ಪೆಟ್ರೋಲ್ ಕಾರಿನಷ್ಟೇ ಶಕ್ತಿಯ ಆಡಿ ಎ8 ಡೀಸೆಲ್
ಇತ್ತೀಚೆಗೆ 4.2 ಲೀಟರ್ ಡೀಸೆಲ್ ಎಂಜಿನ್ ಜೊತೆ ಆಗಮಿಸಿದ ಆಡಿ ಎ8 ಹೊಸ ಸೇರ್ಪಡೆ. ಇದರ ಕಾರ್ಯಕ್ಷಮತೆ ಪೆಟ್ರೋಲ್ ಕಾರಿನಂತೆ ಅತ್ಯುತ್ತಮವಾಗಿದೆ. ಡ್ರೈವಿಂಗ್ ಮಾಡುತ್ತ ಇದು ಡೀಸೆಲ್ ಕಾರಾ? ಪೆಟ್ರೋಲ್ ಕಾರಾ? ಎಂಬ ಸಂದೇಹ ನಿಮಗೆ ಬಂದರೂ ಬಂದೀತು.
ಆಡಿ ಎ8 ಕಾರಲ್ಲಿ ಗಂಟೆಗೆ ಗರಿಷ್ಠ 250 ಕಿ.ಮೀ. ವೇಗದಲ್ಲಿ ಸಾಗಬಹುದು. ಇದರ ಎಂಜಿನ್ 350 ಅಶ್ವಶಕ್ತಿ ನೀಡುತ್ತದೆ. ಥರ್ಡ್ ಗೇರಲ್ಲಿ ಕೇವಲ 4.30 ಸೆಕೆಂಡಿನಲ್ಲಿ 20-80 ಕಿ.ಮೀ. ವೇಗ ಪಡೆಯಲು ಈ ಕಾರಿನಲ್ಲಿ ಸಾಧ್ಯವಿದೆ. ಒಟ್ಟಾರೆ ಇದರ ಫರ್ಮಾಮೆನ್ಸಿಗೆ ಬೆರಗಾಗಲೇ ಬೇಕು.
ಅದ್ದೂರಿ ಕಾರಾಗಿರುವುದರಿಂದ ಆಡಿ ಎ8 ಡೀಸೆಲ್ ಕಾರಲ್ಲಿ ಹತ್ತು ಹಲವು ಫೀಚರುಗಳು ಇವೆ. ಏರ್ ಕಂಡಿಷನ್ ಸಮರ್ಪಕವಾಗಿ ಪಸರಿಸಲು ನಾಲ್ಕು ವಲಯದ ಕ್ಲೈಮೇಟ್ ಕಂಟ್ರೋಲ್, ಕಾರಿನೊಳಗೆ ಮೆತ್ತನೆಯ ಚರ್ಮದ ಹಾಸುಗಳು, ಕಾರಿನೊಳಗೊಂದು ಪುಟ್ಟ ರೆಫ್ರಿಜರೇಟರ್ ಸಹ ಇರುವುದರಿಂದ ತಿಂಡಿ ತಿನಿಸುಗಳನ್ನು ಕೂಲ್ ಆಗಿ ಇಟ್ಟುಕೊಳ್ಳಬಹುದು.
ಎಲ್ ಇಡಿ ಹೆಡ್ ಲ್ಯಾಂಪ್, ಮ್ಯೂಸಿಕ್ ಇತ್ಯಾದಿಗಳನ್ನು ಸಂಗ್ರಹಿಸಿಡಲು ಹಾರ್ಡ್ ಡ್ರೈವ್, ಗೇರ್ ಚೇಂಜ್ ಮಾಡಲು ಪೆಡಲ್ ಶಿಫ್ಟ್ ಸಿಸ್ಟಮ್ ಸೇರಿದಂತೆ ಇದರಲ್ಲಿ ಹಲವು ಫೀಚರುಗಳಿವೆ. ಇಂತಹ ಫೀಚರುಗಳು ಸಾಧಾರಣ ಕಾರುಗಳಲ್ಲಿ ನೋಡ ಸಿಗದು.
ಹಾಗಂತ ಆಡಿ ಎ8 2.4 ಟಿಡಿಐ ಕಾರಿಗೆ ಡಿಮೆರಿಟ್ಸ್ ಅಥವಾ ಅವಗುಣಗಳು ಇಲ್ಲವೆಂದಲ್ಲ. ಮರ್ಸಿಡಿಸ್ ಎಸ್ ಕ್ಲಾಸ್ ಕಾರಿಗೆ ಹೋಲಿಸಿದರೆ ಇದರ ನಿರ್ಮಾಣ ಗುಣಮಟ್ಟ ಕೊಂಚ ಡಲ್ ಕಾಣಿಸುತ್ತದೆ. ಆಡಿ 3.0 ಡೀಸೆಲ್ ಎಂಜಿನ್ ಕಾರಿಗಿಂತ ಫೀಚರುಗಳಲ್ಲಿ ಮಹತ್ವದ ಬದಲಾವಣೆಗಳು ಇಲ್ಲ.
ಅಂದಹಾಗೆ ನೂತನ ಆಡಿ ಎ8 4.2 ಟಿಡಿಐ ಕಾರಿನ ದರ ಸುಮಾರು 1.01 ಕೋಟಿ ರುಪಾಯಿ ಇದೆ. ಕೋಟ್ಯಾಧಿಪತಿಗಳು ಖರೀದಿಸಬಹುದು.


Click it and Unblock the Notifications









