Mahindra Thar Roxx Review: ನೂತನ ಮಹೀಂದ್ರಾ ಥಾರ್ ರಾಕ್ಸ್‌ 5-ಡೋರ್‌ ರಿವ್ಯೂ.. ಇನ್ನೂ ಕ್ಯೂ ನಿಲ್ಲುವುದು ಪಕ್ಕಾ!

ಭಾರತದ ಯುವಕರಿಗೆ ನಿಮ್ಮ ನೆಚ್ಚಿನ ಆಫ್-ರೋಡ್ ಎಸ್‌ಯುವಿ ಯಾವುದೆಂದು ಕೇಳಿದರೆ.. ತಕ್ಷಣ ಬರುವ ಒಂದೇ ಒಂದು ಉತ್ತರ ಮಹೀಂದ್ರಾ ಥಾರ್ (Mahindra Thar) ಎಂದು. ಅಷ್ಟರಮಟ್ಟಿಗೆ ಈ ಕಾರು ಜನಪ್ರಿಯವಾಗಿದ್ದು, ಆಫ್-ರೋಡ್ ಎಸ್‌ಯುವಿ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ. ಆದಾಗ್ಯೂ ಇದು ಪರಿಪೂರ್ಣ ಕುಟುಂಬದ ಕಾರಾಗಿರಲಿಲ್ಲ. 3-ಡೋರ್ (ಬಾಗಿಲು) ಆಯ್ಕೆಯನ್ನು ಹೊಂದಿದ್ದರೂ ಹಿಂಬದಿ ಆಸನದಲ್ಲಿ ಹೋಗಿ ಕುಳಿತುಕೊಳ್ಳಲು ಮುಂಭಾಗದಲ್ಲಿರುವ ಆಸನಗಳನ್ನು (ಸೀಟ್‌) ಕೊಂಚ ಮುಂದಕ್ಕೆ ಸರಿಸಬೇಕಾಗಿತ್ತು. ಇದರಿಂದ ಹಲವರು ಸಮಸ್ಯೆ ಎದುರಿಸುತ್ತಿದ್ದರು. ಸದ್ಯ ಅದಕ್ಕೆ ಪರಿಹಾರ ಸಿಕ್ಕಿದ್ದು, ಬುಧವಾರ 5-ಡೋರ್‌ ಆಯ್ಕೆಯಲ್ಲಿ ಥಾರ್ ರಾಕ್ಸ್‌ ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಗಿದೆ.

ನೂತನ ಮಹೀಂದ್ರಾ ಥಾರ್ ರಾಕ್ಸ್‌ ಪೆಟ್ರೋಲ್ ರೂಪಾಂತರ (ವೇರಿಯೆಂಟ್) ರೂ.12.99 ಲಕ್ಷ ಮತ್ತು ಡೀಸೆಲ್ ರೂಪಾಂತರ ರೂ.13.99 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ದರವನ್ನು ಹೊಂದಿದೆ. ನಮಗೆ ಕೇರಳದ ಕೊಚ್ಚಿಯಲ್ಲಿ ಈ ಹೊಚ್ಚ ಹೊಸ ಎಸ್‌ಯುವಿಯನ್ನು ಟೆಸ್ಟ್ ಡ್ರೈವ್ (ಪರೀಕ್ಷಾರ್ಥ ಸಂಚಾರ) ಮಾಡಲು ಅವಕಾಶ ದೊರೆಯಿತು. ಬನ್ನಿ.. ಥಾರ್ ರಾಕ್ಸ್‌ ಹೇಗಿದೆ ಎಂಬುದರ ಕುರಿತಂತೆ ಸಂಪೂರ್ಣವಾಗಿ ತಿಳಿಯೋಣ.

Mahindra Thar Roxx 5 Door Specs Driving Impressions Design Features Details

ವಿನ್ಯಾಸ (Design): ಹೊಸ ಮಹೀಂದ್ರಾ ಥಾರ್ ರಾಕ್ಸ್‌ ಎಸ್‌ಯುವಿ ಆಕರ್ಷಕವಾದ ವಿನ್ಯಾಸ ಹೊಂದಿದ್ದು, 3-ಡೋರ್ ಥಾರ್‌ನಂತೆ ಬಾಕ್ಸಿ (boxy) ಆಕಾರವನ್ನು ಉಳಿಸಿಕೊಂಡಿದೆ. ಆದರೂ ಈ ಕಾರಿನ ಮುಂಭಾಗ (ಫ್ರಂಟ್) ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಅತ್ಯಾಧುನಿಕ ಎಲ್ಇಡಿ ಹೆಡ್‌ಲೈಟ್‌ಗಳು, ಸಿ-ಮಾದರಿಯ ಡಿಆರ್‌ಎಲ್‌ಗಳು, ಎಲ್‌ಇಡಿ ಫಾಗ್ ಲೈಟ್‌ಗಳು ಮತ್ತು ಬಾಡಿ ಕಲರ್ ಪೇಂಟ್‌ನಲ್ಲಿರುವ ನವೀನವಾದ ಗ್ರಿಲ್‌ನ್ನು ಹೊಂದಿದೆ. ಜೊತೆಗೆ ಫ್ರಂಟ್ ಪಾರ್ಕಿಂಗ್ ಕ್ಯಾಮೆರಾ ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

