂರಿಯಾಗಿ ನಡೆಸಲಾಗುತ್ತಿತ್ತು. ಆ ವೇಳೆಯಲ್ಲಿ ಅಂದರೆ 2108ರ ಆಟೋ ಎಕ್ಸ್‌ಪೋದಲ್ಲಿ ಟಾಟಾ ಮೋಟಾರ್ಸ್, '45ಎಕ್ಸ್' ಕಾನ್ಸೆಪ್ಟ್ ಕಾರಿನ ಆಧಾರಿತ ಹೊಚ್ಚ ಹೊಸ 'ಆಲ್ಟ್ರೋಜ್' ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ್ನು ಅನಾವರಣಗೊಳಿಸಿತ್ತು. ನಂತರದಲ್ಲಿ ಮಾರಾಟಕ್ಕೂ ತರಲಾಯಿತು. ಮರು ವರ್ಷ ದೇಶಾದ್ಯಂತ ಕಟ್ಟುನಿಟ್ಟಿನ ಎಮಿಷನ್ ಮಾನದಂಡಗಳನ್ನು ಜಾರಿಗೊಳಿಸಲಾಯಿತು. ಅದಕ್ಕೆ ಅನುಗುಣವಾಗಿ ಕಂಪನಿಯು ಆಲ್ಟ್ರೋಜ್ ಕಾರನ್ನು ಮೇಲ್ದರ್ಜೆರಿಸಿತ್ತು. ಜೊತೆಗೆ ಈ ಹ್ಯಾಚ್‌ಬ್ಯಾಕ್‌ನ ರೇಸರ್ & ಐಸಿಎನ್‌ಜಿ ರೂಪಾಂತರಗಳನ್ನು (ವೇರಿಯೆಂಟ್) ಸಹ ಬಿಡುಗಡೆಗೊಳಿಸಲಾಗಿತ್ತು.
ಈಚೆಗೆ ನವೀಕರಣಕ್ಕೆ ಒಳಪಟ್ಟ 2025ರ ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ (Tata Altroz Facelift) ಕಾರನ್ನು ಬಿಡುಗಡೆಗೊಳಿಸಲಾಯಿತು. ಇದು ವಿನ್ಯಾಸ ಹಾಗೂ ವೈಶಿಷ್ಟ್ಯಗಳಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಕೂಡ ಪಡೆದುಕೊಂಡಿದೆ. ನಮ್ಮ 'ಡ್ರೈವ್‌ಸ್ಪಾರ್ಕ್' ತಂಡಕ್ಕೆ ಈ ಹ್ಯಾಚ್‌ಬ್ಯಾಕ್‌ನ ಟೆಸ್ಟ್ ಡ್ರೈವ್ ನಡೆಸುವ ಅವಕಾಶವು ಸಹ ಲಭ್ಯವಾಗಿತು. ಬನ್ನಿ, ನೂತನ 'ಆಲ್ಟ್ರೋಜ್' ಕಾರು ಹೇಗಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್‌ನ ಹೊರಭಾಗದ ವಿನ್ಯಾಸ..
ನೂತನ ಕಾರು ಹೊರಭಾಗದ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದೆ. ಮುಂಭಾಗವನ್ನು (ಫ್ರಂಟ್) ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗಿದ್ದು, ಹೊಸದಾಗಿರುವ ಎಲ್ಇಡಿ ಹೆಡ್‌ಲೈಟ್‌ಗಳನ್ನು ನೋಡಬಹದುದು. ಐಬ್ರೋ-ಸ್ಟೈಲ್ ಡಿಆರ್‌ಎಲ್‌ಗಳನ್ನು ಪಡೆದಿದ್ದು, ಇದು 'ಟಾಟಾ' ಬ್ಯಾಡ್ಜ್‌ನೊಂದಿಗೆ ಸ್ಲಿಮ್‌ಲೈನ್ ಗ್ರಿಲ್‌ಗೆ ಕನೆಕ್ಟ್ ಆಗಿದೆ.
