Tata: ಪ್ರತಿಯೊಬ್ಬರು ಖರೀದಿಸಬಹುದು.. ಸಣ್ಣ ಟಾಟಾ ಎಸ್‌ಯುವಿ ಕುರಿತ ರಿವ್ಯೂ.. 468 Km ರೇಂಜ್!

ಇದೇ ಫೆಬ್ರವರಿ 20ರಂದು ಹೊಚ್ಚ ಹೊಸ ಟಾಟಾ ಪಂಚ್ ಇವಿ ಫೇಸ್‌ಲಿಫ್ಟ್ (Tata Punch EV Facelift) ಕಾರನ್ನು ಬಿಡುಗಡೆಗೊಳಿಸಲಾಯಿತು. ಇದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ನೋಡಲು ತುಂಬಾ ಚೆನ್ನಾಗಿದೆ. ಈಗಾಗಲೇ ಬುಕ್ಕಿಂಗ್ ಶುರುವಾಗಿದೆ. ಆಸಕ್ತ ಗ್ರಾಹಕರು ಸಮೀಪದ ಶೋರೂಂ ಅಥವಾ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ರೂ.21,000 ಮುಂಗಡ ಹಣ ಪಾವತಿಸಿ, ಆರ್ಡರ್ ಮಾಡಬಹುದು. ಅತಿ ಶೀಘ್ರದಲ್ಲೇ ವಿತರಣೆಗಳು ಶುರುವಾಗಲಿದೆ.

ನೂತನ 'ಪಂಚ್ ಇವಿ ಫೇಸ್‌ಲಿಫ್ಟ್' ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಕನಿಷ್ಠ ರೂ.9.69 ಲಕ್ಷ ಹಾಗೂ ಗರಿಷ್ಠ ರೂ.12.59 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ಈ ಕಾರನ್ನು ಬಾಸ್ (ಬ್ಯಾಟರಿ ಆಸ್-ಎ-ಸರ್ವಿಸ್) ಯೋಜನೆಯಡಿಯೂ ಮಾರಾಟ ಮಾಡಲಾಗುತ್ತದೆ. ಅದು ರೂ.6.49 ಲಕ್ಷ ಆರಂಭಿಕ ಬೆಲೆಯನ್ನು ಪಡೆದಿದೆ. ಖರೀದಿದಾರರು ಪ್ರತಿ ಕಿಲೋಮೀಟರ್‌ಗೆ ರೂ.2.60 ಬಾಡಿಗೆಯನ್ನು ಕಟ್ಟಬೇಕು.

2026 New Tata Punch EV Facelift Review

ಈಚೆಗೆ ನಮ್ಮ 'ಡ್ರೈವ್‌ಸ್ಪಾರ್ಕ್' ತಂಡಕ್ಕೆ ಕೇರಳದ ಕೊಚ್ಚಿಯಲ್ಲಿ ಹೊಸ 'ಟಾಟಾ ಪಂಚ್ ಇವಿ ಫೇಸ್‌ಲಿಫ್ಟ್' ಮೈಕ್ರೋ ಎಸ್‌ಯುವಿಯು ಟೆಸ್ಟ್ ಡ್ರೈವ್ ನಡೆಸುವುದಕ್ಕೆ ಲಭ್ಯವಾಗಿತ್ತು. ಬನ್ನಿ, ಈ ನೂತನ ಕಾರಿನ ವಿನ್ಯಾಸವೇನು.. ವೈಶಿಷ್ಟ್ಯಗಳೇನು.. ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ರೂಪಾಂತರ, ವಿನ್ಯಾಸ & ಬಣ್ಣಗಳು (Variant, Design & Colours):

ಹೊಸ 'ಟಾಟಾ ಪಂಚ್ ಇವಿ ಫೇಸ್‌ಲಿಫ್ಟ್' ಕಾರು ಸ್ಮಾರ್ಟ್, ಸ್ಮಾರ್ಟ್ ಪ್ಲಸ್, ಅಡ್ವೆಂಚರ್, ಎಂಪವರ್ಡ್ ಮತ್ತು ಎಂಪವರ್ಡ್ ಪ್ಲಸ್ ಎಂಬ ರೂಪಾಂತರಗಳೊಂದಿಗೂ ಲಭ್ಯವಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಮುಂಭಾಗ (ಫ್ರಂಟ್) ಕ್ಲೋಸ್ಡ್-ಆಫ್ ಗ್ರಿಲ್, ಎಲ್ಇಡಿ ಹೆಡ್‌ಲ್ಯಾಂಪ್‌ಗಳು, 'ವೈ' ಆಕಾರಕ್ಕೆ ಹೋಲುವ ಎಲ್ಇಡಿ ಡಿಆರ್‌ಎಲ್‌ಗಳು & ಎಲ್ಇಡಿ ಫಾಗ್ ಲ್ಯಾಂಪ್‌ಗಳನ್ನು ಒಳಗೊಂಡಿದೆ. ಹಾಗೆಯೇ 'ಟಾಟಾ' ಲೋಗೋದ ಹಿಂದೆ, ಚಾರ್ಜಿಂಗ್ ಪೋರ್ಟ್‌ನ್ನು ಅಳವಡಿಸಲಾಗಿದೆ.

