2016ನೇ ಸಾಲಿನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಕಾರುಗಳು
ನೀವು ಹೊಸ ಕಾರು ಖರೀದಿಸುವ ಯೋಜನೆಯಲ್ಲಿದ್ದೀರಾ? ನಿಮ್ಮ ಬಜೆಟ್ ಹಾಗೂ ಬೇಡಿಕೆಗಳಿಗೆ ತಕ್ಕ ಕಾರು ಮಾರುಕಟ್ಟೆಯಲ್ಲಿದೆಯಾ? ಈ ಸಂಬಂಧ ನಿಮ್ಮೆಲ್ಲ ಅನುಮಾನಗಳಿಗೆ ಇಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಿದ್ದೇವೆ.
ಮಾರುಕಟ್ಟೆಯಲ್ಲಿ ಹೊಸ ಹೊಸ ಕಾರುಗಳು ನಿರಂತರ ಅಂತರಾಳದಲ್ಲಿ ಬಿಡುಗಡೆಯಾಗುತ್ತಿದ್ದು, ಭಾರತೀಯ ವಾಹನ ಮಾರುಕಟ್ಟೆ ಪಾಲಿಗೆ ಶುಭ ಸೂಚಕವಾಗಿ ಪರಿಣಮಿಸಿದೆ. ಆಗಲೇ ಮಾರುಕಟ್ಟೆಯಲ್ಲಿ ನೆಲೆಯೂರಿರುವ ಕೆಲವು ಜನಪ್ರಿಯ ಮಾದರಿಗಳು ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿದೆ. ಪ್ರಸ್ತುತ ಲೇಖನದಲ್ಲಿ 2016ನೇ ಸಾಲಿನಲ್ಲಿ ವಿವಿಧ ವಿಭಾಗಗಳಲ್ಲಿ ಲಭ್ಯವಿರುವ ಅತ್ಯುತ್ತಮ ಕಾರುಗಳ ಬಗ್ಗೆ ಪಟ್ಟಿ ಮಾಡಿ ಕೊಡಲಿದ್ದೇವೆ.

ಸಣ್ಣ ಕಾರು ವಿಭಾಗ - 01. ಮಾರುತಿ ಆಲ್ಟೊ 800
ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರು ವಿಭಾಗ ಇದಾಗಿದ್ದು, ನಿಸ್ಸಂಶಯವಾಗಿಯೂ ಮಾರುತಿ ಆಲ್ಟೊ ತನ್ನ ಜೈತ್ರಯಾತ್ರೆಯನ್ನು ಮುಂದುವರಿಸಿದೆ. ಸಣ್ಣ ಕಾರು ವಿಭಾಗದಲ್ಲಿ ಅತ್ಯುತ್ತಮ ಎಂಜಿನ್ ಕ್ಷಮತೆ ಹಾಗೂ ಖರೀದಿ ನಂತರದ ಕಡಿಮೆ ವೆಚ್ಚವನ್ನು ಎದುರು ನೋಡುತ್ತಿರುವವರಿಗೆ ಆಲ್ಟೊ ಅತ್ಯುತ್ತಮ ಆಯ್ಕೆಯಾಗಿರಲಿದೆ.
ಎಂಜಿನ್: 796 ಸಿಸಿ, 47 ಅಶ್ವಶಕ್ತಿ, 69 ಎನ್ ಎಂ ತಿರುಗುಬಲ
ಮೈಲೇಜ್: 22.74 ಕೀ.ಮೀ.
ಅಂದಾಜು ಆನ್ ರೋಡ್ ಬೆಲೆ: 2.86 ಲಕ್ಷ ರು.ಗಳಿಂದ

02. ರೆನೊ ಕ್ವಿಡ್
ಕಳೆದ ಸಾಲಿನಲ್ಲಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ರೆನೊ ಕ್ವಿಡ್ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಎಸ್‌ಯುವಿ ಶೈಲಿಯ ಸಾನಿಧ್ಯ ಹೊಂದಿರುವ ಈ ಎಂಟ್ರಿ ಲೆವೆಲ್ ವಾಹನವೀಗ ಸದ್ಯದ ಹಾಟ್ ಕಾರು ಆಗಿದೆ.
ಎಂಜಿನ್: 799 ಸಿಸಿ, 53 ಅಶ್ವಶಕ್ತಿ, 72 ಎನ್ ಎಂ ತಿರುಗುಬಲ
ಮೈಲೇಜ್: 25.17 ಕೀ.ಮೀ.
ಅಂದಾಜು ಆನ್ ರೋಡ್ ಬೆಲೆ: 2.88 ಲಕ್ಷ ರು.ಗಳಿಂದ

