Hyundai Creta EV: ಹುಂಡೈ ಕ್ರೆಟಾ ಎಲೆಕ್ಟ್ರಿಕ್ ರಿವ್ಯೂ: ನಿರೀಕ್ಷೆಗೂ ಮೀರಿದ ಆಕರ್ಷಕ ಕೂಸಿದು!

ಕಳೆದ ವರ್ಷ ಇದೇ ಸಮಯದಲ್ಲಿ ಹ್ಯುಂಡೈ ಅಂತಿಮವಾಗಿ ಫೇಸ್‌ಲಿಫ್ಟ್ ಕ್ರೆಟಾವನ್ನು ಭಾರತದಲ್ಲಿ ಪರಿಚಯಿಸಿತ್ತು. ಅಂದಿನಿಂದ, ನವೀಕರಿಸಿದ SUV ತನ್ನ ಅತ್ಯುತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಕಳೆದ ವರ್ಷ ಫೇಸ್‌ಲಿಫ್ಟ್ ಬಿಡುಗಡೆ ನಂತರ ಹುಂಡೈ ಭಾರತೀಯ ರಸ್ತೆಗಳಲ್ಲಿ ಕ್ರೆಟಾ ಎಲೆಕ್ಟ್ರಿಕ್ (Hyundai Creta EV) ಆವೃತ್ತಿಯನ್ನು ಪರಿಚಯಿಸುವ ಬಗ್ಗೆ ಸುಳಿವು ನೀಡುತ್ತಲೇ ಬಂದಿತ್ತು. ಕೊನೆಗೂ ಹೊಸ ಕ್ರೆಟಾ ಎಲೆಕ್ಟ್ರಿಕ್ ಅನ್ನು ಬಹಿರಂಗಪಡಿಸಿದೆ. ಆದರೆ, ಬಿಡುಗಡೆ ಇನ್ನು ಬಾಕಿ ಇದೆ. ಆಟೋ ಎಕ್ಸ್‌ಪೋ 2025 ರಲ್ಲಿ ಬಿಡುಗಡೆಯಾಗುವ ಮುನ್ನ ಹೊಸ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಅನ್ನು ಓಡಿಸುವ ಅವಕಾಶ ನಮಗೆ ಇತ್ತೀಚೆಗೆ ಸಿಕ್ಕಿದೆ. ಈ ಅದ್ಬುತ ಕಾರಿನ ರಿವ್ಯೂ ಇಲ್ಲಿದೆ.

ಮೊದಲ ನೋಟದಲ್ಲಿ, ಹೊಸ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಅದರ ಇಂಧನ ಚಾಲಿತ ಮಾಡಲ್‌ಗೆ ಹೋಲಿಸಿದರೆ ಹೆಚ್ಚಾಗಿ ಬದಲಾವಣೆಗಳು ಕಾಣುವುದಿಲ್ಲ. ಆದರೆ, ನೀವು ಹತ್ತಿರದಿಂದ ನೋಡಿದಾಗ ಹೊಸ ನವೀಕರಣಗಳನ್ನು ಗುರ್ತಿಸಬಹುದು. ಕ್ರೆಟಾ ಎಲೆಕ್ಟ್ರಿಕ್‌ನ ಮುಂಭಾಗದಲ್ಲಿ ಹುಂಡೈ ಲೋಗೋ DRL ಗಳ ಅಡಿಯಲ್ಲಿ ಅದರ ಸ್ಥಾನದಿಂದ ಹೆಡ್‌ಲೈಟ್‌ಗಳನ್ನು ಸಂಪರ್ಕಿಸುವ ಮುಚ್ಚಿದ ಪಿಕ್ಸೆಲೇಟೆಡ್ ಫ್ರಂಟ್ ಗ್ರಿಲ್‌ಗೆ ಇಳಿದಿದೆ.

