ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ದೇಶಿಯ ವಾಹನ ಉತ್ಪಾದನಾ ಸಂಸ್ಥೆಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿರುವ ಮಹೀಂದ್ರಾ ಈಗಾಗಲೇ ವಿವಿಧ ಮಾದರಿಯ ಎಸ್‌ಯುವಿ ಕಾರು ಉತ್ಪನ್ನ ಪರಿಚಯಿಸಿ ಯಶಸ್ವಿಯಾಗಿದ್ದು, ಈ ಹೊಸ ಪ್ರಯತ್ನಗಳೊಂದಿಗೆ ಎಕ್ಸ್‌ಯುವಿ300 ಎನ್ನುವ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಪರಿಚಯಿಸುತ್ತಿರುವುದು ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಸಂಚಲನ ಕಾರಣವಾಗಿದೆ.

ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಮಹೀಂದ್ರಾ ನಿರ್ಮಾಣದ ಹೊಚ್ಚ ಹೊಸ ಎಕ್ಸ್‌ಯುವಿ300 ಕಾರು ಇದೇ ತಿಂಗಳು ಫೆಬ್ರುವರಿ 14ರಂದು ಬಿಡುಗಡೆಯಾಗುತ್ತಿದ್ದು, ಈಗಾಗಾಲೇ ಹೊಸ ಕಾರು ಖರೀದಿಗಾಗಿ ಅಧಿಕೃತ ಬುಕ್ಕಿಂಗ್ ಕೂಡಾ ಆರಂಭ ಮಾಡಲಾಗಿದೆ. ವಿಶೇಷ ವಿನ್ಯಾಸ ಮತ್ತು ಸೌಲಭ್ಯಗಳನ್ನು ಹೊತ್ತುಬರುತ್ತಿರುವ ಎಕ್ಸ್‌ಯುವಿ300 ಕಾರುಗಳು ಹೆಸರಿಗೆ ತಕ್ಕಂತೆ ಉತ್ತಮ ಪರ್ಫಾಮೆನ್ಸ್ ಮಾದರಿಯಾಗಿ ಹೊರಹೊಮ್ಮುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವುದಲ್ಲದೇ ಇದುವರೆಗೂ ಮಹೀಂದ್ರಾ ಯಾವುದೇ ಕಾರಿನಲ್ಲಿ ಇರದ ಕೆಲವೇ ವಿಶೇಷ ಸೌಲಭ್ಯಗಳು ಈ ಕಾರಿನಲ್ಲಿವೆ.

ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಮಹೀಂದ್ರಾ ಸಂಸ್ಥೆಯು ಈ ಸಂಬಂಧ ಹೊಸ ಕಾರುಗಳ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಕಳೆದ ಎರಡು ದಿನಗಳ ಹಿಂದಷ್ಟೇ ಟೆಸ್ಟ್ ಡ್ರೈವ್ ನಡೆಸಲು ಡ್ರೈವ್‌ಸ್ಪಾರ್ಕ್ ತಂಡಕ್ಕೆ ಆಹ್ವಾನ ನೀಡಿದ್ದಲ್ಲದೇ ತನ್ನ ಮುಂದಿನ ಯೋಜನೆಗಳ ಬಗೆಗೆ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದು ವಿಶೇಷವಾಗಿತ್ತು.

ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಸದ್ಯ ಮಹೀಂದ್ರಾ ಸಂಸ್ಥೆಯು ದಕ್ಷಿಣ ಕೊರಿಯಾದ ಸ್ಯಾಂಗ್‌ಯಾಂಗ್ ಜೊತೆಗೂಡಿ ಕಾರು ಉತ್ಪಾದನೆಯಲ್ಲಿ ಭಾರೀ ಬದಲಾವಣೆ ತರುತ್ತಿದ್ದು, ಸ್ಯಾಂಗ್‌ಯಾಂಗ್ ನಿರ್ಮಾಣದ ಜನಪ್ರಿಯ ಟಿವೊಲಿ ಕಾರಿನ ಮಾದರಿಯಲ್ಲೇ ದೇಶಿಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಎಕ್ಸ್‌ಯುವಿ300 ಕಾರುನ್ನು ನಿರ್ಮಾಣ ಮಾಡಲಾಗಿದೆ.

ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಕಳೆದ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಅಲ್ಟುರಾಸ್ ಜಿ4 ಕಾರು ಕೂಡಾ ಸ್ಯಾಂಗ್‌ಯಾಂಗ್ ಜೊತೆಗೂಡಿಯೇ ನಿರ್ಮಾಣ ಮಾಡಲಾಗಿದ್ದು, ಫುಲ್ ಸೈಜ್ ಐಷಾರಾಮಿ ಎಸ್‌ಯುವಿ ಕಾರುಗಳ ವಿಭಾಗದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೀಗಾಗಿ ಎಕ್ಸ್‌ಯುವಿ300 ಕಾರಿನ ಮೇಲೂ ಸಾಕಷ್ಟು ನೀರಿಕ್ಷೆ ಇಟ್ಟುಕೊಂಡಿರುವ ಮಹೀಂದ್ರಾ ಸಂಸ್ಥೆಯು ಮಾರುತಿ ಸುಜುಕಿ ನಿರ್ಮಾಣದ ವಿಟಾರಾ ಬ್ರೆಝಾ ಮತ್ತು ಹ್ಯುಂಡೈ ಕ್ರೆಟಾ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದೆ.

ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಪ್ರಸ್ತುತ ಮಾರುಕಟ್ಟೆಯಲ್ಲಿ ವಿಟಾರಾ ಬ್ರೆಝಾ ಮತ್ತು ಕ್ರೆಟಾ ಆವೃತ್ತಿಗಳು ಟಾಪ್ 10 ಕಾರು ಮಾರಾಟದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಈ ಎರಡು ಜನಪ್ರಿಯ ಕಾರುಗಳಿಂತಲೂ ವಿಶೇಷ ತಾಂತ್ರಿಕ ಸೌಲಭ್ಯ ಮತ್ತು ಉತ್ತಮ ಬೆಲೆಗಳೊಂದಿಗೆ ಬಿಡುಗಡೆಯಾಗಲಿರುವ ಎಕ್ಸ್‌ಯುವಿ300 ಕೂಡಾ ಗ್ರಾಹಕರನ್ನು ಸೆಳೆಯದೇ ಇರಲಾರದು ಎನ್ನುವ ನಂಬಿಕೆ ಮಹೀಂದ್ರಾ ಸಂಸ್ಥೆಗಿದೆ.

ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಡಿಸೈನ್ ಮತ್ತು ಸ್ಟೈಲ್

ಮೊದಲೇ ಹೇಳಿದ ಹಾಗೆ ಎಕ್ಸ್‌ಯುವಿ300 ಕಾರು ಸ್ಯಾಂಗ್‌ಯಾಂಗ್ ನಿರ್ಮಾಣದ ಟಿವೊಲಿ ಆಕಾರದೊಂದಿಗೆ ಮರುನಿರ್ಮಾಣಗೊಂಡಿದ್ದು, ಎಕ್ಸ್‌ಯುವಿ500 ಮಾದರಿಯಲ್ಲಿ ಮುಂಭಾಗದ ಗ್ರಿಲ್ ಮತ್ತು ಲೈಟಿಂಗ್ ಸೌಲಭ್ಯವನ್ನು ಪಡೆದುಕೊಂಡಿರುವುದು ಸ್ಪಷ್ಟವಾಗಿದೆ.

ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಹೊಸ ಕಾರಿನಲ್ಲಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್‌ ಮತ್ತು ಫಾಗ್‌ಲ್ಯಾಂಪ್‌ಗೆ ಹೊಂದಿಕೊಂಡತೆ ಎಲ್‌ಇಡಿ ಡಿಆರ್‌ಎಲ್ಎಸ್‌ಗಳನ್ನು ಜೋಡಣೆ ಮಾಡಿರುವುದು ಕಾರಿನ ಮುಂಭಾಗದ ಸ್ಟೈಲ್ ಬದಲಿಸಿದ್ದು, ಕಾರಿನ ಬ್ಯಾನೆಟ್ ರಕ್ಷಣೆಗಾಗಿ ಕೆಳಭಾಗದಲ್ಲಿ ಸಿಲ್ವರ್ ಫೌಕ್ಸ್ ಸ್ಕಿಡ್ ಬಳಕೆ ಮಾಡಲಾಗಿದೆ.

ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಹಾಗೆಯೇ ಸೈಡ್ ವ್ಯೂವ್ ನೋಡುವುದಾದರೇ ಕಾರಿನ ವಿನ್ಯಾಸಗಳಿಗೆ ಅನುಗುಣವಾಗಿ ಕ್ರೋಮ್ ರನ್ನಿಂಗ್ ಬಳಕೆ ಮಾಡಿರುವುದು ಸಹ ಗಮನಸೆಳೆಯುವುದಲ್ಲದೆ, ಕಾರಿನ ಸಿ ಪಿಲ್ಲರ್ ಅನ್ನು ಮುಂದುವರಿಸಿರುವುದು ಹೊಸ ಕಾರಿಗೆ ಡ್ಯುಯಲ್ ಬಣ್ಣ ನೀಡಲು ಸಹಕಾರಿಯಾಗಿದೆ.

ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಇನ್ನು ಕಾರಿನ ಹಿಂಭಾಗದಲ್ಲೂ ಸಹ ಉತ್ತಮ ತಾಂತ್ರಿಕ ಸೌಲಭ್ಯವನ್ನು ಒದಗಿಸಿರುವ ಮಹೀಂದ್ರಾ ಸಂಸ್ಥೆಯು ಗಮನಸೆಳೆಯುವಂತಹ ಲೈಟಿಂಗ್ ಸೌಲಭ್ಯಗಳನ್ನು ಜೋಡಣೆ ಮಾಡಿದ್ದು, ಗಮನಸೆಳೆಯುವ ಟೈಲ್‌ಲೈಟ್, ಮಹೀಂದ್ರಾ ಬ್ಯಾಡ್ಜ್ ಜೊತೆ ವೆರಿಯೆಂಟ್ ಬ್ಯಾಡ್ಜ್, ಬೂಟ್ ಲಿಡ್ ಸೌಲಭ್ಯವನ್ನು ಉತ್ತಮ ರೀತಿಯಲ್ಲಿ ಜೋಡಣೆ ಮಾಡಿದೆ.

ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಕಾರಿನ ಒಳ ವಿನ್ಯಾಸ

ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಗಳನ್ನು ಹೊಂದಿರುವ ಎಕ್ಸ್‌ಯುವಿ300 ಕಾರು 5 ಆಸನವುಳ್ಳ ಕಾರು ಮಾದರಿಯಾಗಿದ್ದು, ಎಸ್‌ಯುವಿ ಕಾರು ಪ್ರಿಯರನ್ನು ಸೆಳೆಯಬಲ್ಲ ಬಹುತೇಕ ಪ್ರೀಮಿಯಂ ಸೌಲಭ್ಯಗಳನ್ನು ಈ ಕಾರಿನಲ್ಲಿವೆ ಎಂದ್ರೆ ತಪ್ಪಾಗುವುದಿಲ್ಲ.

ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಈ ಕಾರಿನಲ್ಲಿ ಗ್ರಾಹಕರು ನಿರೀಕ್ಷಿಸಬಹುದಾದ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದ್ದು, ಮೊದಲಿಗೆ ಕಾರಿನ ಒಳಭಾಗವನ್ನು ಡ್ಯುಯಲ್ ಟೋನ್ ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಗಮನಸೆಳೆಯುವ ಡ್ಯಾಶ್‍‍ಬೋರ್ಡ್, ಇನ್ಫೋಟೈನ್ಮೆಂಟ್ ಸಿಸ್ಟಂ, ಎಸಿ ವೆಂಟ್ಸ್ ಮತ್ತು ಲೆದರ್ ವ್ಯಾರ್ಪ್ ಸ್ಟೀರಿಂಗ್ ವ್ಹೀಲ್‍ನ ಮೇಲೆ ಸಿಲ್ವರ್ ಆಕ್ಸೆಂಟ್‍‍ಗಳನ್ನು ನೀಡಲಾಗಿದೆ.

ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಡ್ಯುಯಲ್ ಟೋನ್ ಇಂಟೀರಿಯರ್ ಅನ್ನು ಹೊರತುಪಡಿಸಿ ಮಹೀಂದ್ರಾ ಎಕ್ಸ್‌ಯುವಿ300 ಕಾರಿನಲ್ಲಿ ದೊಡ್ಡದಾದ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ನೀಡಲಾಗಿದ್ದು, ಇದು ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಆಯ್ಕೆಯನ್ನು ಪಡೆಯಬಹುದಾಗಿದೆ.

ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಇಷ್ಟೆ ಅಲ್ಲದೇ ಹೊಸ ಕಾರಿನಲ್ಲಿ ವಿವಿಧ ಮಾಹಿತಿಗಳನ್ನು ನೀಡಬಲ್ಲ 3.5-ಇಂಚಿನ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, ಟ್ರಿಪ್ ಮೀಟರ್, ಟೈರ್ ಡೈರೆಕ್ಷನ್ ಮಾನಿಟರ್‌ರಿಂಗ್ ಸಿಸ್ಟಂ ಅಳವಡಿಸಿರುವುದಲ್ಲದೇ ಪಾರ್ಕಿಂಗ್ ಕ್ಯಾಮೆರಾ ಮತ್ತು ಸೆನ್ಸಾರ್‍‍ಗಳನ್ನು ಸಹ ಅಳವಡಿಸಲಾಗಿದೆ.

ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಇದರೊಂದಿಗೆ ಮಹೀಂದ್ರಾ ಎಕ್ಸ್‌ಯುವಿ300 ಕಾರು ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಸೆಂಟ್ರಲ್ ಮಲ್ಟಿ ಇನ್ಫಾರ್ಮೇಷನ್ ಡಿಸ್ಪ್ಲೇ ಹೊಂದಿರುವ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಸ್ಟಾರ್ಟ್/ಸ್ಟಾಪ್ ಬಟನ್ ಮತ್ತು ಕ್ರೂಸ್ ಕಂಟ್ರೋಲ್ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರಲಿದೆ.

ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಎಕ್ಸ್‌ಯುವಿ300 ಕಾಂಪ್ಯಾಕ್ಟ್ ಎಸ್‍ಯುವಿ ಕಾರಿನಲ್ಲಿ ಪ್ರೀಮಿಯಂ ಸೌಲಭ್ಯಗಳಾದ ಸನ್‍‍ರೂಫ್ ಕೂಡಾ ಬಳಸಲಾಗಿದ್ದು, ಹಿಂಬದಿಯ ಸವಾರರ ಸೀಟ್‍‍ಗಳಿಗೆ ಸೆಂಟ್ರಲ್ ಆರ್ಮ್‍ರೆಸ್ಟ್ ಜೊತೆ ರಿಯರ್ ಎಸಿ ವೆಂಟ್ಸ್‌ಗಳನ್ನು ಸಹ ನೀಡಲಾಗಿದ್ದು, ಮನರಂಜನೆಗಾಗಿ ಹರ್ಮನ್ ಸಿಸ್ಟಂ ಅಳವಡಿಸಿರುವುದು ಯುವ ಗ್ರಾಹಕರನ್ನು ಹೆಚ್ಚಿನ ಮಟ್ಟದಲ್ಲಿ ಸೆಳೆಯಲಿದೆ.

ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಹೊಸ ಎಕ್ಸ್‌ಯುವಿ300 ಕಾರು ಡಿಸೇಲ್ ಮತ್ತು ಪೆಟ್ರೋಲ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಾಗಲಿದ್ದು, ಡಿಸೇಲ್ ಕಾರುಗಳು 1.5-ಲೀಟರ್( 1,500ಸಿಸಿ) ಎಂಜಿನ್‌ನೊಂದಿಗೆ 115-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿರಲಿವೆ.

ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಹಾಗೆಯೇ ಪೆಟ್ರೋಲ್ ಮಾದರಿಯು ಸಹ 1.2-ಲೀಟರ್ ಎಂಜಿನ್‌ನೊಂದಿಗೆ 110-ಬಿಎಚ್‌ಪಿ ಮತ್ತು 200ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಇದರೊಂದಿಗೆ ಡಿಸೇಲ್ ವರ್ಷನ್ ಕಾರುಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಪೆಟ್ರೋಲ್ ವರ್ಷನ್‌ ಕಾರುಗಳಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಒದಗಿಸಲಾಗಿದೆ.

ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಸುರಕ್ಷಾ ಸೌಲಭ್ಯಗಳು

ಹೊಸ ಕಾರಿನಲ್ಲಿರುವ ಸುರಕ್ಷಾ ಸೌಲಭ್ಯಗಳನ್ನು ಸಹ ಪ್ರಮುಖ ಆಕರ್ಷಣೆಯಾಗಿದ್ದು, ಅಪೋಲೋ ನಿರ್ಮಾಣದ 17-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್‌ನೊಂದಿಗೆ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್, ಇಬಿಡಿ, ಸೀಟ್ ಬೆಲ್ಟ್ ಸೆನ್ಸಾರ್, ಪವರ್ ಫೋರ್ಡ್ ರಿಯರ್ ವ್ಯೂ ಒಆರ್‌ವಿಎಂಎಸ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಮೊದಲ ಬಾರಿಗೆ ನೀಡಲಾಗಿರುತ್ತಿರುವ 7 ಏರ್‌ಬ್ಯಾಗ್ ಸೌಲಭ್ಯ ಎಕ್ಸ್‌ಯುವಿ300 ಕಾರಿನಲ್ಲಿರಲಿವೆ.

ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಇನ್ನುಳಿದಂತೆ ಟು ಜೋನ್ ಕ್ಲೈಮೆಟ್ ಕಂಟ್ರೋಲ್, ಹೈಟ್ ಅಡ್ಜೆಸ್ಟ್ ಸೀಟ್ ಬೆಲ್ಟ್, ಪ್ರತಿ ಸೀಟುಗಳಲ್ಲೂ ಸೀಟ್ ಬೆಲ್ಟ್ ಸೆನ್ಸಾರ್, ISOFIX ಚೈಲ್ಡ್ ಸೀಟ್ ಮೌಂಟ್ ಸೌಲಭ್ಯವಿದ್ದು, ಸಬ್ ಕಂಪ್ಯಾಕ್ಟ್ ಎಸ್‌ಯುವಿ ಪ್ರಿಯರ ಆಕರ್ಷಣೆ ಮಾಡುವಲ್ಲಿ ಯಶಸ್ವಿಯಾಗಲಿವೆ.

ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಕಾರಿನ ಉದ್ದಳತೆ

ಎತ್ತರ 3,995ಎಂಎಂ
ಅಗಲ 1,821ಎಂಎಂ
ಎತ್ತರ 1,617ಎಂಎಂ
ವೀಲ್‌ಬೆಸ್ 2,600ಎಂಎಂ
ಟೈರ್ ಸೈಜ್ 215/55 ಆರ್17
ಫ್ಯೂಲ್ ಟ್ಯಾಂಕ್ ಸಾಮರ್ಥ್ಯ 42 ಲೀಟರ್

ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಕಾರಿನ ಬೆಲೆಗಳು(ಅಂದಾಜು)

ಮಾರುಕಟ್ಟೆಯಲ್ಲಿ ಲಭ್ಯವಿರುವ ಕಂಪ್ಯಾಕ್ಟ್ ಎಸ್‌ಯುವಿಗಳಿಂತೂ ತಾಂತ್ರಿಕವಾಗಿ ಬಲಿಷ್ಠವಾಗಿರುವ ಎಕ್ಸ್‌ಯುವಿ300 ಕಾರುಗಳ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.99 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 12 ಲಕ್ಷ ಬೆಲೆ ನಿಗದಿಯಾಗುವ ಸಾಧ್ಯತೆಗಳಿವೆ.

ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮಹೀಂದ್ರಾ ಸಂಸ್ಥೆಯು ಹೊಸ ಎಕ್ಸ್‌ಯುವಿ300 ಕಾರನ್ನು ಬಲಿಷ್ಠ ಎಂಜಿನ್, ಉತ್ತಮ ತಾಂತ್ರಿಕ ಸೌಲಭ್ಯ, ಗರಿಷ್ಠ ಮಟ್ಟದ ಸುರಕ್ಷಾ ಸಾಧನಗಳು ಮತ್ತು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಾರಿನ ಡಿಸೈನ್ ಉತ್ತಮವಾಗಿದ್ದು, ಕಾರಿನ ಬೆಲೆಗಳ ಮೇಲೆ ಹೊಸ ಕಾರಿನ ಭವಿಷ್ಯ ನಿರ್ಧಾರವಾಗಲಿದೆ. ಒಂದು ವೇಳೆ ಕಾರು ರೂ. 8.50 ಲಕ್ಷದಿಂದ ರೂ.11 ಲಕ್ಷ ಬೆಲೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದಲ್ಲಿ ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ಕ್ರೆಟಾ, ಟಾಟಾ ನೆಕ್ಸಾನ್ ಮತ್ತು ಫೋರ್ಡ್ ಇಕೋ ಸ್ಪೋರ್ಟ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

More from DriveSpark

Article Published On: Wednesday, February 6, 2019, 13:17 [IST]
English summary
Mahindra XUV300 First Drive Review. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+