ಕಾಂಪಾಕ್ಟ್ ಸೆಡಾನ್ - 03. ಮಾರುತಿ ಸ್ವಿಫ್ಟ್ ಡಿಜೈರ್
ನಿರಂತರ ಅಂತರಾಳದಲ್ಲಿ ಮಾಸಿಕ ಮಾರಾಟದಲ್ಲಿ ಮಾರುತಿ ಸುಜುಕಿ ಆಲ್ಟೊ ವನ್ನು ಹಿಂದಿಕ್ಕಿ ನಂ.1 ಸ್ಥಾನ ಆಲಂಕರಿಸುತ್ತಿರುವ ಮಾರುತಿ ಸ್ವಿಫ್ಟ್ ಡಿಜೈರ್ ನೂತನ ಕಾರು ಖರೀದಿ ಮಾಡುವವರಿಗೆ ಪರಿಪೂರ್ಣ ಆಯ್ಕೆಯಾಗಿರುತ್ತದೆ. ಈಗಲೂ ಮಾರುಕಟ್ಟೆಯಲ್ಲಿ ಸ್ವಿಫ್ಟ್ ಡಿಜೈರ್ ಅತಿ ಹೆಚ್ಚು ಬೇಡಿಕೆಯನ್ನು ಕಾಯ್ದುಕೊಂಡಿದೆ.
ಎಂಜಿನ್: 1197 ಸಿಸಿ ಪೆಟ್ರೋಲ್, 83 ಅಶ್ವಶಕ್ತಿ, 115 ಎನ್ ಎಂ ತಿರುಗುಬಲ
ಎಂಜಿನ್: 1248 ಸಿಸಿ ಡೀಸೆಲ್, 74 ಅಶ್ವಶಕ್ತಿ, 190 ಎನ್ ಎಂ ತಿರುಗುಬಲ
ಮೈಲೇಜ್: ಪೆಟ್ರೋಲ್ 20.75 ಮತ್ತು ಡೀಸೆಲ್ 23.61 ಕೀ.ಮೀ.
ಅಂದಾಜು ಆನ್ ರೋಡ್ ಬೆಲೆ: 5,68 ಲಕ್ಷ ರು.ಗಳಿಂದ

04. ಹೋಂಡಾ ಅಮೇಜ್
ಬಿಡುಗಡೆ ವೇಳೆ ದೇಶದ ಅತ್ಯುತ್ತಮ ಮೈಲೇಜ್ ಕಾರೆಂಬ ಬಿರುದು ಪಡೆದಿರುವ ಹೋಂಡಾ ಅಮೇಜ್, ಸಂಸ್ಥೆಯ ಹೆಸರಾಂತ ಎಂಜಿನ್ ನಿರ್ವಹಣೆಗೂ ಪ್ರಸಿದ್ಧಿ ಪಡೆದಿದೆ.
ಎಂಜಿನ್: 1198 ಸಿಸಿ ಪೆಟ್ರೋಲ್, 87 ಅಶ್ವಶಕ್ತಿ, 109 ಎನ್ ಎಂ ತಿರುಗುಬಲ
ಎಂಜಿನ್: 1498 ಸಿಸಿ ಡೀಸೆಲ್, 99 ಅಶ್ವಶಕ್ತಿ, 200 ಎನ್ ಎಂ ತಿರುಗುಬಲ
ಮೈಲೇಜ್: ಪೆಟ್ರೋಲ್ 18.1 ಮತ್ತು ಡೀಸೆಲ್ 23.18 ಕೀ.ಮೀ.
ಅಂದಾಜು ಆನ್ ರೋಡ್ ಬೆಲೆ: 5,80 ಲಕ್ಷ ರು.ಗಳಿಂದ

ಹ್ಯಾಚ್ ಬ್ಯಾಕ್ - 05. ಫೋರ್ಡ್ ಫಿಗೊ
ಹಳೆಯ ಮಾದರಿಯ ಫಿಗೊ ಹ್ಯಾಚ್ ಬ್ಯಾಕ್ ಸ್ಥಾನವನ್ನು ತುಂಬಿರುವ ಎರಡನೇ ತಲೆಮಾರಿನ ಫಿಗೊ ವಿನ್ಯಾಸ, ಶೈಲಿ, ಎಂಜಿನ್, ನಿರ್ವಹಣೆ ಮತ್ತು ವೈಶಿಷ್ಟ್ಯಗಳ ವಿಚಾರದಲ್ಲಿ ಹೊಸತನವನ್ನು ಕಾಪಾಡಿಕೊಂಡಿದೆ.
ಎಂಜಿನ್: ಪೆಟ್ರೋಲ್ 1.2 ಲೀಟರ್ ಟಿಐ ವಿಸಿಟಿ ಮತ್ತು 1.5 ಲೀಟರ್ ಟಿಐ-ವಿಸಿಟಿ, 87 ಮತ್ತು 110 ಅಶ್ವಶಕ್ತಿ, 112 ಮತ್ತು 136 ಎನ್ ಎಂ ತಿರುಗುಬಲ
ಎಂಜಿನ್: ಡೀಸೆಲ್ 1.5 ಲೀಟರ್ ಟಿಡಿಸಿಐ, 99 ಅಶ್ವಶಕ್ತಿ, 215 ಎನ್ ಎಂ ತಿರುಗುಬಲ
ಮೈಲೇಜ್: ಪೆಟ್ರೋಲ್ 18.16 ಕೀ.ಮೀ. ಮತ್ತು ಡೀಸೆಲ್ 25.83 ಕೀ.ಮೀ.
ಅಂದಾಜು ಆನ್ ರೋಡ್ ಬೆಲೆ: 4,89 ಲಕ್ಷ ರು.ಗಳಿಂದ

