ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

ಮಹೀಂದ್ರಾ ಸಂಸ್ಥೆಯು ಇದೇ ಮೊದಲ ಬಾರಿಗೆ ಐಷಾರಾಮಿ ಸೌಲಭ್ಯವುಳ್ಳ ಎಸ್‌ಯುವಿ ಮಾದರಿಯೊಂದನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದಿರುವ ಅಲ್ಟುರಾಸ್ ಜಿ4 ಎನ್ನುವ ಕಾರನ್ನು ಇದೇ ತಿಂಗಳು 26ರಂದು ಬಿಡುಗಡೆಗೊಳಿಸುತ್ತಿದೆ. ಹೀಗಾಗಿ ಎಸ್‌ಯುವಿ ಪ್ರಿಯರಲ್ಲಿ ಭಾರೀ ಕುತೂಹಲ ಹುಟ್ಟುಹಾಕಿರುವ ಅಲ್ಟುರಾಸ್ ಜಿ4 ವಿಶೇಷತೆಗಳ ಕುರಿತಾಗಿ ಡ್ರೈವ್‌ಸ್ಪಾರ್ಕ್ ತಂಡವು ಎಕ್ಸ್‌ಕ್ಲೂಸಿವ್ ವಿಮರ್ಶೆ ಕೈಕೊಂಡಿತ್ತು.

ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

ದಕ್ಷಿಣ ಕೊರಿಯಾದ ಮೂಲದ ಸ್ಯಾಂಗ್‌ಯಾಂಗ್‌ ಆಟೋ ಉತ್ಪಾದನಾ ಸಂಸ್ಥೆಯೊಂದಿಗೆ ಜೊತೆಗೂಡಿರುವ ಮಹೀಂದ್ರಾ ಸಂಸ್ಥೆಯು ಭಾರತದಲ್ಲಿ ಸುಧಾರಿತ ಮಾದರಿಯ ಎಸ್‌ಯುವಿ ಕಾರುಗಳ ನಿರ್ಮಾಣ ಯೋಜನೆಗೆ ಚಾಲನೆ ನೀಡಿದ್ದು, ಸ್ಯಾಂಗ್‌ಯ್ಯಾಂಗ್ ಸಂಸ್ಥೆಯ ಜಿ4 ಕಾರಿನ ಪ್ರೇರಣೆಯೊಂದಿಗೆ ಅಲ್ಟುರಾಸ್ ಜಿ4 ಎಸ್‌ಯುವಿ ಕಾರನ್ನು ನಿರ್ಮಾಣ ಮಾಡಿದೆ.

ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

ಮಹೀಂದ್ರಾ ಅಲ್ಟುರಾಸ್ ಜಿ4 ಕಾರು ಎಕ್ಸ್‌ಯುವಿ 500 ಕಾರಿಗಿಂತಲೂ ಹೆಚ್ಚಿನ ಮಟ್ಟದ ಐಷಾರಾಮಿ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಗೊಂಡಿದ್ದು, ಪ್ರೀಮಿಯಂ ಸೌಲಭ್ಯಗಳೊಂದಿಗೆ 7 ಸೀಟರ್ ಐಷಾರಾಮಿ ಎಸ್‌ಯುವಿ ಕಾರು ಮಾದರಿಯಾಗಿದೆ ಮಾರಾಟಗೊಳ್ಳಲಿದೆ.

ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

ಡಿಸೈನ್ ಮತ್ತು ಸ್ಟೈಲ್

ಸುಧಾರಿತ ತಂತ್ರಜ್ಞಾನ ಪ್ರೇರಿತ ವಿಶ್ವದರ್ಜೆ ಸೌಲಭ್ಯಗಳನ್ನು ಹೊಂದಿರುವ ಅಲ್ಟುರಾಸ್ ಜಿ4 ಕಾರುಗಳು ಮುಂಭಾಗದಲ್ಲಿ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಮಹೀಂದ್ರಾ ಸಂಸ್ಥೆಯ ಆಕರ್ಷಕ ವರ್ಟಿಕಲ್ ಸಿಕ್ಸ್ ಸ್ಲಾಟ್ ಗ್ರಿಲ್ ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

