ಗೇಮ್ ಚೇಂಜರ್ ಸಿಟ್ರನ್ ಬಸಾಲ್ಟ್ ರಿವ್ಯೂ: ಆಕರ್ಷಕ ಲುಕ್, ರಾಶಿ ಫೀಚರ್ಸ್, ಭರ್ಜರಿ ಮೈಲೇಜ್
ಜನಪ್ರಿಯ ವಾಹನ ತಯಾರಕ ಸಂಸ್ಥೆಯಾದ ಫ್ರೆಂಚ್ ಮೂಲದ ಸಿಟ್ರನ್ (Citroen) ಭಾರತೀಯ ಮಾರುಕಟ್ಟೆಗೆ 2019 ರಲ್ಲಿ ಕಾಲಿಟ್ಟಿತ್ತು. 2021 ರಲ್ಲಿ, ಕಂಪನಿಯು ತನ್ನ ಪ್ರಮುಖ ಎಸ್‍ಯುವಿಯಾದ C5 ಏರ್‌ಕ್ರಾಸ್ ಅನ್ನು ಬಿಡುಗಡೆ ಮಾಡಿತು ಮತ್ತು ಇಲ್ಲಿಯವರೆಗೆ, ಸಿಟ್ರನ್ ಒಟ್ಟು 4 ಕಾರು ಮಾದರಿಗಳನ್ನು ಬಿಡುಗಡೆ ಮಾಡಿದೆ. ಹೊಸ ಬಸಾಲ್ಟ್ ಭಾರತೀಯ ಮಾರುಕಟ್ಟೆಗೆ ಕಂಪನಿಯ ಪೋರ್ಟ್‌ಫೋಲಿಯೊದಿಂದ 5ನೇ ಕಾರ್ ಆಗಿದೆ. ಹೊಸ ಸಿಟ್ರನ್ ಬಸಾಲ್ಟ್ (Citroen Basalt) ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ವಿಶೇಷವೆಂದರೆ ಟಾಟಾ ಮೋಟಾರ್ಸ್ ತನ್ನ ಕರ್ವ್ (ಪೆಟ್ರೋಲ್-ಡೀಸೆಲ್) ಎಸ್‍ಯುವಿ ಕೂಪೆ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.
ಇದೇ ವೇಳೆ ಸಿಟ್ರನ್ ಎದುರಾಳಿಯಾಗಿ ತನ್ನ ಹೊಸ ಕೂಪೆ ಎಸ್‌ಯುವಿಯನ್ನು ತಂದಿದೆ. ಭಾರತದಲ್ಲಿ ಎಸ್‌ಯುವಿ ಕೂಪೆಗಳು ಅವು ಐಷಾರಾಮಿ ತಯಾರಕರಿಂದ ಬಂದಿರುವುದರಿಂದ ಸಾಕಷ್ಟು ದುಬಾರಿಯಾಗಿದೆ. ಆದರೆ ಬಸಾಲ್ಟ್ ಮತ್ತು ಕರ್ವ್ ಮಾದರಿಗಳು ಭಾರತದಲ್ಲಿ ಕೈಗೆಟುಕುವ ಎಸ್‍ಯುವಿ ಕೂಪ್‌ಗಳಾಗಿವೆ. ಇತ್ತೀಚೆಗೆ ನಾವು ಗೋವಾದಲ್ಲಿ ಹೊಸ ಸಿಟ್ರನ್ ಬಸಾಲ್ಟ್ ಎಸ್‍ಯುವಿ ಕೂಪ್ ಮಾದರಿಯನ್ನು ಡ್ರೈವ್ ಮಾಡಿದ್ದೇವೆ. ಇದರ ಅನುಭವ ಮತ್ತು ಈ ಕಾರಿನ ಕುರಿತು ಹೆಚ್ಚಿನ ರಿವ್ಯೂ ಮಾಹಿತಿ ಇಲ್ಲಿದೆ.