06. ಮಾರುತಿ ಸುಜುಕಿ ಸೆಲೆರಿಯೊ
ಮಾರುತಿ ಸುಜುಕಿ ಸೆಲೆರಿಯೊ ಕಾರಿನಲ್ಲಿ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ತಂತ್ರಗಾರಿಕೆಯನ್ನು ಕೊಡಲಾಗಿದ್ದು, ಆರಾಮದಾಯಕ ನಗರ ಚಾಲನೆಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೂ ಸಂಸ್ಥೆಗೆ ಮತ್ತಷ್ಟು ಲಾಭದಾಯಕವೆನಿಸಿದೆ.
ಎಂಜಿನ್: 998 ಸಿಸಿ ಪೆಟ್ರೋಲ್, 67 ಅಶ್ವಶಕ್ತಿ, 90 ಎನ್ ಎಂ ತಿರುಗುಬಲ.
ಎಂಜಿನ್: 793 ಸಿಸಿ ಡೀಸೆಲ್, 46 ಅಶ್ವಶಕ್ತಿ, 125 ಎನ್ ಎಂ ತಿರುಗುಬಲ.
ಮೈಲೇಜ್: ಪೆಟ್ರೋಲ್ 23.1 ಕೀ.ಮೀ. , ಡೀಸೆಲ್ 27.62 ಕೀ.ಮೀ.
ಅಂದಾಜು ಆನ್ ರೋಡ್ ಬೆಲೆ: 4.29 ಲಕ್ಷ ರು.ಗಳಿಂದ

07. ಹ್ಯುಂಡೈ ಗ್ರಾಂಡ್ ಐ10
ಭಾರತದ ಎರಡನೇ ಅತಿ ದೊಡ್ಡ ಪ್ರಯಾಣಿಕ ಸಂಸ್ಥೆ ದೇಶದಲ್ಲಿ ಒದಗಿಸುತ್ತಿರುವ ಅತ್ಯಂತ ವಿಶ್ವಾಸಾರ್ಹ ಮತ್ತು ಗುಣಮಟ್ಟದ ಕಾರುಗಳಲ್ಲಿ ಗ್ರಾಂಡ್ ಐ10 ಒಂದಾಗಿದೆ. ಇದು ಕೂಡಾ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.
ಎಂಜಿನ್: 1197 ಸಿಸಿ ಪೆಟ್ರೋಲ್, 81 ಅಶ್ವಶಕ್ತಿ, 114 ಎನ್ ಎಂ ತಿರುಗುಬಲ.
ಎಂಜಿನ್: 1120 ಸಿಸಿ ಡೀಸೆಲ್, 70 ಅಶ್ವಶಕ್ತಿ, 160 ಎನ್ ಎಂ ತಿರುಗುಬಲ.
ಮೈಲೇಜ್: ಪೆಟ್ರೋಲ್ 18.9 ಕೀ.ಮೀ. , ಡೀಸೆಲ್ 24 ಕೀ.ಮೀ.
ಅಂದಾಜು ಆನ್ ರೋಡ್ ಬೆಲೆ: 5.32 ಲಕ್ಷ ರು.ಗಳಿಂದ

08. ಮಾರುತಿ ಸಜುಕಿ ಸ್ವಿಫ್ಟ್
ಬಹುಶ: ದೇಶದ ಅತ್ಯಂತ ಸರ್ವಕಾಲಿಕ ಶ್ರೇಷ್ಠ ಕಾರು ಎಂದೇ ಬಣ್ಣಿಸಬಹುದಾದ ಮಾರುತಿ ಸುಜುಕಿ ಸ್ವಿಫ್ಟ್ ಪವರ್, ಮೈಲೇಜ್, ಹ್ಯಾಂಡ್ಲಿಂಗ್, ನಿರ್ವಹಣೆ ಮತ್ತು ವಿನ್ಯಾಸದ ವಿಚಾರದಲ್ಲಿ ಮುಂಚೂಣಿಯಲ್ಲಿದೆ.
ಎಂಜಿನ್: 1197 ಸಿಸಿ ಪೆಟ್ರೋಲ್, 83 ಅಶ್ವಶಕ್ತಿ, 115 ಎನ್ ಎಂ ತಿರುಗುಬಲ.
ಎಂಜಿನ್: 1248 ಸಿಸಿ ಡೀಸೆಲ್, 74 ಅಶ್ವಶಕ್ತಿ, 190 ಎನ್ ಎಂ ತಿರುಗುಬಲ.
ಮೈಲೇಜ್: ಪೆಟ್ರೋಲ್ 20.4 ಕೀ.ಮೀ. , ಡೀಸೆಲ್ 25.2 ಕೀ.ಮೀ.
ಅಂದಾಜು ಆನ್ ರೋಡ್ ಬೆಲೆ: 5.13 ಲಕ್ಷ ರು.ಗಳಿಂದ

