MARUTI JIMNY ಬಿಡುಗಡೆಗೆ ಮುಹೂರ್ತ ಫಿಕ್ಸ್... ಕೇವಲ ಒಂದೇ ತಿಂಗಳು ಬಾಕಿ

'ಮಾರುತಿ ಸುಜುಕಿ ಜಿಮ್ನಿ' ಈ ಹೆಸರು ಕೇಳುತ್ತಿದ್ದಂತೆ ಹಲವರಗೆ ರೋಮಾಂಚನವಾಗುತ್ತದೆ. ಹೌದು ಕಳೆದ ಹಲವು ತಿಂಗಳುಗಳಿಂದ ಕೇವಲ ಜಾಹಿರಾತುಗಳಲ್ಲಿ ಕಾಣಿಸಿಕೊಂಡು ನಿರೀಕ್ಷೆ ಹೆಚ್ಚಿಸಿದ್ದ ಈ ಎಸ್‌ಯುವಿ ಕೊನೆಗೂ ಬಿಡುಗಡೆಗೆ ಸಜ್ಜಾಗಿದೆ. ಮೂಲಗಳ ಪ್ರಕಾರ ಕಾರಿನ ಪರೀಕ್ಷಾ ಹಂತಗಳನ್ನು ಮುಗಿಸಿರುವ ಕಂಪನಿಯು ಮೇ ತಿಂಗಳಿನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

ಇದೇ ವರ್ಷದ ಜನವರಿಯಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ ಜಿಮ್ನಿಯನ್ನು ಅನಾವರಣಗೊಳಿಸಲಾಯಿತು. ಆ ಸಂದರ್ಭದಲ್ಲಿ ನಮ್ಮ ಡ್ರೈವ್‌ಸ್ಪಾರ್ಕ್ ತಂಡದೊಂದಿಗೆ ನಾನೂ ಕೂಡ ಆಟೋ ಎಕ್ಸ್‌ಪೋಗೆ ಭೇಟಿ ನೀಡಿ ಮಾರುತಿ ಜಿಮ್ನಿಯನ್ನು ನೋಡಿದ್ದೆ. ನನ್ನ ಪ್ರಕಾರ ಈ ಎಸ್‌ಯುವಿ ಡಿಸೈನ್‌ನಲ್ಲಿ ಸಖತ್ ಆಕರ್ಷಕವಾಗಿ ಕಾಣುತ್ತದೆ. ಆದರೆ ಇದು ಮಹೀಂದ್ರಾ ಥಾರ್‌ಗೆ ಹೋಲಿಸಿಕೊಂಡರೆ ತುಂಬಾ ಹಗುರ ಹಾಗೂ ಘಾತ್ರದಲ್ಲಿ ಸಣ್ಣದಾಗಿದ್ದರೂ ಸಂಪೂರ್ಣ ಆಫ್‌ರೋಡರ್ ಆಗಿದೆ.

MARUTI JIMNY ಬಿಡುಗಡೆಗೆ ಮುಹೂರ್ತ ಫಿಕ್ಸ್... ಕೇವಲ ಒಂದೇ ತಿಂಗಳು ಬಾಕಿ

ನಾವು ಕೇವಲ ವಾಹನವನ್ನು ನೇರವಾಗಿ ಕಂಡಿದ್ದು, ಅದರ ವಿನ್ಯಾಸದ ಬಗ್ಗೆ ಮಾತ್ರ ನಮಗೆ ಅವಗಾಹನೆ ಇದೆ. ಅದರೆ ಪರ್ಫಾಮೆನ್ಸ್ ಬಗ್ಗೆ ತಿಳಿಯಬೇಕಾದರೆ ಬಿಡುಗಡೆವೆರೆಗೆ ಕಾಯಬೇಕಾಗುತ್ತದೆ. ಜನವರಿಯಲ್ಲಿ ಅನಾವರಣಗೊಂಡ ಬಳಿಕ ಬಹುನಿರೀಕ್ಷಿತ ಐದು-ಬಾಗಿಲಿನ ಜಿಮ್ನಿಯ ಅಧಿಕೃತ ಬುಕಿಂಗ್ ಶೀಘ್ರದಲ್ಲೇ ಪ್ರಾರಂಭವಾಯಿತು. ದಾಖಲೆ ಮಟ್ಟದಲ್ಲಿ ಗ್ರಾಹಕರು ಈ ಎಸ್‌ಯುವಿಯನ್ನು ಬುಕ್ ಮಾಡಿದ್ದಾರೆ. ಮಾರುತಿ ಜಿಮ್ನಿ ಆರ್ಡರ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದಾಗಿನಿಂದ 23,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಸಂಗ್ರಹಿಸಿದೆ.