hyundai-creta-ev-review-design-performence-features-details

ಹುಂಡೈ ಬ್ಯಾಡ್ಜ್ ಈಗ ಕ್ರೆಟಾ ಎಲೆಕ್ಟ್ರಿಕ್‌ನ ಚಾರ್ಜಿಂಗ್ ಪೋರ್ಟ್‌ ಬಳಿ ನೀಡಲಾಗಿದೆ. ಹಾಗೆಯೇ ಪಿಕ್ಸೆಲೇಟೆಡ್ ವಿನ್ಯಾಸವನ್ನು ಮುಂಭಾಗದ ಬಂಪರ್‌ನಲ್ಲಿಯೂ ಕಾಣಬಹುದು, ಇದು ಕ್ರೆಟಾ N ಲೈನ್‌ನಿಂದ ಕಾಪಿ ಮಾಡಲಾಗಿದೆ ಎಂದು ಕಾಣುತ್ತದೆ. ಬದಿಗಳಲ್ಲಿ ಹೊಸ 17-ಇಂಚಿನ ಏರೋಡೈನಾಮಿಕ್ ಅಲಾಯ್ ವೀಲ್‌ಗಳನ್ನು ನೋಡಬಹುದು, ಇವುಗಳನ್ನು ಕಡಿಮೆ ರೋಲಿಂಗ್-ರೆಸಿಸ್ಟೆನ್ಸ್ ಟೈರ್‌ಗಳೊಂದಿಗೆ ಅಳವಡಿಸಲಾಗಿದೆ.

ಕ್ರೆಟಾ ಎಲೆಕ್ಟ್ರಿಕ್ ಕಾರಿನ ಹಿಂಭಾಗದಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ಹಾಗೆ ಉಳಿಸಲಾಗಿದೆ, ಟೈಲ್‌ಗೇಟ್‌ನಲ್ಲಿರುವ "ಎಲೆಕ್ಟ್ರಿಕ್" ಬ್ಯಾಡ್ಜಿಂಗ್ ಮತ್ತು ಹಿಂಭಾಗದ ಬಂಪರ್‌ನಲ್ಲಿರುವ ಪಿಕ್ಸಲೇಟೆಡ್ ವಿಭಾಗವು ರಿವರ್ಸಿಂಗ್ ಲೈಟ್‌ಗಳಿಗೆ ಆತಿಥ್ಯ ವಹಿಸುತ್ತದೆ. ಒಟ್ಟಾರೆ ಹೊಸ ವಿನ್ಯಾಸವಿದೆಯಾದರೂ ಹೆಚ್ಚಾಗಿ ತನ್ನ ಅಣ್ಣ ಇಂಧನ ಚಾಲಿತ ಕ್ರೆಟಾಗೆ ಹೆಚ್ಚು ಹೋಲುತ್ತದೆ.

hyundai-creta-ev-review-design-performence-features-details

ಹುಂಡೈ ಕ್ರೆಟಾ ಎಲೆಕ್ಟ್ರಿಕ್‌ನ ಹೊರಭಾಗವನ್ನು 10 ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತಿದೆ. ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್, ಫಿಯರಿ ರೆಡ್, ಸ್ಟಾರಿ ನೈಟ್ ಮತ್ತು ಓಷನ್ ಬ್ಲೂ - ಅಟ್ಲಾಸ್ ವೈಟ್ ಮತ್ತು ಓಷನ್ ಬ್ಲೂ ಎರಡನ್ನೂ ಬ್ಲಾಕ್ ರೂಫ್‌ನೊಂದಿಗೆ ಡ್ಯುಯಲ್-ಟೋನ್ ಆಯ್ಕೆಗಳಾಗಿ ನೀಡಲಾಗುತ್ತದೆ. ಜೊತೆಗೆ ಮೂರು ಮ್ಯಾಟ್ ಬಣ್ಣಗಳನ್ನು ಹೊಂದಿದೆ - ಓಷನ್ ಬ್ಲೂ ಮ್ಯಾಟ್, ಟೈಟಾನ್ ಗ್ರೇ ಮ್ಯಾಟ್ ಮತ್ತು ರೋಬಸ್ಟ್ ಎಮರಾಲ್ಡ್ ಮ್ಯಾಟ್.

ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಒಳಗೆ ಡ್ಯಾಶ್‌ನಲ್ಲಿ ಟ್ವಿನ್ 10.25 ಸ್ಕ್ರೀನ್‌ಗಳನ್ನು ನೀಡಲಾಗಿದ್ದು, ಇನ್ಸ್ಟ್ರುಮೆಂಟೇಶನ್‌ಗಾಗಿ ಬಲಭಾಗದಲ್ಲಿ ಒಂದು ಮತ್ತು ಇನ್ನೊಂದನ್ನು ಇನ್ಫೋಟೈನ್‌ಮೆಂಟ್ ಸೆಟಪ್‌ಗಾಗಿ ಟಚ್‌ಸ್ಕ್ರೀನ್ ನೀಡಲಾಗಿದೆ. ಎರಡೂ ಸ್ಕ್ರೀನ್‌ಗಳು ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣುತ್ತಿದ್ದು, ಬಳಸಲು ತುಂಬಾ ಸುಲಭ ಎನ್ನಿಸುತ್ತವೆ.