ವಿನ್ಯಾಸ: ಹೊಸ ಸಿಟ್ರನ್ ಬಸಾಲ್ಟ್ ತುಂಬಾ ಆಸಕ್ತಿದಾಯಕ ವಿನ್ಯಾಸವನ್ನು ಹೊಂದಿದೆ. ಈ ಎಸ್‍ಯುವಿ ಕೂಪೆ ಬಾಡಿ ಸ್ಟೈಲ್ ಅನ್ನು ಹೊಂದಿದೆ. ಈ ಹೊಸ ಮಾದರಿಯ ಮುಂಭಾಗದಲ್ಲಿ ಲ್ಇಡಿ ಡಿಆರ್ಎಲ್ಗಳು ಮತ್ತು ಎಲ್ಇಡಿ ಹೆಡ್ ಲೈಟ್ ಸೆಟಪ್ ಅನ್ನು ಪಡೆಯುತ್ತದೆ. ಇದರ ಹೊರತಾಗಿ ನೀವು ಪಿಯಾನೋ ಬ್ಲ್ಯಾಕ್ ಫಿನಿಶಿಂಗ್ ಮತ್ತು ಸ್ವಲ್ಪ ಪ್ರಮಾಣದ ಕ್ರೋಮ್ ಅನ್ನು ಹೊಂದಿದೆ. ಈ ಹೊಸ ಕಾರಿನಲ್ಲಿ ಪಾಂಗ್ ಲೈಟ್ ಹ್ಯಾಲೊಜೆನ್ ಯುನಿಟ್ ಆಗಿದೆ.
ಹೊಸ ಸಿಟ್ರನ್ ಬಸಾಲ್ಟ್ ಬದಿಯಲ್ಲಿ 16-ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳು ಮತ್ತು ಸುತ್ತಲೂ ಬಾಡಿ ಕ್ಲಾಡಿಂಗ್ ಅನ್ನು ಪಡೆಯುತ್ತದೆ. ಸೈಡ್ ಮಿರರ್‌ಗಳು ಗ್ಲಾಸ್ ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ. ಇನ್ನು ಈ ಮಾದರಿಯಲ್ಲಿ ಸ್ಲೋಪಿಂಗ್ ರೂಫ್‌ಲೈನ್ ಮತ್ತು ಸುತ್ತುವ 3D ಟೈಲ್‌ಲೈಟ್‌ಗಳನ್ನು ನೋಡಬಹುದು.

ಇನ್ನು ಈ ಸಿಟ್ರನ್ ಬಸಾಲ್ಟ್ ಕಾರಿನ ಹಿಂಭಾಗದಲ್ಲಿ, ನೀವು ಶಾರ್ಕ್‌ಫಿನ್ ಆಂಟೆನಾ ಮತ್ತು ಡಿಫೊಗರ್‌ಗಳನ್ನು ಪಡೆಯುತ್ತದೆ, ಆದರೆ ಹಿಂಭಾಗದ ವೈಪರ್‌ಗಳಿಲ್ಲ. ಇನ್ನು ಹಿಂಭಾಗದಲ್ಲಿ ಪ್ಯೂರ್ ಟೆಕ್, ಸಿಟ್ರನ್ ಮತ್ತು ಬಸಾಲ್ಟ್ ಎಂದು ಬರೆದ ಬ್ಯಾಡ್ಜ್‌ಗಳನ್ನು ನೋಡಬಹುದು. ಇನ್ನು ಈ ಕಾರಿನಲ್ಲಿ ರಿವರ್ಸ್ ಕ್ಯಾಮೆರಾವನ್ನು ಹೊಂದಿದೆ.
