ವಾರೆ ವ್ಹಾ ಹೋಂಡಾ ಜಾಝ್...zzz..! ಸಮಗ್ರ ವಿಮರ್ಶೆ ಓದಿ
ಈಗ ಪ್ರತಿಯೊಬ್ಬ ವಾಹನ ಪ್ರೇಮಿಯ ಮನದಲ್ಲೂ ಇದೇ ಉಚ್ಚಾರ ಓಡಾಡುತ್ತಿರಬಹುದು ಹೋಂಡಾ ಜಾಝ್...zzz..!. ಹೌದು, ಆಲ್ ನ್ಯೂ ಹೋಂಡಾ ಜಾಝ್ ಪ್ರೀಮಿಯಂ ಹ್ಯಾಚ್ ಬ್ಯಾಕ್ ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಿದ್ದು, ಸೌಂದರ್ಯದಿಂದ ಹಿಡಿದು, ಎಂಜಿನಿ ನಿರ್ವಹಣೆ, ಆಯಾಮ, ಅನುಕೂಲ, ಆರಾಮದಾಯಕತೆ, ಇಂಧನ ಕ್ಷಮತೆ ಹೀಗೆ ಎಲ್ಲ ವಿಚಾರದಲ್ಲೂ ಪರಿಪೂರ್ಣ ಪ್ಯಾಕೇಜ್ ಅನ್ನು ನೀಡುವಲ್ಲಿ ಸಫಲವಾಗಿದೆ.
Also Read : ಇಂದಿನ ರೋಚಕ ಸುದ್ದಿಗಳು
ಆಲ್ ನ್ಯೂ ಜಾಝ್; ನೀವು ಅರಿತುಕೊಳ್ಳಬೇಕಾದ 24 ಅಂಶಗಳು
ಜಾಝ್ ಹಿಂದಿನ ಮಾದರಿಯು ಭಾರತದಲ್ಲಿ ಅಂತದ್ದೇನು ಯಶ ಸಾಧಿಸಿರಲಿಲ್ಲ. ಆದರೆ ಹೊಸ ತಲೆಮಾರಿನ ಜಾಝ್ ತನ್ನೆಲ್ಲ ಕೊರತೆಗಳನ್ನು ನೀಗಿಸಿಕೊಂಡು ಗ್ರಾಹಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಲಿದೆ ಎಂಬ ಭರವಸೆಯನ್ನು ಜಪಾನ್ ಮೂಲದ ಸಂಸ್ಥೆ ಹೊಂದಿದೆ. ಈಗ ಹೊಸ ಜಾಝ್ ಕಾರಿನ ಬಗಿಗಿನ ಸಮಗ್ರ ವಿಮರ್ಶಾತ್ಮಕ ಲೇಖನವನ್ನು ನಿಮ್ಮ ಮುಂದಿಡಲಾಗುವುದು.

ವಿನ್ಯಾಸ - ಮುಂಭಾಗ
ನಿಸ್ಸಂಶವಾಗಿಯೂ ಹೊಸ ಜಾಝ್ ಕಾರಿನಲ್ಲಿ ಕ್ರೀಡಾತ್ಮಕ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಮುಂದುಗಡೆ ದಿಟ್ಟವಾದ ಹೋಂಡಾ ಲಾಂಛನ, ಗ್ರಿಲ್ ಹಾಗೂ ಹೆಡ್ ಲೈಟ್ ಮನಸೆಳೆಯಲಿದೆ.
ಎತ್ತಿ ತೋರಿಸು: ಸ್ಪೋರ್ಟಿ ಸ್ಲೀಕ್ ಹೆಡ್ ಲ್ಯಾಂಪ್, ಫ್ರಂಟ್ ಫಾಗ್ ಲ್ಯಾಂಪ್

