Mahindra XUV 7XO: ಹೊಸ ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ ರಿವ್ಯೂ.. ರಗಡ್ ಎಸ್‌ಯುವಿಯಿದು, ಹೇಗಿದೆ ಗೊತ್ತಾ?

ಇದೇ ಸೋಮವಾರ ಹೊಸ ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ (Mahindra XUV 7XO) ಎಸ್‌ಯುವಿಯನ್ನು ಪರಿಚಯಿಸಲಾಗಿದೆ. ಈ ಕಾರು ರೂ.13.66 ಲಕ್ಷದಿಂದ ರೂ.24.92 ಲಕ್ಷ (ಎಕ್ಸ್-ಶೋರೂಂ - ಬೆಂಗಳೂರು) ಬೆಲೆಯನ್ನು ಒಳಗೊಂಡಿದೆ. ಎಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7, ಎಎಕ್ಸ್7 ಟಿ ಮತ್ತು ಎಎಕ್ಸ್7 ಎಲ್ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ಜನವರಿ 14 ರಿಂದ ಬುಕ್ಕಿಂಗ್‌ ಶುರುವಾಗಲಿದೆ. ಆಸಕ್ತ ಗ್ರಾಹಕರು, ಸಮೀಪದ ಡೀಲರ್‌ಶಿಪ್‌ ಅಥವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ರೂ.21,000 ಮುಂಗಡ ಹಣ ಪಾವತಿಸಿ, ಆರ್ಡರ್ ಮಾಡಬಹುದು.

ಈಚೆಗೆ ನಮ್ಮ 'ಡ್ರೈವ್‌ಸ್ಪಾರ್ಕ್' ತಂಡಕ್ಕೆ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ನೂತನ 'ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ' ಕಾರು ಟೆಸ್ಟ್ ಡ್ರೈವ್ ನಡೆಸುವುದಕ್ಕೆ ಲಭ್ಯವಾಗಿತ್ತು. ಬನ್ನಿ, ಈ ಎಸ್‌ಯುವಿಯ ವಿನ್ಯಾಸವೇನು.. ವೈಶಿಷ್ಟ್ಯಗಳೇನು.. ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Mahindra XUV 7XO Review Design Specs Features And Driving Impressions Details

ವಿನ್ಯಾಸ & ಬಣ್ಣಗಳು (Design & Colors):

ನೂತನ 'ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ' ಹಳೆಯ 'ಎಕ್ಸ್‌ಯುವಿ700'ನ ಫೇಸ್‌ಲಿಫ್ಟ್ ಮಾಡೆಲ್ ಆಗಿದೆ. ಆದರೂ ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಹೊಸದಾದ ಗ್ರಿಲ್ ಹಾಗೂ ಬಂಪರ್‌ನ್ನು ಪಡೆದಿದೆ. ನವೀನವಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಫಾಗ್ ಲ್ಯಾಂಪ್ ಎಲ್ಇಡಿ ಟೈಲ್‌ಲ್ಯಾಂಪ್‌ಗಳು ಮತ್ತು ದೊಡ್ಡ ಗಾತ್ರದ 19 ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ. ಎವರೆಸ್ಟ್ ವೈಟ್, ನೆಬುಲಾ ಬ್ಲ್ಯೂ, ಡಸರ್ಟ್ ಮಿಸ್ಟ್, ಮಿಡ್‌ನೈಟ್ ಬ್ಲ್ಯಾಕ್, ಗ್ಯಾಲಕ್ಸಿ ಗ್ರೇ, ರೂಬಿ ವೆಲ್ವೆಟ್ ಹಾಗೂ ಸ್ಟೆಲ್ತ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.

ಸುತ್ತಳತೆ (Dimension):

ಇದು ಫ್ಯಾಮಿಲಿ ಕಾರಾಗಿದ್ದು, ಹೆಚ್ಚು ವಿಶಾಲವಾಗಿದೆ. 4,695 ಎಂಎಂ ಉದ್ದ, 1,890 ಎಂಎಂ ಅಗಲ ಹಾಗೂ 1755 ಎಂಎಂ ಎತ್ತರವಿದೆ. 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,750 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 1,750 ಕೆಜಿ ತೂಕವಿದೆ.