ನೂತನ ಕಾರು ಟ್ಯಾಂಗೋ ರೆಡ್, ಎವರೆಸ್ಟ್ ವೈಟ್, ಫಾರೆಸ್ಟ್ ಗ್ರೀನ್, ನೆಬುಲಾ ಬ್ಲ್ಯೂ ಸೇರಿದಂತೆ 7 ಆಕರ್ಷಕ ಬಣ್ಣಗಳ (ಕಲರ್) ಆಯ್ಕೆಯಲ್ಲಿಯೂ ಲಭ್ಯವಿದ್ದು, ಬಂಪರ್‌ ಕೂಡ ಉತ್ತಮವಾಗಿದೆ. ಈ ಕಾರಿನ ಸುತ್ತಲಿನ (ಸೈಡ್) ಭಾಗದ ವಿನ್ಯಾಸ ಬಗ್ಗೆ ಹೇಳುವುದಾದರೆ, 255/60/ಆರ್19 ಟೈರ್‌ನೊಂದಿಗೆ 19-ಇಂಚಿನ ಡುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಪಡೆದಿದೆ. ಮ್ಯಾಟ್ ಬ್ಲ್ಯಾಕ್ ಬಣ್ಣದ ಒಆರ್‌ವಿಎಂಗಳನ್ನು ಹೊಂದಿದೆ.

Mahindra Thar Roxx 5 Door Specs Driving Impressions Design Features Details

ಮಹೀಂದ್ರಾ ಥಾರ್ ರಾಕ್ಸ್‌ ಎಸ್‌ಯುವಿಯ ಮುಂಭಾಗದ ಡೋರ್ ಹ್ಯಾಂಡಲ್‌ಗಳು ಮ್ಯಾಟ್ ಬ್ಲ್ಯಾಕ್ ಬಣ್ಣವನ್ನು ಪಡಿದಿವೆ. ಹಿಂಭಾಗದ ಡೋರ್ ಹ್ಯಾಂಡಲ್‌ಗಳು ಸಿ-ಪಿಲ್ಲರ್‌ನ ಬಳಿಯಿರುವುದರಿಂದ ಕಾರು ಯಾವ ಬಣ್ಣದಲ್ಲಿರುತ್ತದೆಯೋ ಅದೇ ಬಣ್ಣವನ್ನು ಹೊಂದಿವೆ. ಈ ಥಾರ್ ರಾಕ್ಸ್‌ ಹಿಂಭಾಗ (ರೇರ್) ಸಹ ಅತ್ಯುತ್ತಮವಾದ ವಿನ್ಯಾಸ ಹೊಂದಿದೆ. ವಿನೂತನವಾಗಿರುವ ಎಲ್‌ಇಡಿ ಟೈಲ್‌ಲೈಟ್‌, ಡಿಫಾಗರ್‌ಗಳ ಜೊತೆಗೆ ರೇರ್‌ವ್ಯೂ ವೈಪರ್‌ನ್ನು ಪಡೆದಿದೆ. ಹೆಚ್ಚಿನ ಲಗೇಜ್ ಸಾಗಿಸಲು 644-ಲೀಟರ್ ಸಾಮರ್ಥ್ಯದ ಬೂಟ್ ಸ್ಪೇನ್‌ನ್ನು ಒಳಗೊಂಡಿದೆ.

ಒಳಾಂಗಣ ವಿನ್ಯಾಸ (Interior Design): ಈ ಮಹೀಂದ್ರಾ ಥಾರ್ ರಾಕ್ಸ್‌ ಒಳಭಾಗದಲ್ಲಿ ನೋಡುಗರನ್ನು ಸೆಳೆಯುವಂತಹ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದಿದೆ. ಇದು ದೊಡ್ಡದಾದ ಪನೊರೊಮಿಕ್ ಸನ್‌ರೂಫ್ ಹೊಂದಿದ್ದು, ಸುಂದರವಾದ ನೀಲಿ ಆಕಾಶದ ಸೌಂದರ್ಯ ಸವಿಯಲು ಅನುವು ಮಾಡಿಕೊಡುತ್ತದೆ. ಜೊತೆಗೆ ಶುದ್ಧ ಗಾಳಿಯೂ ಲಭ್ಯವಾಗುತ್ತದೆ.

