ಹೃದಯದ ಬಡಿತ ಹೆಚ್ಚಿಸೋ ಷೆವರ್ಲೆ ಬೀಟ್ ಡೀಸೆಲ್ ರಿವ್ಯೂ
ಷೆವರ್ಲೆ ಬೀಟ್ ಡೀಸೆಲ್ ಕಾರು ಇದೀಗ ಮೈಲೇಜ್ ವಿಷ್ಯದಲ್ಲಿ ಎಲ್ಲರನ್ನೂ ಗಮನಸೆಳೆಯುತ್ತಿದೆ. ಇದು ಮೈಲೇಜ್ ಕಾರೆಂಬ ಖ್ಯಾತಿಯ ಇಂಡಿಕಾ ಇವಿ2 ಕಾರನ್ನೂ ಹಿಂದಿಕ್ಕಿದೆ. ಮಾರುತಿ ಸುಜುಕಿ ಸ್ವಿಫ್ಟ್‌ಗೂ ಚಾಲೆಂಜ್ ನೀಡಲು ಬೀಟ್ ಹೆದರೊದಿಲ್ಲ.
ಸುಮಾರು 4.47, 663 ರು. ಆರಂಭಿಕ ಎಕ್ಸ್ ಶೋರೂಂ ದರದಲ್ಲಿ ದೊರಕುವ ಷೆವರ್ಲೆ ಬೀಟ್ ಡೀಸೆಲ್ ತನ್ನ ಡೈನಾಮಿಕ್, ಸ್ಟೈಲಿಷ್ ಮತ್ತು ಇಂಧನ ದಕ್ಷತೆ ಇತ್ಯಾದಿಗಳಿಂದ ಗಮನಸೆಳೆಯುತ್ತದೆ. ಬನ್ನಿ ಈ ಪುಟ್ಟ ಕಾರಿನ ಬಗ್ಗೆ ಕೊಂಚ ತಿಳಿದುಕೊಳ್ಳೊಣ.

ಇಂಟಿರಿಯರ್‌ಗೆ ಇಣುಕಿದಾಗ ಹಲವು ಆಕರ್ಷಕ ಫೀಚರುಗಳು ಕಂಡುಬರುತ್ತವೆ. ಸೆಂಟ್ರಲ್ ಕಂಟ್ರೋಲ್ ಪ್ಯಾನೆಲ್ ಮತ್ತು ಡ್ಯಾಷ್ ಬೋರ್ಡ್ ಇಷ್ಟವಾಗುವಂತಿದೆ. ರೇಡಿಯೋ, ಸಿಡಿ ಪ್ಲೇಯರ್, ಎಂಪಿ3, ಯುಎಸ್‌ಬಿ, ಆಕ್ಸ್ ಇನ್ ಇತ್ಯಾದಿಗಳಿವೆ. ಷೆವರ್ಲೆ ಬೀಟ್ ಡಿಸೇಲ್ ಕಾರಿನ ಇನ್ಸಟ್ರುಮೆಂಟ್ ಕ್ಲಸ್ಟರಿನಲ್ಲಿ ಎಲ್‌ಇಡಿ ಬ್ಯಾಕ್‌ಲೀಟ್ ನ ಅನಲಾಗ್ ಸ್ಪೀಡೋಮೀಟರ್, ಎಲ್‌ಸಿಡಿ ಡಿಜಿಟಲ್ ಟೆಕೊಮೀಟರ್ ಮತ್ತು ಕಣ್ಮನ ಸೆಳೆಯುವ ಕಂಟ್ರೋಲ್ ಬಟನ್‌ಗಳು ಇವೆ. ಕಾರಿನೊಳಗೆ ಸನ್ ಗ್ಲಾಸ್, ಕಪ್, ಬಾಟಲ್ ಮತ್ತು ಸಿಡಿ ಪ್ಲೇಯರ್ ಇಡಲು ಅನುಕೂಲವಾಗುವ ಫೀಚರುಗಳಿವೆ.
ಬೀಟ್ ಡೀಸೆಲ್ ಕಾರು ನೂತನ 1.0 ಎಕ್ಸ್ಎಸ್‌ಡಿಇ ಸ್ಮಾರ್ಟ್ ಟೆಕ್ ಕಾಮನ್ ರೇಲ್ ಡೀಸೆಲ್ ಎಂಜಿನ್ ಹೊಂದಿದೆ. ಇದು 58.5 ಹಾರ್ಸ್ ಪವರ್ ಮತ್ತು 150 ಟಾರ್ಕ್ ಪವರ್ ನೀಡುತ್ತದೆ. ಕಂಪನಿಯ ಪ್ರಕಾರ ಇದರ ಮೈಲೇಜ್ 25.44 ಕಿ.ಮೀ. ರಸ್ತೆಗಳಿಗೆ ಅನುಗುಣವಾಗಿ ಮೈಲೇಜ್ ಹೆಚ್ಚುಕಡಿಮೆ ಆದೀತು.
ಕಾರಿನ ಹಿಂಭಾಗದ ಸೀಟನ್ನು 60:40 ಅನುಪಾತದಲ್ಲಿ ಫೋಲ್ಡ್ ಮಾಡಬಹುದು. ಈ ಕಾರಿನ ನಾಲ್ಕು ಕಿಟಕಿಗಳೂ ಪವರ್ ವಿಂಡೋ ಸೌಲಭ್ಯ ಹೊಂದಿದೆ. ಅಂದರೆ ಒಂದು ಬಟನ್ ಪ್ರೆಸ್ ಮಾಡುವ ಮೂಲಕ ಕಿಟಕಿ ಹಾಕಬಹುದು. ಕಾರಿನ ಒಳಭಾಗದಿಂದಲೇ ಸೈಡ್ ಮಿರರ್ ಹೊಂದಾಣಿಕೆ ಮಾಡಬಹುದಾದ ಫೀಚರೊಂದು ಇದರಲ್ಲಿದೆ. ಕೂಲ್ ಆದ ಪ್ರಯಾಣಕ್ಕೆ ಸಹಕರಿಸುವ ಆಟೋಮ್ಯಾಟಿಕ್ ಏರ್ ಕಂಡಿಷನರ್ ಇದರಲ್ಲಿದೆ.
ಸುರಕ್ಷತೆಯ ಪ್ರಯಾಣಕ್ಕೆ ಸೂಕ್ತವಾಗುವಂತೆ ಎರಡು ಏರ್‌ಬ್ಯಾಗ್ ಇದರಲ್ಲಿದೆ. ಅಂದರೆ ಮುಂಭಾಗದಲ್ಲಿ ಚಾಲಕ ಮತ್ತು ಸಹಪ್ರಯಾಣಿಕರ ಮುಂಭಾಗದಲ್ಲಿ ಏರ ಬ್ಯಾಗ್ ಇದೆ. ಸೇಫ್ಟಿಗಾಗಿ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಇದೆ. ಈ ಕಾರನ್ನು 9 ಬಣ್ಣಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಷೆವರ್ಲೆ ಕಾರಿನ ಡ್ರೈವಿಂಗ್ ಅನುಭವ ಇಷ್ಟಪಟ್ಟವರೂ ಈ ಕಾರನ್ನು ಖರೀದಿಸಬಹುದು.


Click it and Unblock the Notifications