ಇಂಟಿರಿಯರ್ ಮತ್ತು ಫೀಚರ್ಸ್: ಬಸಾಲ್ಟ್ ಒಳಭಾಗದಲ್ಲಿ, ಟ್ರಿಪಲ್-ಟೋನ್ ಡ್ಯಾಶ್‌ಬೋರ್ಡ್ ಅನ್ನು ಪಡೆಯುತ್ತದೆ. ವೈರ್‌ಲೆಸ್ Apple CarPlay ಮತ್ತು Android Auto ಕನೆಕ್ಟಿವಿಟಿ ಹೊಂದಿರುವ 10.25 ಟಚ್‌ಸ್ಕ್ರೀನ್ ಅನ್ನು ಹೊಂದಿದೆ ಮತ್ತು 15W ವೈರ್‌ಲೆಸ್ ಚಾರ್ಜರ್ ಅನ್ನು ಸಹ ಪಡೆಯುತ್ತದೆ. ಈ ಕಾರಿನ 7-ಇಂಚಿನ TFT ಡಿಸ್ ಪ್ಲೇಯನ್ನು ಪಡೆಯುತ್ತದೆ. ಈ ಡಿಸ್‌ಪ್ಲೇಯು 3 ವಿಭಿನ್ನ ಥೀಮ್‌ಗಳನ್ನು ಹೊಂದಿದೆ ಮತ್ತು ಚಾಲಕನ ಅಗತ್ಯಕ್ಕೆ ಅನುಗುಣವಾಗಿ ಕಸ್ಟಮೈಸ್ ಮಾಡಬಹುದು.

ಎರಡೂ ಬದಿಗಳಲ್ಲಿ ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್ ಗಳೊಂದಿಗೆ ಫ್ಲಾಟ್-ಬಾಟಮ್ ಸ್ಟೀರಿಂಗ್ ವ್ಹೀಲ್ ಅನ್ನು ಪಡೆಯುತ್ತದೆ. ಈ ಕಾರಿನ ಮುಂಭಾಗ ಮತ್ತು ಹಿಂಭಾಗದ ಎರಡೂ ಸೀಟುಗಳು ಅತ್ಯಂತ ಆರಾಮದಾಯಕವಾಗಿದೆ. ಹೊಸ ವಿಷಯವೆಂದರೆ ಹಿಂಬದಿಯ ಸೀಟಿನಲ್ಲಿ 3 ಹಂತದ ಹೊಂದಾಣಿಕೆಗಳನ್ನು ಹೊಂದಿರುವುದರಿಂದ ಉತ್ತಮ ಥೈ ಸಂಪೂರ್ಟ್ ಇದೆ. ಇದರಿಂದ ದೀರ್ಘಕಾಲ ಪ್ರಯಾಣಿಸಲು ಕಷ್ಟವಾಗುವುದಿಲ್ಲ.
ಈ ಸಿಟ್ರನ್ ಬಸಾಲ್ಟ್ ಕಾರಿನ ಹಿಂಭಾಗದಲ್ಲಿ AC ವೆಂಟ್‌ಗಳು ಮತ್ತು 2 ಚಾರ್ಜಿಂಗ್ ಸಾಕೆಟ್‌ಗಳಿವೆ. ಒಟ್ಟಾರೆಯಾಗಿ ಬಸಾಲ್ಟ್ ಕ್ಯಾಬಿನ್ ಪ್ರೀಮಿಯಂ ಅನ್ನು ಅನುಭವಿಸುತ್ತದೆ ಮತ್ತು ಯೋಗ್ಯವಾದ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಆದರೆ ಇದು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಸನ್‌ರೂಫ್ ಮುಂತಾದ ಕೆಲವು ಫೀಚರ್ಸ್ ಗಳನ್ನು ಹೊಂದಿಲ್ಲ.