hyundai-creta-ev-review-design-performence-features-details

ಇನ್ಫೋಟೈನ್‌ಮೆಂಟ್ ಸ್ಕ್ರೀನ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಗೆ ಸಪೋರ್ಟ್ ಮಾಡುತ್ತದೆ. ಬ್ಲೂಲಿಂಕ್-ಕನೆಕ್ಟೆಡ್ ಕಾರ್ ಸೂಟ್ ಮತ್ತು ಚಾರ್ಜಿಂಗ್‌ಗಾಗಿ ಕಾರಿನೊಳಗೆ ಪಾವತಿಗಳನ್ನು ಮಾಡಲು ಬಳಸಬಹುದು. ಕ್ರೆಟಾ ಎಲೆಕ್ಟ್ರಿಕ್‌ನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇಯನ್ನು ಬೋಸ್‌ನಿಂದ 8-ಸ್ಪೀಕರ್ ಪ್ರೀಮಿಯಂ ಸೌಂಡ್ ಸಿಸ್ಟಮ್‌ಗೆ ಸಂಪರ್ಕಿಸಲಾಗಿದೆ.

ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಸೌಂಡ್ ಸಿಸ್ಟಮ್‌ಗಾಗಿ ಕಂಟ್ರೋಲ್‌ಗಳು ಸೆಂಟರ್ ಏರ್ ವೆಂಟ್‌ಗಳ ಕೆಳಗೆ ಕಾಣಬಹುದು. ಕೆಲವು ಕೆಪ್ಯಾಸಿಟಿವ್ ಬಟನ್‌ಗಳನ್ನು ಸಹ ಒಳಗೊಂಡಿವೆ. ಈ ಕಂಟ್ರೋಲ್ ಪ್ಯಾನಲ್ ಕೆಳಗೆ USB A ಮತ್ತು C ಪೋರ್ಟ್‌ಗಳು, ಜೊತೆಗೆ 12V ಚಾರ್ಜಿಂಗ್ ಪೋರ್ಟ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಇವೆ.

hyundai-creta-ev-review-design-performence-features-details

ಡ್ಯುಯಲ್-ಟೋನ್ ಸೀಟುಗಳು, ಕ್ರೆಟಾ ಎಲೆಕ್ಟ್ರಿಕ್ ಸೀಟುಗಳ ಮಧ್ಯಭಾಗದಲ್ಲಿ ರನ್ನಿಂಗ್ ಬ್ಲೂ ಪೈಪಿಂಗ್ ಡಿಸೈನ್ ಒಳಗಿನವರಿಗೆ ಅವರು ಹುಂಡೈ SUV ಯ ಎಲೆಕ್ಟ್ರಿಕ್ ಕಾರಿಲ್ಲಿದ್ದಾರೆ ಎಂದು ತಿಳಿಸುತ್ತದೆ. ಕ್ರೆಟಾ ಎಲೆಕ್ಟ್ರಿಕ್‌ನ ಆಸನಗಳು ಎಂದಿನಂತೆ ಆರಾಮದಾಯಕವಾಗಿವೆ, ವೆಂಟಿಲೇಷನ್ ವೈಶಿಷ್ಟ್ಯವು ಅವುಗಳನ್ನು ಬಳಸಲು ಸುಲಭವಾಗುವಂತೆ ಮಾಡುತ್ತದೆ.

ಮುಂಭಾಗದ ಆಸನಗಳು ಎಲೆಕ್ಟ್ರಿಕಲ್ಲಿ ಅಡ್ಜಸ್ಟ್ ಮಾಡಬಹುದಾದವು,ಡ್ರೈವರ್ ಸೀಟು ಟೂ-ಸೀಟ್ ಮೆಮೊರಿ ಆಯ್ಕೆಗಳನ್ನು ನೀಡುತ್ತದೆ. ಕ್ರೆಟಾ ICE ನಲ್ಲಿರುವಂತೆ ಹಿಂಭಾಗದ ಆಸನಗಳು ಯೋಗ್ಯವಾದ ಹೆಡ್, ಲೆಗ್ ರೂಂ ಹೊಂದಿದೆ. ಮೂರು ಜನರು ಕುಳಿತುಕೊಳ್ಳಬಹುದಾದರೂ, ಮಧ್ಯದಲ್ಲಿರುವವರು ಹೊಂದಾಣಿಕೆ ಮಾಡಬಹುದಾದ ಹೆಡ್‌ರೆಸ್ಟ್ ಇಲ್ಲದೆಯೇ ಇರಬೇಕಾಗುತ್ತದೆ.