Mahindra Thar Roxx 5 Door Specs Driving Impressions Design Features Details

ಡ್ಯಾಶ್‌ಬೋರ್ಡ್ ಹಾಗೂ ಡೋರ್‌ಗಳು ಪ್ರಯಾಣಿಕ ಸ್ನೇಹಿಯಾಗಿವೆ. ಹೊಸದಾದ 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಒಳಗೊಂಡಿದೆ. ಎಲೆಕ್ಟ್ರಿಕ್ ಸ್ಟೀರಿಂಗ್ ವೀಲ್ ಹೊಂದಿದ್ದು, ಕಾರಿನ ಚಾಲನೆಯನ್ನು ಸರಳಗೊಳಿಸುತ್ತದೆ. ಲೀಲಾಜಾಲವಾಗಿ ಯು-ಟರ್ನ್ ತೆಗೆದುಕೊಳ್ಳಬಹುದು. ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳನ್ನು ಒಳಗೊಂಡಿದ್ದು, ಸ್ಟೀರಿಂಗ್ ವೀಲ್‌ನ್ನು ಟಿಲ್ಟ್‌ ಮಾಡಲು ಮಾತ್ರ ಸಾಧ್ಯವಾಗುತ್ತದೆ.

5 ಮಂದಿ ಸಂಚರಿಸಬಹುದಾದ ಈ ಕಾರಿನಲ್ಲಿ ಮುಂಭಾಗ (ಫ್ರಂಟ್) 6-ವೇ ಎಲೆಕ್ಟ್ರಿಕಲಿ ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್ (ಚಾಲಕನ ಆಸನ) ಇದೆ. ಜೊತೆಗೆ ಮುಂದಿರುವ 2 ಸೀಟ್‌ಗಳು ವೆಂಟಿಲೇಟೆಡ್ ಸಿಸ್ಟಮ್ ಹೊಂದಿವೆ. ಇದರಿಂದ ದೂರದ ಊರುಗಳಿಗೆ ಹೋಗುವಾಗ ಪ್ರಯಾಣಿಕರಲ್ಲಿ ಯಾವುದೇ ರೀತಿಯಲ್ಲಿ ಆಯಾಸ ಉಂಟಾಗುವುದಿಲ್ಲ.

Mahindra Thar Roxx 5 Door Specs Driving Impressions Design Features Details

ರೇರ್ ಸೀಟ್‌ (ಹಿಂಬದಿ ಆಸನ) ಸಾಕಷ್ಟು ಆರಾಮದಾಯಕವಾಗಿದ್ದು, ಅಜಾನುಬಾಹು ವ್ಯಕ್ತಿಗಳಿಗೆ ಕೊಂಚ ತೊಂದರೆಯಾಗಬಹುದು. ಸಾಮಾನ್ಯ ದೇಹಗಾತ್ರ ಹೊಂದಿರುವವರೂ ಸುಲಭವಾಗಿ ಕುಳಿತುಕೊಳ್ಳಬಹುದು. ಈಗ 2-ಕಪ್ ಹೋಲ್ಡರ್‌ ಮತ್ತು 3-ಹೆಡ್‌ರೆಸ್ಟ್‌ಗಳನ್ನು ಹೊಂದಿದೆ. ಇದರಲ್ಲಿ 2-ಹೆಡ್‌ರೆಸ್ಟ್‌ನ್ನು ಮಾತ್ರ ಹೊಂದಾಣಿಕೆ (ಅಡ್ಜಸ್ಟ್) ಮಾಡಬಹುದು. ಎಸಿ ವೆಂಟ್‌ಗಳನ್ನು ಒಳಗೊಂಡಿದ್ದು, ಕ್ಯಾಬಿನ್ ತಂಪಾಗಿರಲು ನೆರವಾಗುತ್ತದೆ.