ಎಂಜಿನ್: ಹೊಸ ಸಿಟ್ರನ್ ಬಸಾಲ್ಟ್ ಮಾದರಿಯಲ್ಲಿ 2 ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ ಒಂದು 1.2 ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ ಆಗಿದ್ದು, ಇದು 82 bhp ಮತ್ತು 115 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು , 1.2 ಟರ್ಬೊ ಪೆಟ್ರೋಲ್ 3-ಸಿಲಿಂಡರ್ ಎಂಜಿನ್ 109 bhp ಪವರ್ ಅನ್ನು ಉತ್ಪಾದಿಸುತ್ತದೆ. ಇದು ಮ್ಯಾನುವಲ್ 190Nm ಮತ್ತು ಆಟೋಮ್ಯಾಟಿಕ್ 205Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಡ್ರೈವಿಂಗ್ ಅನುಭವ: ಹೊಸ ಸಿಟ್ರನ್ ಬಸಾಲ್ಟ್ ಕಾರಿನ ಸ್ಟೀರಿಂಗ್ ಸ್ವಲ್ಪ ಹೆವಿ ಫೀಲ್ ಕೊಡೂತ್ತದೆ. ಇದು ಭಾರೀ ವೇಗದಲ್ಲಿ ಚಲಿಸುವಾಗ ಉತ್ತಮವಾಗಿರುತ್ತದೆ. ಸ್ಟೀರಿಂಗ್ ಪ್ರತಿಕ್ರಿಯೆ ಉತ್ತಮವಾಗಿದೆ. ಇನ್ನು ಈ ಕಾರಿನ ಸಸ್ಪೆಕ್ಷನ್ ಬಗ್ಗೆ ಹೇಳುವುದಾದರೆ, ತ್ಯುತ್ತಮವಾಗಿದೆ ಎಂಬುವುದರಲ್ಲಿ ಎರಡೂ ಮಾತಿಲ್ಲ. ದೊಡ್ದ ಗುಂಡಿಗಳು ಮತ್ತು ಹಂಪ್ ಗಳನ್ನು ದಾಟಿ ಹೋಗುವಾಗ ಒಳಗೆ ನಮಗೆ ಸಣ್ಣ ಜಂಪ್ ಅಥವಾ ಯಾವುದೇ ಕಿರಿಕಿರಿ ಅನುಭವವಾಗುವುದಿಲ್ಲ. NVH ಮಟ್ಟಗಳು ಯೋಗ್ಯವಾಗಿವೆ.

ಸುರಕ್ಷತೆಯ ದೃಷ್ಟಿಯಿಂದ, ಹೊಸ ಸಿಟ್ರನ್ ಬಸಾಲ್ಟ್ ಕಾರಿನಲ್ಲಿ 6 ಏರ್‌ಬ್ಯಾಗ್‌ಗಳು, ABS, EBD, ISOFIX ಮತ್ತು ಇನ್ನೂ ಅನೇಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಈ ಕಾರಿನ ಮೈಲೇಜ್ ಬಗ್ಗೆ ಹೇಳುವುದಾದರೆ, ಇದು 18 ರಿಂದ 19.5 ಕಿ.ಮೀ.ವರೆಗೆ ಮೈಲೇಜ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಡ್ರೈವ್ ಸ್ಪಾರ್ಕ್ ಅಭಿಪ್ರಾಯ: ಸಿಟ್ರನ್ ಬಸಾಲ್ಟ್ ಎಸ್‍ಯುವಿ ಕೂಪೆಯು ಭಾರತೀಯ ಮಾರುಕಟ್ಟೆಯಲ್ಲಿ ಮಿಡ್ ಸೈಜ್ ಎಸ್‍ಯುವಿಗೆ ಅತ್ಯಾಕರ್ಷಕ ಸೇರ್ಪಡೆಯಾಗಿದೆ. ಕಾರು ವಿಶಿಷ್ಟವಾದ ಬಾಹ್ಯ ವಿನ್ಯಾಸ ಮತ್ತು ಯೋಗ್ಯ ವೈಶಿಷ್ಟ್ಯಗಳನ್ನು ಹೊಂದಿದ್ದು ಅದು ಖಂಡಿತವಾಗಿಯೂ ಯುವ ಖರೀದಿದಾರರನ್ನು ಆಕರ್ಷಿಸುತ್ತದೆ. ಇದರಿಂದ ನೀವು ಯೋಗ್ಯವಾದ ವೈಶಿಷ್ಟ್ಯಗಳನ್ನು ಹೊಂದಿರುವ, ಉತ್ತಮವಾಗಿ ಡಿಸೈನ್, ಉತ್ತಮವಾಗಿ ಚಾಲನೆ ಅನುಭವ ಮತ್ತು ಯೋಗ್ಯವಾದ ಪವರ್ ಹೊಂದಿರುವ ಕಾರನ್ನು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.


Click it and Unblock the Notifications