ಈ ಆಲ್ಟ್ರೋಜ್ ಹ್ಯಾಚ್‌ಬ್ಯಾಕ್‌ನ ಮುಂದಿರುವ ಬಂಪರ್‌ನ ಕೆಳಭಾಗದಲ್ಲಿ ಉತ್ತಮವಾಗಿರುವ ಎಲ್ಇಡಿ ಫಾಗ್ ಲ್ಯಾಂಪ್‌ಗಳನ್ನು ನೀಡಲಾಗಿದೆ. ಹಾಗೆಯೇ ಬಂಪರ್ ಕಪ್ಪು (ಬ್ಲ್ಯಾಕ್) ಬಣ್ಣವನ್ನು ಹೊಂದಿದೆ. ಹಿಂಭಾಗವು (ರೇರ್) ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದೆ. 'ಟಿ' ಆಕಾರಕ್ಕೆ ಹೋಲುವ ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು ರಿವರ್ಸಿಂಗ್ ಲೈಟ್‌ನ್ನು ಪಡೆದಿದೆ. ಟೈಲ್‌ಗೇಟ್‌ನಲ್ಲಿ 'ಆಲ್ಟ್ರೋಜ್' ಬ್ಯಾಡ್ಜ್ ಇದ್ದು, 16-ಇಂಚಿನ ಅಲಾಯ್ ವೀಲ್‌ಗಳು ಮತ್ತು ಫ್ಲಶ್ ಡೋರ್ ಹ್ಯಾಂಡಲ್‌ಗಳನ್ನು ಒಳಗೊಂಡಿದೆ.

ಒಳಭಾಗದ ವಿನ್ಯಾಸ & ವೈಶಿಷ್ಟ್ಯಗಳು..
ಹೊಸ ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್‌ನ ಒಳಭಾಗದ ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಇದರ ಡ್ಯಾಶ್‌ಬೋರ್ಡ್ ಸಾಕಷ್ಟು ಹೊಸತನನಿಂದ ಕೂಡಿದೆ. ಜೊತೆಗೆ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಬಹುಮುಖ್ಯವಾಗಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಮತ್ತು 10.25-ಇಂಚಿನ ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಹೊಂದಿದೆ.
ಇದು ಮಾತ್ರವಲ್ಲದೆ ಟಾಟಾ ಬ್ಯಾಡ್ಜ್‌ನೊಂದಿಗೆ ಟೂ-ಸ್ಪೋಕ್ ಸ್ಟೀರಿಂಗ್ ವೀಲ್, 4-ಸ್ಪೀಕರ್ ಸೆಟಪ್, ಹೈಟ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಕೋಲ್ಡ್ ಗ್ಲೋವ್‌ಬಾಕ್ಸ್, ರೇರ್ ಎಸಿ ವೆಂಟ್‌ಗಳು, 65ಡಬ್ಲ್ಯೂ ಯುಎಸ್‌ಬಿ-ಸಿ ಚಾರ್ಜಿಂಗ್ ಪೋರ್ಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಆಟೋಮೆಟಿಕ್ ಹೆಡ್‌ಲೈಟ್‌ಗಳು ಮತ್ತು ವಿಂಡ್‌ಶೀಲ್ಡ್ ವೈಪರ್‌ಗಳು, ಕ್ರೂಸ್ ಕಂಟ್ರೋಲ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
ಕಾರ್ಯಕ್ಷಮತೆ & ಸುತ್ತಳತೆ..
ಹೊಸ ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್ ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿದೆ. ಇದರ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 86.8 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 115 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್, ಆಟೋಮೆಟಿಕ್ ಮತ್ತು 6-ಸ್ಪೀಡ್ (ಡುಯಲ್-ಕ್ಲಚ್ ಆಟೋಮೆಟಿಕ್ ಟ್ರಾಸ್ಮಿಷನ್) ಗೇರ್‌ಬಾಕ್ಸ್‌ನ್ನು ಪಡೆದಿದೆ.

ಇನ್ನೊಂದು 1.2-ಲೀಟರ್ ಸಿಎನ್‌ಜಿ ಎಂಜಿನ್, 72.5 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 103 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಮಾತ್ರ ಒಳಗೊಂಡಿದೆ.