ಕಾರಿನ ಡಿಸೈನ್‌ನಲ್ಲಿ ಈ ಹಿಂದಿನ ಸ್ಯಾಂಗ್‌ಯಾಂಗ್ ರೆಕ್ಸ್‌ಸ್ಟಾನ್ ಜಿ4 ಕಾರಿನ ಕೆಲವು ವಿನ್ಯಾಸಗಳನ್ನು ಎರವಲು ಪಡೆಯಲಾಗಿದ್ದು, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಜೊತೆ ಎಲ್ಇಡಿ ಡಿಆರ್‌ಎಲ್, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹೈಬೀಮ್ ಮತ್ತು ಲೋ ಬೀಮ್ ಲೈಟ್ಸ್, ಫಾಗ್ ಲ್ಯಾಂಪ್ ಜೊತೆ ಕಾರ್ನರ್ ಲೈಟಿಂಗ್ ಸೌಲಭ್ಯ ಪಡೆದಿದೆ.

ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

ಹಾಗೆಯೇ ಸ್ಪೋರ್ಟಿ ಲುಕ್ ಹೊಂದಿರುವ ಅಲ್ಟುರಾಸ್ ಕಾರುಗಳಲ್ಲಿ 18-ಇಂಚಿನ ಫೈವ್-ಸ್ಪೋಕ್ ಅಲಾಯ್ ಚಕ್ರಗಳನ್ನು ಜೋಡಿಸಲಾಗಿದ್ದು, ಡೋರ್ ಅಂಚುಗಳಲ್ಲಿ ನೀಡಲಾಗಿರುವ ಕ್ರೋಮ್ ಡಿಸೈನ್ ಕೂಡಾ ಕಾರಿನ ಐಷಾರಾಮಿಗೆ ಹೊಸ ಲುಕ್ ನೀಡಿದೆ.

ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

ಎಲೆಕ್ಟ್ರಿಕ್ ಸನ್ ರೂಫ್, ಪವರ್ಡ್ ಟೈಲ್‌ಗೆಟ್ ಸೇರಿದಂತೆ ಅತ್ಯಾಧುನಿಕ ಸುರಕ್ಷಾ ಸೌಲಭ್ಯಗಳನ್ನು ಹೊಂದಿರಲಿದ್ದು, ಎಸ್‌ಯುವಿ ಕಾರು ಮಾದರಿಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ.

ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

ಹೊಸ ಕಾರಿನಲ್ಲಿ ಪ್ರಕಾಶಿತ ಹಿಂಬದಿಯ ನಂಬರ್ ಪ್ಲೇಟ್, ಬಿಸಿಯಾಗುವ ಒಆರ್‌ವಿಎಂಗಳು, ವಿಂಡ್ ಷೀಲ್ಡ್ ಮತ್ತು ಕಾರ್ನರಿಂಗ್ ಲೈಟ್ಸ್ ಸೌಲಭ್ಯವು ಕೂಡಾ ಮಹತ್ವ ಪಡೆದಿದ್ದು, ಪ್ರತಿ ಹಂತದಲ್ಲೂ ಕ್ರೋಮ್ ಬಳಿಕೆ ಮಾಡಿರುವುದು ಕಾರಿನ ಹೊರ ಭಾಗದ ಲುಕ್‌ ಹೆಚ್ಚಿಸಲ್ಲಿ ಪ್ಲಸ್ ಪಾಯಿಂಟ್ ಆಗಿದೆ.

ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

ಇನ್ನು ಕಾರಿನ ಹಿಂಭಾಗದ ಡಿಸೈನ್ ಕೂಡಾ ನೋಡಲು ಆಕರ್ಷಕವಾಗಿದ್ದು, ಎಲ್ಇಡಿ ಟೈಲ್ ಲ್ಯಾಂಪ್ಸ್, ಮಹೀಂದ್ರಾ ಲೊಗೊ ಜೊತೆಗೆ ಬೂಟ್‌ಸ್ಪೆಸ್ ಮಧ್ಯದಲ್ಲಿ ಜೋಡಣೆ ಮಾಡಲಾಗಿರುವ 'ALTURAS G4' ಬ್ಯಾಡ್ಜ್, ಬಂಪರ್ ಕ್ಲ್ಯಾಡಿಂಗ್ ಸೇರಿಸಲಾಗಿದೆ.

ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

ಕಾರಿನ ಒಳಾಂಗಣ ವಿನ್ಯಾಸ

ಅಲ್ಟುರಾಸ್ ಕಾರಿನ ಒಳಭಾಗದ ವಿನ್ಯಾಸವು ನಿಜಕ್ಕೂ ಎಸ್‌ಯುವಿ ಪ್ರಿಯರನ್ನು ಮೊದಲ ನೋಟದಲ್ಲೇ ಸೆಳೆಯದೆ ಇರಲಾರವು. ಯಾಕೆಂದ್ರೆ ಪ್ರೀಮಿಯಂ ಸೌಲಭ್ಯಗಳಾದ ಸ್ಟೀರಿಂಗ್ ಮೌಟೆಂಡ್ ಆಡಿಯೋ ಕಂಟ್ರೋಲ್, ಡಿಜಿಟಲ್ ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆ 7-ಇಂಚಿನ ಟಿಎಫ್‌ಟಿ ಡಿಸ್‌ಪ್ಲೈ ಗಮನ ಸೆಳೆಯುತ್ತವೆ.

ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

ಸಾಫ್ಟ್-ಟಚ್ ಮೆಟೀರಿಯಲ್ ಪ್ರೇರಿತ ಪ್ರೀಮಿಯಂ ಸೌಲಭ್ಯದ ಒಳಾಂಗಣದಲ್ಲಿ ಕಾರು ಚಾಲನೆಯು ಮತ್ತಷ್ಟು ಐಷಾರಾಮಿತನ ನೀಡಲಿದ್ದು, 8-ಇಂಚಿನ ಟಚ್‌ಸ್ಕ್ರೀನ್ ಇನ್ಫೆೋಟೈನ್‌ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಸೌಲಭ್ಯ ಪ್ರೇರಿತ ಆ್ಯಪಲ್ ಕಾರ್‌ಪ್ಲೇ ಮತ್ತು ನ್ಯಾವಿಗೇಷನ್, ಮುಂಭಾಗದ ಆಸನಗಳಲ್ಲಿ ತಾಪಮಾನ ಏರಿಳಿತದ ಸೌಲಭ್ಯವಿದೆ.

ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

ಪ್ರಮುಖವಾಗಿ ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ, 8 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕನ ಸೀಟು, ಎರಡನೇ ಸಾಲಿನಲ್ಲಿರುವ ಮಧ್ಯದ ಆಸನದಲ್ಲಿ ಆರ್ಮ್‌ರೆಸ್ಟ್ ಮತ್ತು ಕಪ್-ಹೋಲ್ಡ್ ಸೌಲಭ್ಯವು ಅಲ್ಟುರಾಸ್ ಜಿ4 ಕಾರಿನ ಆಯ್ಕೆಯ ಮಹತ್ವವನ್ನು ಹೆಚ್ಚಿಸುತ್ತವೆ.

ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

ಅದಲ್ಲದೇ ಎರಡನೇ ಸಾಲಿನ ಆಸನಗಳು 60:40 ಅನುಪಾತದಲ್ಲಿ ಜೋಡಣೆ ಮಾಡಲಾಗಿದ್ದು, ಮೂರನೇ ಸಾಲಿನ ಆಸನಗಳನ್ನು 50:50 ಅನುಪಾತದಲ್ಲಿ ಸರಿದೂಗಿಸಲಾಗಿದ್ದು, ಅನಕೂಲಕರ ಲೆಗರೂಮ್ ಮತ್ತು ಹೆಡ್ ರೂಂ ಸೌಲಭ್ಯದೊಂದಿಗೆ 7 ಜನ ಆರಾಮದಾಯಕವಾಗಿ ಪ್ರಯಾಣಿಸಬಹುದು.

ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

ಬೂಟ್ ಸ್ಪೆಸ್ ಸೌಲಭ್ಯ

ಅಲ್ಟುರಾಸ್ ಕಾರುಗಳು 7 ಸೀಟರ್ ಮಾದರಿಯಾಗಿರುವುದರಿಂದ ಹಿಂಬದಿಯಲ್ಲಿ ನೀಡಲಾಗುವ ಬೂಟ್ ಸ್ಪೆಸ್‌ನಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದು, ದೂರದ ಪ್ರಯಾಣದ ವೇಳೆ ಹೆಚ್ಚುವರಿ ಲಗೇಜ್ ಇದ್ದಲ್ಲಿ ಒನ್ ಟಚ್ ಬೂಟ್ ಸ್ಪೇಸ್ ಮುಚ್ಚುವಿಕೆಯ ಸೌಲಭ್ಯದೊಂದಿಗೆ ಮೂರನೇ ಸಾಲಿನ ಆಸನಗಳನ್ನು ತೆಗೆದುಹಾಕಬಹುದಾಗಿದೆ. ಇದು ಸಂಪೂರ್ಣ ಸೆನ್ಸಾರ್ ಸೌಲಭ್ಯದೊಂದಿಗೆ ನಿಯಂತ್ರಣ ಹೊಂದಿದ್ದು, ಇದು ಇತರೆ ಎಸ್‌ಯುವಿಗಳಿಂತಲೂ ವಿಭಿನ್ನ ಎನ್ನಿಸುತ್ತೆ.

ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

ಎಂಜಿನ್ ಸಾಮರ್ಥ್ಯ

ಬಿಡುಗಡೆಗೊಳ್ಳಲಿರುವ ಹೊಸ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು 2.2-ಲೀಟರ್(2,200ಸಿಸಿ) 4 ಸಿಲಿಂಡರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದ್ದು, 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ 178-ಬಿಹೆಚ್‍‍ಪಿ ಮತ್ತು 420-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿವೆ.

ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

ಜೊತೆಗೆ ಪೆಟ್ರೋಲ್ ಆವೃತ್ತಿಗಳು ಸಹ ಲಭ್ಯವಿರಲಿವೆ ಎನ್ನಲಾಗಿದ್ದು, 2 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ 222-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದಿಸಲಿವೆ ಎಂದು ಹೇಳಲಾಗಿದೆ. ಆದ್ರೆ ಈ ಬಗ್ಗೆ ಕಾರು ಬಿಡುಗಡೆ ವೇಳೆಯೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎನ್ನಬಹುದು.

ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

ಅಲ್ಟುರಾಸ್ ಜಿ4 ಕಾರುಗಳು ಕೇವಲ ಪ್ರೀಮಿಯಂ ಎಸ್‌ಯುವಿ ಮಾದರಿಯಷ್ಟೇ ಅಲ್ಲದೇ ಆಫ್ ರೋಡ್ ವೈಶಿಷ್ಟ್ಯತೆಯನ್ನು ಸಹ ಹೊಂದಿರುವ ಈ ಕಾರುಗಳಲ್ಲಿ ಹಿಂಬದಿ ಚಕ್ರಗಳಿಗೂ ಗೇರ್‌ಬಾಕ್ಸ್ ಶಕ್ತಿ ಪೂರೈಕೆಯ ಸೌಲಭ್ಯವಿದ್ದು, ಇದು ಕಠಿಣ ಪರಿಸ್ಥಿತಿಗಳಲ್ಲೂ ಸರಾಗವಾಗಿ ನುಗ್ಗಬಲ್ಲ ಬಲಿಷ್ಠ ಕಾರು ಮಾದರಿಯಾಗಲಿದೆ.

ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

ಹೀಗಾಗಿ ಗ್ರಾಹಕರು ತಮ್ಮ ಬೇಡಿಕೆ ಅನುಗುಣವಾಗಿ 4x4 ಮತ್ತು 2x4 ಡ್ರೈವ್‌ ಟೆಕ್ನಾಲಜಿ ಪ್ರೇರಿತ ಅಲ್ಟುರಾಸ್ ಜಿ4 ಕಾರನ್ನು ಆಯ್ಕೆ ಮಾಡಬಹುದಾಗಿದ್ದು, 225/60 ಆರ್18 ಟೈರ್ ಸೌಲಭ್ಯವು ಆಪ್ ರೋಡ್ ಕೌಶಲ್ಯಕ್ಕೂ ಅನುಕೂಲಕವಾಗಿವೆ.

ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

ಮಹೀಂದ್ರಾ ಸಂಸ್ಥೆಯು ಅಲ್ಟುರಾಸ್ ಜಿ4 ಕಾರನ್ನು ಕ್ವಾಡ್ ಫ್ರೇಮ್ ತಂತ್ರಜ್ಞಾನದಡಿ ನಿರ್ಮಾಣ ಮಾಡಿದ್ದು, ಇದರಿಂದ ಕಾರಿನ ತೂಕವು ಸಾಕಷ್ಟು ಹಗುರವಾಗಿರುವುಲ್ಲದೇ ಎಂಜಿನ್ ಮತ್ತು ಇಂಧನ ಕಾರ್ಯಕ್ಷಮತೆ ಹೆಚ್ಚಲು ಸಹಕಾರಿಯಾಗಲಿದೆ.

ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

ಸುರಕ್ಷಾ ಸೌಲಭ್ಯಗಳು

ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 9 ಏರ್‍‍ಬ್ಯಾಗ್, ಎಬಿಎಸ್, ಇಬಿಡಿ, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಅಡ್ವಾನ್ಸ್ಡ್ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್, ಲೇನ್ ಡಿಪಾರ್ಚುರ್ ವಾರ್ನಿಂಗ್, ಲೇನ್ ಚೇಂಜ್ ಅಸ್ಸಿಸ್ಟ್, ಟ್ರಾಫಿಕ್ ಸೇಫ್ಟಿ ಅಸ್ಸಿಸ್ಟ್, ಐಎಸ್ಒಎಫ್ಐಎಕ್ಸ್ ಚೈಲ್ಡ್-ಸೀಟ್ ಮೌಂಟ್ ಸೀಟ್, ಹಿಲ್ ಕ್ಲೈಮ್ / ಡಿಸೆಂಟ್ ಅಸಿಸ್ಟ್ಸ್ ಮತ್ತು ಹೈ ಬೀಮ್ ಅಸ್ಸಿಸ್ಟ್ ಅನ್ನು ಅಳವಡಿಸಲಾಗಿದೆ.

ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

ಅಲ್ಟುರಾಸ್ ಜಿ4 ಪ್ರತಿಸ್ಪರ್ಧಿಗಳು

ಸದ್ಯ ಮಾರುಕಟ್ಟೆಯಲ್ಲಿ ಅಲ್ಟುರಾಸ್ ಜಿ4 ಕಾರಿಗೆ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳು ತೀವ್ರ ಪೈಪೋಟಿ ನೀಡಲಿದ್ದು, ಎಂಜಿನ್ ಸಾಮರ್ಥ್ಯದಲ್ಲಿ ಫಾರ್ಚೂನರ್ ಮತ್ತು ಎಂಡೀವರ್‌ಗಿಂತ ಕಡಿಮೆ ಸಾಮರ್ಥ್ಯವಿದ್ದರೂ ಸಹ ಅಲ್ಟುರಾಸ್ ಜಿ4 ಕಾರುಗಳು ಪರ್ಫಾಮೆನ್ಸ್ ಮತ್ತು ಇಂಧನ ದಕ್ಷತೆಯಲ್ಲಿ ಗಮನಸೆಳೆಯಲಿವೆ.

ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

ಕಾರಿನ ಬೆಲೆ(ಅಂದಾಜು)

ಎಸ್‌ಯುವಿ ಕಾರುಗಳಲ್ಲೇ ವಿಶೇಷ ಎನ್ನಿಸಲಿರುವ ಮಹೀಂದ್ರಾ ಹೊಸ ಕಾರು 7 ಆಸನಗಳೊಂದಿಗೆ ಹೊತ್ತು ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಐಷಾರಾಮಿ ಮಾದರಿಯಾಗಿದ್ದು, ಬೆಲೆಗಳು ಕೂಡಾ ತುಸು ದುಬಾರಿ ಎನ್ನಿಸಲಿವೆ. ಕೆಲವು ಮಾಹಿತಿ ಪ್ರಕಾರ ಹೊಸ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.23 ಲಕ್ಷದಿಂದ ರಿಂದ ರೂ. 27 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದೆ.

ಅಲ್ಟುರಾಸ್ ಜಿ4ನೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಮಹೀಂದ್ರಾ..!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸದ್ಯ ಕಾರು ಉತ್ಪಾದನೆಯಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಸ್ಯಾಂಗ್‌ಯಾಂಗ್‌ ಜೊತೆಗೂಡಿ ವಿವಿಧ ನಮೂನೆಯ ಹೊಸ ಕಾರುಗಳನ್ನು ಸಿದ್ದಗೊಳಿಸುತ್ತಿದ್ದು, ಮೊದಲ ಹಂತವಾಗಿ ಬಿಡುಗಡೆಯಾಗುತ್ತಿರುವ ಅಲ್ಟುರಾಸ್ ಜಿ4 ಕಾರು ಮಾರುಕಟ್ಟೆಯಲ್ಲಿ ಜನಪ್ರಿಯತೆ ಹೊಂದಿರುವ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್, ಇಸುಝು ಎಂಯುಎಕ್ಸ್ ಕಾರುಗಳಿಗೆ ಟಕ್ಕರ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

More from DriveSpark

Article Published On: Wednesday, November 21, 2018, 14:11 [IST]
English summary
Mahindra Alturas G4 Review — The Benchmark For Future Mahindra SUVs?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+