ವಿನ್ಯಾಸ - ಹಿಂಭಾಗ
ಕಾರಿನ ಹಿಂಭಾಗದಲ್ಲೂ ಕ್ರೀಡಾತ್ಮಕ ವಿನ್ಯಾಸವನ್ನು ಕಾಣಬಹುದಾಗಿದೆ. ದೊಡ್ಡದಾದ ಬಾಗಿದ ಟೈಲ್ ಲ್ಯಾಂಪ್ ಪ್ರಮುಖ ಆಕರ್ಷಣೆಯಾಗಿರಲಿದೆ. ಇನ್ನು ಹೋಂಡಾ ಲಾಂಛನದೊಂದಿಗೆ ದಪ್ಪವಾದ ಕ್ರೋಮ್ ರೇಖೆ ಹಾದು ಹೋಗುತ್ತಿದೆ.
ಎತ್ತಿ ತೋರಿಸು: ಟೈಲ್ ಗೇಟ್ ಸ್ಪಾಯ್ಲರ್ ಜೊತೆ ಇಂಟೇಗ್ರೇಟಡ್ ಎಲ್ ಇಡಿ ಸ್ಟಾಪ್ ಲ್ಯಾಂಪ್, ರಿಯರ್ ಲೈಸನ್ಸ್ ಕ್ರೋಮ್ ಗ್ರಾರ್ನಿಶ್, ಪ್ರೀಮಿಯಂ ಎಲ್ ಇಡಿ ರಿಯರ್ ಟೈಲ್ ಲ್ಯಾಂಪ್

ವಿನ್ಯಾಸ - ಬದಿ
ಬದಿಯಿಂದ ನೋಡಿದಾಗಲೂ ಹೊಸ ಜಾಝ್ ಕಾರಿನಲ್ಲಿ ಏರೋಡೈನಾಮಿಕ್ ವಿನ್ಯಾಸಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ ಎಂಬುದು ಕಂಡುಬರುತ್ತದೆ.
ಎತ್ತಿ ತೋರಿಸು: ದಿಟ್ಟವಾದ ಮತ್ತು ಏರೋಡೈನಾಮಿಕ್ ಸ್ವಭಾವ ಲೈನ್, ದೊಡ್ಡದಾದ ವೆಂಟ್ ಗಾಜು, ವಿಂಡೋ ಗ್ರಾಫಿಕ್ಸ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹಾಗೂ ಮಡಚಬಹುದಾದ ಔಟ್ ಸೈಡ್ ಮಿರರ್ ಜೊತೆ ಟರ್ನ್ ಇಂಡಿಕೇಟರ್, ರಿಯರ್ ರೂಫ್ ಆಂಟೆನಾ

ಎಂಜಿನ್ ತಾಂತ್ರಿಕತೆ
ಐ-ಡಿಟೆಕ್ ಡೀಸೆಲ್, 1.5 ಲೀಟರ್ ಎಂಜಿನ್, ಅಶ್ವಶಕ್ತಿ: 100
ಐ-ವಿಟೆಕ್ ಸಿವಿಟಿ, 1.2 ಲೀಟರ್ ಎಂಜಿನ್, ಅಶ್ವಶಕ್ತಿ: 90

ಗೇರ್ ಬಾಕ್ಸ್
ಮ್ಯಾನುವಲ್ ಹಾಗೂ ಸಿವಿಟಿ ಗೇರ್ ಬಾಕ್ಸ್ ಆಯ್ಕೆಗಳಲ್ಲಿ ನೂತನ ಹೋಂಡಾ ಜಾಝ್ ಲಭ್ಯವಾಗಲಿದೆ. ಇದು ಹೈವೇ ಮುಂತಾದ ಪ್ರದೇಶಗಳಲ್ಲಿ ಮ್ಯಾನುವಲ್ ಆಗಿ ಕಾರನ್ನು ಓಡಿಸಲು ಇಷ್ಟಪಡುವವರಿಗೆ ಹಾಗೂ ನಗರದ ವಾಹನ ದಟ್ಟಣೆಯ ಪ್ರದೇಶಗಳಲ್ಲಿ ಆಟೋಮ್ಯಾಟಿಕ್ ಕಾರು ಇಷ್ಟಪಡುವವರಿಗೆ ಪರಿಪೂರ್ಣ ಆಯ್ಕೆಯಾಗಿರಲಿದೆ.
ಡೀಸೆಲ್ - ಗೇರ್ ಬಾಕ್ಸ್: 6 ಸ್ಪೀಡ್ ಮ್ಯಾನುವಲ್
ಪೆಟ್ರೋಲ್ - ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್

