2025 ಮಹೀಂದ್ರಾ ಥಾರ್ 3-ಡೋರ್ ಫೇಸ್‌ಲಿಫ್ಟ್ ಬಿಡುಗಡೆ: ಇಂಟೀರಿಯರ್ ವಿಡಿಯೋ ನೋಡಿ...

ಭಾರತದಲ್ಲಿ 2025 ರ ಮಹೀಂದ್ರಾ ಥಾರ್ 3-ಡೋರ್ ಫೇಸ್‌ಲಿಫ್ಟ್ (Mahindra Thar 3-Door Facelift 2025) ಬಿಡುಗಡೆಯಾಗಿದೆ. ಇದು ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಆರಾಮದಾಯಕತೆಯಲ್ಲಿ ಹಲವು ಬದಲಾವಣೆಗಳನ್ನು ಪಡೆದುಕೊಂಡಿದೆ. ಈ ಹೊಸ ಮಾಡಲ್ ಆರಂಭಿಕ ಬೆಲೆಯು ರೂ. 9.99 ಲಕ್ಷದಿಂದ (ಎಕ್ಸ್‌ ಶೋರೂಂ) ಪ್ರಾರಂಭವಾಗುತ್ತದೆ. ಬಾಡಿ ಕಲರ್ ಗ್ರಿಲ್, ನವೀಕರಿಸಿದ ಟಚ್ ‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ರಸ್ತೆ ಮತ್ತು ಆಫ್-ರೋಡ್ ಬಳಕೆಗಾಗಿ ವರ್ಧಿತ ವೈಶಿಷ್ಟ್ಯಗಳು ಇದರ ಪ್ರಮುಖ ಅಪ್‌ಡೇಟ್‌ಗಳಾಗಿದ್ದು, ಮಹೀಂದ್ರಾ ಥಾರ್‌ನ ಹೊರಭಾಗವನ್ನು ಸ್ವಲ್ಪಮಟ್ಟಿಗೆ ನವೀಕರಿಸಲಾಗಿದೆ.

ಹೊಸ ಮಾಡಲ್ ಮ್ಯಾಟ್ ಬ್ಲಾಕ್ ಮತ್ತು ಸಿಲ್ವರ್ ಅಂಶಗಳೊಂದಿಗೆ ಡ್ಯುಯಲ್-ಟೋನ್ ಬಂಪರ್ ಅನ್ನು ಹೊಂದಿದೆ. ಇದು ಹೊಸ ಬಾಡಿ ಕಲರ್ ಮುಂಭಾಗದ ಗ್ರಿಲ್‌ಗೆ ಪೂರಕವಾಗಿದೆ. ಥಾರ್ 18-ಇಂಚಿನ ಅಲಾಯ್ ವೀಲ್‌ಗಳು, ಬಾಡಿ ಕ್ಲಾಡಿಂಗ್ ಮತ್ತು ಡೋರ್ ಹಿಂಜ್‌ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಪಾರ್ಕಿಂಗ್ ಕ್ಯಾಮೆರಾ, ವೈಪರ್ ಮತ್ತು ಡಿಫಾಗರ್‌ಗಳೊಂದಿಗೆ ಸುಧಾರಣೆಗಳನ್ನು ನೀಡಲಾಗಿದೆ. ಟ್ಯಾಂಗೋ ರೆಡ್ ಮತ್ತು ಗ್ರೇ ಬಣ್ಣದಂತಹ ಹೊಸ ಬಣ್ಣಗಳನ್ನು ಸೇರಿಸಲಾಗಿದೆ.

mahindra-thar-3-door-facelift-2025-launched-in-india-walkaround-video

ಮಹೀಂದ್ರಾ ಥಾರ್ 3-ಡೋರ್ ಫೇಸ್‌ಲಿಫ್ಟ್ ಇಂಟೀರಿಯರ್

ಒಳಗೆ, ಥಾರ್ ಫೇಸ್‌ಲಿಫ್ಟ್ ಸಂಪೂರ್ಣವಾಗಿ ಬ್ಲಾಕ್ ಕ್ಯಾಬಿನ್ ಪಡೆದುಕೊಂಡಿದೆ. ಥಾರ್ ರಾಕ್ಸ್ ಆವೃತ್ತಿಗೆ ಹೋಲುವ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಪ್ರಮುಖ ಅಪ್‌ಗ್ರೇಡ್ ಆಗಿದೆ. ಇದು ಲ್ಯಾಪ್ ಟೈಮರ್, ಆಫ್-ರೋಡ್ ಅಂಕಿಅಂಶಗಳು ಮತ್ತು ಅಡಾಪ್ಟಿವ್ ರಿವರ್ಸ್ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇತರ ಆಂತರಿಕ ನವೀಕರಣಗಳಲ್ಲಿ ಹೊಸ ಅಪ್ಹೋಲ್ಸ್ಟರಿ, ಸ್ಲೈಡಿಂಗ್ ಫ್ರಂಟ್ ಆರ್ಮ್‌ರೆಸ್ಟ್ ಮತ್ತು ಉತ್ತಮ ಆರಾಮಕ್ಕಾಗಿ ಹಿಂಭಾಗದ ಎಸಿ ವೆಂಟ್‌ಗಳು ಸೇರಿವೆ.