hyundai-creta-ev-review-design-performence-features-details

ಬೃಹತ್ ಸನ್‌ರೂಫ್ ಕ್ರೆಟಾ ಎಲೆಕ್ಟ್ರಿಕ್ ಕ್ಯಾಬಿನ್ ಅನ್ನು ಸಾಕಷ್ಟು ವಿಶಾಲ ಮತ್ತು ಗಾಳಿಯಾಡುವಂತೆ ಮಾಡುತ್ತದೆ. ಡಿಜಿಟಲ್ ಕೀ, ಕೂಲ್ಡ್ ಗ್ಲೋವ್‌ಬಾಕ್ಸ್, ಮುಂಭಾಗದ ಆರ್ಮ್‌ರೆಸ್ಟ್ ಅಡಿಯಲ್ಲಿ ಕೂಲ್ಡ್ ಸ್ಟೋರೇಜ್, ಎಲ್ಲಕ್ಕಿಂತ ಮುಖ್ಯವಾಗಿ ವೆಹಿಕಲ್ 2 ಲೋಡ್ (V2L0) ದೈತ್ಯ ಪವರ್ ಬ್ಯಾಂಕ್ ಆಗಿ ಕೆಲಸ ಮಾಡುತ್ತದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಮೌಂಟೆಡ್ ಕಂಟ್ರೋಲ್‌ಗಳೊಂದಿಗೆ ಹೊಸ 3-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿದೆ.

ಸುರಕ್ಷತೆಯ ವಿಷಯದಲ್ಲಿ, ಎಲ್ಲಾ ಕ್ರೆಟಾ ಎಲೆಕ್ಟ್ರಿಕ್ ವೇರಿಯೆಂಟ್‌ಗಳು ಆರು ಏರ್‌ಬ್ಯಾಗ್‌ಗಳು, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, EBD ಜೊತೆಗೆ ABS, ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ಗಳು(EPB), ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್(HAC) ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ (HDC), ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್‌ನೊಂದಿಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್(ESC), ಚೈಲ್ಡ್ ಸೀಟ್ ಆಂಕರ್(ISOFIX) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್(TPMS) ಸೇರಿದಂತೆ 19 ವೈಶಿಷ್ಟ್ಯಗಳೊಂದಿಗೆ LEVEL-2 ADAS ಸೆಟಪ್ ಒಳಗೊಂಡಿದೆ.

hyundai-creta-ev-review-design-performence-features-details

ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಅನ್ನು 42KWh ಮತ್ತು 51.4kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಚಿಕ್ಕ ಬ್ಯಾಟರಿ ಪ್ಯಾಕ್ 390 ಕಿ.ಮೀ ರೇಂಜ್ ಹಾಗೂ ದೊಡ್ಡದು MIDC ಪರೀಕ್ಷೆಯಲ್ಲಿ 473 ಕಿ.ಮೀ ರೇಂಜ್ ಹೊಂದಿದೆ. ಎರಡೂ ಬ್ಯಾಟರಿ ಪ್ಯಾಕ್‌ಗಳನ್ನು ಮುಂಭಾಗದ ಆಕ್ಸಲ್‌ಗೆ ಲಿಂಕ್ ಮಾಡಲಾದ ಒಂದೇ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲಾಗಿದೆ.

ಇದು 133bhp (42kWh ಬ್ಯಾಟರಿ ಪ್ಯಾಕ್) ಅಥವಾ ದೊಡ್ಡ 51.2kWh ಬ್ಯಾಟರಿ ಪ್ಯಾಕ್‌ನೊಂದಿಗೆ 169bhp ಅನ್ನು ಉತ್ಪಾದಿಸುತ್ತದೆ. ಕ್ರೆಟಾದ ಈ ಹೆಚ್ಚು ಶಕ್ತಿಶಾಲಿ ದೀರ್ಘ-ಶ್ರೇಣಿಯ ಆವೃತ್ತಿಯು 7.9 ಸೆಕೆಂಡುಗಳಲ್ಲಿ 0-100km/h ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಕ್ರೆಟಾದ ಬ್ಯಾಟರಿ ಪ್ಯಾಕ್ ಕೇವಲ 58 ನಿಮಿಷಗಳಲ್ಲಿ ಶೇ80 ರಷ್ಟು ಚಾರ್ಜ್ ಮಾಡಬಹುದು ಎಂದು ಹ್ಯುಂಡೈ ಹೇಳಿಕೊಂಡಿದೆ.