ಮೈಲೇಜ್ ಮತ್ತು ಇಂಧನ ಕ್ಷಮತೆ
ಹೋಂಡಾ ಸಂಸ್ಥೆಯ ಪ್ರಕಾರ ಸಿಟಿವಿ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್ ಗೆ 19 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇದು ಈ ವಿಭಾಗದಲ್ಲಿ ಈಗಿರುವ ಪೈಕಿ ಅತಿ ಹೆಚ್ಚು ಇಂಧನ ಕ್ಷಮತೆಯಾಗಿದೆ.
- ಡೀಸೆಲ್ ಮೈಲೇಜ್: 27.3 kmpl
- ಪೆಟ್ರೋಲ್ ಮೈಲೇಜ್: 19 kmpl
- ಇಂಧನ ಟ್ಯಾಂಕ್: 40 ಲೀಟರ್
- ಲಾಂಗ್ ಸೀಟು (ಉದ್ದವಾದ)
- ರಿಫ್ರೆಶ್ ಮೋಡ್
- ಟಾಲ್ ಮೋಡ್ (ಎತ್ತರ)
- ಯುಟಿಲಿಟಿ ಮೋಡ್ (ಉಪಯುಕ್ತ)
- ಇ ಮ್ಯಾನುವಲ್ ಪೆಟ್ರೋಲ್: 540,900 ರು.
- ಎಸ್ ಮ್ಯಾನುವಲ್ ಪೆಟ್ರೋಲ್: 605,500 ರು.
- ಎಸ್ ವಿ ಮ್ಯಾನುವಲ್ ಪೆಟ್ರೋಲ್: 656,400 ರು.
- ವಿ ಮ್ಯಾನುವಲ್ ಪೆಟ್ರೋಲ್: 693,400 ರು.
- ಎಸ್ ಸಿವಿಟಿ ಪೆಟ್ರೋಲ್: 710,500 ರು.
- ವಿಎಸ್ ಮ್ಯಾನುವಲ್ ಪೆಟ್ರೋಲ್: 742,500 ರು.
- ವಿ ಸಿವಿಟಿ ಪೆಟ್ರೋಲ್: 798,500 ರು.
- ಇ ಮ್ಯಾನುವಲ್ ಡೀಸೆಲ್: 662,900 ರು.
- ಎಸ್ ಮ್ಯಾನುವಲ್ ಡೀಸೆಲ್: 728,500 ರು.
- ಎಸ್‌ವಿ ಮ್ಯಾನುವಲ್ ಡೀಸೆಲ್: 779,400 ರು.
- ವಿ ಮ್ಯಾನುವಲ್ ಡೀಸೆಲ್: 826,400 ರು.
- ವಿಎಕ್ಸ್ ಮ್ಯಾನುವಲ್ ಡೀಸೆಲ್: 875,500 ರು.

ಒಳಮೈ ಜಾಗ
ಹೋಂಡಾ ಜಾಝ್ ನಲ್ಲಿ ಬೇಕಾದಷ್ಟು ಒಳಮೈ ಜಾಗವಿರಲಿದೆ. ಇದರಲ್ಲಿ ಅತ್ಯುತ್ತಮ ಲೆಗ್ ರೂಂ, ಹೆಡ್ ರೂಂ ಹಾಗೂ ಸಾಮಾಗ್ರಿಗಳಿನ್ನಡಲು ಢಿಕ್ಕಿ ಜಾಗ ಕೊಡಲಾಗಿದೆ. ಎರಡನೇ ಸಾಲನ್ನು ಮಡಚುವ ವ್ಯವಸ್ಥೆಯು ಇದರಲ್ಲಿರುತ್ತದೆ.
ಢಿಕ್ಕಿ ಜಾಗ: 354 ಲೀಟರ್

ಮ್ಯಾಜಿಕ್ ಸೀಟು
ಹೋಂಡಾ ಜಾಝ್ ನಲ್ಲಿ ಆಳವಡಿಸಿರುವ ಮ್ಯಾಜಿಕ್ ಸೀಟು ಪ್ರಮುಖ ಆಕರ್ಷಣೆಯಾಗಿರಲಿದೆ. ನಾಲ್ಕು ವಿಧಗಳಲ್ಲಿ ಇದು ಲಭ್ಯವಾಗಲಿದೆ.