ಪ್ರೀಮಿಯಂ ಹ್ಯಾಚ್ ಬ್ಯಾಕ್ - 09. ಹ್ಯುಂಡೈ ಎಲೈಟ್ ಐ20
ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ವಿಭಾಗದಲ್ಲಿ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯು ಎಲೈಟ್ ಐ20 ಎಂಬ ಶ್ರೇಷ್ಠ ಕಾರನ್ನು ಒದಗಿಸುತ್ತದೆ. ಆಕರ್ಷಕ ನೋಟ, ಫ್ಯೂಯಿಡಿಕ್ ವಿನ್ಯಾಸ ತಂತ್ರಗಾರಿಕೆ ಮತ್ತು ಅತ್ಯುತ್ತಮ ನಿರ್ವಹಣೆಯು ಎಲೈಟ್ ಐ0 ಕಾರನ್ನು ತನ್ನ ಪ್ರತಿಸ್ಪರ್ಧಿಗಳಿಗಿಂತ ವಿಭಿನ್ನವಾಗಿಸುತ್ತದೆ.
ಎಂಜಿನ್: 1197 ಸಿಸಿ ಪೆಟ್ರೋಲ್, 82 ಅಶ್ವಶಕ್ತಿ, 115 ಎನ್ ಎಂ ತಿರುಗುಬಲ.
ಎಂಜಿನ್: 1396 ಸಿಸಿ ಡೀಸೆಲ್, 89 ಅಶ್ವಶಕ್ತಿ, 220 ಎನ್ ಎಂ ತಿರುಗುಬಲ.
ಮೈಲೇಜ್: ಪೆಟ್ರೋಲ್ 18.6 ಕೀ.ಮೀ. , ಡೀಸೆಲ್ 22.54 ಕೀ.ಮೀ.
ಅಂದಾಜು ಆನ್ ರೋಡ್ ಬೆಲೆ: 6 ಲಕ್ಷ ರು.ಗಳಿಂದ

10. ಮಾರುತಿ ಸುಜುಕಿ ಬಲೆನೊ
ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರುಗಳ ವಿಭಾಗಕ್ಕೆ ಬಲೆನೊ ಹೊಸ ಪ್ರವೇಶವಾಗಿದ್ದು, ದೇಶದ್ಯಾಂತ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಮಾರುತಿ ಕಾರುಗಳಿಗೆ ಹೊಸ ನೋಟ ಪ್ರದಾನ ಮಾಡಿರುವ ಬಲೆನೊ ಸಂಸ್ಥೆಯ ಯಶಸ್ಸನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ.
ಎಂಜಿನ್: 1197 ಸಿಸಿ ಪೆಟ್ರೋಲ್, 83 ಅಶ್ವಶಕ್ತಿ, 115 ಎನ್ ಎಂ ತಿರುಗುಬಲ.
ಎಂಜಿನ್: 1248 ಸಿಸಿ ಡೀಸೆಲ್, 74 ಅಶ್ವಶಕ್ತಿ, 190 ಎನ್ ಎಂ ತಿರುಗುಬಲ.
ಮೈಲೇಜ್: ಪೆಟ್ರೋಲ್ 21.4 ಕೀ.ಮೀ. , ಡೀಸೆಲ್ 27.3 ಕೀ.ಮೀ.
ಅಂದಾಜು ಆನ್ ರೋಡ್ ಬೆಲೆ: 5.66 ಲಕ್ಷ ರು.ಗಳಿಂದ

ಸೆಡಾನ್ - 11. ಹೋಂಡಾ ಸಿಟಿ
ನಿಖರ ವಿನ್ಯಾಸದೊಂದಿಗೆ ಕಣಕ್ಕಿಳಿದಿರುವ ಎರಡನೇ ತಲೆಮಾರಿನ ಹೋಂಡಾ ಸಿಟಿ ಕಾರಿಗೆ ಭಾರತದಲ್ಲಿ ಅತ್ಯುತ್ತಮ ಮಾರಾಟ ಬೆಂಬಲ ವ್ಯಕ್ತವಾಗಿತ್ತು. ಡೀಸೆಲ್ ಆವೃತ್ತಿಯ ಪ್ರವೇಶದೊಂದಿಗೆ ಸಿಟಿ ಹಿಂದಿಕ್ಕುವುದು ಕಷ್ಟಸಾಧ್ಯವಾಗಿತ್ತು.
ಎಂಜಿನ್: 1497 ಸಿಸಿ ಪೆಟ್ರೋಲ್, 117 ಅಶ್ವಶಕ್ತಿ, 145 ಎನ್ ಎಂ ತಿರುಗುಬಲ.
ಎಂಜಿನ್: 1498 ಸಿಸಿ ಡೀಸೆಲ್, 99 ಅಶ್ವಶಕ್ತಿ, 220 ಎನ್ ಎಂ ತಿರುಗುಬಲ.
ಮೈಲೇಜ್: ಪೆಟ್ರೋಲ್ 17.8 ಕೀ.ಮೀ. , ಡೀಸೆಲ್ 26 ಕೀ.ಮೀ.
ಅಂದಾಜು ಆನ್ ರೋಡ್ ಬೆಲೆ: 8.76 ಲಕ್ಷ ರು.ಗಳಿಂದ

12. ಮಾರುತಿ ಸುಜುಕಿ ಸಿಯಾಝ್
ಹೋಂಡಾ ಸಿಟಿ ಕಾರಿಗೆ ನಿಕಟ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ಮಾರುತಿ ಸಿಯಾಝ್ ಗ್ರಾಹಕರಿಗೆ ಅತ್ಯುತ್ಯಮ ಆಯ್ಕೆಯಾಗಿರಲಿದೆ. ಮಾರುತಿ ಎಂಬ ಜನಪ್ರಿಯ ಬ್ರಾಂಡ್ ಬೆಂಬಲವೂ ಸಿಯಾಝ್ ಕಾರಿಗೆ ಮಾರಾಟ ಏರುಗತಿ ಸಾಧಿಸಲು ನೆರವಾಗಿದೆ.
ಎಂಜಿನ್: 1373 ಸಿಸಿ ಪೆಟ್ರೋಲ್, 91 ಅಶ್ವಶಕ್ತಿ, 130 ಎನ್ ಎಂ ತಿರುಗುಬಲ.
ಎಂಜಿನ್: 1248 ಸಿಸಿ ಡೀಸೆಲ್, 89 ಅಶ್ವಶಕ್ತಿ, 200 ಎನ್ ಎಂ ತಿರುಗುಬಲ.
ಮೈಲೇಜ್: ಪೆಟ್ರೋಲ್ 20.73 ಕೀ.ಮೀ. , ಡೀಸೆಲ್ 28.09 ಕೀ.ಮೀ.
ಅಂದಾಜು ಆನ್ ರೋಡ್ ಬೆಲೆ: 8.55 ಲಕ್ಷ ರು.ಗಳಿಂದ