ಡೋರ್‌ಗಳ ಮೇಲೆ ಮರುಸ್ಥಾಪಿಸಲಾದ ಪವರ್ ವಿಂಡೋ ಕಂಟ್ರೋಲ್‌ಗಳು, ಮುಂಭಾಗದ ವಿಂಡೋಗಳಿಗೆ ಒನ್ ಟಚ್ ಮೇಲಕ್ಕೆ/ಕೆಳಕ್ಕೆ ಮತ್ತು ಹೊಸ ಎಲೆಕ್ಟ್ರಾನಿಕ್ ಫ್ಯೂಲ್ ಲಿಡ್ ಓಪನರ್‌ನೊಂದಿಗೆ ಅನುಕೂಲತೆಯನ್ನು ಹೆಚ್ಚಿಸಲಾಗಿದೆ. ಪ್ರವೇಶಿಸಲು ಮತ್ತು ನಿರ್ಗಮಿಸಲು ಸುಲಭವಾಗುವಂತೆ ಕ್ಯಾಬಿನ್ ಎ - ಪಿಲ್ಲರ್‌ನಲ್ಲಿ ಹೊಸ ಗ್ರ್ಯಾಬ್ ಹ್ಯಾಂಡಲ್‌ಗಳನ್ನು ಸಹ ಹೊಂದಿದೆ. ಬಾಗಿಲಿನ ಪ್ಯಾನಲ್‌ಗಳಲ್ಲಿನ ಸಾಫ್ಟ್ ಟಚ್ ಮೆಟೀರಿಯಲ್‌ಗಳು ಆರಾಮವನ್ನು ಹೆಚ್ಚಿಸುತ್ತವೆ.

mahindra-thar-3-door-facelift-2025-launched-in-india-walkaround-video

ಎಂಜಿನ್ ಮತ್ತು ಪರ್ಫಾಮೆನ್ಸ್

ಥಾರ್ ಫೇಸ್‌ಲಿಫ್ಟ್ ಅದೇ 2.2-ಲೀಟರ್ ಡೀಸೆಲ್, 2.0-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹಾಗೆಯೇ ಉಳಿಸಿಕೊಂಡಿದೆ. ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷಗಳು ಲಭ್ಯವಿದೆ. 4x4 ವೇರಿಯೆಂಟ್‌ಗಳು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್ ನೊಂದಿಗೆ ಬರುತ್ತವೆ. ಇದು 4-ವೀಲ್ ಡ್ರೈವ್‌ನೊಂದಿಗೆ ತನ್ನ ಸ್ಟ್ರಾಂಗ್ ಆಫ್-ರೋಡ್ ಸಾಮರ್ಥ್ಯವನ್ನು ಉಳಿಸಿಕೊಂಡಿದೆ. ಇಂಧನ ದಕ್ಷತೆಯು (ಮೈಲೇಜ್)ಹಿಂದಿನ ಮಾದರಿಗೆ ಹೋಲುತ್ತದೆ, ಆಯ್ಕೆಮಾಡಿದ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಅವಲಂಬಿಸಿ ವ್ಯತ್ಯಾಸಗಳಿವೆ.

ಫೀಚರ್ಸ್ ಮತ್ತು ಸುರಕ್ಷತೆ: ನವೀಕರಿಸಿದ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸ್ಮಾರ್ಟ್‌ಫೋನ್ ಸಂಪರ್ಕ ಮತ್ತು ರಿಯಲ್-ಟೈಮ್ ಚಾಲನಾ ಮಾಹಿತಿಯನ್ನು ನೀಡುತ್ತದೆ. ಇತರ ವೈಶಿಷ್ಟ್ಯಗಳಲ್ಲಿ ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ಕ್ರೂಸ್ ಕಂಟ್ರೋಲ್ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು ಸೇರಿವೆ. ಸುರಕ್ಷತಾ ವೈಶಿಷ್ಟ್ಯಗಳೆಂದರೆ ಡ್ಯುಯಲ್ ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಡಿಫಾಗರ್ ಸುರಕ್ಷತೆ ಮತ್ತು ಅನುಕೂಲತೆಯನ್ನು ಹೆಚ್ಚಿಸುತ್ತವೆ.

ವೇರಿಯೆಂಟ್ ಮತ್ತು ಬೆಲೆ: ಥಾರ್ ಫೇಸ್‌ಲಿಫ್ಟ್ ಹಲವಾರು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಎರಡರಲ್ಲೂ ಲಭ್ಯವಿರುತ್ತದೆ. ಬೆಲೆಯು ರೂ. 9.99 ಲಕ್ಷದಿಂದ (ಎಕ್ಸ್‌ ಶೋರೂಂ) ಪ್ರಾರಂಭವಾಗುತ್ತದೆ. ಟಾಪ್ ವೇರಿಯೆಂಟ್ ಬೆಲೆಯು ರೂ. 16.25 (ಎಕ್ಸ್‌ ಶೋರೂಂ) ಇದೆ.

ಲಭ್ಯತೆ ಮತ್ತು ಪ್ರತಿಸ್ಪರ್ಧಿಗಳು: ಹೊಸ ಮಹೀಂದ್ರಾ ಥಾರ್ 3-ಡೋರ್ ಫೇಸ್‌ಲಿಫ್ಟ್ ಶೀಘ್ರದಲ್ಲೇ ಭಾರತದಾದ್ಯಂತ ಮಹೀಂದ್ರಾ ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ವಿತರಣೆಗಳು ಕುಡ ಶೀಘ್ರದಲ್ಲೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಫೋರ್ಸ್ ಗೂರ್ಖಾ ಮತ್ತು ಮಾರುತಿ ಸುಜುಕಿ ಜಿಮ್ನಿ ನೇರ ಪ್ರತಿಸ್ಪರ್ಧಿಗಳಾಗಿವೆ, ಇವುಗಳು ಲೈಫ್ ‌ಸ್ಟೈಲ್ ಆಫ್ - ರೋಡರ್ ವಿಭಾಗವನ್ನು ಪೂರೈಸುತ್ತವೆ.

More from DriveSpark

Article Published On: Friday, October 3, 2025, 17:00 [IST]
English summary
Mahindra thar 3 door facelift 2025 launched in india walkaround video
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+