ಸುರಕ್ಷತಾ ವೈಶಿಷ್ಟ್ಯಗಳು (Safety Features): ಈ ಕಾರು ಪ್ರಯಾಣಿಕರಿಗೆ ಹೆಚ್ಚಿನ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ 6 ಏರ್‌ಬ್ಯಾಗ್‌, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಸೀಟ್ ಬೆಲ್ಟ್ ರಿಮೈಂಡರ್‌ಗಳು, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಮತ್ತು 4 ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

Mahindra Thar Roxx 5 Door Specs Driving Impressions Design Features Details

ಕಾರ್ಯಕ್ಷಮತೆ (Performance): ಮಹೀಂದ್ರಾ ಥಾರ್ ರಾಕ್ಸ್‌ ಎಸ್‌ಯುವಿ ಪೆಟ್ರೋಲ್ ಹಾಗೂ ಡೀಸೆಲ್ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. ಇದರ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ 160 ಹೆಚ್‌ಪಿ ಗರಿಷ್ಠ ಶಕ್ತಿ (ಪವರ್) ಮತ್ತು 330 ಎನ್ಎಂ ಪೀಕ್ ಟಾರ್ಕ್ ಅಥವಾ 177 ಹೆಚ್‌ಪಿ ಶಕ್ತಿ ಹಾಗೂ 380 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಮತ್ತೊಂದು 2.2-ಲೀಟರ್ ಡೀಸೆಲ್ ಎಂಜಿನ್ ರೂಪಾಂತರಗಳಿಗೆ ತಕ್ಕಂತೆ 150 ಹೆಚ್‌ಪಿ ಗರಿಷ್ಠ ಶಕ್ತಿ (ಪವರ್) ಮತ್ತು 330 ಎನ್ಎಂ ಪೀಕ್ ಟಾರ್ಕ್ ಅಥವಾ 175 ಹೆಚ್‌ಪಿ ಶಕ್ತಿ ಹಾಗೂ 370 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಈ ಕಾರು 6-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ಗಳೊಂದಿಗೂ ದೊರೆಯುತ್ತದೆ.

Mahindra Thar Roxx 5 Door Specs Driving Impressions Design Features Details

ಚಾಲನಾ ಅನುಭವ (Driving Impressions): ನಾವು ಥಾರ್ ರಾಕ್ಸ್‌ನ 'ಡೀಸೆಲ್ ಮ್ಯಾನುವಲ್ 4x4' ಗರಿಷ್ಠ ಶ್ರೇಣಿ ರೂಪಾಂತರವನ್ನು (ಟಾಪ್ ಸ್ಪೆಕ್ ವೇರಿಯೆಂಟ್) ಓಡಿಸಿದೆವು. ಈ ಕಾರು ಅದ್ಬುತವಾದ ಚಾಲನಾ ಅನುಭವವನ್ನು ಒದಗಿಸಿತು. ಬ್ರೇಕಿಂಗ್ ಸಿಸ್ಟಮ್ ಹಾಗೂ ಸಸ್ಪೆನ್ಷನ್ ಸೆಟಪ್ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಿದವು. ಇದು ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ ಉಬ್ಬು-ತಗ್ಗು ಹಾಗೂ ಹಳ್ಳ-ದಿಣ್ಣೆಯಿಂದ ಕೂಡಿದ ರಸ್ತೆಯಲ್ಲಿಯೂ ಸುಲಭವಾಗಿ ಹೋಯಿತು. ಸಾಮಾನ್ಯ ರಸ್ತೆಯಲ್ಲಿ ಈ ಕಾರಿಗೆ ಸರಿ ಸಾಟಿಯೇ ಇಲ್ಲ ಎಂದು ಹೇಳಬಹುದು.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ (DriveSpark Opinion): ಒಟ್ಟಾರೆಯಾಗಿ ನೂತನ ಮಹೀಂದ್ರಾ ಥಾರ್ ರಾಕ್ಸ್‌ 5-ಡೋರ್‌ (Mahindra Thar Roxx 5-door) ಅತ್ಯುತ್ತಮ ಎಸ್‌ಯುವಿಯಾಗಿದ್ದು, ಕುಟುಂಬದ ಕಾರಾಗಿ ಹೊರಹೊಮ್ಮಿದೆ. ಇದನ್ನು ನಿಮ್ಮ ಆಯ್ಕೆಯ ವಾಹನವಾಗಿ ತೆಗೆದುಕೊಳ್ಳಬಹುದು. ಅಕ್ಟೋಬರ್ 3ರಿಂದ ಈ ಕಾರಿನ ಬುಕ್ಕಿಂಗ್ ಶುರುವಾಗಲಿದ್ದು, ದಸರಾ ವೇಳೆಗೆ ವಿತರಣೆಗಳು ಆರಂಭವಾಗುವ ನಿರೀಕ್ಷೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, August 17, 2024, 10:00 [IST]
English summary
Mahindra thar roxx 5 door specs driving impressions design features details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+