ಬಹು ಬಳಕೆಯ ವಾಹನ - 13. ಮಾರುತಿ ಸುಜುಕಿ ಎರ್ಟಿಗಾ
ಕ್ರೀಡಾ ಬಳಕೆಯ ವಾಹನ ವಿಭಾಗಕ್ಕೆ ಹೋಲಿಸಿದಾಗ ಬಹು ಬಳಕೆಯ ವಾಹನ ಅಥವಾ ಎಂಪಿವಿ ವಿಭಾಗ ಅಷ್ಟೊಂದು ಜನಪ್ರಿಯತೆಯನ್ನು ಸಾಧಿಸಿಲ್ಲ. ಇಲ್ಲೂ ದೇಶದ ಜನಪ್ರಿಯ ಸಂಸ್ಥೆಗಳು ಅತ್ಯುತ್ತಮ ಕಾರುಗಳನ್ನು ಒದಗಿಸುತ್ತಿದೆ. ಇವುಗಳಲ್ಲಿ ಮಾರುತಿ ಎರ್ಟಿಗಾ ಒಂದಾಗಿದೆ.
ಎಂಜಿನ್: 1373 ಸಿಸಿ ಪೆಟ್ರೋಲ್, 94 ಅಶ್ವಶಕ್ತಿ, 130 ಎನ್ ಎಂ ತಿರುಗುಬಲ.
ಎಂಜಿನ್: 1248 ಸಿಸಿ ಡೀಸೆಲ್, 89 ಅಶ್ವಶಕ್ತಿ, 200 ಎನ್ ಎಂ ತಿರುಗುಬಲ.
ಮೈಲೇಜ್: ಪೆಟ್ರೋಲ್ 17.5 ಕೀ.ಮೀ. , ಡೀಸೆಲ್ 24.52 ಕೀ.ಮೀ.
ಅಂದಾಜು ಆನ್ ರೋಡ್ ಬೆಲೆ: 6.43 ಲಕ್ಷ ರು.ಗಳಿಂದ

14. ರೆನೊ ಲೊಡ್ಜಿ
ಹಾಗೊಂದು ವೇಳೆ ಸಾಮಾನ್ಯ ಮಾರುತಿ ಶೈಲಿಯ ಎರ್ಟಿಗಾ ನಿಮ್ಮ ಮನ ಗೆಲ್ಲುವಲ್ಲಿ ವಿಫಲವಾದರೆ ರೆನೊ ಲೊಡ್ಜಿ ಅತ್ಯುತ್ತಮ ಆಯ್ಕೆಯಾಗಿರಲಿದೆ. ಇದು ಕಾರಿನೊಳಗೆ ಬೇಕಾದಷ್ಟು ಸ್ಥಳಾವಕಾಶವನ್ನು ಕಾಪಾಡಿಕೊಂಡಿದೆ. ಇದು ಎರಡು ಶಕ್ತಿಶಾಲಿ ಡೀಸೆಲ್ ಎಂಜಿನ್ ಗಳಿಂದ ನಿಯಂತ್ರಿಸಲ್ಪಡುತ್ತದೆ.
ಎಂಜಿನ್: 1462 ಸಿಸಿ ಪೆಟ್ರೋಲ್, 84 ಮತ್ತು 108 ಅಶ್ವಶಕ್ತಿ, 200 ಮತ್ತು 245 ಎನ್ ಎಂ ತಿರುಗುಬಲ.
ಮೈಲೇಜ್: ಡೀಸೆಲ್ 21.04 ಕೀ.ಮೀ. ಮತ್ತು 19.98 ಕೀ.ಮೀ.
ಅಂದಾಜು ಆನ್ ರೋಡ್ ಬೆಲೆ: 9.83 ಲಕ್ಷ ರು.ಗಳಿಂದ

15. ಟೊಯೊಟಾ ಇನ್ನೋವಾ ಕ್ರೈಸ್ಟಾ
ಹೊಸ ತಲೆಮಾರಿನ ಟೊಯೊಟಾ ಇನ್ನೋವಾ ಕ್ರೈಸ್ಟಾ ಇನ್ನೇನು ಕೆಲವೇ ದಿನಗಳಲ್ಲಿ ಭಾರತೀಯ ವಾಹನ ಮಾರುಕಟ್ಟೆ ತಲುಪಲಿದೆ. ಇದೇ ಕಾರಣಕ್ಕಾಗಿ ಈ ಬಹುನಿರೀಕ್ಷಿತ ಕಾರನ್ನು ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.
ಎಂಜಿನ್: 2.8 ಮತ್ತು 2.4 ಲೀಟರ್ ಡೀಸೆಲ್ ಎಂಜಿನ್, 172 ಮತ್ತು 147 ಅಶ್ವಶಕ್ತಿ, 360 ಮತ್ತು 243 ಎನ್ ಎಂ ತಿರುಗುಬಲ.
ಮೈಲೇಜ್: ತಿಳಿದು ಬಂದಿಲ್ಲ
ಅಂದಾಜು ಆನ್ ರೋಡ್ ಬೆಲೆ: 9.83 ಲಕ್ಷ ರು.ಗಳಿಂದ