Mahindra XUV 7XO Review Design Specs Features And Driving Impressions Details

ಆಸನ ಆಯ್ಕೆ & ಬೂಟ್ ಸ್ಪೇಸ್ (Seating Capacity & Boot Space):

ಈ ಕಾರು 6 ಅಥವಾ 7 ಆಸನಗಳೊಂದಿಗೆ ಗ್ರಾಹಕರ ಖರೀದಿಗೆ ಲಭ್ಯವಿದೆ. ಎರಡು ಕುಟುಂಬ ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಪ್ರಯಾಣಿಸಬಹುದು. ವಾರಾಂತ್ಯಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 240 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿರಬಹುದು ಎಂದು ಹೇಳಲಾಗಿದೆ. ಸದ್ಯಕ್ಕೆ ಖಚಿತ ವಿವರಗಳು ಲಭ್ಯವಿಲ್ಲ.

ಕಾರ್ಯಕ್ಷಮತೆ (Permanence):

ಹೊಸ 'ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ' ಬೆಲೆಗೆ ತಕ್ಕಂತೆ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. ಇದರ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 5,000 ಆರ್‌ಪಿಎಂನಲ್ಲಿ 200 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 3,000 ಆರ್‌ಪಿಎಂನಲ್ಲಿ 380 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಎಫ್‌ಡಬ್ಲ್ಯೂಡಿ (ಫ್ರಂಟ್-ವೀಲ್ ಡ್ರೈವ್) ಟೆಕ್ನಾಲಜಿಗೆ ಅನುಗುಣವಾಗಿದೆ.

Mahindra XUV 7XO Review Design Specs Features And Driving Impressions Details

ಮತ್ತೊಂದು 2.2-ಲೀಟರ್ ಡೀಸೆಲ್ ಎಂಜಿನ್, 3,500 ಆರ್‌ಪಿಎಂನಲ್ಲಿ 185 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 2,800 ಆರ್‌ಪಿಎಂನಲ್ಲಿ 450 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ. ಎಫ್‌ಡಬ್ಲ್ಯೂಡಿ (ಫ್ರಂಟ್-ವೀಲ್ ಡ್ರೈವ್) & ಎಡಬ್ಲ್ಯೂಡಿ (ಆಲ್-ವೀಲ್ ಡ್ರೈವ್) ಟೆಕ್ನಾಲಜಿಯನ್ನು ಬೆಂಬಲಿಸಬಲ್ಲದು. ಈ ಕಾರು 13 ರಿಂದ 17 ಕಿಲೋಮೀಟರ್‌ವರೆಗೆ ಮೈಲೇಜ್‌ ಕೊಡುವ ನಿರೀಕ್ಷೆಯಿದೆ.

ವೈಶಿಷ್ಟ್ಯಗಳು (Features):

ನೂತನ 'ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ'ನ ಕ್ಯಾಬಿನ್ ವಿನ್ಯಾಸವು ಚೆನ್ನಾಗಿದೆ. ಅತ್ಯುತ್ತಮವಾದ ಡ್ಯಾಶ್‌ಬೋರ್ಡ್‌ನ್ನು ಒಳಗೊಂಡಿದೆ. ತಲಾ 12.3-ಇಂಚಿನ ಟ್ರಿಪಲ್ ಸ್ಕ್ರೀನ್ ಸೆಟಪ್ (ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ & ಕೋ-ಡ್ರೈವರ್ ಎಂಟರ್‌ಟೈನ್‌ಮೆಂಟ್ ಸಿಸ್ಟಮ್‌), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 16-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ಮಲ್ಟಿ-ಕಲರ್ ಆಂಬಿಯೆಂಟ್ ಲೈಟಿಂಗ್, ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ರೇರ್ ಸೀಟ್‌ಗಳು ಮತ್ತು 540-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

Mahindra XUV 7XO Review Design Specs Features And Driving Impressions Details

ಸುರಕ್ಷತಾ ವ್ಯ್ಯಶಿಷ್ಟ್ಯಗಳು (Safety Features):

ಇದು ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ಸುರಕ್ಷತೆಯನ್ನು ಒದಗಿಸಬಲ್ಲದು. ಅದಕ್ಕಾಗಿ 7-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಆಟೋ ಹೋಲ್ಡ್‌, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ರೇರ್ ಪಾರ್ಕಿಂಗ್ ಸೆನ್ಸರ್‌ಗಳು ಹಾಗೂ ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

ಚಾಲನಾ ಅನುಭವ (Driving Impressions):