ಇನ್ಸ್ಟ್ರುಮೆಂಟ್
ದೊಡ್ಡದಾಗಿ ಚಾಲನೆ ವೇಳೆ ಬೇಗನೇ ಎದ್ದು ಕಾಣಿಸುವ ರೀತಿಯಲ್ಲಿ ಇದನ್ನು ರಚಿಸಲಾಗಿದೆ. ಇಲ್ಲಿ ಮಧ್ಯಭಾಗದಲ್ಲಿ ವೃತ್ತಕಾರದ ಬೃಹತ್ ಸ್ಪೀಡೋ ಮೀಟರ್ ಕಾಣಬಹುದಾಗಿದ್ದು, ಇದರ ಮಧ್ಯಭಾಗದಲ್ಲಿ ವಾರ್ನಿಂಗ್ ಲೈಟ್ ಇರಲಿದೆ. ಅಲ್ಲದೆ ಎಡಭಾಗದಲ್ಲಿ ಆರ್ ಪಿಎಂ ಮತ್ತು ಬಲಭಾಗದಲ್ಲಿ ಬಹು ಮಾಹಿತಿಯ ಕ್ಲಸ್ಟರ್ ಇರಲಿದೆ. ಈ ಮೂಲಕ ಎಂಜಿನ್ ತಾಪಮಾನ, ಇಂಧನ ಮಟ್ಟ, ಇಂಧನ ದಕ್ಷತೆ, ಓಡೊ ರೀಡಿಂಗ್ ಮುಂತಾದ ಮಾಹಿತಿಗಳನ್ನು ಪಡೆಯಬಹುದಾಗಿದೆ.
ಎತ್ತಿ ತೋರಿಸು: ಮುಂದುವರಿದ ಬಹು ಮಾಹಿತಿ ಕಾಂಬಿನೇಷನ್ ಮೀಟರ್, ಇಕೊ ಅಸಿಸ್ಟ್ ಸಿಸ್ಟಂ ಜೊತೆ ಇನ್ ಬಿಲ್ಟ್ ಆಂಬಿಯಂಟ್ ಮೀಟರ್ ರಿಂಗ್ಸ್.

ವೈಶಿಷ್ಟ್ಯಗಳು
ಇನ್ನು ಪ್ರೀಮಿಯಂ ಹ್ಯಾಚ್ ಬ್ಯಾಕ್ ಗೆ ತಕ್ಕ ರೀತಿಯಲ್ಲಿ ನೂತನ ಜಾಝ್ ಕಾರಿನಲ್ಲಿ ವೈಶಿಷ್ಟ್ಯಗಳಿಗೇನು ಕೊರತೆ ಮಾಡಿಲ್ಲ. ಇದು 12.7 ಸೆಂಟಿಮೀಟರ್ ಗಳ ಟಚ್ ಸ್ಕ್ರೀನ್ ಎವಿಎನ್ ಸಿಸ್ಟಂ, ಐ ಪೊಡ್ ಕನೆಕ್ಟಿವಿಟಿ, ಹೊಂದಾಣಿಸಬಹುದಾದ ರಿಯರ್ ಹೆಡ್ ರೆಸ್ಟ್, ಆಟೋ ಎಸಿ, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ರಿ ವ್ಯೂ ಮಿರರ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾಗಳನ್ನು ಪಡೆದುಕೊಂಡಿದೆ.
ಎತ್ತಿ ತೋರಿಸು: ಸೆಗ್ಮೆಂಟ್ ನಲ್ಲಿ ಇದೇ ಮೊದಲ ಬಾರಿಗೆ ಸ್ಟೀರಿಂಗ್ ಮೌಂಟೆಡ್ ಆಡಿಯೋ, ಹ್ಯಾಂಡ್ಸ್ ಫ್ರಿ ಟೆಲಿಫೋನ್ ಕಂಟ್ರೋಲ್ ಮತ್ತು ಪೆಡಲ್ ಶಿಫ್ಟ್,

ಸ್ಟೋರೆಜ್
ಬೇಕಾದಷ್ಟು ವೈಶಿಷ್ಟ್ಯ ಹಾಗೂ ಢಿಕ್ಕಿ ಜಾಗದ ಹೊರತಾಗಿ ಹೊಸ ಜಾಝ್ ಕಾರಿನಲ್ಲಿ ಮೊಬೈಲ್, ವಾಟರ್ ಬಾಟಲಿಗಳನ್ನಿಡಲು ಸ್ಮಾರ್ಟ್ ಕಪ್ ಹೋಲ್ಡರ್, ಮುಂಭಾಗ ಹಾಗೂ ಹಿಂಭಾಗದಲ್ಲಿ ಡೋರ್ ಪಾಕೆಟ್ ಕೊಡಲಾಗಿದೆ.