hyundai-creta-ev-review-design-performence-features-details

ಆದರೆ 11kW AC ಚಾರ್ಜರ್‌ನೊಂದಿಗೆ ಚಿಕ್ಕ ಬ್ಯಾಟರಿ ಪ್ಯಾಕ್‌ ಪೂರ್ಣ ಚಾರ್ಜ್ ಮಾಡಲು 4 ಗಂಟೆಗಳು ಮತ್ತು ದೊಡ್ಡ ಬ್ಯಾಟರಿ ಪ್ಯಾಕ್‌ಗೆ 4 ಗಂಟೆ 50 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಕ್ರೆಟಾ ಎಲೆಕ್ಟ್ರಿಕ್ ಸಾಮಾನ್ಯ ICE ಆವೃತ್ತಿಯ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುವುದರಿಂದ, ಕ್ರೆಟಾ ಇವಿ 4,340 ಮಿ.ಮೀ ಉದ್ದ, 1,790 ಮಿ.ಮೀ ಅಗಲ, 1,655 ಮಿ.ಮೀ ಎತ್ತರ ಮತ್ತು 2,610 ಮಿ.ಮೀ ಉದ್ದದ ವೀಲ್‌ಬೇಸ್ ಹೊಂದಿದೆ.

ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಆಕರ್ಷಕ ಚಾಲನಾ ಅನುಭವವನ್ನು ನೀಡುತ್ತದೆ, ವಿಶೇಷವಾಗಿ ದೀರ್ಘ-ಶ್ರೇಣಿಯ 51.4 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ರೂಪಾಂತರದಲ್ಲಿ ಇದು ತನ್ನ ಏಕೈಕ ಎಲೆಕ್ಟ್ರಿಕ್ ಮೋಟರ್‌ನಿಂದ 171 ಬಿಎಚ್ ಪವರ್ ಹೊರಹಾಕುತ್ತದೆ. ರಸ್ತೆಯಲ್ಲಿ, ಈ ಇದು ಪ್ರಭಾವಶಾಲಿ ಕಾರ್ಯಕ್ಷಮತೆಯಾಗಿದೆ. ಕೇವಲ 7.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ನೀಡುತ್ತದೆ.

hyundai-creta-ev-review-design-performence-features-details

ವಿಶೇಷವಾಗಿ ಅತ್ಯಂತ ಪ್ರಬಲವಾದ ಸ್ಪೋರ್ಟ್ ಡ್ರೈವಿಂಗ್ ಮೋಡ್‌ನಲ್ಲಿ ತ್ವರಿತ ಟಾರ್ಕ್ ಸಿಗುತ್ತದೆ. ನೀವು ನಾರ್ಮಲ್ ಮೋಡ್‌ಗೆ ಬದಲಾಯಿಸಿದಾಗ ಥ್ರೊಟಲ್ ಪ್ರತಿಕ್ರಿಯೆ ಸ್ವಲ್ಪ ಕಡಿಮೆಯಾಗುತ್ತದೆ. ಆದರೆ ನಗರದ ದೈನಂದಿನ ಚಾಲನೆಗೆ ಉತ್ತಮವೆನಿಸುತ್ತದೆ. ನೀವು ರೇಂಜ್ ಹೊರತುಪಡಿಸಿ ಬೇರೇನನ್ನೂ ಬಯಸದಿದ್ದರೇ, ಇಕೋ ಮೋಡ್‌ಗೆ ಬದಲಿಸಿ ಹೆಚ್ಚಿನ ರೇಂಜ್ ಪಡೆಯಬಹುದು.