ನಮ್ಮ ತಂಡದ ಪ್ರತಿನಿಧಿ ಅಭಿಷೇಕ್ ಅವರು, 'ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ'ನ್ನು ಜೈಸಲ್ಮೇರ್‌ನಿಂದ ಜೈಪುರವರೆಗೆ ಭರ್ತಿ 300 ಕಿಲೋಮೀಟರ್‌ವರೆಗೆ ಓಡಿಸಿದರು. ಅವರಿಗೆ ಅದ್ಬುತವಾದ ಚಾಲನಾ ಅನುಭವನ್ನು ಒದಗಿಸಿತು. ಇದರ ಬಾಡಿ ರೋಲ್ ಕಡಿಮೆಯಿದ್ದು, ಎಲ್ಲ ವಿಧದ ರಸ್ತೆಗೂ ಸರಿಹೊಂದುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

Mahindra XUV 7XO Review Design Specs Features And Driving Impressions Details

ಈ ಕಾರಿನಲ್ಲಿ ವಿಶೇಷವಾಗಿ 'ಡಾವಿಚ್ಚಿ' ಇಂಟೆಲಿಜೆಂಟ್ ಡ್ಯಾಂಪಿಂಗ್ ಸಿಸ್ಟಮ್ ಬಳಕೆ ಮಾಡಲಾಗಿದೆ. ಇದು ರಸ್ತೆಯಲ್ಲಿ ಕಾಣಿಸಿಕೊಳ್ಳುವ ತಗ್ಗು ದಿಣ್ಣೆಗಳನ್ನು ಮೊದಲೇ ಗುರುತಿಸುತ್ತದೆ. ಅದಕ್ಕೆ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಾಣಿಕೆ ಮಾಡುತ್ತದೆ ಎಂದರು. ಸ್ಟೀರಿಂಗ್ ವೀಲ್ ಉತ್ತಮವಾಗಿದೆ. ತಿರುವುಗಳಲ್ಲಿ ಬ್ರೇಕಿಂಗ್ ಸಿಸ್ಟಮ್ ಅದ್ಬುತವಾಗಿ ಕೆಲಸ ಮಾಡಿತು. ಲೆವೆಲ್-2 ಎಡಿಎಎಸ್ ವೈಶಿಷ್ಟ್ಯದ ಕಾರ್ಯವೈಖರಿಯೂ ಬಹಳ ಚೆನ್ನಾಗಿದೆ ಎಂದು ಹೇಳಿದರು.

ಇದರ ಕ್ಯಾಬಿನ್ ಪ್ರಯಾಣದ ಅನುಭವವು ದೀರ್ಘಕಾಲ ಉಳಿಯುವಂತೆ ಮಾಡಬಲ್ಲದು. ಸೀಟ್‌ಗಳಲ್ಲಿ ಉತ್ತಮವಾದ ಕುಶನ್ ಇದೆ. ಜೊತೆಗೆ ಬೇಗನೆ ವೇಗ ವರ್ಧನೆ ಪಡೆಯಬಲ್ಲದು ಎಂದು ತಿಳಿಸಿದರು. ದೊಡ್ಡದಾದ ಅಲಾಯ್ ವೀಲ್‌ಗಳಿದ್ದು, ರಸ್ತೆಯ ಮೇಲೆ ಬಿಗಿಯಾದ ಹಿಡಿತ ಸಾಧಿಸಲು ನೆರವಾಗಲಿದೆ ಎಂದರು.

Mahindra XUV 7XO Review Design Specs Features And Driving Impressions Details

ಒಟ್ಟಾರೆ ಅಭಿಪ್ರಾಯ (Overall Opinion):

ಹೊಸ 'ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ' ದೊಡ್ಡದಾದ ಫ್ಯಾಮಿಲಿ ಎಸ್‌ಯುವಿ ಹುಡುಕುತ್ತಿರುವವರಿಗೆ ಬೆಸ್ಟ್ ಚಾಯ್ಸ್ ಆಗಲಿದೆ. ಅದಕ್ಕೆ ತಕ್ಕಂತೆ ಹೆಚ್ಚು ಅತ್ಯಾಕರ್ಷಕವಾಗಿದೆ. ಈ ಕಾರಿಗೆ ಸಾಲು - ಸಾಲು ಎದುರಾಳಿಗಳಿವೆ. ಟೊಯೊಟಾ ಇನ್ನೋವಾ ಹೈಕ್ರಾಸ್, ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಮತ್ತು ಟಾಟಾ ಸಫಾರಿಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಲಿವೆ.

More from DriveSpark

Article Published On: Thursday, January 8, 2026, 16:00 [IST]
English summary
Mahindra xuv 7xo review design specs features and driving impressions details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+