Honda Amaze Review: ಹೋಂಡಾ ಅಮೇಜ್ ರಿವ್ಯೂ: ಅತ್ಯುತ್ತಮ ಕಾಂಪ್ಯಾಕ್ಟ್ ಸೆಡಾನ್.. ಹೇಗಿದೆ?
2013.. ಆಗತಾನೇ ಭಾರತದ ಕಾರು ಮಾರುಕಟ್ಟೆಯಲ್ಲಿ ಎಸ್‌ಯುವಿಗಳು ನಿಧಾನವಾಗಿ ಜನಪ್ರಿಯತೆ ಗಳಿಸುತ್ತಿದ್ದವು. ಜಪಾನ್‌ನ ಪ್ರಮುಖ ತಯಾರಕ ಹೋಂಡಾ, ಮಾರುತಿ ಸುಜುಕಿ ಡಿಜೈರ್ ಕಾರಿಗೆ ಪ್ರಬಲವಾದ ಪ್ರತಿಸ್ಪರ್ಧೆಯೊಡ್ಡಲು 'ಬ್ರಿಯೊ' ಹ್ಯಾಚ್‌ಬ್ಯಾಕ್‌ಗೆ ಹೋಲಿಕೆಯಾಗಬಲ್ಲ ಹೊಚ್ಚ ಹೊಸ ಸಬ್-4-ಮೀಟರ್ ಸೆಡಾನ್ 'ಅಮೇಜ್'ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಈಗ ಮಾರುತಿ ಸುಜುಕಿಯು ಸರಿ ಸುಮಾರು ದಶಕದ ಬಳಿಕ, 4ನೇ ತಲೆಮಾರಿನ ಡಿಜೈರ್ (4th Generation Dzire) ಕಾರನ್ನು ಮಾರಾಟಕ್ಕೆ ತಂದಿದೆ. ಅದಕ್ಕೆ ಎದುರಾಳಿಯಾಗಿ ಹೋಂಡಾ 3ನೇ ತಲೆಮಾರಿನ ಅಮೇಜ್ (3rd Generation Amaze) ಸೆಡಾನ್‌ನ್ನು ಪರಿಚಯಿಸಿದೆ.
ಇತ್ತೀಚೆಗೆ ನಮ್ಮ ತಂಡಕ್ಕೆ 2025ರ ಹೊಚ್ಚ ಹೊಸ ಹೋಂಡಾ ಅಮೇಜ್ (Honda Amaze) ಸೆಡಾನ್‌ನ್ನು ಟೆಸ್ಟ್ ಡ್ರೈವ್ ನಡೆಸುವ ಅವಕಾಶ ದೊರೆಯಿತು. ಬನ್ನಿ.. ಈ ನೂತನ ಕಾರಿನ ವಿನ್ಯಾಸ ಹೇಗಿದೆ.. ಕಾರ್ಯಕ್ಷಮತೆ ಏನು.. ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದರ ಕುರಿತಂತೆ ಸಂಪೂರ್ಣವಾಗಿ ತಿಳಿಯೋಣ.

ಹೋಂಡಾ ಅಮೇಜ್ ವಿನ್ಯಾಸ & ವೈಶಿಷ್ಟ್ಯಗಳು: ಈ ಕಾರು ಹೊರಭಾಗದಲ್ಲಿ ಅತ್ಯಾಧುನಿಕವಾದ ವಿನ್ಯಾಸ (ಡಿಸೈನ್) ಒಳಗೊಂಡಿದೆ. ಅದರ ಒಂದಷ್ಟು ಅಂಶಗಳು ಸಿಟಿ ಸೆಡಾನ್ ಹಾಗೂ ಎಲಿವೇಟ್ ಎಸ್‌ಯುವಿಗಳಿಗೂ ಹೋಲಿಕೆಯಾಗುತ್ತದೆ. ನೂತನ ಅಮೇಜ್ ಕಾರು ಫ್ರಂಟ್ (ಮುಂಭಾಗ) ಉತ್ತಮವಾರುವ ಸ್ಲೀಕ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, 'ಐಬ್ರೋ' ಆಕಾರಕ್ಕೆ ಹೋಲಿಕೆಯಾಗಬಲ್ಲ ಎಲ್ಇಡಿ ಡಿಆರ್‌ಎಲ್‌ಗಳು, ವಿಶಿಷ್ಟವಾಗಿರುವ ಬಂಪರ್, ಗ್ರಿಲ್ ಹಾಗೂ ಎಲ್ಇಡಿ ಫಾಗ್ ಲೈಟ್‌ಗಳನ್ನು ಪಡೆದಿದೆ.
ಹೊಸ ಹೋಂಡಾ ಅಮೇಜ್‌ನ ಸೈಡ್ (ಬದಿಗಳು) ವಿನ್ಯಾಸವು ಚೆನ್ನಾಗಿದೆ. 15-ಇಂಚಿನ ಡುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಈ ಕಾರಿನ ಒಆರ್‌ವಿಎಂಗಳನ್ನು ಎ-ಪಿಲ್ಲರ್ ಬದಲಿಗೆ ಡೋರ್‌ಗಳ ಮೇಲೆ ಇರಿಸಲಾಗಿದೆ. ರೇರ್ (ಹಿಂಭಾಗ) ವಿನ್ಯಾಸವು ಆಕರ್ಷಕವಾಗಿದೆ. 'ವಿಂಗ್' ರೀತಿಯಲ್ಲಿರುವ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಹೊಂದಿದೆ.

ನೂತನ ಹೋಂಡಾ ಅಮೇಜ್‌ನಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು 416 ಲೀಟರ್ ಸಾಮರ್ಥ್ಯದ ಸ್ಪೇನ್‌ನ್ನು ಪಡೆದಿದೆ. ಈ ಕಾರು ಅಬ್ಸಿಡಿಯನ್ ಬ್ಲೂ ಪರ್ಲ್, ಮೆಟಿರೊಯ್ಡ್ ಗ್ರೇ ಮೆಟಾಲಿಕ್, ರೇಡಿಯಂಟ್ ರೆಡ್ ಮೆಟಾಲಿಕ್, ಗೋಲ್ಡನ್ ಬ್ರೌನ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್ & ಲೂನಾರ್ ಸಿಲ್ವರ್ ಮೆಟಾಲಿಕ್ ಎಂಬ 6 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಹೊಸ ಅಮೇಜ್‌ನ ಒಳಭಾಗದ ವಿನ್ಯಾಸವು ಕೂಡ ಸಾಕಷ್ಟು ಅತ್ಯಾಧುನಿಕವಾಗಿದ್ದು, ನೋಡಲು ಸುಂದರವಾಗಿದೆ. ಇದರ 'ಡ್ಯಾಶ್‌ಬೋರ್ಡ್'ನ್ನು ಎಲ್ಲಿಯೂ ನೋಡಿದ ರೀತಿಯಲ್ಲಿ ಭಾಸವಾಗುತ್ತದೆ. ಆದರೆ, ಕಂಪನಿಯು ಎಲಿವೇಟ್‌ನ 'ಟ್ರಿಪಲ್-ಲೇಯರ್ ಡ್ಯಾಶ್‌ಬೋರ್ಡ್'ನ್ನೇ ಈ ಅಮೇಜ್‌ನಲ್ಲಿಯೂ ಅಳವಡಿಕೆ ಮಾಡಿದ್ದು, ಕಾರಿನ ಗಾತ್ರಕ್ಕೆ ಸರಿಹೊಂದಿಸಲಾಗಿದೆ. ಸೀಟುಗಳು ಸಹ ಹೆಚ್ಚು ಆರಾಮದಾಯಕವಾಗಿವೆ.

ಹೋಂಡಾ ಅಮೇಜ್ ಸೆಡಾನ್ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ 8-ಇಂಚಿನ 'ಫ್ಲೋಟಿಂಗ್' ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಸೆಮಿ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, 3-ಸ್ಪೋಕ್ ಸ್ಟೀರಿಂಗ್ ವೀಲ್, 2-ಕಪ್ ಹೋಲ್ಡರ್‌ಗಳು ಹಾಗೂ ಪ್ಯಾಡಲ್ ಶಿಫ್ಟರ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ನೂತನ ಹೋಂಡಾ ಅಮೇಜ್ ಕಾರು ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಎಡಿಎಸ್ಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಪಡೆದಿದೆ.

ಹೋಂಡಾ ಅಮೇಜ್ ಕಾರ್ಯಕ್ಷಮತೆ & ಅಳತೆ: ಈ ಕಾರು ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. ಇ20 ಫ್ಯುಯೆಲ್ ಬೆಂಬಲಿಸಬಲ್ಲ ಈ ಕಾರಿನಲ್ಲಿ 1.2-ಲೀಟರ್ 4-ಸಿಲಿಂಡರ್ ಐ-ವಿಟಿಇಸಿ ಎಂಜಿನ್ ಇದ್ದು, 6,000 ಆರ್‌ಪಿಎಂನಲ್ಲಿ 88.5 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 4,800 ಆರ್‌ಪಿಎಂನಲ್ಲಿ 110 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ನೂತನ ಹೋಂಡಾ ಅಮೇಜ್ ಸೆಡಾನ್ ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್/ ಸಿವಿಟಿ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. 8.65 ರಿಂದ 19.46 ಕೆಎಂಪಿಎಲ್‌ವರೆಗೂ ಮೈಲೇಜ್ ನೀಡುತ್ತದೆ. ಹಾಗೆಯೇ ಈ ಕಾರು 3,995 ಎಂಎಂ ಉದ್ದ, 1,733 ಎಂಎಂ ಅಗಲ, 1,500 ಎಂಎಂ & 2,470 ಎಂಎಂ ಉದ್ದದ ವೀಲ್‌ಬೇಸ್ ಹೊಂದಿದೆ. ಜೊತೆಗೆ 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಕೂಡ ಪಡೆದಿದೆ. ಅಲಾಯ್ ವೀಲ್‌ಗಳೊಂದಿಗೆ 185/60 ಆರ್15 ಟೈರ್‌ಗಳನ್ನು ಒಳಗೊಂಡಿದೆ.

ಚಾಲನಾ ಅನುಭವ: ನಮಗೆ ಹೋಂಡಾ ಅಮೇಜ್ ಸೆಡಾನ್ ಅದ್ಭುತವಾದ ಚಾಲನಾ ಅನುಭವವನ್ನು ಒದಗಿಸಿತು. ಈ ಕಾರಿನಲ್ಲಿ ಆರಾಮದಾಯಕವಾಗಿ 5 ಜನರು ಕುಳಿತುಕೊಂಡು ಪ್ರಯಾಣಿಸಬಹುದು. ಎಂಜಿನ್‌ನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿರುವುದರಿಂದ ಅಮೇಜ್ ಸುಲಭವಾಗಿ ಚಲಿಸಿತು. ಹಾಗೆಯೇ ಯಾವೊದೋ ಪ್ರೀಮಿಯಂ ಕಾರಿನಲ್ಲಿ ಓಡಾಡಿದ ರೀತಿಯಲ್ಲಿ ಭಾಸವಾಗುತ್ತಿತ್ತು.
ಈ ಕಾರು ತಿರುವು, ಹಳ್ಳ - ದಿಣ್ಣೆ ಸೇರಿದಂತೆ ಎಲ್ಲ ವಿವಿಧ ರಸ್ತೆಯಲ್ಲಿ ಸುಲಭವಾಗಿ ಸಂಚರಿಸಿತು. ಸಸ್ಪೆನ್ಷನ್ ಸೆಟಪ್ ಹಾಗೂ ಬ್ರೇಕಿಂಗ್ ಸಿಸ್ಟಮ್‌ಗಳು ಕೂಡ ಹೆಚ್ಚು ಉತ್ತಮವಾಗಿದ್ದು, ರಸ್ತೆಯ ಮೇಲೆ ಬಿಗಿಯಾದ ಹಿಡಿತ ಒದಸಿದವು. ನಮಗೆ ಅಮೇಜ್ ಸೆಡಾನ್ ಓಡಿಸುವಾಗ ಎಲ್ಲಿಯೂ ಬೇಸರ ತರಿಸಲಿಲ್ಲ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಹೊಚ್ಚ ಹೊಸ ಹೋಂಡಾ ಅಮೇಜ್ ಸೆಡಾನ್ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಹೆಚ್ಚಿನ ಸಂಖ್ಯೆಯ ಯುವ ಗ್ರಾಹಕರನ್ನು ಸೆಳೆಯುವ ರೀತಿಯಲ್ಲಿದೆ. ಅದರಲ್ಲೂ ಟ್ರೆಂಡ್ ಸೆಟರ್ ಮಾರುತಿ ಸುಜುಕಿ ಡಿಜೈರ್ ಕಾರಿಗೆ ನೇರ ಪ್ರತಿಸ್ಪರ್ಧಿಯಾಗಿದ್ದು, ದೇಶೀಯ ಗ್ರಾಹಕರಿಂದ ಈ ಅಮೇಜ್‌ಗೆ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