ಮತ್ತೊಂದು 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್, 88.76 ಬಿಎಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 200 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಪಡೆದಿದೆ. ಇದರೊಂದಿಗೆ ಈ ಕಾರು, ಗರಿಷ್ಠ ಮೈಲೇಜ್ ಕೂಡ ನೀಡಬಹುದು ಎಂದು ಅಂದಾಜಿಸಲಾಗಿದೆ.

ಈ ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್, ಬಹಳಷ್ಟು ವಿಶಾಲವಾಗಿದೆ. ಇದು 3,990 ಎಂಎಂ ಉದ್ದ, 1,755 ಎಂಎಂ ಅಗಲ ಹಾಗೂ 1,523 ಎಂಎಂ ಎತ್ತರವಿದೆ. 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,501 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.
ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ ನೂತನ ಕಾರಿನ ಪೆಟ್ರೋಲ್ & ಡೀಸೆಲ್ ರೂಪಾಂತರಗಳು (ವೇರಿಯೆಂಟ್), 345 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿವೆ. ಅದರ ಹೊರತಾಗಿ ಸಿಎನ್‌ಜಿ ಚಾಲಿತ ರೂಪಾಂತರ, 210 ಲೀಟರ್‌ನ ಬೂಟ್ ಸ್ಪೇಸ್‌ನ್ನು ಪಡೆದಿದೆ. ಜೊತೆಗೆ ಈ ಕಾರು, ಉತ್ತಮವಾಗಿರುವ ಟೈರ್‌ಗಳನ್ನು ಹೊಂದಿದೆ.

ಚಾಲನಾ ಅನುಭವ..
ನಮ್ಮ ತಂಡಕ್ಕೆ ಟೆಸ್ಟ್ ಡ್ರೈವ್ ಮಾಡಲು ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್‌ನ ಡೀಸೆಲ್ ಹಾಗೂ ಐಸಿಎನ್‌ಜಿ ರೂಪಾಂತರಗಳನ್ನು (ವೇರಿಯೆಂಟ್) ಕಂಪನಿಯು ಒದಗಿಸಿತು. ಈ ಕಾರು ಅದ್ಭುತವಾದ ಚಾಲನಾ ಅನುಭವವನ್ನು ನೀಡಿತು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದರಲ್ಲಿ ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಿದೆವು.
ಈ ಹ್ಯಾಚ್‌ಬ್ಯಾಕ್, ತಿರುವುಗಳು ಸೇರಿದಂತೆ ಎಲ್ಲ ರೀತಿಯ ರಸ್ತೆಗಳಲ್ಲಿಯೂ ಸುಲಭವಾಗಿ ಚಲಿಸಿತು. ಆಲ್ಟ್ರೋಜ್ ಡೀಸೆಲ್ ರೂಪಾಂತರವು ಹೆದ್ದಾರಿಯಲ್ಲಿ ಭಾರೀ ವೇಗದಲ್ಲಿದ್ದರೂ ಕೂಡ ಲೀಲಾಜಾಲವಾಗಿ ಸಂಚರಿಸಿತು. ಐಸಿಎನ್‌ಜಿ ರೂಪಾಂತರದ ಚಾಲನೆಯು ತುಂಬಾ ಮನಮೋಹಕವಾಗಿತ್ತು. ಬ್ರೇಕ್ ಪೆಡಲ್ ಹಾಗೂ ಸಸ್ಪೆನ್ಷನ್ ಸೆಟಪ್ ಸಹ ಚೆನ್ನಾಗಿಯೇ ಕಾರ್ಯನಿರ್ವಹಿಸಿದವು.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ..
ನೂತನ 'ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್' ಹ್ಯಾಚ್‌ಬ್ಯಾಕ್ ಅತ್ಯುತ್ತಮ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಸಾಕಷ್ಟು ಅದ್ಬುತವಾಗಿದೆ. ಇದರಲ್ಲಿ 5 ಆಸನಗಳಿದ್ದು, ರೂ.6.89 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಅತಿ ಶೀಘ್ರದಲ್ಲೇ ವಿತರಣೆಯು ಶುರುವಾಗಲಿದೆ. ಮುಂಬರುವ ದಿನಗಳಲ್ಲಿ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುವ ನಿರೀಕ್ಷೆಯಿದ್ದು, ದೇಶೀಯ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