2026 New Tata Punch EV Facelift Review

ಇದರೊಂದಿಗೆ ಬ್ಲ್ಯಾಕ್-ಔಟ್ ರೂಫ್, ಸಿ-ಪಿಲ್ಲರ್ ಮೌಂಟೆಡ್ ರೇರ್ ಡೋರ್ ಹ್ಯಾಂಡಲ್‌ಗಳು ಮತ್ತು 16-ಇಂಚಿನ ಅಲಾಯ್‌ ವೀಲ್‌ಗಳನ್ನು ಪಡೆದಿದೆ. ಹಿಂಭಾಗ (ರೇರ್) ಅತ್ಯುತ್ತಮವಾದ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಒಳಗೊಂಡಿದೆ. ಬೆಂಗಾಲ್ ರೂಜ್, ಕ್ಯಾರಮೆಲ್, ಫಿಯರ್‌ಲೆಸ್ ಯೆಲ್ಲೋ, ಎಂಪವರ್ಡ್ ಆಕ್ಸೈಡ್, ಪ್ರಿಸ್ಟೈನ್ ವೈಟ್, ಸೂಪರ್‌ನೋವಾ ಕಾಪರ್ ಮತ್ತು ಪ್ಯೂರ್ ಗ್ರೇ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

ಸುತ್ತಳತೆ (Dimensions):

ಈ ಕಾರು ಹೆಚ್ಚು ವಿಶಾಲ ಗಾತ್ರದಲ್ಲಿದೆ. 3827 ಎಂಎಂ ಉದ್ದ, 1742 ಎಂಎಂ ಅಗಲ ಮತ್ತು 1,615 ಎಂಎಂ ಎತ್ತರವಿದೆ. ಜೊತೆಗೆ 195 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,700 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 1,360 ಕೆಜಿ ತೂಕವಿದೆ.

2026 New Tata Punch EV Facelift Review

ಆಸನ ಆಯ್ಕೆ & ಬೂಟ್ ಸ್ಪೇಸ್‌ (Seating Capacity & Boot Space):

ನೂತನ 'ಪಂಚ್ ಇವಿ ಫೇಸ್‌ಲಿಫ್ಟ್' ಎಲೆಕ್ಟ್ರಿಕ್ ಎಸ್‌ಯುವಿಯು 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು, ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 14 ಲೀಟರ್‌ನಷ್ಟು ಫ್ರಂಟ್ ಟ್ರಂಕ್ ಮತ್ತು 366 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ.

ಕಾರ್ಯಕ್ಷಮತೆ (Performance):

ಇದು ಬೆಲೆಗೆ ತಕ್ಕಂತೆ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. ಈ ಕಾರಿನ 30 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ ಹೊಂದಿರುವ ಮಾಡೆಲ್, ಭರ್ತಿ ಚಾರ್ಜ್‌ನಲ್ಲಿ 365 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ 88 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 154 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.

2026 New Tata Punch EV Facelift Review

ಮತ್ತೊಂದು 40 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿರುವ ಮಾಡೆಲ್, ಸಂಪೂರ್ಣ ಚಾರ್ಜ್‌ನಲ್ಲಿ 468 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಇದರಲ್ಲೂ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ಇದ್ದು, 129 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 154 ಎನ್ಎಂ (ನ್ಯೂಟನ್ ಮೀಟರ್) ಉತ್ಪಾದಿಸುತ್ತದೆ.