ಕ್ರೀಡಾ ಬಳಕೆಯ ವಾಹನ - 16. ಫೋರ್ಡ್ ಇಕೊಸ್ಪೋರ್ಟ್
ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ಭಾರತಕ್ಕೆ ಎಂಟ್ರಿ ಕೊಟ್ಟಿರುವ ಮೊದಲ ಕ್ರೀಡಾ ಬಳಕೆಯ ಕಾರು ಎಂಬ ಹೆಗ್ಗಳಿಕೆಗೆ ಇಕೊಸ್ಪೋರ್ಟ್ ಪಾತ್ರವಾಗಿದೆ. ಅತ್ಯುತ್ತಮ ರಸ್ತೆ ಸಾನಿಧ್ಯ ಮತ್ತು ಗರಿಷ್ಠ ಸುರಕ್ಷಾ ತಂತ್ರಗಾರಿಕೆಯು ಬಹುಬೇಗನೇ ಗ್ರಾಹಕರ ನೆಚ್ಚಿನ ಗಾಡಿ ಎನಿಸಿಕೊಳ್ಳುವಲ್ಲಿ ಇಕೊಸ್ಪೋರ್ಟ್ ಗೆ ನೆರವಾಗಿದೆ.
ಎಂಜಿನ್: 1499 ಮತ್ತು 999 ಸಿಸಿ ಪೆಟ್ರೋಲ್, 110 ಮತ್ತು 124 ಅಶ್ವಶಕ್ತಿ, 140 ಮತ್ತು 170 ಎನ್ ಎಂ ತಿರುಗುಬಲ.
ಎಂಜಿನ್: 1498 ಸಿಸಿ ಡೀಸೆಲ್, 99 ಅಶ್ವಶಕ್ತಿ, 205 ಎನ್ ಎಂ ತಿರುಗುಬಲ.
ಮೈಲೇಜ್: ಪೆಟ್ರೋಲ್ 15.8 ಮತ್ತು 18.9 ಕೀ.ಮೀ. , ಡೀಸೆಲ್ 7.38 ಕೀ.ಮೀ.
ಅಂದಾಜು ಆನ್ ರೋಡ್ ಬೆಲೆ: 7.38 ಲಕ್ಷ ರು.ಗಳಿಂದ

17. ಮಾರುತಿ ಸುಜುಕಿ ವಿಟಾರಾ ಬ್ರಿಝಾ
ಆಕ್ರಮಣಕಾರಿ ವಿನ್ಯಾಸ ತಂತ್ರಗಾರಿಕೆಯೊಂದಿಗೆ ಎಂಟ್ರಿ ಕೊಟ್ಟಿರುವ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಇನ್ನೇನು ಕೆಲವೇ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿದೆ. ಸದ್ಯ ಮಾರುಕಟ್ಟೆಯಲ್ಲಿ ವಿಟಾರಾ ಬ್ರಿಝಾ ಸಿಗುತ್ತಿರುವ ಪ್ರತಿಕ್ರಿಯೆ ಇದನ್ನು ಸಾರುತ್ತಿದೆ.
ಎಂಜಿನ್: 1248 ಸಿಸಿ ಡೀಸೆಲ್, 89 ಅಶ್ವಶಕ್ತಿ, 200 ಎನ್ ಎಂ ತಿರುಗುಬಲ.
ಮೈಲೇಜ್: ಡೀಸೆಲ್ 24.3 ಕೀ.ಮೀ.
ಅಂದಾಜು ಆನ್ ರೋಡ್ ಬೆಲೆ: 7.95 ಲಕ್ಷ ರು.ಗಳಿಂದ

18. ಹ್ಯುಂಟೈ ಕ್ರೆಟಾ
'ಭಾರತದ ವರ್ಷದ ಕಾರು' ಪ್ರಶಸ್ತಿಗೆ ಭಾಜನವಾಗಿರುವ ಹ್ಯುಂಡೈ ಕ್ರೆಟಾ ಬಿಡುಗಡೆಯಾದ ಬಳಿಕ ಹಿಂದೆ ತಿರುಗಿಯೇ ನೋಡಿಲ್ಲ. ಅತ್ಯುತ್ತಮ ವೆರಿಯಂಟ್ ಆಯ್ಕೆಗಳು, ರಸ್ತೆ ಸಾನಿಧ್ಯ, ಎಂಜಿನ್, ನಿರ್ವಹಣೆ ಹೀಗೆ ಒಂದಲ್ಲ ಎರಡಲ್ಲ ಎಲ್ಲ ವಿಭಾಗದಲ್ಲೂ ಕ್ರೀಡಾ ಬಳಕೆಯ ವಾಹನ ಗ್ರಾಹಕರ ಪಾಲಿಗೆ ನೆಚ್ಚಿನ ಆಯ್ಕೆಯೆನಿಸಿಕೊಂಡಿದೆ.
ಎಂಜಿನ್: 1591 ಸಿಸಿ ಪೆಟ್ರೋಲ್, 122 ಅಶ್ವಶಕ್ತಿ, 154 ಎನ್ ಎಂ ತಿರುಗುಬಲ.
ಎಂಜಿನ್: 1396 ಮತ್ತು 1582 ಸಿಸಿ ಡೀಸೆಲ್, 89 ಮತ್ತು 126 ಅಶ್ವಶಕ್ತಿ, 224 ಮತ್ತು 265 ಎನ್ ಎಂ ತಿರುಗುಬಲ.
ಮೈಲೇಜ್: ಪೆಟ್ರೋಲ್ 15.29 ಕೀ.ಮೀ.. ಡೀಸೆಲ್ 21.3 ಮತ್ತು 19.6 ಕೀ.ಮೀ.
ಅಂದಾಜು ಆನ್ ರೋಡ್ ಬೆಲೆ: 10.24 ಲಕ್ಷ ರು.ಗಳಿಂದ