ಕ್ರೆಟಾ ಎಲೆಕ್ಟ್ರಿಕ್ ಸ್ಟೀರಿಂಗ್ ತೂಕ ಹೊಂದಿದ್ದು, ತ್ವರಿತವಾಗಿ ಸ್ಪಂದಿಸುತ್ತದೆ. ಇದು ನಿಧಾನ ವೇಗದಲ್ಲಿ ಹಗುರವಾಗಿರುತ್ತದೆ ಮತ್ತು ವೇಗ ಹೆಚ್ಚಾಗಲು ಪ್ರಾರಂಭಿಸಿದಾಗ ಗಟ್ಟಿಯಾಗುತ್ತದೆ. ಸಸ್ಪೆನ್ಷನ್ ಸೆಟಪ್ ಸಾಮಾನ್ಯ ಕ್ರೆಟಾಕ್ಕಿಂತ ಸ್ವಲ್ಪ ಗಟ್ಟಿಯಾಗಿದೆ. ಆದರೂ, ಇದು ನಮ್ಮ ರಸ್ತೆಗಳಲ್ಲಿನ ಉಬ್ಬುಗಳು ಮತ್ತು ಹಳಿಗಳಿಂದ ಉಂಟಾಗುವ ಪರಿಣಾಮಗಳನ್ನು ಯಾವುದೇ ತೊಂದರೆಯಿಲ್ಲದೆ ನಿಭಾಯಿಸುತ್ತದೆ.

hyundai-creta-ev-review-design-performence-features-details

ಕ್ರೆಟಾ ಎಲೆಕ್ಟ್ರಿಕ್‌ನ ಚಾಲನಾ ಅನುಭವದ ಅತ್ಯುತ್ತಮ ವೈಶಿಷ್ಟ್ಯವೆಂದರೆ ಐಪೆಡಲ್ ಮೋಡ್, ಇದು ಹುಂಡೈನ ಇತ್ತೀಚಿನ ಎಲೆಕ್ಟ್ರಿಕ್ ವಾಹನವನ್ನು ಕೇವಲ ಆಕ್ಸಿಲರೇಟರ್ ಪೆಡಲ್‌ನೊಂದಿಗೆ ಓಡಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ರೀಜೆನ್ ಮಟ್ಟಗಳು ಸಾಕಷ್ಟು ಪ್ರಬಲವಾಗಿದ್ದು, ನೀವು ಪೆಡಲ್‌ನಿಂದ ನಿಮ್ಮ ಪಾದವನ್ನು ತೆಗೆದೆರೆ, ಕ್ರೆಟಾ ಎಲೆಕ್ಟ್ರಿಕ್ ಸಂಪೂರ್ಣವಾಗಿ ನಿಲ್ಲುತ್ತದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಹ್ಯುಂಡೈ ಕಂಪನಿಯು ಕ್ರೆಟಾವನ್ನು ಎಲೆಕ್ಟ್ರಿಕ್ ಕಾರುಗಳ ಜಗತ್ತಿಗೆ ರಾಜನಾಗಿ ಮಾಡಲು ಹೊರಟಿದೆ. ಅದರ ಇಂಧನ ಚಾಲಿತ ಮಾದರಿಯಂತೆ, ಕ್ರೆಟಾ ಎಲೆಕ್ಟ್ರಿಕ್ ಹಲವಾರು ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಉತ್ತಮ ಚಾಲನಾ ಅನುಭವವನ್ನು ಮುಂದುವರಿಸಲು ನಿಮಗೆ ಅನುವು ಮಾಡಿಕೊಡುವ ಆರಾಮದಾಯಕ ಚಾಲನಾ ಅನುಭವವನ್ನು ನೀಡುತ್ತದೆ.

hyundai-creta-ev-review-design-performence-features-details

ಕ್ರೆಟಾ ಎಲೆಕ್ಟ್ರಿಕ್‌ನೊಂದಿಗೆ ಅದರ ರೇಂಜ್ ಪರೀಕ್ಷಿಸಲು ನಮಗೆ ಸಾಕಷ್ಟು ಸಮಯ ಸಿಗಲಿಲ್ಲವಾದರೂ, ಅದು ಹೇಳಿಕೊಂಡ MIDC ಶ್ರೇಣಿಯ ಶೇ70 ರಷ್ಟನ್ನು ಪಡೆದಿದೆ. ಅಂದರೆ ರಿಯಲ್‌ ವರ್ಲ್ಡ್‌ನಲ್ಲಿ ಸುಮಾರು 270 ರಿಂದ 330 ಕಿ.ಮೀ ರೇಂಜ್ ನೀಡಿದೆ. ನಮ್ಮ ಪ್ರಕಾರ ಎಲೆಕ್ಟ್ರಿಕ ಕಾರು ಖರೀದಿಸುವ ಆಲೋಚನೆಯಿದ್ದವರಿಗೆ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ನಿಮ್ಮ ಕುಟುಂಬಕ್ಕೆ ಉತ್ತಮ SUV ಆಗಬಹುದು.

More from DriveSpark

Article Published On: Thursday, January 16, 2025, 11:00 [IST]
English summary
Hyundai creta ev review design performence features details
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+