ಸದ್ಯ SUV ದೇಶಾದ್ಯಂತ ಡೀಲರ್‌ಶಿಪ್‌ಗಳನ್ನು ತಲುಪಲು ಪ್ರಾರಂಭಿಸಿದೆ. ಆದರೆ ಬಿಡುಗಡೆ ಮಾತ್ರ ಇನ್ನೂ ಆಗಿಲ್ಲದಿರುವುದು ಹಲವರನ್ನು ನಿರಾಸೆಗೊಳಿಸಿದ್ದು, ಈಗ ವೇಯಿಟ್ ಇಸ್ ಓವರ್ ಎಂದು ಹೇಳಬಹುದು. ಏಕೆಂದರೆ ಇದರ ಬಿಡುಗಡೆಗೆ ಕೇವಲ ಒಂದು ತಿಂಗಳು ಮಾತ್ರ ಬಾಕಿ ಇದೆ. ಈಗ ಈ ಜನಪ್ರಿಯ ಆಫ್ ರೋಡರ್ ಅನ್ನು ಕಂಪನಿಯು ಭಾರತದಲ್ಲಿ ಮೇ ಎರಡನೇ ವಾರದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ ಎಂದು ನಮಗೆ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

MARUTI JIMNY ಬಿಡುಗಡೆಗೆ ಮುಹೂರ್ತ ಫಿಕ್ಸ್... ಕೇವಲ ಒಂದೇ ತಿಂಗಳು ಬಾಕಿ

ಮಾರುತಿ ಜಿಮ್ನಿ ಬಣ್ಣಗಳ ಬಗ್ಗೆಯು ಗ್ರಾಹಕರಲ್ಲಿ ಹೆಚ್ಚಿನ ಆಸಕ್ತಿಯಿದೆ. ಕಂಪನಿ ನೀಡುತ್ತಿರುವ ಬಹುತೇಕ ಎಲ್ಲಾ ಬಣ್ಣಗಳು ಉತ್ತಮ ಬುಕಿಂಗ್‌ಗಳನ್ನು ಪಡೆದುಕೊಳ್ಳುತ್ತಿದ್ದು, ಕೈನೆಟಿಕ್ ಯೆಲ್ಲೋ ವಿತ್ ಬ್ಲ್ಯಾಕ್ ರೂಫ್‌ಗೆ ಬೇಡಿಕೆ ಹೆಚ್ಚಿದೆ. ಬಣ್ಣದ ಆಯ್ಕೆಗಳನ್ನು ನೋಡುವುದಾದರೆ, ಗ್ರಾನೈಟ್ ಗ್ರೇ, ಸಿಜ್ಲಿಂಗ್ ರೆಡ್, ಬ್ಲೂಶ್ ಬ್ಲ್ಯಾಕ್, ನೆಕ್ಸಾ ಬ್ಲೂ, ಪರ್ಲ್ ಆರ್ಕ್ಟಿಕ್ ವೈಟ್, ಕೈನೆಟಿಕ್ ಯೆಲ್ಲೋ ವಿತ್ ಬ್ಲ್ಯಾಕ್ ರೂಫ್ ಮತ್ತು ಸಿಜ್ಲಿಂಗ್ ರೆಡ್ ವಿತ್ ಬ್ಲೂಶ್ ಬ್ಲ್ಯಾಕ್ ರೂಫ್ ಬಣ್ಣದ ಆಯ್ಕೆಗಳಲ್ಲಿ ಜಿಮ್ನಿ ಲಭ್ಯವಿದೆ.

ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ ಐದು ಬಾಗಿಲಿನ ಜಿಮ್ನಿಯು ಈಗಿನ ಟೆಕ್‌ಗೆ ಅನುಗುಣವಾಗಿ ಹಲವು ಫೀಚರ್‌ಗಳನ್ನು ಒಳಗೊಂಡಿದೆ. ಒಂಬತ್ತು ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಯುನಿಟ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಆರು ಏರ್‌ಬ್ಯಾಗ್‌ಗಳು, 15 ಇಂಚಿನ ಅಲಾಯ್ ವೀಲ್‌ಗಳು, ಫಾಗ್ ಲ್ಯಾಂಪ್‌ಗಳು, ವಾಷರ್‌ನೊಂದಿಗೆ LED ಹೆಡ್‌ ಲ್ಯಾಂಪ್‌ಗಳು ಸೇರಿದಂತೆ ಹಲವು ಫೀಚರ್‌ಗಳೊಂದಿಗೆ ಬರುತ್ತದೆ.

MARUTI JIMNY ಬಿಡುಗಡೆಗೆ ಮುಹೂರ್ತ ಫಿಕ್ಸ್... ಕೇವಲ ಒಂದೇ ತಿಂಗಳು ಬಾಕಿ

ಇನ್ನು ಇದರ ಎಂಜಿನ್ ಹಾಗೂ ಪರ್ಫಾಮೆನ್ಸ್ ಬಗ್ಗೆ ಮಾತನಾಡುವುದಾದರೆ, ಮಾರುತಿ ಜಿಮ್ನಿಯು 1.5-ಲೀಟರ್ K15B ಪೆಟ್ರೋಲ್ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಘಟಕಕ್ಕೆ ಜೋಡಿಸಲಾಗಿದೆ. ಈ ಎಂಜಿನ್ 103bhp ಪವರ್ ಮತ್ತು 134Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚುವರಿಯಾಗಿ, ಈ ಮಾರುತಿ ಸುಜುಕಿ ಆಫ್ ರೋಡರ್ ಬ್ರ್ಯಾಂಡ್‌ನ ಆಲ್‌ಗ್ರಿಪ್ ಪ್ರೊ ಸಿಸ್ಟಮ್‌ನೊಂದಿಗೆ ಅಳವಡಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Saturday, April 8, 2023, 12:20 [IST]
English summary
Maruti jimny launch in may 2nd week
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+