ಒಳಾಂಗಣ & ವೈಶಿಷ್ಟ್ಯಗಳು (Interior & Features):

ಈ ಕಾರಿನ ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. 10.2-ಇಂಚಿನ ಸೆಂಟ್ರಲ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ವೈರ್‌ಲೆಸ್ ಆಪಲ್ ಕಾರ್‌ಪ್ಲೇ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 2-ಸ್ಪೋಕ್ ಸ್ಟೀರಿಂಗ್ ವೀಲ್, ಪ್ಯಾಡಲ್ ಶಿಫ್ಟರ್‌ಗಳು, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಸಿಂಗಲ್-ಪೇನ್ ಸನ್‌ರೂಫ್‌ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳಂತಹ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

2026 New Tata Punch EV Facelift Review

ಸುರಕ್ಷತಾ ವೈಶಿಷ್ಟ್ಯಗಳು (Safety Features):

ಹೊಸ 'ಟಾಟಾ ಪಂಚ್ ಇವಿ ಫೇಸ್‌ಲಿಫ್ಟ್' ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್-ಸ್ಟಾರ್ಟ್ ಅಸಿಸ್ಟ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

ಚಾಲನಾ ಅನುಭವ (Driving Impressions):

ಈ ಎಲೆಕ್ಟ್ರಿಕ್ ಎಸ್‌ಯುವಿಯು ಅದ್ಭುತವಾದ ಚಾಲನಾ ಅನುಭವ ಒದಗಿಸಿತು. ಎಲ್ಲ ವಿಧದ ರಸ್ತೆಗಳಿಗೂ ಸರಿ ಹೊಂದುತ್ತದೆ. ಇದರಲ್ಲಿರುವ ಬ್ಯಾಟರಿ ಪ್ಯಾಕ್ 65 ಕೆಡಬ್ಲ್ಯೂ ಡಿಸಿ ಫಾಸ್ಟ್ ಚಾರ್ಜರ್‌ನ್ನು ಉಪಯೋಗಿಸಿದಾಗ ಕೇವಲ 26 ನಿಮಿಷಗಳಲ್ಲಿಯೇ 0 ರಿಂದ 80% ಚಾರ್ಜ್ ಆಗಿ ಬಿಡುತ್ತದೆ. ಸಿಟಿ, ಇಕೋ & ಸ್ಪೋರ್ಟ್ ಎಂಬ 3 ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದ್ದು, ಲೀಲಾಜಾಲವಾಗಿ ಕಾರು ಚಲಿಸಲು ನೆರವಾಗುತ್ತವೆ. ಕೇವಲ 9 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

2026 New Tata Punch EV Facelift Review

ಇದರ ಸ್ಟೀರಿಂಗ್ ವೀಲ್ ಸಹ ಉತ್ತಮವಾಗಿದೆ. ರಸ್ತೆಯ ಮೇಲೆ ಬಿಗಿಯಾದ ಹಿಡಿತವನ್ನು ಒದಗಿಸಬಲ್ಲದು. ನೂತನ 'ಪಂಚ್ ಇವಿ'ಯ ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್‌ಗಳು ಕೂಡ ಚೆನ್ನಾಗಿದ್ದು, ರಸ್ತೆಯ ತಿರುವುಗಳಲ್ಲಿ ಸುಲಲಿತವಾಗಿ ಕಾರ್ಯನಿರ್ವಹಿಸಬಲ್ಲವು. ಮೃದುವಾದ ಸೀಟ್‌ಗಳು ಸುದೀರ್ಘ ಪ್ರಯಾಣಕ್ಕೆ ಸಹಾಯಕವಾಗಿದೆ.

ಒಟ್ಟಾರೆ ಅಭಿಪ್ರಾಯ (Overall Opinion):

ನಿಮ್ಮ ಪುಟ್ಟ ಕುಟುಂಣಕ್ಕಾಗಿ ಹೊಸ ಎಲೆಕ್ಟ್ರಿಕ್ ಎಸ್‌ಯುವಿಯೊಂದನ್ನು ಹುಡುಕುತ್ತಿದ್ದರೆ, 'ಟಾಟಾ ಪಂಚ್ ಇವಿ ಫೇಸ್‌ಲಿಫ್ಟ್' ಬೆಸ್ಟ್ ಚಾಯ್ಸ್ ಆಗಲಿದೆ. ಅದಕ್ಕೆ ತಕ್ಕಂತೆ ಹೆಚ್ಚು ಅತ್ಯಾಕರ್ಷಕವಾಗಿದೆ. ಈ ಕಾರಿನ ಸಾಲು - ಸಾಲು ಎದುರಾಳಿಗಳಿವೆ. ಎಂಜಿ ವಿಂಡ್ಸರ್ ಇವಿ, ಸಿಟ್ರನ್ ಇಸಿ3 ಹಾಗೂ ವಿನ್‌ಫಾಸ್ಟ್ ವಿಎಫ್6ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

More from DriveSpark

Article Published On: Saturday, February 28, 2026, 11:00 [IST]
English summary
2026 new tata punch ev facelift review
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+