19. ಮಹೀಂದ್ರ ಸ್ಕಾರ್ಪಿಯೊ
ಕಳೆದೊದು ದಶಕದಿಂದಲೂ ದೇಶದ ಶ್ರೇಷ್ಠ ಕಾರುಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಮಹೀಂದ್ರ ಸ್ಕಾರ್ಪಿಯೊ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಬೇಡಿಕೆಯನ್ನು ಕಾಯ್ದುಕೊಂಡಿದೆ. ಫೋರ್ ವೀಲ್ ಚಾಲನಾ ವ್ಯವಸ್ಥೆ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮಹೀಂದ್ರ ಸ್ಕಾರ್ಪಿಯೊವನ್ನು ತನ್ನ ಪ್ರತಿಸ್ಪರ್ಧಿಗಿಂತಲೂ ವಿಭಿನ್ನವಾಗಿಸುತ್ತದೆ.
ಎಂಜಿನ್: 2179 ಸಿಸಿ ಡೀಸೆಲ್, 120 ಅಶ್ವಶಕ್ತಿ, 280 ಎನ್ ಎಂ ತಿರುಗುಬಲ.
ಮೈಲೇಜ್: ಡೀಸೆಲ್ 15.4 ಕೀ.ಮೀ.
ಅಂದಾಜು ಆನ್ ರೋಡ್ ಬೆಲೆ: 10.78 ಲಕ್ಷ ರು.ಗಳಿಂದ

20. ಮಹೀಂದ್ರ ಎಕ್ಸ್ ಯುವಿ 500
ಚಿರತೆ ಶೈಲಿಯಿಂದ ಸ್ಪೂರ್ತಿ ಪಡೆದಿರುವ ಮಹೀಂದ್ರ ಎಕ್ಸ್‌ಯುವಿ 500 ದೇಶದಲ್ಲಿ ಲಭ್ಯವಿರುವ ಅತ್ಯುತ್ತಮ ಎಸ್ ಯುವಿ ಕಾರುಗಳಲ್ಲಿ ಒಂದಾಗಿದೆ. ಸ್ವದೇಶಿ ನಿರ್ಮಿತ ಮಹೀಂದ್ರ ಎಕ್ಸ್ ಯುವಿ 500 ಗ್ರಾಹಕರ ನೆಚ್ಚಿನ ಕಾರೆನಿಸಿಕೊಂಡಿದೆ.
ಎಂಜಿನ್: 2179 ಸಿಸಿ ಎಂ ಹಾಕ್ ಡೀಸೆಲ್, 140 ಅಶ್ವಶಕ್ತಿ, 330 ಎನ್ ಎಂ ತಿರುಗುಬಲ.
ಮೈಲೇಜ್: ಡೀಸೆಲ್ 13.42 ಕೀ.ಮೀ. ಆಟೋಮ್ಯಾಟಿಕ್ 13.97
ಅಂದಾಜು ಆನ್ ರೋಡ್ ಬೆಲೆ: 14.24 ಲಕ್ಷ ರು.ಗಳಿಂದ

ಪ್ರೀಮಿಯಂ ಸೆಡಾನ್ - 21. ಟೊಯೊಟಾ ಕರೊಲ್ಲಾ
ಪ್ರೀಮಿಯಂ ಸೆಡಾನ್ ವಿಭಾಗದಲ್ಲಿ ಕಾರು ಗುಣಮಟ್ಟತೆಗೆ ಯಾವುದೇ ರಾಜಿಗೂ ತಯಾರಾಗದ ಟೊಯೊಟಾ ಸಂಸ್ಥೆಯು ತನ್ನ ಶ್ರೇಣಿಯ ಅತ್ಯುತ್ತಮ ಕರೊಲ್ಲಾ ಕಾರನ್ನು ಒದಗಿಸುತ್ತಿದೆ. ಈಗಲೂ ಪ್ರೀಮಿಯಂ ಗ್ರಾಹಕರ ಪಾಲಿಗೆ ಕರೊಲ್ಲಾ ಅತ್ಯುತ್ತಮ ಚಾಲನಾ ಅನುಭವವನ್ನು ನೀಡುತ್ತಿದೆ.
ಎಂಜಿನ್: 1798 ಸಿಸಿ ಪೆಟ್ರೋಲ್, 138 ಅಶ್ವಶಕ್ತಿ, 173 ಎನ್ ಎಂ ತಿರುಗುಬಲ.
ಎಂಜಿನ್: 1364 ಸಿಸಿ ಡೀಸೆಲ್, 87 ಅಶ್ವಶಕ್ತಿ, 205 ಎನ್ ಎಂ ತಿರುಗುಬಲ.
ಮೈಲೇಜ್: ಪೆಟ್ರೋಲ್ 16.7 ಕೀ.ಮೀ. , ಡೀಸೆಲ್ 21.3 ಕೀ.ಮೀ.
ಅಂದಾಜು ಆನ್ ರೋಡ್ ಬೆಲೆ: 15.8 ಲಕ್ಷ ರು.ಗಳಿಂದ