ಸುರಕ್ಷತೆ
ಆಧುನಿಕ ಕಾರುಗಳಲ್ಲಿ ಸುರಕ್ಷತೆಯು ಅವಿಭಾಜ್ಯ ಅಂಗವಾಗಿಬಿಟ್ಟಿದೆ. ನೂತನ ಹೋಂಡಾ ಜಾಝ್ ನಲ್ಲೂ ಭದ್ರತೆಗೇನು ಕಮ್ಮಿ ಮಾಡಿಲ್ಲ. ಇದು ಎಬಿಎಸ್, ಇಬಿಡಿ ಜೊತೆಗೆ ಆರಾಮದಾಯಕ ಪಯಣಕ್ಕಾಗಿ ಹೆಡ್ ರೆಸ್ಟ್ ವ್ಯವಸ್ಥೆಯನ್ನು ಪಡೆದುಕೊಂಡಿದೆ.
ಎತ್ತಿ ತೋರಿಸು:
ಏಸ್ ಬಾಡಿ ರಚನೆ, ಡ್ಯುಯಲ್ ಎಸ್ ಆರ್ ಎಸ್ ಏರ್ ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಸೀಟ್ ಬೆಲ್ಟ್ ಪ್ರಿಟೆನ್ಫನರ್, ಇಂಮೊಬಿಲೈಜರ್ ಆ್ಯಂಟಿ ಥೆಪ್ಟ್ ಸಿಸ್ಟಂ, ಇಂಪಾಕ್ಟ್ ಮಿಟಿಗೇಟಿಂಗ್ ಹೆಡ್ ರೆಸ್ಟ್, ಚಾಲಕ ಬದಿಯ ವಿಂಡೋ ಒನ್ ಟಚ್ ಅಪ್/ಡೌನ್ ಜೊತೆಗೆ ಪಿಂಚ್ ಗಾರ್ಡ್

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)
ಪೆಟ್ರೋಲ್
ಡೀಸೆಲ್

ಅಂತಿಮ ತೀರ್ಪು
ನೂತನ ಹೋಂಡಾ ಜಾಝ್ ಹಣಕ್ಕೆ ತಕ್ಕ ಮೌಲ್ಯ ನೀಡುತ್ತದೆ ಎಂಬುದರಲ್ಲಿ ಯಾವುದೇ ಸಂಶಯವೇ ಇಲ್ಲ. ಇನ್ನು ವಿಶ್ವಾಸಾರ್ಹಾತೆ, ಬ್ರಾಂಡ್ ಮೌಲ್ಯ, ಇಂಧನ ದಕ್ಷತೆ, ನಿರ್ವಹಣೆ, ಆರಾಮದಾಯಕತೆ ಎಲ್ಲದರಲ್ಲೂ ನೂತನ ಜಾಝ್ ಒಂದು ಹೆಜ್ಜೆ ಮುಂದಿಟ್ಟಿದ್ದು, ಅಮೇಜ್, ಸಿಟಿ ಹಾಗೂ ಮೊಬಿಲಿಯೊ ಮೂಲಕ ಸಾಧಿಸಿರುವ ಹ್ಯಾಟ್ರಿಕ್ ವಿಜಯವನ್ನು ಮುಂದುವರಿಸಿಕೊಂಡು ಹೋಗುವ ಭರವಸೆಯಲ್ಲಿದೆ.

ಪ್ರೀಮಿಯಂ ಹ್ಯಾಚ್ ಬ್ಯಾಕ್ ಗಳ ಮಹಾಸಮರ
ತಾಜಾ ಕಾರು, ಬೈಕ್ ಸುದ್ದಿಗಾಗಿ ನಮ್ಮ ಫೇಸ್ ಬುಕ್ ಪುಟಕ್ಕೊಂದು ಲೈಕ್ ಒತ್ತಿರಿ


Click it and Unblock the Notifications