22. ಷೆವರ್ಲೆ ಕ್ರೂಜ್
ಅಮೆರಿಕ ಮೂಲದ ಷೆವರ್ಲೆ ಸಂಸ್ಥೆಯು 'ಟ್ಯಾಂಕರ್' ನಿಂದ ಸ್ಪೂರ್ತಿ ಪಡೆದ ಆಕರ್ಷಕ ಕ್ರೂಜ್ ಕಾರನ್ನು ಒದಗಿಸುತ್ತಿದೆ. ಮುಂಭಾಗದಲ್ಲಿ ಗ್ರಿಲ್ ನಡುವೆ ಎದ್ದು ಕಾಣಿಸುವ ಷೆವರ್ಲೆ ಲಾಂಛನವು ಪ್ರಮುಖ ಆಕರ್ಷಣೆಯಾಗಿದೆ.
ಎಂಜಿನ್: 1998 ಸಿಸಿ ಡೀಸೆಲ್, 164 ಅಶ್ವಶಕ್ತಿ, 380 ಎನ್ ಎಂ ತಿರುಗುಬಲ.
ಮೈಲೇಜ್: ಡೀಸೆಲ್ 17.3 ಕೀ.ಮೀ.
ಅಂದಾಜು ಆನ್ ರೋಡ್ ಬೆಲೆ: 16.5 ಲಕ್ಷ ರು.ಗಳಿಂದ

ಪ್ರೀಮಿಯಂ ಎಸ್ ಯುವಿ - 23. ಟೊಯೊಟಾ ಫಾರ್ಚ್ಯುನರ್
ಪ್ರೀಮಿಯಂ ಗ್ರಾಹಕರು ಮಾತ್ರವಲ್ಲದೆ ರಾಜಕೀಯ ಜೊತೆಗೆ ಗಣ್ಯ ವ್ಯಕ್ತಿಗಳ ಪಾಲಿಗೂ ಟೊಯೊಟಾ ಫಾರ್ಚ್ಯುನರ್ ಫೇವರಿಟ್ ಗಾಡಿಯೆನಿಸಿಕೊಂಡಿದೆ. ಎತ್ತರದ ರಸ್ತೆ ಸಾನಿಧ್ಯವು ಇದರ ವಿಶಿಷ್ಟತೆಯಾಗಿದೆ.
ಎಂಜಿನ್: 2982 ಮತ್ತು 2494 ಸಿಸಿ ಡೀಸೆಲ್, 142 ಮತ್ತು 170 ಅಶ್ವಶಕ್ತಿ, 383 ಮತ್ತು 360 ಎನ್ ಎಂ ತಿರುಗುಬಲ.
ಮೈಲೇಜ್: ಡೀಸೆಲ್ ಆಟೋಮ್ಯಾಟಿಕ್ 16.28 ಕೀ.ಮೀ.
ಅಂದಾಜು ಆನ್ ರೋಡ್ ಬೆಲೆ: 29.53 ಲಕ್ಷ ರು.ಗಳಿಂದ

24. ಫೋರ್ಡ್ ಎಂಡೀವರ್
ಹೊಸ ತಲೆಮಾರಿನ ಫೋರ್ಡ್ ಎಂಡೀವರ್ ಭಾರತ ಮಾರುಕಟ್ಟೆಯನ್ನು ತಲುಪಿದ್ದು, ಅತ್ಯುತ್ತಮ ಬೇಡಿಕೆಯನ್ನು ಕಾಪಾಡಿಕೊಂಡಿದೆ. ಎಂಡೀವರ್ ಕೆಲವು ನಿರ್ದಿಷ್ಟ ಮಾದರಿಗಳ ಬುಕ್ಕಿಂಗ್ ಅವಧಿಯು ವಿಸ್ತರಿಸಿದೆ. ನೈಜ ಎಸ್‌ಯುವಿ ಚಾಲನಾ ಅನುಭವ ಇದು ಖಾತ್ರಿಪಡಿಸಲಿದೆ.
ಎಂಜಿನ್: 2198 ಮತ್ತು 3198 ಸಿಸಿ ಡೀಸೆಲ್, 158 ಮತ್ತು 197 ಅಶ್ವಶಕ್ತಿ, 385 ಮತ್ತು 470 ಎನ್ ಎಂ ತಿರುಗುಬಲ.
ಮೈಲೇಜ್: ಡೀಸೆಲ್ 14.2 ಮತ್ತು 10.9 ಕೀ.ಮೀ.
ಅಂದಾಜು ಆನ್ ರೋಡ್ ಬೆಲೆ: 29 ಲಕ್ಷ ರು.ಗಳಿಂದ


Click it and Unblock the Notifications








